ಗೊತ್ತಿದ್ದೋ ಗೊತ್ತಿಲ್ಲದೇನೋ ಈ 9 ಸುಳ್ಳು ನಿಮಗೆ ನೀವೇ ಹೇಳ್ಕೋತಿದ್ರೆ ಮೊದ್ಲು ಬಿಟ್ಟುಬಿಡಿ, ಒಳ್ಳೇದು

"ಅವಳು ಸಿಕ್ಕರೆ ಮಾತ್ರ ನಾನು ಖುಷಿಯಾಗಿರಕ್ಕೆ ಸಾಧ್ಯ"

ಜೀವನಾನೆ ಒಂತರಾ ಉಲ್ಟಾ ಪಲ್ಟಾ, ನಂಬೇಕಾದನ್ನೆ ನಂಬಿರಲ್ಲ ಯಾವ್ದೋ ಹಳಸಿಹೋಗಿರೊ ಸುಳ್ನ್ ನಂಬ್ತೀವಿ. ಇಲ್ಲಿ ಕೆಳಗಡೆ ಸುಳ್ಳನ್ನ ಕೊಟ್ಟಿದೀವಿ ಅದನ್ನ ಇಲ್ಲಿತಂಕ ನಂಬುತ ಬಂದಿದೀರ ಆದ್ರೆ ಇನ್ಮುಂದೆ ನಂಬೇಡಿ.

1. "ನನಗೆ ಅವಳು/ಅವನು ಸಿಕ್ಕರೆ ಮಾತ್ರ ಖುಷಿಯಾಗಿರಕ್ಕೆ ಸಾಧ್ಯ"

ಯಾರಾದರೂ ಲವ್ ಮಾಡಿದಾರೆ ಅಂದ ತಕ್ಷಣ ಅವರು ಖುಷ್ಯಾಗಿದಾರೆ ಅಂತ ಅಲ್ಲ. ಮನ್ಸಿಗೆ ನೆಮ್ಮದಿ ಇಲ್ಲದಿರೋ ಸಂಬಂಧಕ್ಕಿಂತ ಆರಾಮಾಗಿ ಒಬ್ನೇ ಇರೋದೇ ವಾಸಿ. ಮೊದ್ಲು ನೀವು ನಿಮ್ಮಲ್ಲಿ ನಿಮ್ಮನ್ನ ಹುಡುಕ್ಕೊಳಿ. ಸಂಬಂಧ ಹಳಸಿಹೋದಾಗ್ಲೂ ನೀವು ಆರಾಮಾಗಿರೋದು ಹೇಗೆ ಅಂತ ಗೊತ್ತಾಗತ್ತೆ.

ಮೂಲ

2. "ನನಗೆ ಇಷ್ಟವಾದ್ದು ಸಿಕ್ಕರೆ ಮಾತ್ರ ನಾನು ಖುಷಿಯಾಗಿರಕ್ಕೆ ಸಾಧ್ಯ"

ಖುಷಿಯಾಗಿರಕ್ಕೆ ನಮ್ಮ ಆಸೆಪಟ್ಟಿದೆಲ್ಲಾ ಸಿಗ್ಬೇಕು ಅಂತೇನಿಲ್ಲ. ಎಷ್ಟೋ ಸತಿ ಏನೋ ದೊಡ್ಡದನ್ನಾ ಪಡ್ಕೊಳಕ್ ಹೋಗಿ ನಮಗೆ ಸಿಗೋ ಚಿಕ್ಕ ಚಿಕ್ಕ ಖುಶಿನಾ ಕಳ್ಕೋತೀವಿ. ಜೀವನಾನೆ ಹಂಗೆ ತಲಪೋ ಜಾಗಕ್ಕಿಂತ ಹೋಗೋ ದಾರೀಲೆ ಖುಷಿ ಪಡ್ಬೇಕು. ಪ್ರತಿಕ್ಷಣಾನು ಖುಷಿ ಪಡಿ. ಇಲ್ಲದೆ ಇರೋದ್ರುಬಗ್ಗೆ ಕೋರ್ಗದಕ್ಕಿಂತ ಇರೋದ್ರಲ್ಲಿ ಖುಷಿಯಾಗಿರಿ. ಇವತ್ತಿನ ದಿನ ಬೇಕು ಅಂದ್ರು ಮತ್ತೆ ಸಿಗಲ್ಲ.

ಮೂಲ

3. "ಕಣ್ಣಿಗೆ ಕಾಣಿಸಿದರೆ ಮಾತ್ರ ನೋವಿದೆ ಅಂತ ಅರ್ಥ"

ಇದ್ರಂತ ದೊಡ್ಡ್ ಸುಳ್ಳು ಮತ್ತೊಂದಿಲ್ಲ. ನೋವ್ವು ಅಂದ್ರೆ ಬರಿ ಗಾಯ ಆಗತ್ತೆ, ಅಳ್ತಾ ಇರ್ಬೇಕು ಅಂತ ಅಲ್ಲ. ಎಷ್ಟೋ ಜನ ಸಿಕ್ಕಾಪಟ್ಟೆ ನೊವ್ವ್ ತಿಂತಿದ್ರು ಎದ್ರುಗಡೆ ನಗ್ತಾ ನಗ್ತಾ ಇರ್ತಾರೆ. ನಿಜ್ವಾದ್ ನೋವ್ವು ಯಾವತ್ತೂ ಕಣ್ಣಿಗೆ ಸುಲಭವಾಗಿ ಕಾಣ್ಸಲ್ಲ. ಯಾರನ್ನು ಅವ್ರ್ ಹಿಂಗೇ ಇವ್ರ್ ಹಿಂಗೇ ಅಂತ ಬರಿ ನೋಡಿ ನಿರ್ಧಾರ ಮಾಡ್ಬೇಡಿ. ಅಷ್ಟೊಂದ್ ಪುರ್ಸೊತ್ತಿದ್ರೆ ಬೇರೆ ಯಾವ್ದಾದ್ರು ಒಳ್ಳೆ ಕೆಲ್ಸಕ್ಕೆ ಸಮಯ ಉಪಯೋಗುಸ್ಕೊಳಿ 

ಮೂಲ

4. "ಜೀವನದಲ್ಲಿ ಇಂತಿಂಥದ್ದು ಆಗಬೇಕು, ಇಲ್ಲದಿದ್ದರೆ ಅದು ಜೀವನವೇ ಅಲ್ಲ"

ಇದಂತೂ ತುಂಬಾ ಕೆಟ್ಟ ಚಾಳಿ. ಜೇವ್ನ ಹಿಂಗೇ ಇರ್ಬೇಕು ಅಂತ ಅದೆಂಗ್ ಅನ್ಕೋತೀರಾ. ಏನೋ ಆಗತ್ತೆ, ಹಿಂಗೇ ಇರತ್ತೆ ಅಂತ ಅಂದ್ಕೊಳದು ಹಂಗಾಗದೆ ಇದ್ದಾಗ ಬೇಜಾರ್ ಮಾಡ್ಕೊಳದು. ಜೀವನ ಯಾವತ್ತೂ ಅನ್ಕೊಂಡಂಗಿರಲ್ಲ. ಅದು ಬಂದಂಗೆ ನಾವ್ ನಡೀಬೇಕು ಅಂತ ತಿಳ್ಕೊಳಿ. ನಾವ್ ಹೆಂಗ್ ಯೋಚ್ನೆ ಮಾಡ್ತೀವಿ ಹಂಗಿರತ್ತೆ. ಸ್ವಲ್ಪ ಜನ ಬಾಗ್ಲು ಅರ್ಧ ಮುಚ್ಚಿದೆ ಅಂತಾರೆ ಸ್ವಲ್ಪ ಜನ ಬಾಗ್ಲು ಅರ್ಧ ತೆಗ್ದಿದೆ ಅಂತಾರೆ. ನಿಮ್ಮ್ ಜೀವನ ನಿಮ್ಮ ಅನಿಸಿಕೆ. ಹಿಂಗೇ ಇರತ್ತೆ ಹಂಗೆ ಇರತ್ತೆ ಅನ್ನೋದೆಲ್ಲ ಸುಳ್ಳು.

ಮೂಲ

5. "ನಾನು ಅವರ ತರಹ ಇರ್ಬೇಕು"

ಯಾಕೆ ಅಂತ ಪ್ರಶ್ನೆ ಮಾಡ್ಕೊಳಿ, ನೀವು ಇನ್ನೊಬ್ರು ತಾರಾ ಯಾಕಿರಬೇಕು, ನೀವು ಆ ಥರ ಇರ್ಬೇಕು ಅಂತ ಅನ್ಕೊಂಡು ಇರಕ್ಕೆ ಆಗ್ದೇ ಇದ್ರೆ ತುಂಬಾ ನೋವ್ವಗತ್ತೆ. ನೆಮ್ಮದಿ ಹಾಳಾಗತ್ತೆ. ನೀವು ನೀವಾಗಿರಿ ಇನ್ಯಾರತರಾನೋ ಇರ್ಬೇಡಿ.

ಮೂಲ

6. "ಕೆಲವರು ಪುಣ್ಯ ಮಾಡಿರೋರು ಮಾತ್ರ ಚೆನ್ನಾಗಿ ಜೀವನ ಮಾಡ್ತಾರೆ"

ಯಾರಬೇಕಾದ್ರು ಚೆನಾಗ್ ಜೀವನ ಮಾಡಬೋದು ಅನ್ನೋದನ್ನ ತಿಳ್ಕೊಳಿ. ಒಂದ್ಕೆಲ್ಸ ಮಾಡಿ ಪ್ರತಿ ದಿನ ಎದ್ದ್ ತಕ್ಷಣ ಇವತ್ತಿನ ದಿನ ಸಖತ್ತಾಗಿರತ್ತೆ ಅಂತ ಹೇಳೋದನ್ನ ರೂಡಿ ಮಾಡ್ಕೊಳಿ, ಒಂದು ತಿಂಗಳಾದ್ಮೇಲೆ ಹಿಂದೆ ತಿರುಗ್ನೋಡಿ ಎಷ್ಟು ಸುಂದರವಾಗಿ ಜೀವನ ಮಾಡಿದೀರಾ ಅಂತ ನಿಮಗೆ ಆಶ್ಚರ್ಯ ಆಗತ್ತೆ.

7. "ಕಷ್ಟಗಳು ಇಲ್ಲದಿದ್ದರೇನೇ ಒಳ್ಳೇದು"

ಇದು ಶುದ್ಧ ಸುಳ್ಳು. ಎಷ್ಟೋ ಸತಿ ಸರಿಯಾದದ್ದು ಏನು ಅಂತ ತಿಳ್ಕೊಳಕ್ಕೆ ತಪ್ಪು ಮಾಡ್ಬೇಕಾಗತ್ತೆ. ಕಷ್ಟ ಇದ್ರೆ ಮಾತ್ರ ಸುಳ್ಳಿನ ಬೆಲೆ ಗೊತ್ತಾಗದು. ನೀರಿಗೆ ಬೀಳ್ದೆ ಈಜ್ ಕಲ್ಯಕ್ಕಾಗಲ್ಲ. ಕೆಲವೊಮ್ಮೆ ಖುಷಿ ಅನ್ನೋದನ್ನ ಅರ್ಥ ಮಾಡ್ಕೊಳಕ್ಕೆ ನೋವ್ವನ್ನ ಪಡಲೇಬೇಕಾಗತ್ತೆ. ಗೆಲ್ಲೋದ್ರು ಮಜಾ ಸೋತವನಿಗೆ ಮಾತ್ರ ಗೊತ್ತಾಗದು. ಕಷ್ಟ ಅನ್ನೋದು ಜೀವನ ಕಲಸೋ ಒಳ್ಳೆ ಪಾಠ. ಯಾವತ್ತಿಗೂ ಈ ಪಾಠ ಬಿಟ್ಟೋಗ್ಬಾರ್ದು. ನೋವನ್ನ ನುಂಗಿ, ಕಷ್ಟಾನಾ ಎದುರಿಸಿ ಗಟ್ಟಿಯಾಗಿ ನಿಲ್ಲೋನೆ ನಿಜ್ವಾಗ್ಲೂ ಗೆಲ್ಲೋದು.

ಮೂಲ

8. "ಪಾರದರ್ಶಕವಾಗಿ ಇರೋದಕ್ಕಿಂತ ಒಳಗೊಂದು ಹೊರಗೊಂದು ಇದ್ದರೇ ಒಳ್ಳೇದು"

ನಿಜ್ವಾಗ್ಲೂ ಇದು ಕಷ್ಟಾನೇ. ನೀವು ಐ ಲವ್ ಯು ಅಂತ ಹೇಳಿ ಪ್ರೀತಿ ಮಾಡ್ದೆ ಇದ್ರೆ ಗೊತ್ತಾಗೋಗತ್ತೆ. ಆದ್ರೆ ನಿಜ್ವಾಗ್ಲೂ ಮನಸಲ್ಲಿ ಏನ್ ಅನ್ಕೊಂಡಿರ್ತೀರಿ ಅದನ್ನ ಹೇಳೋದೇ ಬೇಕಿಲ್ಲ ತಾನಾಗ್ತಾನೆ ಎದ್ರುಗಿರೋ ವ್ಯಕ್ತಿಗೆ ಗೊತ್ತಾಗಿರತ್ತೆ. ಮಾತಿಗಿಂತ ಮುಂಚೆ ಮನಸ್ಸಿಗೆ ಗೊತ್ತಾಗಿರತ್ತೆ. ಮೋಸ ಮಾಡ್ದೆ ಅಂತ ನೀವ್ ಅನ್ಕೊಂಡ್ರು ನೀವ್ ಏನು ಅಂತ ಗೊತ್ತಾಗಾಗಿರತ್ತೆ .

9. "ಕನಸು ಕಾಣೋದರಿಂದ ಉಪಯೋಗ ಇಲ್ಲ"

ಕನಸು ಯಾವತ್ತೂ ಟೈಮ್ ಹಾಳುಮಾಡಲ್ಲ. ಕನಸಿಂದ ಏನೋ ಒಂದು ಖುಷಿ, ಕಣ್ಣಿಗೆ ಕಾಣಿಸದೆ ಇದ್ರೂ ಏನೋ ಮಜಾ, ಇದನ್ನ ಮಾಡ್ಬೇಕು ಅನ್ನೋ ಛಲ ಇವೆಲ್ಲ ನಮಗೆ ಸಿಗತ್ತೆ. ಜಾಸ್ತಿ ಹೊತ್ತೇನೂ ಕನಸ್ಸು ಬೀಳಲ್ಲ ಆದ್ರೆ ಆ ಕೆಲವು ಕ್ಷಣ ಯಾವತ್ತೂ ಅದ್ಭುತಾನೆ. ಆದ್ರೆ ನಾವ್ ಏನಾದ್ರೂ ದೊಡ್ಡದಾಗಿ ಯೋಚ್ನೆ ಮಾಡುದ್ರೆ ಅದನ್ನ ಕನಸಲ್ಲಿ ಕಂಡು ಸಾಧಿಸೋ ಛಲ ಬಂದೆ ಬರತ್ತೆ. 

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

9 ಸಾಮಾನ್ಯ ಸೌಂದರ್ಯ ಸಮಸ್ಯೆಗಳಿಗೆ ದುಬಾರಿ ಬ್ಯೂಟಿ ಟ್ರೀಟ್ಮೆಂಟ್ ಇಲ್ಲದೆ ಪರಿಹಾರ ಕಂಡ್ಕೊಳೋದು ಹೇಗೆ ನೋಡಿ

ಏನೇನೋ ಮಾಡ್ಕೊಂಡು ಪರದಾಡೋದ್ಯಾಕೆ?

ಪ್ರತಿಯೊಂದು ಹೆಣ್ಣಿಗೂ ತಾನು ತುಂಬಾ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇದ್ದೇ ಇರತ್ತೆ. ಆ ಕಾರಣಕ್ಕೆ ಎಷ್ಟೆಷ್ಟೋ ರೀತೀಲಿ ತಾನು ಹೇಗೆಲ್ಲಾ ಸುಂದರವಾಗಿ ಕಾಣಬೋದು ಅಂತ ಯೋಚೆ ಮಾಡ್ತಾನೇ ಇರ್ತಾಳೆ. ಇತ್ತೀಚೆಗೆ ಅಂಗಡಿನಲ್ಲಿ ಸಿಗೋ ಯಾವ ಪದಾರ್ಥನೂ ಕೂಡ ಬಳಸೋದಿಕ್ಕೆ ಮನಸ್ಸಾಗದೆ ಇದ್ರೂ , ತಾನು ಚೆನ್ನಾಗಿ ಕಾಣದಿದ್ದರೆ ಹೇಗೋ ಏನೋ ಅನ್ನೋ ಭಯದಲ್ಲಿ ಉಪಯೋಗಿಸೋದಕ್ಕೆ ಶುರು ಮಾಡ್ತಾಳೆ. ನೀವು ಅವರಲ್ಲಿ ಒಬ್ರಾ? ಖಂಡಿತ ಬೇಡಾರಿ... ಅಂತೆಕಂತೆ ಹೇಳ್ತಾ ಇರೋ ವಿಷ್ಯ ಗಮನ ಕೊಟ್ಟು ಕೇಳಿ. ನೈಸರ್ಗಿಕವಾಗಿ ಸಿಗೋ ಪದಾರ್ಥಗಳಿಂದಾನೇ ನಿಮ್ಮ ಅಂದ ಹೆಚ್ಚಿಸ್ಕೋಬೋದು.  

1. ರೆಪ್ಪೆ ಕೂದಲು ಉದ್ದವಾಗಿ, ದಟ್ಟವಾಗಿ, ಸುಂದರವಾಗಿ ಕಾಣ್ಬೇಕು ಅಂದ್ರೆ

ಕಣ್ರೆಪ್ಪೆ ಕೂದಲು ಚೆನ್ನಾಗಿ ಕಾಣೋದಕ್ಕೆ ಮನೆಯಲ್ಲಿ ತಯಾರಿಸುವ ಎಣ್ಣೆ ಮಿಶ್ರಣ ತುಂಬಾ ಒಳ್ಳೆಯದು. ಸಮಪ್ರಮಾಣದಲ್ಲಿ ಹರಳೆಣ್ಣೆ, ಬಾದಾಮಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಜೊತೆಗೆ ವಿಟಮಿನ್ ಇ ಕೂಡ ಸೇರ್ಸಿ ಒಂದು ಜಾರ್ನಲ್ಲಿ ಇಡಿ. ಎಲ್ಲ ಮಿಕ್ಸ್ ಆದ್ಮೇಲೆ ಅದನ್ನ ಡ್ರೈ ಆಗಿರೋ ಕಣ್ರೆಪ್ಪೆ ಮೇಲೆ ಹಚ್ಚಿ ಇಡೀ ರಾತ್ರಿ ಬಿಡಬೇಕು. ಈ ತರ ಒಂದೆರಡ್ ವಾರ ಪ್ರತಿ ದಿನ ಮಾಡಿ ನೋಡಿ. ಚೆನ್ನಾಗಿರೋ ರೆಪ್ಪೆಕೂದ್ಲು ನಿಮ್ಮದಾಗುತ್ತೆ.

ಮೂಲ

2.  ಕೂದಲು ತುಂಬಾ ಸೀಳ್ಕೊಂಡಿದ್ರೆ

ಕೂದಲಿನ ಆರೈಕೆ ತುಂಬಾ ಮುಖ್ಯ ಮತ್ತೆ ಅಷ್ಟೇ ಕಷ್ಟ. ಆದ್ರೆ ಪ್ರತಿ ದಿನ ನಾವದನ್ನ ನಾಳೆ ಮಾಡಿದ್ರೆ ಆಯ್ತು ಅಂದ್ಕೊಂಡು ದಿನಾಗ್ಲೂ ಮರ್ತೇ ಹೋಗ್ತೀವಿ. ಏನು ಮಾಡ್ಬಹುದು ಅಂದ್ರೆ, ಮನೇಲಿ ಇದಕ್ಕೋಸ್ಕರ ಒಂದು  ಮಾಸ್ಕ್ ತಯಾರು ಮಾಡಬಹುದು. ಒಂದು ಪಾತ್ರೇಲಿ ಮೊಟ್ಟೆಯ ಬಿಳಿ ಭಾಗ ಜೊತೆಗೆ ಮನೇಲಿ ಹೆಪ್ಪು ಮಾಡಿರೋ ಮೊಸರು ಇದರ ಜೊತೇಗೆ ಒಂದು ಟೇಬಲ್ ಸ್ಪೂನ್ ನಷ್ಟು ಹರಳೆಣ್ಣೆ ಮತ್ತಿನ್ನೊಂದು ಟೇಬಲ್ ಸ್ಪೂನಷ್ಟು ಕೊಬ್ಬರಿ ಎಣ್ಣೆ ಎಲ್ಲಾ ಸೇರ್ಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಒಂದು ಸ್ಪೂನ್ ಬೆಣ್ಣೆ ಹಣ್ಣು ಮತ್ತು ಒಂದು ಟೇಬಲ್ ಸ್ಪೂನ್ ಜೊಜೊಬಾ ಆಯಿಲ್ ಸೇರಿಸಿ. ಎಲ್ಲಾನೂ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನ ನೇರವಾಗಿ ಕೂದಲಿಗೆ ಹಚ್ಚಿ ಅದರ ಮೇಲೆ ಒಂದು ಕವರ್ ಕ್ಯಾಪ್ ಹಾಕ್ಕೋಬೇಕು. ಹೀಗೆ ಒಂದು ಗಂಟೆ ಬಿಟ್ಟು ಆಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೀಬೇಕು.

ಮೂಲ

3. ನಿಮ್ಮ ಕೈಗಳು ಸುಂದರವಾಗಿ, ಮೃದುವಾಗಿ ಇರ್ಬೇಕು ಅಂದ್ರೆ

ಸುಂದರವಾದ ಕೈಗಳು ನಿಮ್ಮದಾಗ್ಬೇಕು ಅಂದ್ರೆ ನೀವು ನಿತ್ಯ ಬಳ್ಸೋ ಕ್ರೀಮ್ಗೆ ಅಷ್ಟೇ ಪ್ರಮಾಣದ ವಿನೆಗರ್ ಸೇರಿಸಿ, ಅದನ್ನು ಪ್ರತಿ ರಾತ್ರಿ ಮಲಗೋ ಮೊದ್ಲು ಕೈಗಳಿಗೆ ಲೇಪಿಸಿ ಮಲಗಬೇಕು. ಎರಡು ವಾರಗಳ ಕಾಲ ಹೀಗೇ ತಪ್ಪದೆ ಮಾಡಿ ನೋಡಿ. ಎರಡು ವಾರಗಳ ನಂತರ ನಿಮ್ಮ ಕೈ ಎಷ್ಟು ಮೃದುವಾಗತ್ತೆ ಅಂತ ನೋಡಿ ಆಶ್ಚರ್ಯ ಪಡ್ತೀರ.

ಮೂಲ

4. ಕೂದಲು ನುಣುಪಾಗಿ ಮಿಂಚ್ಬೇಕು ಅಂದ್ರೆ

ಚೆನ್ನಾಗಿ ಹಣ್ಣಾಗಿರೋ ಬಾಳೆಹಣ್ ತೊಗೋಳಿ. ಅದನ್ನ ಚೆನ್ನಾಗಿ ಮಿಕ್ಸರ್ಗಾಕಿ ಬ್ಲೆಂಡ್ ಮಾಡಿ ಇದಕ್ಕೆ ಒಂದು ಟೇಬಲ್ ಸ್ಪೂನಷ್ಟು ಆಲಿವ್ ಆಯಿಲ್ ಬೆರೆಸಿ. ಮನೇಲೆ ಹೆಪ್ಪು ಹಾಕಿರೋ ಮೊಸರು ಒಂದು ಟೇಬಲ್ ಸ್ಪೂನ್ ಜೊತೆಗೆ ಎರಡು ಟೇಬಲ್ ಸ್ಪೂನ್ ನಷ್ಟು ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒದ್ದೆ ಕೂದಲಿಗೆ ಈ ಮಿಶ್ರಣಾನ ಹಚ್ಚಿ ಅರ್ಧ ಗಂಟೆ ಆದ್ಮೇಲೆ ಉಗುರು ಬೆಚ್ಚಗಿರೋ ನೀರಲ್ಲಿ ತೊಳೀರಿ. ಆವಾಗ್ಲೆ ನಿಮ್ಮ ಕೂದಲು ಶೈನಿ ಶೈನಿ ಆಗಿರೋದನ್ನ ನೋಡಿ ಸಖತ್ ಖುಷಿ ಪಡ್ತೀರಿ.

ಮೂಲ

5.  ಒಣ ಚರ್ಮ ತೆಗೆದು ಹಾಕ್ಬೇಕು ಅಂದ್ರೆ

ಲೋಳೆ ಸರ ತುಂಬಾ ಒಳ್ಳೇ ಪದಾರ್ಥ. ಎಲ್ಲ ತರದ ಚರ್ಮದ ತೊಂದರೆಗಳಿಗೆ ಇದನ್ನ ಬಳಸ್ತಾರೆ. ಲೋಳೆಸರದ ಜ್ಯೂಸ್ ಗೆ ಮೂರು ಟೇಬಲ್ ಸ್ಪೂನಷ್ಟು ಬಿಸಿ ನೀರು ಹಾಕಿ ಮೂರು ಟೇಬಲ್ ಸ್ಪೂನ್ನಷ್ಟು ಆಲ್ಕೋ ಹಾಲ್ ಬೆರೆಸಿ  ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಒಡೆದ ಚರ್ಮದ ಮೇಲೆ ಹಚ್ಬೇಕು. ಹೀಗೆ ಮಾಡೋದ್ರಿಂದ ಒಣ ಚರ್ಮದ ತೊಂದರೆ ನಿವಾರಣೆ ಆಗುತ್ತೆ. 

ಮೂಲ

6. ಉಗುರು ಆರೋಗ್ಯವಾಗಿ ಇಟ್ಕೊಬೇಕು ಅಂದ್ರೆ

ಉಗುರು ಸುಂದರವಾಗಿ ಆರೋಗ್ಯವಾಗಿ ಕಾಣಬೇಕು ಅಂದ್ರೆ ನಿಮ್ಮ ಉಗುರುಗಳಿಗೆ ನಿಂಬೆರಸದ ಸ್ನಾನ ಮಾಡಿಸ್ಬೇಕು. ಹೌದು ನಿಂಬೆ ರಸದಲ್ಲಿ ಒಂದ್ ಹದಿನೈದು ನಿಮಿಷ ನಿಮ್ಮ ಉಗುರುಗಳನ್ನ ನೆನೆಸೋದ್ರಿಂದ ನಿಮ್ಮ ಉಗುರುಗಳಿಗೆ ಒಳ್ಳೆಯ ಆರೋಗ್ಯ ಮತ್ತು ಆಕಾರ ಸಿಗುತ್ತೆ.

ಮೂಲ

7. ಒಣ ತುಟಿಗಳು ಆರೋಗ್ಯವಾಗಿ ಕಾಣ್ಬೇಕು ಅಂದ್ರೆ

ಕ್ಯಾರೆಟ್ ಜ್ಯೂಸ್ ಗೆ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನ ತುಟಿಗಳಿಗೆ ಹಚ್ಚಿ ಏಳರಿಂದ ಹತ್ತು ನಿಮಿಷಗಳ ಕಾಲ ಹಾಗೇ ಬಿಡಿ ಆಮೇಲೆ ಬೆಚ್ಚಗಿರೋ ನೀರಿಂದ ತೊಳೀರಿ. ನಿಮ್ಮ ತುಟಿಗಳು ಕೋಮಲವಾಗಿರತ್ತೆ.

ಮೂಲ

8. ಕಣ್ಣಿನ ಸುತ್ತ ಆಗಿರೋ ಡಾರ್ಕ್ ಸರ್ಕಲ್ ತೆಗಿಬೇಕು ಅಂದ್ರೆ

ತಣ್ಣಗಿರೋ ಹಾಲಲ್ಲಿ ಹತ್ತಿ ಉಂಡೆಗಳನ್ನ ನೆನೆಸಿ ಅದನ್ನ ಕಣ್ಣಿನ ಮೇಲೆ ಪ್ರತಿದಿನ ಹದಿನೈದು ನಿಮಿಷಗಳ ಕಾಲ ಇಟ್ಕೋಳೋದನ್ನ ಅಭ್ಯಾಸ ಮಾಡ್ಕೊಳಿ. ಇದ್ರಿಂದ ಕಣ್ಣಿನ ಸುತ್ತ ಇರೋ ಕಪ್ಪು ಕಲೆ ಮಾಯ ಆಗೋಗುತ್ತೆ.  

ಮೂಲ

9. ಮುಖದ ಕಾಂತಿ ಹೆಚ್ಚಾಗ್ಬೇಕು ಅಂದ್ರೆ

ಟೊಮ್ಯಾಟೋ ಕತ್ತರಿಸಿ ಅದರ ಮೇಲೆ ಸಕ್ಕರೆ ಉದುರಿಸಿ ಇದನ್ನು ಮುಖದ ತುಂಬ ವೃತ್ತಾಕಾರದಲ್ಲಿ ಮುಖದ ಮೇಲೆ ಉಜ್ಜುತ್ತಾ ಬನ್ನಿ. ಹತ್ತು ನಿಮಿಷ ಹಾಗೇ ಬಿಡಿ. ಅದಾದ್ಮೇಲೆ ತಣ್ಣೀರಿಂದ ತೊಳೀರಿ. ನೀವು ಹೀಗೆ ವಾರಕ್ಕೆ ಮೂರು ನಾಲ್ಕು ಸರ್ತಿ ಮಾಡ್ಬೇಕು. 

ಮೂಲ

ಎಷ್ಟೊಂದು ಸುಲಭ ಅಲ್ವಾ ಇವೆಲ್ಲಾ? ಈ ಉಪಾಯಗಳನ್ನ ಮಾಡಿ, ನಿಮ್ಮ ಸೌಂದರ್ಯ ಹೆಚ್ಚಿಸ್ಕೊಂಡು, ಖುಷಿಯಾಗಿರಿ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: