ನಾವ್ ಹೇಳೋ ಥರ ಮಾಡಿದರೆ 30 ದಿನದಲ್ಲಿ ಸಿಗ್ರೆಟ್ ಚಟ ಹೋಗೋದು ಗ್ಯಾರಂಟಿ

ಯಾಕ್ ಸುಮ್ನೆ ಹೊಗೆ ಬಿಟ್ಟು ಹೊಗೆ ಹಾಕುಸ್ಕೊತೀರಾ

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ನಿಮಗೂ ಬೊಜ್ಜಿನ ಸಮಸ್ಯೆ ಕಾಡತಿದ್ದರ ಈ 9 ಉಪಾಯಗಳನ್ನ ಪ್ರಯತ್ನಿಸರಿ

ಬೊಜ್ಜು ಎಲ್ಲಾ ರೋಗಗಳ ಮುಂಬಾಗಿಲು!

ಈಗಿನ ಕಾಲದ ಮಂದಿಗೆ ಬೊಜ್ಜು ಒಂದ್ ದೊಡ್ಡ ಸಮಸ್ಯೆ ಆಗಿಬಿಟ್ಟದ. ‘ಹೊಟ್ಟಿ ಡುಮ್ಮ ಕೈ ಕಾಲ ಸಣ್ಣ’  ಅಂತ ಮದಲಿಕಾಲದಾಗ ತಮಾಷಿ ಮಾಡತಿದ್ದರು. ಆದರ ಈಗ ಎಲ್ಲಿ ನೋಡಿದರೂ ಅಂತವರ ಕಾಣತಾರಾ? ಹೊಟ್ಟಿ ಮುಂದ ಬರತನಾ ಅದರ ಬಗ್ಗೆ ವಿಚಾರ ಮಾಡಂಗಿಲ್ಲಾ, ಅದ ಒಂದೆರಡ ಗೇಣ ಮುಂದ ಬಂದ ಮ್ಯಾಲೆ ಕರಗಸಾಕ ಒದ್ಯಾಡೋದು ... ಈ ಒದ್ಯಾಟಕ್ಕ ತೆರಿ ಎಳಿಬೇಕು ಅಂತನ ನಾವು ಬೊಜ್ಜು ಕರಗಸಾಕ ಸಹಾಯಾಗೋ 9 ವಿಷಯಾ ಹೇಳಾಕತ್ತೇವಿ. ಇವನ್ನ ಮಾಡಬೇಕಂದ್ರ ನಿಮ್ಮ ಜೀವನ ಶೈಲಿನೂ ಒಂದ್ ಚೂರ ಬದಲಾಯಿಸಿಕೋಬೇಕಾಗತದ. ಆದರೇನಂತ ಬೊಜ್ಜ ಕರಗೋದು,ಆರೋಗ್ಯವಂತರಾಗಿರೋದು ಮುಖ್ಯ ಹೌದಿಲ್ಲೋ.

ಮತ್ತ ತಡಾ ಯಾಕ ,ಬರ್ರಿ ನೋಡೋಣ , ಬೊಜ್ಜ ಕರಗಸಾಕ ಏನೇನ ಮಾಡಬೇಕು ಅಂತ.

1. ಮಸರನಿಂದಾ ದೂರ ಇರಬೇಕು

ಆರೋಗ್ಯಕ್ಕ ಒಳ್ಳೆದು ಅಂತ ಮದಲಿಂದಾ ಹೇಳಿಸಿಕೊಂಡ ಬಂದದ. ಊಟಾದ ಮ್ಯಾಲೆ ಒಂದ ತುತ್ತರ ಮಸರನ್ನ ತಿನಬೇಕು ದೇಹಕ್ಕ ತಂಪು ಅಂತ ನಂ ಹಿರೀಕರ ಹೇಳೋದ ಕೇಳತಿರತೇವಿ. ಅವರ ತಿಂದರ ನಡೀತದ ಯಾಕಂದ್ರ ಅವರು ಶ್ರಮಜೀವಿಗಳು.ಆದರ ನಾವು ಹಂಗಲ್ಲ. ಎಲ್ಲಾ ಕೆಲಸಾನೂ ಬೆರಳ ತುದಿಯಿಂದನ ಮಾಡೋವಂತವರು. ಫಾಸ್ಟ ಫುಡ್ ಹೆಸರನ್ಯಾಗ ನ್ಯಾಲಿಗಿ ಕೇಳದ್ದನ್ನೆಲ್ಲಾ ತಿನ್ನೋ ಅಂತವರು! ಅದಕ್ಕ ಮಸರಿನಂತಾ ಪದಾರ್ಥಗಳಿಂದಾ ದೂರ ಇರಬೇಕು. ಅದರೋಳಗ ಸಕ್ಕರಿ ಅಂಶ ಮತ್ತ ಲ್ಯಾಕ್ಟೋಸ್ ಇರತದ. ಅದು ನಂ ದೇಹದಾಗ ಲೊಗೂ ಜೀರ್ಣ ಆಗಂಗಿಲ್ಲ.

s3.amazonaws.com

2. 8 ನಿಮಿಷ ವ್ಯಾಯಾಮ ಮಾಡಬೇಕು

ದಿನಾ ನಂ ದೇಹ ಲವಲವಿಕೆಯಿಂದಾ ಇರಬೇಕು ಅಂದ್ರ ದಿನಾ 8 ನಿಮಿಷ ವ್ಯಾಯಾಮಾ ಮಾಡಬೇಕು. ಹಾಂ , ಬೆಳಿಗ್ಗೆ ಅಲ್ಲಾ ರಾತ್ರಿ ಮಕೊಳೋಕ್ಕಿಂತಾ ಮದಲ.

ಏನ ಮಾಡಬೇಕು :  ನಿಮ್ಮ ಪಾದಾ ಭುಜಕ್ಕ ಸಮಾನಾಂತರವಾಗಿ ಇರೋ ಹಂಗ ಅಗಲಾಗಿ ಇಟ್ಟಕೊಂಡ ನಿಲ್ಲಬೇಕು. ಭಜದ ಮ್ಯಾಲೆ ಡಂಬ್ಬೆಲ್ ಗಳನ್ನ ಇಟ್ಟುಕೊಬೇಕು.ಆಮೇಲೆ  ನಿಮ್ಮ ಮೊಣಕಾಲುಗಳು ಮತ್ತು ಸೊಂಟಗಳು ಸಂಪೂರ್ಣವಾಗಿ ಬಾಗೋ ಹಂಗ  ಅಥವಾ ನಿಮ್ಮ ತೊಡೆಗಳು ನೆಲಕ್ಕೆ ಸಮಾನಾಂತರವಾಗಿರರೋ ಹಂಗ  ಕೆಳಗೆ ಕುಳಿತುಕೊಳ್ಳಿ.(ಚಿತ್ರದಾಗ ತೋರಿಸಿದಂಗ ಮಾಡ್ರಿ) . ಕೈ ಮ್ಯಾಗ  ಎತ್ತಿ, ಕಾಲ ಸೀದಾ ಮಾಡರಿ. ಮತ್ತ ಮ್ಯಾಲ ಹೇಳಿದಂಗ ರಿಪೀಟ ಮಾಡರಿ. ಸುಸ್ತ ಆದರ 20-30 ಸೆಕೆಂಡ ಸುಧಾರಿಸಿಕೊಂಡು ಮತ್ತ ವ್ಯಾಯಾಮಾ ಮುಂದವರಸಬೇಕು. ಹಿಂಗ 8 ನಿಮಿಷ ಮಾಡಬೇಕು. ದಿನಾ ತಪ್ಪದ ಮಾಡರಿ,ವ್ಯತ್ಯಾಸ ನಿಮಗ ತಿಳಿತದ.  

top.me

3. ಮಲಗೋಕಿನಾ ಮದಲ ತಣ್ಣೀರನಿಂದಾ ಜಳಕಾ ಮಾಡಬೇಕು

ತಣ್ಣಿರ ಜಳಕಾ ಮಾಡೋದರಿಂದಾ ನಂ ದೇಹದ ಉಷ್ಣಾಂಶ ಕಮ್ಮಿ ಆಗತದ. ನಂ ದೇಹದ ಉಷ್ಣಾಂಸಾ ಹೆಚ್ಚಮಾಡಿ ಅದನ್ನ ಬೆಚ್ಚಗಿಡೋ ಸಲುವಾಗಿ ದೇಹದಾಗಿರೋ ಕೊಬ್ಬು ಕರಗಿ ಶಕ್ತಿ ಬಿಡುಗಡೆ ಆಗತದ. ದರಿಂದಾ ನಂ ಬೊಜ್ಜು ಸಲ್ಪಮಟ್ಟಿಗೆ ಕರಗತದ. ನಿಮಗ ತೀರಾ ತಣ್ಣನ ನೀರ ಜಳಕಾ ಮಾಡಾಕಾಗಲಿಲ್ಲಾ ಅಂದ್ರ ಗುರ ಬೆಚ್ಚನ ನೀರನೂ ಬಳಸಬೌದು.

 

4. ದಿನಾ ಬೆಳಿಗ್ಗೆ ರುಚಿಯಂದೇನರ ತಿಂಡಿತಿನ್ನೋದನ್ನ ಮರೀಬ್ಯಾಡರಿ

 ಬೆಳಿಗಿನ ತಿಂಡಿ ಭಾಳ ಮುಖ್ಯ ನೋಡ್ರಿ. ಇದು ದೇಹದಾಗ ಇನ್ಸುಲಿನ್ ಉತ್ಪಾದನೆನ್ನ ನಿಯಂತ್ರಿಸತದ. ಓಟ್ಮೀಲ್, ಡಾರ್ಕ್ ಚಾಕೊಲೇಟ್, ಹಣ್ಣುಗಳು, ಮೊಳಕೆಕಾಳು, ದಾಲ್ಚಿನ್ನಿ ಇಂತಾವನ್ನ ತಿಂಡಿರೂಪದಾಗ ತಿನ್ನೊದರಿಂದಾ ದೇಹದಾಗ ಆಮ್ಲದ ಮಟ್ಟ ಹೆಚ್ಚಿಸೋದರಿಂದ ನಂ ಕರುಳಿನ ಚಟುವಟಿಕೆಯಿಂದಾ ಇರೋಹಂಗ ಮಾಡತಾವು. ಹಂಗಾಗಿ ಇವು ನೀವು ತೆಳ್ಳಗಾಗಾಕ ಸಹಾಯಾ ಮಾಡತಾವು.

boldsky.com

5. ನಿಮ್ಮ ಮೆನುನಿಂದ ಚೀನೀ ಆಹಾರ ತೆಗೆದುಹಾಕರಿ

ಇದ್ದರೂ ಚೀನೀ ಆಹಾರ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಾಗ ಸೋಡಿಯಂ ಹೊಂದಿರತಾವು. ಇದರಿಂದಾ ನಂ ದೇಹ  ಉಬ್ಬತದ.  ಒಂದ ಬಟ್ಟಲ ಚೀನಾ ಸೂಪ್ ನ್ಯಾಗ  ಇಡೀ ಒಂದು ವಾರಕ್ಕ ಆಗೋ ಅಷ್ಟ ಸೋಡಿಯಂ ಇರತದ.ಅಂದ ಹಂಗ ಮೆಕ್ಸಿಕನ್ ಆಹಾರದಾಗೂ ಸೋಡಿಯಂ ಭಾಳ ಇರತದ.

dfordelhi.in

6. ಸಕ್ಕರಿ ಇಲ್ಲದ ಚಿಂಗಂ ತಿನ್ನೋದ ಬಿಟ್ಟಬಿಡ್ರಿ

ಶುಗರ ಫ್ರೀ ಅಂತ ಹೇಳಿಸಕೊಳ್ಳೋ ಇಂಥಾ ಚಿಂಗಂ ಒಳಗ ಸೋರ್ಬಿಟಾಲ್ ಅನ್ನೋ ಅಂಶ ಇರತದ. ಅದು ಸಕ್ಕರೆಯಿಲ್ಲದ ಚಿಂಗಂನಾಗ ಬಳಸೋ ಸಕ್ಕರಿ – ಆಲ್ಕೋಹಾಲ್. ಅದು  ಜೀರ್ಣ ಆಗಾಕ ಭಾಳ  ಸಮಯ ಬೇಕಾಗತದ. ಇದು ಬ್ಯಾಕ್ಟೀರಿಯಾಗಳನ್ನ ಹುದುಗಿಸೋದರಿಂದ ತಯಾರಿಸಿರತಾರ. ಇದರಿಂದಾ ದಪ್ಪ ಆಗೋದಷ್ಟ ಅಲ್ಲ ಆರೋಗ್ಯನೂ ಕೆಡತದ. ಜೊತಿಗೆ, ನೀವು ಗಮ್ ಅಗಿದಾಗೆಲ್ಲಾ  ಹಸಿವಿನ ಹಾರ್ಮೋನುಗಳನ್ನ ಜಾಗೃತಗೊಳಿಸು ಅಂತಾ ನಿಮ್ಮ ಮೆದುಳಿಗೆ ಸಿಗ್ನಲ್ ಕಳಿಸಿದಂಗ ಆಗತದ.

img.aws.livestrongcdn.com

7. ಎನರ್ಜಿ ಬಾರಗಳನ್ನಂತೂ ಮರತ ಬಿಡ್ರಿ

ಯಾಕಂದ್ರ,

  • ಅವು ಮೈ ಉಬ್ಬಸೋ ಅಂತಾ ಲ್ಯಾಕ್ಟೋಸ್ ಅನ್ನ ಹೊಂದಿರತಾವು.
  • ಅವದ್ದರೊಳಗ ಮುಖ್ಯವಾಗಿರೋದು ಸೋಯಾಬೀನ್ , ಇವು ಸಾಮಾನ್ಯವಾಗಿ ಹೊಟ್ಟಿ ಗ್ಯಾಸ ಆಗೋಹಂಗ ಮಾಡತಾವು.
  • ಅವರು ಆಹಾರಾನ ಸಂಸ್ಕರಿಸತಾರ . ಅಂದ್ರ ಅದರೊಳಗ ಏನೋ ಸತ್ವ ಉಳದಿರಂಗಿಲ್ಲ.ಬರೇ ಸಕ್ಕರಿ ಮತ್ತ ಕೊಬ್ಬಿನಂಶ ಅಷ್ಟ.
  • ನೀವು ಊಹಿಸಿದ್ದಕ್ಕಿಂತ ಹೆಚ್ಚಿಗಿ ಕ್ಯಾಲೊರಿ ಇರತದ ಅದರೊಳಗ.

cdn2.omidoo.com

8. ಒಣಾಹಣ್ಣುಗಳನ್ನ ಕಮ್ಮಿ ಮಾಡೋದು ಚೊಲೊ

ಒಣಗಿದ್ದ ಹಣ್ಣ ಒಳಗ  ಪೋಷಕಾಂಶಗಳು ಮತ್ತ ನಾರಿನಂಶ ಭಾಳ ಇರತದ. ಆದರ ಅವದ್ದರೊಳಗ ಫ್ರಕ್ಟೋಸ್  ಅಂಶ ಭಾಳ ಇರತದ. ನಿಂ ದೇಹ ಇದನ್ನ ಹೀರಿಕೊಳ್ಳಲಿಲ್ಲಾ ಅಂದ್ರ ದೇಹ ಉಬ್ಬತದ ಅಥವಾ ಗ್ಯಾಸ ಆಗತದ.  ಈ ಸಮಸ್ಯೆಗಳನ್ನು ತಪ್ಪಸಬೇಕಂದ್ರ ತಾಜಾ ಹಣ್ಣು ತಿನ್ನರಿ.

9. ನಿಮ್ಮ ಸ್ಮೂಥಿನ ನೀವ ಮನಿಯಾಗ ಮಾಡಿಕೋರಿ

ಹೊಟ್ಟಿ ತುಂಬಸೋದರ ಜೊತಿಗೆ ನಂ ದೇಹಕ್ಕ ಬೇಕಾಗೋ ಸತ್ವಗಳೂ ಇರೋದರಿಂದಾ ಸ್ಮೂಥಿಗಳು ತೂಕಾ ಇಳಸಾಕ ಭಾಳ ಸಹಾಯಾ ಮಾಡತಾವ ಅನ್ನೋದ ಖರೆ. ಆದರ ಅಂಗಡ್ಯಾಗ ಸಿಗೋ ರೆಡಿಮೇಡ್ ಸ್ಮೂಥಿ ಒಳಗ ಪೋಷಕಾಂಶಗಳ ಕಿಂತಾ ರಾಸಾಯನಿಕಗಳ ಬಾಳ ಇರತಾವು.ಇದರಿಂದಾ ನಾವು ಇನ್ನಾ ದಪ್ಪ ಆಗೋದರ ಜೊತಿಗೆ ಆರೋಗ್ಯಾನೋ ಕೆಡತದ. ಅದರ ಬದಲಿ ಪಾಲಕ, ಕಾಳುಗಳು, ಬಾದಾಮಿ ಹಾಲು, ತೆಂಗಿನ ಎಣ್ಣೆ, ಹಣ್ಣುಗಳು ಮುಂತಾದ ನೈಸರ್ಗಿಕ ಪದಾರ್ಥಗಳನ್ನ ಹಾಕಿ ನೀವ ಮನಿಯಾಗ ಸ್ಮೂಥಿ ಮಾಡಿಕೊಂಡರ ಆರೋಗ್ಯವಾಗೂ ಇರತೀರಿ, ತೆಳ್ಳಗೂ ಆಗತೀರಿ.

ಹಿಂಗೆಲ್ಲಾ ಮಾಡಿದಿರೆಂದರ ಬೊಜ್ಜು ಹೇಳಹೆಸರಿಲ್ಲದ ಹೋಗತದ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: