ತಂದೆ-ತಾಯಿಗೆ ಈ ಹೊಸ-ವರ್ಷದ ಉಡುಗೊರೆ ಕೊಟ್ಟರೆ ಸಂತೋಷವಾಗಿ ಜಾಸ್ತಿ ದಿನ ಬದುಕಿರ್ತಾರೆ

ಕೊಡೋ ಮನಸ್ಸು ಮಾಡಬೇಕಷ್ಟೆ

ಮೊಬೈಲು ಫೇಸ್ಬುಕ್ಕು ಟ್ವಿಟರ್ರು, ಇಂಸ್ಟಾಗ್ರಾಮು ಎಲ್ಲಾ ನಮಗೆ ಬೇಕಾದೋರ ಜೊತೆ ಟಚ್ಚಲ್ಲಿ ಇರಕ್ಕೆ ಸುಲಭ ಮಾಡ್ತಿವೆ, ನಿಜ. ಆದರೆ ಅದರಲ್ಲೇ ಜಾಸ್ತಿ ಮುಳುಗಿದ್ರೆ ನಮ್ಮ ನಿಜವಾದ ಗೆಳೆಯರು, ನೆಂಟರಿಷ್ಟರು, ಅಕ್ಕ-ಪಕ್ಕದ ಮನೆಯೋರೆಲ್ಲ ದೂರ ಆಗೋಗ್ತಾರೆ ಅನ್ನೋದು ನಿಜ. ಸರಿ ನಾ?

ಇನ್ನೂ ದುಃಖದ ವಿಷಯ ಏನಂದ್ರೆ ಈಗಿನ ಪೀಳಿಗೆಯೋರು ತಮ್ಮ ತಂದೆ-ತಾಯಂದ್ರಿಗೆ ಕೊಡಬೇಕಾದಷ್ಟು ಸಮಯ ಕೊಡ್ತಿಲ್ಲ

ಒಂದಲ್ಲ ಒಂದು ರೀತಿಯಲ್ಲಿ ಯಾವಾಗಲೂ ಬಿಝಿಯಾಗಿ ಇರೋದ್ರಿಂದ ತಂದೆ-ತಾಯಿ ಜೊತೆ ಮಾತಾಡಕ್ಕೂ ಪುರಸೊತ್ತಿರಲ್ಲ. ಆದರೆ ವಯಸ್ಸಾದೋರ ಸಾವಿಗೆ ಒಂಟಿತನ ಒಂದು ಮುಖ್ಯವಾದ ಕಾರಣ ಅಂತ ಈಗೀಗ ಸಂಶೋಧನೆಗಳು ತಿಳಿಸ್ತಾ ಇವೆ.

ಮೂಲ

ಹೌದು, ನೀವು ಸರಿಯಾಗೇ ಓದಿದ್ರಿ. ಕ್ಯಾಲಿಫೋರ್ನಿಯಾ ವಿ.ವಿ.ಯಲ್ಲಿ ಮಾಡಿರೋ ಒಂದು ಸಂಶೋಧನೆ ಪ್ರಕಾರ ಒಬ್ಬ ವ್ಯಕ್ತಿ ಕುಗ್ಗಿ ಹೋಗೋದರ ಹಿಂದೆ ಒಂಟಿತನ ಒಂದು ಮುಖ್ಯವಾದ ಕಾರಣ

ಶಾಕಾಗುತ್ತೆ ಅಲ್ವಾ?

ಕ್ಯಾಲಿಫೋರ್ನಿಯಾ ವಿ.ವಿ. ನೋರು 1,600 ವ್ಯಕ್ತಿಗಳ್ನ ಇಟ್ಕೊಂಡು ಈ ಸಂಶೋಧನೆ ನಡೆಸಿದಾರೆ [ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]. ಅವರ ವಯಸ್ಸು ಕಡಿಮೆ ಅಂದ್ರೆ 71 ಇತ್ತಂತೆ. ಅವರು ಸಂಶೋಧನೆ ಶುರು ಮಾಡಿ 6 ವರ್ಷದಲ್ಲಿ ಎಷ್ಟು ಜನ ಸಾವಪ್ಪಿದರು ಅಂತ ನೋಡಿದ್ರಂತೆ. ಆಶ್ಚರ್ಯದ ವಿಷಯ ಏನಂದ್ರೆ ಒಂಟಿತನ ಅನುಭವಿಸ್ತಾ ಇದ್ದೋರಲ್ಲಿ 23% ಜನ ಸಾವಪ್ಪಿದ್ರು… ಆದರೆ ನೋಡ್ಕೊಳಕ್ಕೆ ಮಕ್ಕಳಿದ್ದೋರು ಬರೀ 14% ಜನ ಸಾವಪ್ಪಿದರು. ಇದರಿಂದ ಬರೀ ವಯಸ್ಸಲ್ಲ, ಒಂಟಿತನ ಕೂಡ ಸಾವಿಗೆ ಕಾರಣ ಅನ್ನೋದು ಸ್ಪಷ್ಟ.

ಮೂಲ

ವಯಸ್ಸಾಗಿದೆ ಅಂದ ಮಾತ್ರಕ್ಕೆ ನಾನು, ನನ್ನ ಮಕ್ಕಳು, ನಮ್ಮ ಜನ ಅನ್ನೋ ಗುಣ ಹೊರಟುಹೋಗಲ್ಲ

ವಯಸ್ಸಾಗ್ತಾ ಇದ್ದಂಗೇ ನಮಗೆ ಗೊತ್ತಿರೋರ ಸಂಖ್ಯೆ ಕೂಡ ಕಡಿಮೆ ಆಗ್ತಾ ಹೋಗುತ್ತೆ. ಜನ ದೂರ ಆಗ್ತಾರೆ. ಗೆಳೆಯರು ದೂರ ಆಗ್ತಾರೆ, ನೆಂಟರಿಷ್ಟರು ದೂರ ಆಗ್ತಾರೆ. ಆದರೆ ಮಕ್ಕಳೂ ದೂರ ಆಗಬೇಕಾ?

ಮೂಲ

ಯೋಚನೆ ಮಾಡಿ...

2017ರಲ್ಲಿ ಪ್ರಾಯಶಃ ನಿಮ್ಮ ಜೊತೆ ಕಾಲ ಕಳೆಯೋದಕ್ಕಿಂತ ನಿಮ್ಮ ತಂದೆ-ತಾಯಿಗೆ ಬೇರೆ ಏನೂ ಬೇಕಾಗಿಲ್ಲ

ಅದಕ್ಕಿಂತ ಒಳ್ಳೇ ನ್ಯೂ ಇಯರ್ ರೆಸೊಲ್ಯೂಶನ್ ನೀವು ಮಾಡಕ್ಕೆ ಸಾದ್ಯವೇ ಇಲ್ಲವೇನೋ … ಯಾಕಂದ್ರೆ ನೀವು ಜೊತೆಗಿದ್ದರೆ ನಿಮ್ಮ ತಂದೆತಾಯಿಗೆ ಸಿಗೋ ಸಂತೋಷಕ್ಕೆ ಸಾಟಿಯಿಲ್ಲ. ಹೆಚ್ಚು ದಿನ ಬದುಕಿರ್ತಾರೆ, ಸಂತೋಷವಾಗೂ ಇರ್ತಾರೆ. ಇದಕ್ಕಿಂತ 2017ರಲ್ಲಿ ನಿಮಗೇನು ಬೇಕು?

ಮೂಲ

ಹೊಸ ವರ್ಷಕ್ಕೆ ಅಪ್ಪ-ಅಮ್ಮಂಗೆ ಇದಕ್ಕಿಂತ ಒಳ್ಳೇ ಉಡುಗೊರೆ ಕೊಡಕ್ಕಾಗತ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: