ಸಮಯ ಅಂದಾಗ ಮನೇಲಿ ಏನಿಲ್ಲದಿದ್ದರೂ ಅರಿಶಿನ ಇರುತ್ತೆ, ಈ 12 ವಿಷಯ ನೆನಪಿಟ್ಟುಕೊಳ್ಳಿ ಬೇಕಾಗುತ್ತೆ

ಈ ಅರಿಶಿನಕ್ಕೆ ವೇದ-ಗೀದದಲ್ಲೂ ಒಳ್ಳೇ ಹೆಸರಿದೆ

ಬಹುಶಃ ಇದರ ಬಣ್ಣ ಹೀಗಿರೋದ್ರಿಂದಾನೋ ಏನೋಪ್ಪಾ ಇದಕ್ಕೆ ಅರಿಶಿನ ಅಂತ್ಲೇ ಹೆಸರು ಬಂದಿರೋದು. ಆದ್ರೆ ಈ ಅರಿಶಿನ ಕೂಡ ಶುಂಠಿ ಜಾತಿಗೆ ಸೇರಿದ್ದು. ನಮ್ಮ ದೇಶದಲ್ಲಂತೂ ಅಡುಗೆ ಅಂದ್ರೆ ಅರಿಶಿನ ಇರ್ಲೇಬೇಕು. ಎಲ್ಲಾ ಸಾಂಬಾರ್ ಪದಾರ್ಥದ ಜೊತೆಗೆ ಈ ಅರಿಶಿಣಕ್ಕೂ ಒಳ್ಳೆ ಸ್ಥಾನಾನೆ ಕೊಟ್ಟಿದಾರೆ. ಸಂಶೋದನೆಗಳು ಹೇಳೋ ಪ್ರಕಾರ ಈ ಅರಿಶಿನದಲ್ಲಿರೋ ಕುರ್ಕುಮಿನ್ ಅನ್ನೋ ಅಂಶ ಔಶಧೀಯ ಗುಣವನ್ನ ಹೊಂದಿದ್ಯಂತೆ. ಅದಿಕ್ಕೆ ಇರ್ಬೇಕು ಆಯುರ್ವೇದದಲ್ಲಿ ಅರಿಶಿಣವನ್ನ ಹೆಚ್ಚಾಗಿ ಬಳಸ್ತಾರೆ.

ಈ ಅರಿಶಿನಕ್ಕೆ ವೇದ ಪುರಾಣದಲ್ಲೂ ತುಂಬಾನೇ ಒಳ್ಳೇ ಹೆಸ್ರಿದೆ. ಹೋಮ, ಯಜ್ಞ, ಯಾಗಗಳಲ್ಲಿ, ಪೂಜೆಗಳಲ್ಲಿ ಬಳಸ್ತಾರೆ. ಹೋಮದಲ್ಲಿ ಇದನ್ನ ಬಳಸೋದ್ರಿಂದ ಅದರ ಹೊಗೆ ತುಂಬಾ ಆರಾಮದಾಯಕವಾದಂತಹ ಅನುಭವ ಕೊಡುತ್ತೆ ಅಂತಾರೆ. ಆರೋಗ್ಯ ವಿಷ್ಯಕ್ಕೆ ಬಂದ್ರೆ ಹೇಗೆಲ್ಲಾ ಅರಿಶಿನದಿಂದ ಉಪ್ಯೋಗ ಪಡೀಬೇಕು ಹೇಳ್ತೀವಿ ಕೇಳಿ.

1. ಆಯುರ್ವೇದ ಪದ್ಧತಿಯಲ್ಲಿ ಈ ಅರಿಶಿನದ ಉಸಿರಾಟ ಸಮಸ್ಯೆಗೆ, ಜಾಂಡೀಸ್ಗೆ, ಹೊಟ್ಟೆಗೆ ಹಿತವಾಗಿರೋ ಹಾಗೆ ಮಾಡೋಕೆ, ಉರಿಯೂತದ ಸಮಸ್ಯೆ ಬಗೆಹರಿಸೋದಕ್ಕೆ ಬಳಸ್ತಾರೆ.

ಮೂಲ

2. ಬಿಸಿಹಾಲಿಗೆ ಅರಿಶಿನ ಹಾಕಿ ಕುಡೀಯೋದ್ರಿಂದ ಗಂಟಲ ಉರಿ ಗಂಟಲ ಕೆರೆತ ಕಡಿಮೆ ಆಗುತ್ತೆ.

ಮೂಲ

3. ಚರ್ಮದ ಯಾವುದೇ ತರದ ಸಮಸ್ಯೆ ಇದ್ರೂ ಅರಿಶಿನ ನಿಜ್ವಾಗ್ಲೂ ಚರ್ಮದ ಸಮಸ್ಯೆ ಒಳ್ಳೇ ಮದ್ದು. ಅಷ್ಟೇ ಯಾಕೆ ಚರ್ಮದ ಕ್ಯಾನ್ಸರ್ ಗುಣಪಡ್ಸೋದಕ್ಕೂ ಇದನ್ನ ಬಳಸ್ತಾರೆ.

ಮೂಲ

4. ಮುಖವನ್ನ ಸುಂದರವಾಗಿ ಇಡೋದಕ್ಕೆ ಅಂತ ಮುಖಕ್ಕೆ ಫೇಸ್ ಪ್ಯಾಕ್ ಹಾಕ್ಕೋಳ್ಳೋರು ಗಮನಿಸ್ಲೇಬೇಕು. ಅರಿಶಿನ , ಮೊಸರು, ಜೇನುತುಪ್ಪ ಎಲ್ಲವನ್ನೂ ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಾದ್ಮೇಲೆ ಬೆಚ್ಚಗಿನ ನೀರಲ್ಲಿ ಮುಖ ತೊಳ್ಕೋಬೇಕು. ಹೀಗ್ ಮಾಡೋದ್ರಿಂದ ಮುಖಡಾ ಹೊಳಪು ಹೆಚ್ಚಾಗುತ್ತೆ.

ಮೂಲ

5. ಮೊಡವೆ ಸಮಸ್ಯೆ ಇರೋರು ಅಂಗಡಿಲಿ ಸಿಗೋ ಸೋಪು ಕ್ರೀಮು ಬಳ್ಸೋಕಿಂತ ಮೊದ್ಲು ಹೀಗ್ ಮಾಡಿ. ಅರಿಶಿನದ ಜೊತೆ ಶ್ರೀಗಂಧದ ಎಣ್ಣೆ ಅತ್ವಾ ಶ್ರೀಗಂಧದ ಪುಡಿ ಬೆರೆಸಿ ಮೊಡವೆ ಮೇಲೆ ಹಚ್ಚಿಕೊಂಡು ಸ್ವಲ್ಪ ಹೊತ್ತಾದಮೇಲೆ ಮುಖ ತೊಳೀಬೇಕು.

ಮೂಲ

6. ಮುಖದ ಮೇಲಿರೋ ಕೂದಲು ಕಡಿಮೆ ಮಾಡೋದಕ್ಕೆ ವಯಸ್ಸಾದ ಹಾಗೆ ಚರ್ಮ ಸುಕ್ಕಾಗೋದನ್ನ ತಪ್ಪಿಸೋದಕ್ಕೆ ಬರೀ ಅರಿಶಿನ ಮುಖಕ್ಕೆ ಹಚ್ಚೋದು ಸಂಪ್ರದಾಯವಾಗಿ ಪಾಲಿಸ್ತಾ ಇದಾರೆ.

ಮೂಲ

7. ಗರ್ಭಿಣಿಯರು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸೋದಕ್ಕೆ ಅರಿಶಿನದ ಜೊತೆ ಮೊಸರು ಸೇರಿಸಿ ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿ 10-15 ನಿಮಿಷ ಆದ್ಮೇಲೆ ಸ್ನಾನ ಮಾಡೋದೊಳ್ಳೆದು.

ಮೂಲ

8. ಅರಿಶಿನದ ಜೊತೆಗೆ ಕಡ್ಲೆಹಿಟ್ಟು ಸೇರಿಸಿ ಮೈಕೈಗೆಲ್ಲಾ ಹಚ್ಚಿ ಸ್ನಾನ ಮಾಡೋದು ಕೂಡ ಚರ್ಮದ ಆರೋಗ್ಯಕ್ಕೆ ಚೆನ್ನಾಗಿರುತ್ತೆ.

ಮೂಲ

9. ಹಲ್ಲು ನೋವು ವಸಡಿನ ಸಮಸ್ಯೆ ಇದ್ರೆ ಅರಿಶಿನದ ಜೊತೆ ಕಲ್ಲುಪ್ಪು ಮತ್ತೆ ಸಾಸಿವೆ ಎಣ್ಣೆ ಕಲಸಿ ನೋವಿರೋ ಜಾಗಕ್ಕೆ ದಿನಕ್ಕೆ ಮೂರು ಸಾಲದ ಹಾಗೆ ಮಾಲೀಶ್ ಮಾಡಿದ್ರೆ ಬೆಚ್ಚನೆ ನೀರಿಂದ ಬಾಯಿ ಮುಕ್ಕಳಿಸಿ ನೋಡಿ ನೋವೆಲ್ಲಾ ಮಾಯಾ ಆಗೋಗುತ್ತೆ. ದಿನಾಲೂ ಇದ್ರಿಂದ್ಲೆ ಹಲ್ಲುಜ್ಜೋದು ಇನ್ನೂ ಒಳ್ಳೇದು.

ಮೂಲ

10. ಸಿಕ್ಕಾಪಟ್ಟೆ ತಲೆ ನೋವು , ನೆಗಡಿ, ಗಂಟಲು ನೋವು, ಗಂಟಲು ಕೆರೆತ ಅಂತ ಹಿಂಸೆ ಪಡೋರು ಅರಿಶಿನದ ಕೊಂಬನ್ನ ದೀಪದಲ್ಲಿ ಸುಟ್ಟು ಅದರ ವಾಸನೆ ತಗೊಳ್ಳೋದ್ರಿಂದ ಬೇಗನೆ ಆರಾಮ ಅನ್ಸುತ್ತೆ.

ಮೂಲ

11. ನಾವ್ ಚಿಕ್ಕಮಕ್ಕಳಾಗಿದ್ದಾಗ ಎದ್ದು ಬಿದ್ದು ಕೈ ಕಾಲು ಗಾಯ್ ಮಾಡ್ಕೊಂಡ್ರೆ ನಂ ಅಜ್ಜಿ ಅರಿಶಿನ ಹಚ್ಚಿ ಸರಿಹೋಗುತ್ತೇಳೋ ಏನಾಗಿಲ್ಲ ಅಂತಿದ್ರು ನೆನಪಿದ್ಯಾ!? ವಿಷ್ಯ ಏನಪ್ಪಾ ಅಂದ್ರೆ ಈ ಅರಿಶಿನಕ್ಕೆ ಹಾಗೆ ಗಾಯ ವಾಸಿ ಮಾಡೋ ಗುಣ ಖಂಡಿತ ಇದೆ.

ಮೂಲ

12. ಸಂಧಿವಾತದಿಂದ ನರಳೋರು ಪ್ರತಿದಿನ ದಿನಕ್ಕೆ ಮೂರು ಸಲದ ಹಾಗೆ ಅರಿಶಿನದ ಪುಡಿ ತೊಗೊಳ್ಳೋದ್ರಿಂದ ಸಮಸ್ಯೆ ದೂರಮಾಡ್ಬೋದು.

ಮೂಲ

ಇದರ ಶಕ್ತಿ ಏನು ಅಂತ ಈಗ ಗೊತ್ತಾಯ್ತು ತಾನೇ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: