ಎಲ್ಲೋ‌ ಒಂದ್ಕಡೆ ನನ್ ಜೀವನ ನಂಗ್ ಮಾಡಕ್ಕಾಗ್ತಿಲ್ಲ ಅನ್ನೋದಿದ್ರೆ ಈ 10 ಸಲಹೆಗಳ್ನ ಗಂಭೀರವಾಗಿ ತೊಗೊಳ್ಳಿ

ನಮ್ಮಿಷ್ಟದ ಜೀವನ ಮಾಡೋದು ಒಂದು ಕಲೆ, ಅದನ್ನ ತಿಳ್ಕೊಳ್ಳಿ....

ಯಾರದ್ದೋ ಖುಷಿಗೆ ಬದುಕಿ, ದಿನದ ಕೊನೇಲಿ ಅಯ್ಯೊ ನನ್ನಿಷ್ಟದ ಜೀವನ ಮಾಡೋಕಾಗ್ಲಿಲ್ವಲ್ಲ ಅಂತ ಕೊರಗೋದ್ರಲ್ಲೇನಿದೆ ರೀ? ನಿಮಗೆ ಇಷ್ಟ ಆಗೋ ಹಾಗೆ ಬದುಕಿ ನೋಡಿ ಎಷ್ತು ಚೆನ್ನಾಗ್ ಇರುತ್ತೆ ಅಂತ. ಆದರೆ ಈ ಬದಲಾವಣೆ ಮಾಡ್ಕೋಬೇಕಾದ್ರೆ ನಿಮಗೆ ಕೆಲವು ವಿಷಯಗಳು ಗೊತ್ತಿರಬೇಕು. ಒಂದೊಂದಾಗಿ ಹೇಳ್ತೀವಿ ಕೇಳಿ.

1. ನೀವು ಎಲ್ಲರ ತರಹ ಅಲ್ಲ. ನೀವೇ ಬೇರೆ ಅಂತ ಮರೀಬೇಡಿ.

ನಿಮ್ಮ ಇಷ್ಟ-ಕಷ್ಟಗಳು ಬೇರೆ, ನಿಮ್ಮ ಆಲೋಚನೆಗಳೇ ಬೇರೆ. ಮಿಕ್ಕವರ ಹಾಗೆ ನೀವಲ್ಲ, ಸಮಾಜದ ಎಲ್ಲ ಕಟ್ಟುಪಾಡುಗಳು ನಿಮಗೆ ಅನ್ವಯಿಸೋಲ್ಲ, ನಿಮಗೇನಿಷ್ಟಾನೋ ಅದನ್ನೇ ಮಾಡೋದು ನಿಮಗೇ ಒಳ್ಳೇದು.

ಮೂಲ

2. ನಿಮ್ಮೊಳಗಿನ ಕೂಗಿದೆಯಲ್ಲ, ಅದನ್ನ ಕಿವಿಗೊಟ್ಟು ಕೇಳಿ

ನಿಮ್ಮ ಮನಸ್ಸು ಹೇಳಿದ್ದನ್ನೇ ಮಾಡಿ, ಅದು ಸರಿಯಾಗೇ ಹೇಳಿರುತ್ತೆ. ನೀವು ಅದರ ಮಾತನ್ನ ಕೇಳದೇ ಹೋದ್ರೆ ಜೀವನದಲ್ಲಿ ನಿಮ್ಮ ಬಗ್ಗೆ ನೀವು ತಿಳ್ಕೊಳ್ಳೋಕೆ ಆಗದೇ ಹೋಗ್ಬಹುದು.

ಮೂಲ

3. ನಿಮಗೆ ಯಾವುದು ಒಳ್ಳೇದು ಅಂತ ಬೇರೆ ಯಾರಿಗೂ ಗೊತ್ತಿಲ್ಲ - ನಿಮಗೊಬ್ಬರಿಗೇ ಗೊತ್ತಿರೋದು

ಅವರಿಗೆ ಸರಿ ಹೋಗಿದ್ದು ನಿಮಗೆ ಸರಿ ಹೋಗಬೇಕು ಅಂತೇನಿಲ್ಲ. ಅವರು ನಿಮ್ಮ ಒಳ್ಳೇದಕ್ಕೇ ಹೇಳ್ತಾರೆ, ನಿಜ, ಆದರೆ ಅದು ನಿಮಗೂ ಒಳ್ಳೇದೇ ಮಾಡಬೇಕು ಅಂತಿಲ್ಲ.

ಮೂಲ

4. ನೀವು ಮನಸ್ಸು ಮಾಡಿದರೆ ಎಲ್ಲರನ್ನೂ ಮೀರಬಹುದು

ಮಿಕ್ಕವರಿಗಿಂತ ಚೆನ್ನಾಗಿ ನೀವು ಕೆಲಸ ಮಾಡಬಲ್ಲಿರಿ, ಯಾಕಂದ್ರೆ ನೀವು ಸಾಮನ್ಯರ ಹಾಗಲ್ಲ ಅನ್ನೋದು ನೆನೆಪಿರಲಿ. ನಾನು ಎಲ್ಲರ ತರಹಾನೇ ಅನ್ಕೊಂಡ್ರೆ ಹಾಗೇ ಇರ್ತೀರಿ. ಇಲ್ಲ, ನನ್ನಲ್ಲಿ ವಿಶೇಷವಾದ್ದು ಏನೋ‌ ಇದೆ ಅನ್ಕೊಂಡ್ರೆ ಹಾಗೇ ಆಗ್ತೀರಿ.

ಮೂಲ

5. ನಿಮಗೆ ಸರಿ ಅನ್ನಿಸಿದ್ದು ಈಗಲೇ ಮಾಡಿ, ನಾಳೆ ಕೊರಗೋದು ತಪ್ಪುತ್ತೆ

ನಿಮಗೆ ಈಗೇನು ಅನಿಸುತ್ತೋ ಅದನ್ನ ಮಾಡಿ, ನಾಳೆ ಯಾಕೆ ಮಾಡಲಿಲ್ಲ, ಮಾಡಿದ್ರೆ ಚೆನ್ನಾಗಿತ್ತು ಅಂತ ನೀವೇ ಕೊರಗೋದು ತಪ್ಪುತ್ತೆ. ನಿಮಗೆ ಏನೋ ಒಂದು ಸರಿ ಅನ್ನಿಸಿದ ಮೇಲೆ ಅದು ಸುಳ್ಳು ಅಂತ ಯಾಕೆ ಅನ್ಕೋತೀರಿ?

ಮೂಲ

6. ಬೇರೆಯೋರು ಹೇಳ್ದಂಗೆ ಜೀವನ ಮಾಡ್ತಾನೇ‌ ಇದ್ರೆ ಬರ್ತಾ‌ ಬರ್ತಾ ಬೇಜಾರಾಗುತ್ತೆ

ನೀವು ನಿಮ್ಮ ಜೀವನನ ಖುಷಿಯಾಗಿ ಮಾಡಿ, ಬೇರೆಯವರ ಜೀವನ ಮಾಡೋದ್ರಿಂದ ನಿಮಗೇನು ಸಂತೋಷ ಇಲ್ಲ. ಅಷ್ಟೇ ಅಲ್ಲ, ನೀವು ಸಂತೋಷವಾಗಿ ಇರಕ್ಕಾಗದೆ ಹೋದ್ರೆ ನೀವು ನಿಮ್ಮನ್ನ ನಂಬ್ಕೊಂಡಿರೋರ್ನ ಹೆಂಗೆ ಸುಖವಾಗಿ ಇಟ್ಕೊಳಕ್ಕೆ ಸಾಧ್ಯ? ನೀವೆ ಹೇಳಿ.

ಮೂಲ

7. ನಿಮಗೆ ಬೇಕಾದಂಗೆ ಜೀವನ ಮಾಡಕ್ಕೆ ಶುರು ಮಾಡಿದಾಗ ನಿಮಗೆ ಸಂತೋಷ ಅನ್ನೋದು ನಿಮ್ಮೊಳಗೇ ಇದೆ ಅಂತ ಗೊತ್ತಾಗುತ್ತೆ

ನಿಮ್ಮ ಸಂತೋಷಕ್ಕೆ ಬೇರೆಯೋರು ಯಾರೂ ಕಾರಣ ಅಲ್ಲ ಅಂತ ಗೊತ್ತಾಗುತ್ತೆ. ನೀವೇ ಪೂರ್ತಿ ಜವಾಬ್ದಾರರು ಅಂತಾನೂ ಗೊತ್ತಾಗುತ್ತೆ. ಇದಕ್ಕಿಂತ ಒಳ್ಳೇ ಫೀಲಿಂಗ್ ಇಲ್ಲ ಅನ್ನಿಸುತ್ತೆ.

ಮೂಲ

8. ನಿಮಗೆ ಬೇಕಾದಂಗೆ ಜೀವನ ಮಾಡೋದು ನಿಮ್ಮ ಹಕ್ಕು

ನೀವು ಸ್ವತಂತ್ರ ಜೀವಿ! ಕಾರಣವಿಲ್ಲದೆ ನಿಮ್ಮನ್ನ ನೀವೇ ಯಾಕೆ ಒಂದು ಪಂಜರದೊಳಗೆ ಕೂಡಿ ಹಾಕೋತಿದೀರಿ? ಅದರಿಂದ ಹೊರಬನ್ನಿ, ನಿಮಗೆ ನೀವೇ ಸ್ವಾತಂತ್ರ್ಯ ಕೊಟ್ಟುಕೊಳ್ಳಿ! ಅದನ್ನ ನೀವೇ ಕೊಟ್ಕೋಬೇಕು… ಬೇರೆಯೋರು ಯಾರೂ ಕೊಡಲ್ಲ! ನಿಮ್ಮ ಜನ್ಮಸಿದ್ಧ ಹಕ್ಕನ್ನ ಅನ್ಯಾಯವಾಗಿ ಬಿಟ್ಟುಕೊಡಬೇಡಿ.

ಮೂಲ

9. ನಿಮ್ಮ ಜೀವನ ನೀವು ಮಾಡಿದಾಗ ಬೇರೆಯೋರ ಜೊತೆ ನಿಮ್ಮ ಸಂಬಂಧಗಳು ಇನ್ನಷ್ಟು ಚೆನ್ನಾಗಿ ಆಗ್ತವೆ

ನಿಮ್ಮ ಸಂತೋಷ ಬೇರೆಯೋರ ಮೇಲೆ ನಿಂತಿಲ್ಲ ಅಂತ ಗೊತ್ತಾದ ಕೂಡಲೆ ಅವರಿಗೂ ನಿಮಗೂ ಸಂಬಂಧ ನಿಜವಾದ ಸಂಬಂಧ ಆಗುತ್ತೆ. ಅವರನ್ನ ನೀವು ಗುರವಿಸ್ತೀರಿ… ಅವರನ್ನ ತಿದ್ದಕ್ಕೆ ಹೋಗಲ್ಲ…. ಯಾಕಂದ್ರೆ ನಿಮಗೆ ಗೊತ್ತಿರುತ್ತೆ, ಅವರು ಅವರಿಗೋಸ್ಕರ ಅವರಿಗೆ ಬೇಕಾಗಿದ್ದನ್ನ ಮಾಡ್ಕೋತಿರ್ತಾರೆ ಅಂತ… ನಿಮ್ಮ ತರಹ…

ಮೂಲ

10. ಬೇರೆಯವರು ಏನ್ ಅನ್ಕೋತಾರೆ ಅನ್ನೋ ಯೋಚನೆ ಬಿಟ್ಟಾಕಿ

ನಿಮ್ಮ ಜೀವನ ನಿಮಗೆ ಬೇಕಾದಂಗೆ ಮಾಡದೆ ಇರಕ್ಕೆ ಕಾರಣವೇ ಇಲ್ಲ. ಬೇರೆಯೋರ್ನ ಮೆಚ್ಚಿಸಕ್ಕೆ ಯಾಕೆ ಹೊರಡ್ತೀರಿ? ಎಲ್ಲರನ್ನೂ ಮೆಚ್ಚಿಸಕ್ಕೆ ಸಾಧ್ಯವೂ ಇಲ್ಲ. ಈ ಸತ್ಯ ನಿಮಗೆ ಎಷ್ಟು ಬೇಗ ಗೊತ್ತಾಗುತ್ತೋ ಅಷ್ಟು ಒಳ್ಳೇದು. ನೀವು ನಿಮ್ಮ ಜೀವನ ಮಾಡ್ತಾ ಬಂದ್ರೆ ನಿಮಗೆ ನಿಜವಾಗಲೂ ಬೇಕಾದೋರು ಇರ್ತಾರಲ್ಲ, ಅವರು ಕೊನೆಗೆ ನಿಮ್ಮ ಆಯ್ಕೆಗಳ್ನ ಒಪ್ಕೊಂಡೇ ಒಪ್ಕೋತಾರೆ…

ಮೂಲ

ಅವರು ಅವರ ಜೀವನ ಮಾಡಲಿ, ನೀವು ನಿಮ್ಮದು ಮಾಡಿ. ಹೋಗಿ, ಮುನ್ನುಗ್ಗಿ! ಇನ್ಯಾಕೆ ತಡ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: