ಟ್ಯಾಲ್ಕಂ ಪೌಡರ್ನ ಈ 20 ಬೇರೆ ಬೇರೆ ಕೆಲಸಕ್ಕೆ ಬಳಸಬಹುದು ಅಂತ ನೀವು ಊಹಿಸಿರಕ್ಕೂ ಸಾಧ್ಯ ಇಲ್ಲ

ಮನೇಲಿ ಒಂದಲ್ಲ ಎರಡು ಇಟ್ಕೊಂಡಿರಬೇಕು

ಮುಖಕ್ಕೆ ಹಚ್ಕೊಳೋ ಟ್ಯಾಲ್ಕಂ ಪೌಡರ್ ಉಪ್ಯೋಗ ಒಂದಲ್ಲ ಎರಡಲ್ಲ. ಇದುವರ್ಗೂ ನೀವು ಯೋಚ್ನೆ ಕೂಡ ಮಾಡದೆ ಇರೋ ಈ ಪೌಡರ್ ಮಾಡೋ ಚಮತ್ಕಾರದ ಬಗ್ಗೆ ನಾವ್ ಹೇಳ್ತಿವಿ ಕೇಳಿ.

1. ತಲೇಲಿರೋ ಎಣ್ಣೆ ಅಂಶ ಹೋಗಿಸ್ಬೋದು, ಅದೂ ತಲೆ ಸ್ನಾನ ಮಾಡದೆ.

ಈ ಬೇಬಿ ಪೌಡರ್ ಇದ್ಯಲ್ಲಾ ಅದ್ರಲ್ಲೆಂತಾ ಸೂಪರ್ ಸುವಾಸನೆ ಇರುತ್ತಲ್ವಾ. ಸುಮ್ನೆ ಬೇಬಿಗೆ ಮಾತ್ರ ಅಲ್ಲಾ ನಿಮ್ಮ ತಲೆ ಕೂದಲನ್ನ ಸ್ವಲ್ಪ ಒಳ್ಳೆ ಸುವಾಸನೆ ಬಾರೋ ಹಾಗೆ ಮಾಡೋದಕ್ಕೂ ಬಳಸ್ಬೋದು. ತುಂಬಾ ಎಣ್ಣೆ ಚರ್ಮ ಇರೋರು ತಲೆಸ್ನಾನ ಮಾಡೋಕೆ ಸಾಧ್ಯವಾಗದೆ ಇದ್ರೆ ಬಾಚಣಿಗೆಗೆ ಸ್ವಲ್ಪ ಈ ಪೌಡರ್ ಹಾಕಿ ತಲೆ ಬಾಚ್ಕೊಂಡ್ರೆ ಎಣ್ಣೆ ಅಂಶ ಹೊರ್ಟೋಗುತ್ತೆ.

ಮೂಲ

2. ನಿಮಗಷ್ಟೇ ಅಲ್ಲ ನಿಮ್ಮನೆ ನಾಯಿ ಬೆಕ್ಕಿಗೂ ಇದೊಂತರಾ ಡ್ರೈ ಶಾಂಪೂ....

ನಿಮ್ಮನೆ ಮುದ್ದಿನ ಪ್ರಾಣಿ ನಾಯಿ / ಬೆಕ್ಕು ಯಾವ್ದೇ ಇದ್ರೂ ಸ್ವಲ್ಪ ಪೌಡರ್ ಹಾಕಿ ಎರಡೂ ಕೈನಲ್ಲೂ ಮೈತುಂಬಾ ಸವರಿ ಆಮೇಲೆ ಕೂದಲನ್ನ ಬಾಚಿ. ಎಣ್ಣೆ ಅಂಶ ಹೊರ್ಟೋಗಿ ಒಳ್ಳೆ ಸುಗಂಧದ ಜೊತೆ ನಿಮಗೆ ಇನ್ನೂ ಮುದ್ದು ಜಾಸ್ತಿ ಬಾರೋ ಹಾಗೆ ಕಾಣ್ಸುತ್ವೆ.

3. ಕೈ ಕಾಲಿಗೆ ಅಂಟಿರೋ ಮರಳನ್ನ ಉದುರಿಸ್ಬೋದು.

ಯಾವೊತ್ತಾದ್ರೂ ನದಿಯಲ್ಲೋ, ಬೀಚ್ನಲ್ಲೋ ಆಡಿ ಮೈ ಕೈಗೆಲ್ಲಾ ಮರಳು ಅಂಟಿದ್ರೆ ಅದನ್ನ ಉದುರಿಸೋಕೆ ಪಡೋ ಶ್ರಮ ನೆನೆಪು ಮಾಡ್ಕೊಳ್ಳಿ. ಒಂದಷ್ಟು ಪೌಡರ್ ಹಾಕಿ ಆಮೇಲೆ ಒಂದ್ ಬಟ್ಟೆನೋ ಇಲ್ಲಾ ಬ್ರಶ್ ತಗೊಂಡು ಒದರಿದ್ರೆ ಮರಳೆಲ್ಲಾ ಸಲೀಸಾಗಿ ಉದುರೋಗುತ್ತೆ.

ಮೂಲ

4. ಬಟ್ಟೆ ಮೇಲಾಗಿರೋ ಗ್ರೀಸ್ ಕಲೆನೂ ಹೋಗಿಸ್ಬೋದು.

ಬಟ್ಟೆಯ ಮೇಲೆ ಆಕಸ್ಮಾತ್ತಾಗೇನಾದ್ರೂ ಗ್ರೀಸ್ ಕಲೆ ಆಗಿದ್ರೆ ಯೋಚ್ನೆ ಮಾಡೋ ಅಗತ್ಯನೇ ಇಲ್ಲಾ. ಪೌಡರ್ ಹಾಕಿ ಚೆನ್ನಾಗಿ ಉಜ್ಜಿ ಆಮೇಲೆ ಬಟ್ಟೆ ಒಗೆದ್ಬಿಡಿ. ಕಲೆ ನಿಜ್ವಾಗ್ಲೂ ಇತ್ತಾ ಅಂತ ಆಶ್ಚರ್ಯ ಪಡ್ತೀರಿ.

ಮೂಲ

5. ಅಂಟಾಕ್ಕೊಂಡು ಕಾಟ ಕೊಡೋ ಕಾರ್ಡುಗಳನ್ನ ಸಲೀಸಾಗಿ ಬಿಡಿಸ್ಬೋದು.

ಒಂದೊಂದ್ಸಲ ಕಾರ್ಡುಗಳು ಒಂದಕ್ಕೊಂದು ಅಂಟಾಕ್ಕೊಂಡು ಸುಮ್ನೆ ಹಿಂಸೆ ಮಾಡುತ್ವೆ. ಅದನ್ನ ಬಿಡ್ಸೋಕೆ ಪೌಡರ್ ಬಳ್ಸಿ ನೋಡಿ. ತೆಗೆದಿಡೋವಾಗ್ಲೂ ಸ್ವಲ್ಪ ಪೌಡ್ರಾಕಿಡಿ ಸಿಂಪಲ್ಲಾಗಿ ಕೆಲ್ಸ ಆಗೋಗುತ್ತೆ.

ಮೂಲ

6. ಸಿಕ್ಕಾಗಿರೋ ಸರ / ಚೈನ್ / ನೆಕ್ಲೇಸನ್ನ ಸುಲಭವಾಗಿ ಬಿಡಿಸ್ಬೋದು.

ಕತ್ತಿಗೆ ಹಾಕ್ಕೋಳ್ಳೋ ಚೈನುಗಳು ಆವಾಗಾವಾಗ ಸಿಕ್ಕು ಸಿಕ್ಕಾಗೋಗಿ ಭಲೇ ಕಾಟ ಕೊಡುತ್ತೆ. ಅದನ್ನ ಬಿಡ್ಸೋಕೆ ಪೌಡರ್ ಹಾಕಿ, ಬೇಗ ಸಿಕ್ಕಲು ಬಿಟ್ಕೊಳುತ್ತೆ. ಯಾಕೆ ಗೊತ್ತಾ?‌ಯಾಕಂದ್ರೆ ಪೌಡರ್ ಹಾಕೋದ್ರಿಂದ ಸರದ ಕೊಂಡಿಗಳು ಒಂದಕ್ಕೊಂದು ಕಚ್ಚಿಕೊಳಲ್ಲ, ಜಾರುತ್ತೆ. ಆಗ ಸುಲಭವಾಗಿ ಬಿಟ್ಕೊಳುತ್ತೆ.

ಮೂಲ

7. ಉರಿಯೂತ ಹಿಂಸೆ ಹೋಗಿಸುತ್ತೆ.

ಓಡೋ ಅಭ್ಯಾಸ ಇರೋರು ಕಾಲುಗಳ ಸಂಧಿಯಲ್ಲಿ ಆಗಾಗ ಉರಿಯೂತ ಹಿಂಸೆ ಅನುಭವಿಸ್ತಾ ಇದ್ರೆ ಓಡೋ ಮೊದ್ಲೇ ಚರ್ಮಕ್ಕೆ ಪೌಡರ್ ಹಾಕೋದ್ರಿಂದ ಹೀಗಾಗೋದನ್ನ ತಪ್ಪಿಸ್ಬೋದು. ಒಮ್ಮೊಮ್ಮೆ ಹೀಗಾಗೋದ್ಮೆಲೂ ಪೌಡರ್ ಹಾಕಿ ಹಿಂಸೆಯಿಂದ ಪಾರಾಗ್ಬೋದು.

ಮೂಲ

8.  ವ್ಯಾಕ್ಸಿಂಗ್ ನೋವು ಕಡಿಮೆ ಮಾಡ್ಬೋದು.

ನಮ್ಮ ಚರ್ಮನುಣುಪಾಗಿ ಕಾಣಿಸ್ಬೇಕು ಅಂದ್ಕೊಂಡು ವ್ಯಾಕ್ಸಿಂಗ್ ಮಾಡ್ಕೊಳ್ತೀವಿ ಆದ್ರೆ ಹಾಗೆ ಮಾಡ್ಕೊಂಡ್ಮೇಲೆ ಚರ್ಮ ತುಂಬಾನೇ ಕಿರಿ ಕಿರಿ ಅನುಭವಿಸುತ್ತೆ. ಹೀಗಾದಾಗ ಸ್ವಲ್ಪ ಪೌಡರ್ ಹಚ್ಚಿಕೊಳ್ಳೋದ್ರಿಂದ ಆ ಹಿಂಸೆ ಕಡ್ಮೆ ಮಾಡ್ಬೋದು.

ಮೂಲ

9. ಶೂನಲ್ಲಿರೋ ಕೆಟ್ಟ ವಾಸ್ನೆ ಹೋಗ್ಸುತ್ತೆ.

ತುಂಬಾ ಬೆವರೋರಿಗೆ ಪಾಪ ಶೂ ಉಪ್ಯೋಗ್ಸೋದೆ ದೊಡ್ಡ ಸಮಸ್ಯೆ. ಹಾಗೆ ಬೇಜಾರ್ ಮಾಡ್ಕೋಳ್ದೇ ಶೂ ಬಳ್ಸೋಕೆ ಶುರು ಮಾಡಿ ಯಾಕಂದ್ರೆ ಪೌಡರ್ ಹಾಕಿ ಕೆಟ್ಟ ವಾಸ್ನೆ ಹೋಗಿಸ್ಬೋದು.

ಮೂಲ

10. ಹೂವಿನ ಗೆಡ್ಡೆಗಳನ್ನ ಭೂಮಿಗೆ ಹಾಕೊ ಮೊದ್ಲು ಪೌಡರ್ನಲ್ಲಿ ಮುಳುಗಿಸೋದ್ರಿಂದ ಗಿಡ ಚೆನ್ನಾಗಿ ಬೆಳೆಯುತ್ತೆ.

ಹೌದ್ರೀ ಹೀಗೆ ಮಾಡೋದ್ರಿಂದ ಗೆಡ್ಡೆಗಳು ಬೂಸ್ಟ್ ಹಿಡಿಯೋದಿಲ್ಲ. ಪೌಡರ್ ವಾಸ್ನೆಗೆ ಯಾವ ತರ ಕ್ರಿಮಿ ಕೀಟ ಇರುವೆ ಗೆದ್ದಲು ಯಾವ್ದೂ ಸುಳಿಯೋದಿಲ್ಲ. ಅಂದ್ಮೇಲೆ ಹೂವಿನ ಗಿಡ ಸೂಪರ್ ಸೇಫು.

ಮೂಲ

11. ಒದ್ದೆ ಬಟ್ಟೆಗಳನ್ನ ಕಬೋರ್ಡಲ್ಲಿಡೋವಾಗ ಪೌಡರ್ ಹಾಕಿಟ್ರೆ ಬೂಷ್ಟು ಬರಲ್ಲ

ಬಟ್ಟೆ ಅಲ್ಪ ಸ್ವಲ್ಪ ಒದ್ದೆ ಇದ್ದಾಗ ಕಬೋರ್ಡಲ್ಲಿಟ್ರೆ ಬೆಟ್ಟೆಗಳೆಲ್ಲಾ ಬೂಷ್ಟ್ ಹಿಡಿಯುತ್ತೆ. ಹಾಗಾಗ್ಬಾರ್ದು ಅಂದ್ರೆ ಪೌಡರ್ ಹಾಕಿಡಿ.

ಮೂಲ

12.  ಕೈ ಚೀಲ ಹಾಕ್ಕೋಳ್ಳೋ ಮೊದ್ಲು ಪೌಡರ್ ಹಾಕಿಡಿ.

ಬೆವರಿಂದ ವಾಸ್ನೆ ಬರೋದನ್ನ ತಡ್ಯೋದಕ್ಕೆ ಇದಕ್ಕಿಂತ ಒಳ್ಳೆ ಉಪಾಯ ಯಾವ್ದೂ ಇಲ್ಲ.

ಮೂಲ

13. ಬೆಡ್ ಶೀಟಿಗೂ ಪೌಡರ್ ಹಾಕೋದು ನಿಜವಾಗ್ಲೂ ಒಳ್ಳೆ ಅಭ್ಯಾಸ.

ಬೇಸಿಗೆ ಕಾಲದಲ್ಲಿ ಬೆಡ್ ಶೀಟನ್ನ ತಂಪಾಗಿ ಇಡೋದರ ಜೊತೆಗೆ ಒಳ್ಳೆ ಸುಗಂಧ ಕೂಡ ಬೀರುತ್ತೆ. ಇದು ಒಳ್ಳೆ ಅಭ್ಯಾಸ ತಾನೇ.

ಮೂಲ

14. ಇರುವೆಗಳನ್ನ ದೂರ ಇಡೋದಿಕ್ಕೂ ಪೌಡರ್ ಸಾಕು.

ಮನೆಯೊಳಗೆ ಎಲ್ಲಾದ್ರೂ ಇರುವೆ ಗೂಡಿದ್ರೆ ಅಲ್ಲಲ್ಲಿ ಪೌಡರ್ ಹಾಕಿಡಿ. ಇರುವೆಗಳು ದೂರ ಓಡೋಗುತ್ವೆ.

ಮೂಲ

15. ಅತ್ತು ಊದಿರೋ ಕಣ್ಣನ್ನ ಸರಿ ಮಾಡುತ್ತೆ.

ಹೂರಿ ಹೌದು . ಯಾವೊತ್ತಾದ್ರೂ ನೀವೂ ಅತ್ತು ಕಣ್ಣು ಊದ್ಕೊಂಡ್ರೆ ಯಾರಿಗೂ ಗೊತ್ತಾಗಿಸ್ಬಾರ್ದು ಅನ್ಸಿದ್ರೆ ಪೌಡರ್ ಹಾಕಿ ಸರಿ ಮಾಡ್ಕೋಳ್ಳಿ.

ಮೂಲ

16. ಬೇಬಿ ಪೌಡರ್ ಬಳ್ಸಿ ಮುಖದ ಮೇಲಿನ ಗಾಯ ಸರಿ ಮಾಡ್ಕೊಳ್ಳಿ.

ಮುಖದ ಮೇಲೆ ಏನಾದ್ರೂ ಗಾಯ ಆಗಿದ್ರೆ ಮಾಮೂಲಿ ಪೌಡರ್ ಬದ್ಲು ಬೇಬಿ ಪೌಡರ್ ಬಳ್ಸಿ. ಗಾಯ ಉರ್ಯೋದಿಲ್ಲ ಆದ್ರೆ ಕ್ರಮೇಣ ಸರಿಹೋಗುತ್ತೆ.

ಮೂಲ

17. ಮರದ ನೆಲ ಮಾಡೋ ಶಬ್ಧ ಪೌಡರ್ ಹಾಕಿದ್ರೆ ಸರಿಯಾಗುತ್ತೆ.

ಇತ್ತೀಚೆಗೆ ಮರದ ನೆಲಹಾಸು ಹೊಸ ಟ್ರೆಂಡು. ಆದ್ರೆ ಒಂದೊಂದ್ಸಲ ಅದ್ರಿಂದಾಗೋ ಶಬ್ದ ಕೋಪ ಬರ್ಸುತ್ತೆ. ಅದನ್ನ ಸರಿ ಮಾಡೋದಕ್ಕೆ ಪೌಡರ್ ಹಾಕೋದು ಸೂಪರ್ ಐಡಿಯಾ.

ಮೂಲ

18. ಡಿಯೋಡ್ರೆಂಟ್ ಬಳ್ಸೋ ಅಭ್ಯಾಸ ಇಲ್ಲದಿರೋರ್ಗೆ ಈ ಪೌಡರ್ ಒಳ್ಳೆ ಉಪಾಯ.

ನಿಜವಾಗ್ಲೂ ಪೌಡರ್ ಕೂಡ  ಡಿಯೋಡ್ರೆಂಟ್  ಮಾಡೋ ಕೆಲ್ಸಾನೇ ಮಾಡುತ್ತೆ.

ಮೂಲ

19. ಬಟ್ಟೆ ಜೋಡಿಸಿಡೋ ಕಬೋರ್ಡಲ್ಲೂ ವಾಸ್ನೆ ಇದ್ರೆ ಪೌಡರ್ ಬಳ್ಸಿ.

ಬಟ್ಟೆ ಇಡೋ ಕಬೋರ್ಡಲ್ಲಿ ಯಾವಾದ್ರೂ ವಾಸ್ನೆ ಇದ್ರೆ ಪೌಡರ್ ಹಾಕೋದ್ರಿಂದ ವಾಸ್ನೆ ಹೋಗಿ ಬಟ್ಟೆಗಳೆಲ್ಲಾ ಘಂ ಅನ್ನುತ್ತೆ. ಮಾಡಿ ನೋಡಿ.

ಮೂಲ

20. ಒಣ ಚರ್ಮ ಇರೋರು ಬೇಬಿ ಪೌಡರ್ ಬಳ್ಸೋದು ಒಳ್ಳೇದು.

ಮಾಮೂಲಿ ಪೌಡರ್ ಬದ್ಲು ಬೇಬಿ ಪೌಡರ್ ಬಳ್ಸೋದು ಒಣ ಚರ್ಮ ಇರೋರಿಗೆ ತುಂಬಾ ಸಹಾಯ ಆಗುತ್ತೆ.

ಮೂಲ

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: