ನಿಮ್ಮ ಕಣ್ಣು ಹೆಂಗಿದೆ ಅನ್ನೋದ್ರಿಂದ ನಿಮ್ಮ ಆರೋಗ್ಯದ ಬಗ್ಗೆ ಈ 8 ವಿಷಯ ಗೊತ್ತಾಗುತ್ತೆ

ಕಣ್ಣು ಏನು ಮಾತಾಡುತ್ತೆ ತಿಳ್ಕೊಳ್ಳಿ

ಕಣ್ಣು ಮನಸ್ಸಿನ ಕನ್ನಡಿ ಅಂತ ಹೇಳೋದನ್ನ ನಾವೆಲ್ರೂ ಕೇಳ್ತಾನೇ ಇರ್ತೀವಿ. ಯಾರು ಹೇಳಿದ್ರೋ ಏನೋ, ಕಣ್ಣು ದೇಹದ ಖಾಯಿಲೆಗಳ ಬಗ್ಗೆ ಸಾಕಷ್ಟು ಹೇಳುತ್ತೆ ನೋಡಿ.

1. ಪದೇ ಪದೇ ಕಣ್ಣಲ್ಲಿ ಕುರು ಆದ್ರೆ ತುಂಬಾ ದಿನ ಆದ್ರೂ ವಾಸಿ ಆಗ್ದೇ ಇದ್ರೆ ಕ್ಯಾನ್ಸರ್ ಕೂಡ ಆಗಿರ್ಬೋದು

ಕೆಲವು ಬೆವರು ಗ್ರಂಥಿಗಳಲ್ಲಿ ತಡೆ ಆದ್ರೆ ಕಣ್ನಲ್ಲಿ ಕುರು ಆಗತ್ತೆ. ಇದು ತಾನಾಗೇ ವಾಸಿ ಆಗುತ್ತೆ , ಅಕ್ಕಸ್ಮಾತ್ ವಾಸಿ ಆಗ್ತಾನೇ ಇಲ್ಲ ಅಂದ್ರೆ ಅಥ್ವಾ ಆಗಾಗ ಬರ್ತಿದ್ರೆ ನೀವು ಆದಷ್ಟು ಬೇಗ ಡಾಕ್ಟರ್ ಹತ್ರ ತೋರಿಸ್ಬೇಕು ಅಂತರ್ಥ.

ಕೆಲವೊಮ್ಮೆ ಕಣ್ಣಲ್ಲಿರೋ ಗ್ರಂಥಿಗಳಲ್ಲಿ ಕ್ಯಾನ್ಸರ್ ಆದರೂ ಹೀಗಾಗುತ್ತೆ.

ಮೂಲ

2. ಹುಬ್ಬಿನ ಕೂದಲು ಉದುರುತ್ತಿದ್ರೆ ಥೈರಾಯಿಡ್ ತೊಂದ್ರೆ ಇರ್ಬೋದು

ವಯಸ್ಸಾಗ್ತಿದ್ರೆ, ಒತ್ತಡ ಜಾಸ್ತಿ ಇದ್ರೆ ಅಥ್ವಾ ನೀವು ತಿನ್ನೋ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಇದ್ರೆ, ಬೊಕ್ಕ ತಲೆ ಆಗ್ತಿದ್ರೆ ಹೀಗಾಗುತ್ತೆ.

ಥೈರಾಯಿಡ್ ಹಾರ್ಮೋನ್ ಕಡಿಮೆ ಆದ್ರೂ ಹೀಗಾಗುತ್ತೆ. ಹಾಗಾಗಿ ಡಾಕ್ಟರ್ನ ಆದಷ್ಟು ಬೇಗ ಭೇಟಿ ಮಾಡ್ಬೇಕು.

ಮೂಲ

3. ಕಣ್ಣು ಮಂಜಾಗ್ತಿದ್ರೆ ಹೆಚ್ಚು ಕಂಪ್ಯೂಟರ್ ಮುಂದೆ ಇರ್ಬೇಡಿ

ಅತಿ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕೂರೋರಲ್ಲಿ ಕಣ್ಣು ಉರಿ ಅಥ್ವಾ ಮಂಜಾಗುತ್ತೆ. ಇತ್ತೀಚೆಗೆ ಇದಕ್ಕೆ "ಡಿಜಿಟಲ್ ಐ ಸ್ಟ್ರೈನ್" ಅಥ್ವಾ "ಡಿಜಿಟಲ್ ಐ ಸಿಂಡ್ರೋಮ್" ಅಂತಾರೆ.

ಮೂಲ

4. ನೀವು ನೋಡೋವಾಗ ಅಲ್ಲಲ್ಲಿ ಮಂಜು ಮಂಜಾಗಿ ಕಂಡ್ರೆ ಮೈಗ್ರೇನ್ ಇದ್ಯಾ ನೋಡ್ಕೊಳ್ಳಿ

ಮೈಗ್ರೇನ್ ತಲೆ ನೋವಿದ್ದವರಿಗೆ ಹೀಗೆ ಕಾಣುತ್ತೆ. ಮಂಜಾಗೋದರ ಜೊತೆಗೆ ಮಿಂಚು ಅಥವಾ ಅಲೆಗಳ ಹಾಗೆ ಕಂಡ್ರೆ ನೀವು ಡಾಕ್ಟರ್ ಹತ್ರ ಈಗ್ಲೇ ಹೋಗೋದು ಉತ್ತಮ. 

ಮೂಲ

5. ಕಣ್ಣು ಊದಿದ ಹಾಗೆ ಇದ್ರೆ ಥೈರಾಯಿಡ್ ತೊಂದ್ರೆ ಇರ್ಬೋದು

ನಿಮ್ಮ ಕಣ್ಣು ಆಗಾಗ ಊದತ್ತೆ ಮತ್ತೆ ಆಗಾಗ ಉಜ್ಜಿ ಉಜ್ಜಿ ನೋಡೋದು ಸ್ಪಷ್ಟವಾಗಿ ಕಾಣೋದಾದ್ರೆ ನಿಮಗೆ  ಥೈರಾಯಿಡ್ ತೊಂದ್ರೆ ಇರೋ ಸಾಧ್ಯತೆ ಇರುತ್ತೆ. ಇದನ್ನ "ಗ್ರೇವ್ಸ್ ಐ ಡಿಸೀಸ್" ಅಂತಾರೆ.

ಮೂಲ

6. ಕಣ್ಣು ಹಳದಿಗಟ್ಟಿದ್ರೆ ಕಾಮಾಲೆ ಆಗಿರುತ್ತೆ

ಲಿವರ್ ಅಥವಾ ಗಾಲ್ ಬ್ಲಾಡರ್ನಲ್ಲಿ ಏನಾದ್ರೂ ತೊಂದ್ರೆ ಆದಾಗ ನಿಮ್ಮ ಕಣ್ಣು ಹಳದಿಗಟ್ಟುತ್ತೆ. ಈ ತೊಂದ್ರೆ ದೊಡ್ಡೋರಲ್ಲಿ ಮಾತ್ರ ಅಲ್ಲ ಆಗತಾನೇ ಹುಟ್ಟಿದ ಮಕ್ಕಳಿಗೂ ಆಗ್ಬಹುದು. 

ಮೂಲ

7. ಸಕ್ಕರೆ ಖಾಯಿಲೆ ಇದ್ರೆ ದೃಷ್ಟಿ ಅಸ್ಪಷ್ಟವಾಗತ್ತೆ

ಕಣ್ಣಿನ ರಕ್ತನಾಳಗಳಲ್ಲಿ ತೊಂದ್ರೆ ಆಗೋದ್ರಿಂದ ಸಕ್ಕರೆ ಖಾಯಿಲೆ ಇರೋರಿಗೆ ಹೀಗಾಗುತ್ತೆ ನಿಮಗೆ ಗೊತ್ತಿರ್ಲಿ. ಇದನ್ನ ಡಯಾಬಿಟಿಕ್ ರೆಟಿನೋಪಥಿ ಅಂತಾರೆ.

ಮೂಲ

8. ದೃಷ್ಟಿ ವ್ಯತ್ಯಾಸ ಇದ್ರೆ ಕಣ್ಣೊಂದೇ ಅಲ್ದೇ ದೇಹದ ಬೇರೇ ಭಾಗದಲ್ಲೂ ತೊಂದರೆ ಇರ್ಬಹುದು 

ನಿಮ್ಮ ದೃಷ್ಟಿಲಿ ಏನೇ ವ್ಯತ್ಯಾಸ ಕಂಡರೂ ಎಚ್ಚರಿಕೆ ಇರಲಿ ನೀವು ಎಷ್ಟು ಬೇಗ ವೈದ್ಯರನ್ನ ಭೇಟಿ ಮಾಡ್ತೀರೋ ಅಷ್ಟೂ ಒಳ್ಳೇದು.

ಮೂಲ

ನಿಮ್ಮ ಕಣ್ಣು ನಿಮಗೇನು ಹೇಳ್ತಿದೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: