ಜೀವನದಲ್ಲಿ ಈ 12 ಅನುಭವಗಳಾದ್ರೆ ಹೊಸ ಹೊಸ ಸಾಧ್ಯತೆಗಳು ಕಾಣಿಸಕ್ಕೆ ಶುರು ಆಗಿ ತುಂಬ ಬೆಳೀತೀರಿ

ಕೆಲವೊಂದ್ಸಲ ನಾವೇ ಬೇಡ ಅಂತ ಬಿಟ್ಟುಬಿಡ್ತೀವಿ

ಜೀವನ ಅನುಭವಗಳ ಸಂತೆ ಅಂತಾರೆ. ಅದು ಕೆಟ್ಟದ್ದೋ ಒಳ್ಳೋದೋ ಎಲ್ಲರಿಗು ಒಂದಲ್ಲ ಒಂದು ಅನುಭವ ಆಗೇ ಇರುತ್ತೆ. ಅದರಿಂದ ಪಾಠನೂ ಕಲಿತಿರ್ತೀವಿ. ಆದ್ರೆ ಕೆಲವೊಂದು ಅನುಭವಗಳನ್ನು ಅನುಭವಿಸಿಯೇ ತೀರಬೇಕು. ಕೆಳಗೆ ಕೊಟ್ಟಿರೋ 12 ಅನುಭಗಳು ನಿಮಗೆ ಆದರೆ ಜೀವನದಲ್ಲಿ ಹೊಸ ಹೊಸ ಸಾಧ್ಯತೆಗಳು ಕಾಣಿಸಕ್ಕೆ ಶುರು ಆಗುತ್ತೆ. ಬೆಳೀತೀರಿ. ಒಂದೊಂದಾಗಿ ಬರೋಣ್ವಾ?

1. ಯಾವುದಾದರೂ ಬೇರೆ ದೇಶದಲ್ಲಿ ವಾಸ ಮಾಡೋಂತ ಅನುಭವ

ಹೊಸ ಊರು, ಪರಿಚಯಸ್ಥರು, ಗೆಳೆಯ ಗೆಳತಿ ಯಾರೂ ಇರಲ್ಲ. ಒಂಥರಾ ಏಕಾಂಗಿ ಬದುಕು ಅನ್ನಿಸಿಬಿಡುತ್ತೆ. ಈ ಅನುಭವ ಪಡಿಯೋಕೆ ಎಲ್ಲರ ಕೈಲೂ ಸಾಧ್ಯವಾಗಲ್ಲ. ಉದ್ಯೋಗ, ವ್ಯಾಪಾರಕ್ಕಾಗಿ ಪರಸ್ಥಳಗಳಿಗೆ ಹೋಗೋಂತವರಿಗೆ ಮಾತ್ರ ಈ ರೀತಿ ಅನುಭವ ಆಗಿರುತ್ತೆ. ಈ ರೀತಿ ಅನುಭವಾನ ನೀವು ಯಾಕೆ ಒಂದ್ಸಲ ಪಡ್ಕೋಬಾರ್ದು?

ಮೂಲ

2. ಅತಿಯಾದಂತ ದುಃಖ, ಹೃದಯ ಚೂರುಚೂರಾಗೋಂತ ಅನುಭವ

ಈ ರೀತಿ ಎಲ್ಲರಿಗೂ ಆಗಕ್ಕೆ ಸಾಧ್ಯವಿಲ್ಲ ಬಿಡಿ. ಆದರೂ ಪ್ರತಿಯೊಬ್ರ ಜೀವನದಲ್ಲೂ ಒಂದಲ್ಲ ಒಂದ್ಸಲ ಅತಿಯಾದ ದುಃಖ, ಹೃದಯ ಚೂರುಚೂರಾಗೋಂತ ಅನುಭವ ಸಂಭವಿಸುತ್ತದೆ. ಇದ್ರಿಂದ ಧೃತಿಗೆಡಬಾರದು. ಶಿಲ್ಲಿ ಕೆತ್ತಿದಷ್ಟೂ ಸುಂದರವಾಗಿರೋಂತ ಮೂರ್ತಿ ಹೇಗೆ ರೂಪಗೊಳ್ಳುತ್ತೋ ಹಾಗೆ ನಮ್ಮ ಮನಸ್ಸು ಈ ರೀತಿ ಅನುಭವಗಳಿಂದ ವಿಕಾಸ ಆಗುತ್ತೆ. ನಮ್ಮ ಎಲ್ಲಾ ಭ್ರಮೆಗಳನ್ನು ತೊಲಗಿಸುತ್ತವೆ ಈ ತರದ ಅನುಭವ. 

ಮೂಲ

3. ಯಾರೂ ಜೊತೆಗೆ ಇಲ್ದಂಗೆ ಒಬ್ಬರೇ ಪ್ರಯಾಣ ಹೊರಡುವ ಅನುಭವ

ನಿಮ್ಮನ್ನ ನೀವು ಚೆನ್ನಾಗಿ ಅರ್ಥ ಮಾಡ್ಕೋಬೇಕು ಅಂದ್ರೆ ಈ ತರದ ಅನುಭವನ್ನ ಪಡೇಲೇಬೇಕು. ಸಾಧ್ಯವಾದರೆ ಟ್ರೈ ಮಾಡಿ. ಗಂಟುಮೂಟೆ ಕಟ್ಕೊಂಡು ಒಬ್ರೇ ಪ್ರವಾಸ, ಪ್ರಯಾಣ ಹೊರಟುಬಿಡಿ. ಜೊತೆಗೆ ಯಾರೂ ಇಲ್ಲ. ಹೆಂಗ್ ಹೋಗೋದು ಅಂದ್ಕೊಳ್ಳೋರೆ ಜಾಸ್ತಿ. ಈ ರೀತಿ ಮಾಡೋದ್ರಿಂದ ನಿಮ್ಮನ್ನ ನೀವು ಚೆನ್ನಾಗಿ ಅರ್ಥ ಮಾಡ್ಕೊಳ್ಳಕ್ಕೆ ಸಾಧ್ಯವಾಗುತ್ತೆ.

ಮೂಲ

4. ಅನುಭವಿಸಿಯೇ ತೀರಬೇಕು ಸಾಕುನಾಯಿ ಜೊತೆಗಿನ ಒಡನಾಟ

ಮನುಷ್ಯ ಮನುಷ್ಯರ ನಡುವಿನ ಒಡನಾಡ ಬಿಟ್ಟಾಕಿ. ಸಾಕುನಾಯಿ ಜೊತೆಗಿನ ಒಡನಾಡದಿಂದ ಆಗೋಂತ ಅನುಭವ ನಿಜಕ್ಕೂ ನಮ್ಮ ಮನಸ್ಸನ್ನ ಅರಳಿಸತ್ತೆ. ಜೀವನದಲ್ಲಿ ಈ ರೀತಿಯ ಒಡನಾಡ ಇನ್ಯಾವುದರಲ್ಲೂ ಸಿಗಲ್ಲ. ನಂಬಿಕೆ ಅಂದ್ರೆ ಏನು, ಏನನ್ನೂ ನಿರೀಕ್ಷಿಸದೆ ಪ್ರೀತಿಸೋದು ಹೇಗೆ ಅಂತ ಈ ಅನುಭವ ಹೇಳಿಕೊಡುತ್ತೆ. 

ಮೂಲ

5. ಜೀವನದಲ್ಲಿ ಒಮ್ಮೆನಾದ್ರೂ ಕಂಠಪೂರ್ತಿ ಕುಡಿದು ಎಂಜಾಯ್ ಮಾಡೋಂತ ಅನುಭವ

ಮಿತಿಯಿಲ್ಲದ ಕುಡಿತ ಕೆಟ್ಟದ್ದು ಅಂತ ಎಲ್ರಿಗೂ ಗೊತ್ತು (ಮಿತಿಯಲ್ಲಿದ್ರೆ ಅದರ ಕಥೇನೇ ಬೇರೆ). ಆದ್ರೆ ಜೀವನದಲ್ಲಿ ಒಮ್ಮೆನಾದ್ರೂ ಕುಡೀದಿದ್ರೆ ನಿಮಗೆ ಈ ಅನುಭವ ಸಿಗಲ್ಲ. ಜವಾಬ್ದಾರಿ ಅರಿತು ಕುಡಿಯೋದ್ರಿಂದ ನಿಮ್ಮ ಆಲೋಚನೆಗಳಿಗೆ ರೆಕ್ಕೆ ಬರುತ್ತೆ. ಹೊಸ ಹೊಸ ಕನಸುಗಳಿಗೆ ಉತ್ತೇಜನ ಸಿಗುತ್ತೆ. ಮೈಮರೆತು ಒಮ್ಮೆನಾದ್ರೂ ಕುಡಿದು ಬಿಡಿ, ಏನಾಗಲ್ಲ!

ಮೂಲ

6. ಮೂವತ್ತು ವರ್ಷ ದಾಟೋಕು ಮುನ್ನ ಒಂದು ರೋಡ್ ಟ್ರಿಪ್ ಹೋಗೋಂತ ಅನುಭವ

ಯಾವಾಗ್ಲೂ ಗೊತ್ತಿರೋಂತ ಸ್ಥಳಗಳಿಗೆ ಹೋಗೋದ್ರಲ್ಲಿ ಅಂತಾ ಏನ್ ಮಜಾ ಇರಲ್ಲ. ಅದ್ರಲ್ಲೂ ಹೊಸ ರೂಟು, ಹೊಸ ರೋಡು ಹುಡುಕಿಕೊಂಡು ಹೊರಡಿ. ಜೊತೆಗೆ ಗೆಳೆಯ/ಗೆಳತಿ ಇರ್ಲಿ. ಈ ಅನುಭವಾನ ಮೂವತ್ತು ವರ್ಷ ದಾಟೋಕು ಮುನ್ನ ಪಡ್ಕೊಂಡ್ರೆನೇ ನಿಜವಾದ ಥ್ರಿಲ್ ಸಿಗೋದು. 

ಮೂಲ

7. ಏಕಾಂಗಿಯಾಗಿ ಇದ್ದು ನೋಡಿ, ನಿಮ್ಮೊಳಗಿನ ಹೊಸ ವ್ಯಕ್ತಿ ಪರಿಚಯವಾಗ್ತಾನೆ

ಈ ತರದ ಅನುಭವ ಪಡ್ಕೋಬೇಕು ಅಂದ್ರೆ ಏಕಾಂಗಿಯಾಗಿ ಒಂದಷ್ಟು ದಿನ ಕಳೀಬೇಕು. ಜೊತೆಗೆ ಯಾರೂ ಇರ್ಬಾದ್ರು. ಆಗ ನಿಮ್ಮನ್ನು ನೀವು ಅರ್ಥ ಮಾಡ್ಕೊಳ್ಳೋಕೆ, ನಿಮ್ಮೊಳೊಗಿನ ಹೊಸ ವ್ಯಕ್ತಿಯನ್ನು ಹೊರಗೆ ತರೋಕೆ ಸಾಧ್ಯವಾಗುತ್ತೆ.

ಮೂಲ

8. ಏನೇ ಕೆಲಸ ಮಾಡಿದ್ರೂ ಅತ್ಯುತ್ತಮವಾಗಿ ಮಾಡಿದಾಗ ಆಗೋ ಅನುಭವ

ಜೀವನದಲ್ಲಿ ಎಲ್ರೂ ಸುಮ್ನೆ ಏನೋ ಒಂದು ಕೆಲಸ ಮಾಡ್ಕೊಂಡ್ ಹೋಗ್ತಿತಾರ್ತೆ. ಕಡೆಗೆ ರಿಟೈರೂ ಆಗ್ತಾರೆ. ಗುರುತಿಸೋಂತ ಒಂದೇ ಒಂದು ಕೆಲಸಾನು ಮಾಡಿರಲ್ಲ. ಅದು ಎಷ್ಟೇ ಚಿಕ್ಕ ಕೆಲಸವಾದರೂ ಪರ್ವಾಗಿಲ್ಲ. ಜೀವನದಲ್ಲಿ ನಾನು ಮಾಡಿದಂತ ಅತ್ಯುತ್ತಮ ಕೆಲಸ ಅನ್ನೋ ಹಂಗೆ ಮಾಡಿ ನೋಡಿ. ಜಗತ್ತಿನಲ್ಲಿ ಏನೇ ಸಾಧಿಸಿದ ಅನುಭವ ನಿಮಗೆ ಸಿಗುತ್ತೆ. 

ಮೂಲ

9. ಸೋಲಿನ ಅನುಭವ

ಸೋಲೆ ಗೆಲುವಿನ ಸೋಪಾನ ಅನ್ನೋ ಮಾತು ಕೇಳೇ ಇರ್ತೀವಿ. ಸೋಲು ಗೆಲುವಿಗೆ ಮೆಟ್ಟಿಲಾಗುತ್ತೆ. ಸೋಲಿನಿಂದ ನಾನು ಪಾಠದ ಅನುಭವ ಕಲ್ತಿರ್ತೀವಿ. ಸೋಲ್ತೀವಿ ಅಂತ ಭಯ ಪಡಬೇಡಿ. ನಾನು ಸೋತಿದ್ದೀನಿ ಅಂತ ನಿಮಗೆ ಗೊತ್ತಾಗ್ಲಿಲ್ಲ ಅಂದ್ರೆ ಗೆಲುವನ್ನ ನಿರ್ಧರಿಸಕ್ಕಾಗಲ್ಲ. ಸೋತರೇನೆ ಗೆಲುವಿನ ಮಹತ್ವ ಗೊತ್ತಾಗೋದು. ಈ ಅನುಭವ ನಿಮಗೆ ಸಿಕ್ಕಿದ್ರೆ ಗೆಲ್ಲೋದು ಸುಲಭ. 

ಮೂಲ

10. ನನಗೆ ಯಾವ ಭಯವೂ ಇಲ್ಲ ಅನ್ನೋ ಅನುಭವ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಭಯ ಇದ್ದೇ ಇರುತ್ತೆ. ಲವ್ ಮಾಡ್ತಿದ್ದೀನಿ ಅಂತ ಹೇಳೋಕೆ ಅಂಜಿಕೆ. ಕಾರು ಡ್ರೈವ್ ಮಾಡೋಕೆ ಭಯ. ಹೀಗೆ ನಾನಾ ತರದ ಭಯಗಳಿರ್ತಾವೆ. ಅವನ್ನೆಲ್ಲ ಒಂದ್ಸಲ ಮರೆತು ಮನಸ್ಸಿಂದ ಭಯ ಅನ್ನೋದನ್ನೇ ಕಿತ್ತುಬಿಸಾಕಿ ಅಂದ್ಕೊಂಡಿರೋಂತ ಕೆಲಸ ಮಾಡಿ ನೋಡಿ. ಆಗ ನೋಡಿ ನಿಮ್ಮ ಅನುಭವ ಹೇಗಿರುತ್ತೆ ಅಂತ.

ಮೂಲ

11. ನಗರಗಳಿಂದ ದೂರ ಹೋಗಿ ಪ್ರಕೃತಿಯ ಮಡಿಲಲ್ಲಿ ಬದುಕೋಂತ ಅನುಭವ 

ಅದೇ ಟ್ರಾಪಿಕ್ಕು, ಮಾಲಿನ್ಯ ಬಿಟ್ಟು ಸಂಪೂರ್ಣ ಹಸಿರು, ಕಾಡು ಇರೋಂತ ಪ್ರದೇಶದಲ್ಲಿ ಸ್ವಲ್ಪ ದಿನ ಇದ್ದು ಬರೋಂತ ಅನುಭವ. ಜೊತೆಗೆ ಯಾವ ಮೊಬೈಲು, ಟಿವಿ, ಗ್ಯಾಜೆಟ್ಜ್ ಏನೂ ಇರ್ಬಾದ್ರು. ಆ ರೀತಿಯ ವಾತಾವರಣದಲ್ಲಿ ಒಂದ್ಸಲ ಇದ್ದು ಬನ್ನಿ. ನಿಮ್ ಮನಸ್ಸನ್ನ ನೀವು ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಾಧ್ಯವಾಗತ್ತೆ. ಜೊತೆಗೆ ಈ ಜಗತ್ತಿನಲ್ಲಿ ನೀವೆಷ್ಟು ಚಿಕ್ಕವರು ಅನ್ನೋದು ಗೊತ್ತಾಗುತ್ತೆ. 

ಮೂಲ

12. ಅಂಜಿಕೆಯನ್ನ ನುಚ್ಚುನೂರು ಮಾಡಿದ ಅನುಭವ

ಆಗ್ಲೇ ಹೇಳ್ದಂಗೆ ಭಯ, ಅಂಜಿಕೆ ಎಲ್ರಿಗೂ ಇದ್ದೆ ಇರುತ್ತೆ. ಆದರೆ ಅದನ್ನ ಎದುರಿಸೋದೆ ಜೀವನ. ನಿಮ್ಮ ಭಯಕ್ಕೆ, ಅಂಜಿಕೆಗೆ ಕಾರಣವಾಗಿರೋದು ಏನೂ ಅಂತ ಮೊದ್ಲು ತಿಳ್ಕೊಳ್ಳಿ. ಅದನ್ನ ಎದುರಿಸಿ, ಗೆಲ್ಲಿ. ಆಗ ಭಯ ಅನ್ನೋದು ನಿಮ್ಮ ಹತ್ರ ಸುಳಿಯಲ್ಲ. ಈ ಅನುಭವಾನ ಒಂದ್ಸಲಾನಾದ್ರೂ ಪಡ್ಕೊಳ್ಳಿ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಮೆಚ್ಚಿನ ಅಂತೆಕಂತೆ ಈಗ YouTube ನಲ್ಲಿ

ಈ ಬಟನ್ ಒತ್ತಿ subscribe ಮಾಡಿಕೊಳ್ಳಿ:
 

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: