ಪಾಕಿಸ್ತಾನದೋರಿಂದ ಹುಷಾರಾಗಿರಕ್ಕೆ ಮೊಬೈಲಿಂದ ಈ 4 ಆಪ್ ಕಿತ್ತಾಕಿ: ಕೇಂದ್ರ ಸರ್ಕಾರ

ಬೇಗ ಮಾಡಿ

ಮೊಬೈಲ್ ಫೋನ್ ನಮ್ಗೆ ಎಷ್ಟು ಹತ್ರ ಅಂದ್ರೆ ಅದ್ರಲ್ಲೇ ನಮ್ಮ ಸರ್ವಸ್ವಾನೂ ಇಟ್ಕೋಂಡು ಎಲ್ಲಾ ವ್ಯವಹಾರ ಮಾಡೊ ದಿನ ಇನ್ನೇನು ಭಾಳ ದೂರ ಇಲ್ಲ. ಅದಕ್ಕೆ ಇರ್ಬೇಕು, ಕಳ್ಳರ ನಿಗಾ ಕೂಡ ಮೊಬೈಲ್ ಮೇಲೆ ಬಿದ್ದಿದೆ.

ಮೂಲ

Abplive ವರದಿ ಪ್ರಕಾರ ಕೇಂದ್ರ ಗೃಹ ಮಂತ್ರಾಲಯ ಕೆಳಗಿನ ಎಚ್ಚರಿಕೆ ಕೊಟ್ಟಿದೆ:

ಪಾಕಿಸ್ತಾನಿ ಏಜೆಂಸಿಗಳು ಮೊಬೈಲ್ ಆಪ್ ಮೂಲಕ ಭಾರತೀಯರ ಸ್ಮಾರ್ಟ್ಫೋನ್ ಹ್ಯಾಕ್ ಮಾಡ್ತಿದಾರೆ. ಆದ್ದರಿಂದ ಕೆಳಗಿನ 4 ಆಪ್ ಏನಾದರೂ ನಿಮ್ಮ ಫೋನಲ್ಲಿದ್ರೆ ಈಗಿಂದೀಗ್ಲೆ ಡಿಲೀಟ್ ಮಾಡಿ:

  1. Topgun ಅನ್ನೋ ಆಟದ ಆಪ್
  2. Mpjunkie ಅನ್ನೋ ಮ್ಯೂಸಿಕ್ ಆಪ್
  3. Bdjunkie ಅನ್ನೋ ವೀಡಿಯೋ ಆಪ್, ಮತ್ತು
  4. Talking Frog ಅನ್ನೋ ಆಟ

ಇದಕ್ಕೆಲ್ಲಾ ನಾವು ಯಾಕೆ ಯೋಚ್ನೆ ಮಾಡ್ಬೇಕು ಅಂತೀರಾ? ಮೊಬೈಲ್ ಬ್ಯಾಂಕಿಂಗ್ ದಿನೇ ದಿನೇ ಹೆಚ್ತಾ ಇದೆ. ನೀವು ಈಗಲ್ಲದಿದ್ದರೆ ನಾಳೆ ಬಳಸಕ್ಕೆ ಶುರು ಮಾಡುದ್ರೆ ಆಗ ನೀವು ಕಷ್ಟಕ್ಕೆ ಸಿಕಾಕೊಳೋ ಸಾಧ್ಯತೆ ಇದೆ. ಈ ಆಪ್ಗಳ್ನ ಸದ್ಯಕ್ಕೆ ನಾವಂತೂ ಫೋನಿಗೆ ಹಾಕೊಂಡಿಲ್ಲ. ನಿಮ್ಮ ಫೋನಲ್ಲಿ? ಆದರೆ ಇನ್ಮೇಲೆ ಹಾಕೊಳಿ ಹಾಕೊಳಿ ಅಂತ ಫೋನಲ್ಲಿ ಬರಬಹುದು. ಆಗ ಎಚ್ಚರವಾಗಿರಿ, ನಿಮ್ಮ ನೆಂಟರಿಷ್ಟರಿಗೂ ತಿಳಿಸಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 16 ಚಿತ್ರಗಳನ್ನ ಎಷ್ಟು ಸಲ ನೋಡಿದ್ರೂ ನೀವು ಮೋಸ ಹೋಗೋದು ಗ್ಯಾರಂಟಿ

ಕಣ್ಣಿಗೆ+ಮಿದುಳಿಗೆ ಕಸರತ್ತು

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅನ್ನೋದು ಗಾದೆ ಮಾತು. ಅಂದ್ರೆ ಕಣ್ಣಿಂದ ಕಂಡ್ರೂ ಇನ್ನೊಮ್ಮೆ ಅದನ್ನ ಪರಾಮರ್ಶಿಸಿ ನೋಡು ಅಂತ. ಈ ಕೆಳ್ಗಡೆ ಕೊಟ್ಟಿರೋ ಚಿತ್ರಗಳು ನಮ್ಮ ಕಣ್ಣಿಗೇ ಮೋಸ ಮಾಡ್ತವೆ... ನೀವೂ ನೋಡಿ!

1. ಈ ಚೆಸ್ ಬೋರ್ಡ್ ಸ್ವಲ್ಪ ನೋಡಿ!A ಕಪ್ಪು, B ಬಿಳಿ ಅಂದ್ರಾ?

ಮೂಲ

ಈಗ ನೋಡಿ!

ಮೂಲ

2. ಈ ಚಿತ್ರದಲ್ಲಿ ಮೇಲಿನ ಚೌಕ ಮತ್ತು ಕೇಳ್ಗಿನ ಚೌಕ ಬೇರೆ ಬೇರೆ ಬಣ್ಣ ಅನ್ಸತ್ತೆ ಅಲ್ವಾ?

ಮೂಲ

ಹೌದಾ? ಎರಡೂ ಭಾಗಗಳನ್ನ ಬೇರ್ಪಡಿಸೋ ಗೆರೆ ಮೇಲೆ ನಿಮ್ಮ ಬೆರಳಿಟ್ಟು ನೋಡಿ.

3. ಕೆಳ್ಗಿರೊ ಚಿತ್ರದಲ್ಲಿ ಕಪ್ಪು ಬಿಳಿ ಬಣ್ಣ ಅಲ್ಲದೇ ಸಿಮೆಂಟ್ ಬಣ್ಣ ಕೂಡ ಕಾಣಿಸ್ತಿದೆ ಅಲ್ವಾ?

ಆದ್ರೆ ನಿಜ ಏನು ಅಂದ್ರೆ ಇಲ್ಲಿರೋದು ಬಿಳಿ ಮತ್ತು ಕಪ್ಪು ಬಣ್ಣ ಮಾತ್ರ! ಸಿಮೆಂಟ್ ಬಣ್ಣ ಇಲ್ವೇ ಇಲ್ಲ, ಅದು ಬರೀ ನೆರಳಷ್ಟೇ…

ಮೂಲ

4. ಈ ಚಿತ್ರದಲ್ಲಿರೋ ಎರಡೂ ಕುದುರೆಗಳು ಒಂದೇ ಬಣ್ಣದ್ದು!

ಮೂಲ

5. ಈ ಚಿತ್ರದಲ್ಲಿ ಬಿಳಿ ಬಣ್ಣ ಬಿಟ್ಟು ಎಷ್ಟು ಬಣ್ಣ ನಿಮಗೆ ಕಾಣಿಸ್ತಿದೆ?

ಹಸಿರು, ಕೆಂಪು, ಗುಲಾಬಿ ಬಣ್ಣ ಕಾಣಿಸ್ತಲ್ವಾ? ನಿಜ ಏನು ಅಂದ್ರೆ ಇಲ್ಲಿರೋದು ಗುಲಾಬಿ ಮತ್ತೆ ಹಸಿರು ಅಷ್ಟೇ…

ಮೂಲ

6. ಈ ಚಿತ್ರದಲ್ಲಿರೋ ಚೌಕಗಳು ಯಾವಬಣ್ಣದ್ದು?

ಇಲ್ಲಿ 4 ಬಣ್ಣದ ಚೌಕ ಇರೋಹಾಗೆ ಕಾಣುತ್ತೆ… ಆದ್ರೆ ಇರದು ಬರೀ ಹಸಿರು ಮತ್ತೆ ಪಿಂಕ್ ಬಣ್ಣದ್ದು ಮಾತ್ರ.

ಮೂಲ

7. ಎಷ್ಟೇ ಕಷ್ಟ ಪಟ್ರೂ ಒಂದೇ ಚಿತ್ರದ ಮೇಲೆ ಪೂರ್ತಿ ಗಮನ ಕೊಡಕ್ಕಾಗಲ್ಲಾ ಬಿಡಿ!

ಮೂಲ

8. ಇಲ್ಲಿರೋ ಚುಕ್ಕೆಯನ್ನ ಗಮನ ಇಟ್ಟು ನೋಡಿ… ಪಕ್ಕದಲ್ಲಿರೋ ಸಿಮೆಂಟ್ ಬಣ್ಣದ ಪಟ್ಟಿ ನೀಲಿ ಬಣ್ಣಕ್ಕೆ ತಿರುಗುತ್ತೆ!

ಮೂಲ

9. ಈ ಚಿತ್ರವನ್ನ ಗಮನ ಇಟ್ಟು ನೋಡಿ

ನೇರಳೆ ಬಣ್ಣದ ಚುಕ್ಕಿ ಹಸಿರು ಬಣ್ಣ ಆಗೋ ಹಾಗೆ ಕಾಣುತ್ತೆ. ಆದ್ರೆ ನಿಜ್ವಾಗ್ಲೂ ಹಸಿರು ಬಣ್ಣದ ಚುಕ್ಕಿ ಇಲ್ವೇ ಇಲ್ಲ!

ಈಗ ನೀವು ಮಧ್ಯದಲ್ಲಿರೋ ಪ್ಲಸ್ ಚಿಹ್ನೆನ ಗಮನ ಇಟ್ಟು ನೋಡಿ… ಎಲ್ಲಾ ಚುಕ್ಕಿಗಳೂ ಒಂದೇಸಲ ಮಾಯಾ ಆಗುತ್ವೆ!

ಮೂಲ

10. ಇದು ಕಪ್ಪು ಬಿಳುಪು ಚಿತ್ರ! ಆದ್ರೆ ಬಣ್ಣದ ಚಿತ್ರ ಅನ್ಸತ್ತ್ತೆ

ಮೂಲ

11. ಚಿತ್ರದ ಮಧ್ಯದಲ್ಲಿರೋ 4 ಚುಕ್ಕಿಗಳ್ನ 30 ಸೆಕೆಂಡ್ ನೋಡಿ… ಆಮೇಲೆ, ಗೋಡೆ ನೋಡ್ತಾ ಕಣ್ಣು ಮಿಟುಕ್ಸಿ… ಏನ್ ಕಾಣ್ತಿದೆ?

ಮೂಲ

12. ಕಪ್ಪು ಚುಕ್ಕಿ ಕಾಣಿಸ್ದಾಗ್ ಆಗುತ್ತೆ… ಆದ್ರೆ ನೋಡಕ್ ಪ್ರಯತ್ನ ಪಟ್ರೆ ಮಾಯ ಆಗುತ್ತೆ

ಮೂಲ

13. ಈ ಚಿತ್ರದ ಮಧ್ಯದಲ್ಲಿರೋ ಕಪ್ಪು ಚುಕ್ಕಿನ ಗಮನ ಇಟ್ಟು ನೋಡಿ… ಸುತ್ತ ಇರದು ಮಾಯ ಆಗುತ್ತೆ

ಮೂಲ

14. ಚಿತ್ರದ ಮಧ್ಯಭಾಗ ನೋಡ್ತಿರಿ! ಇರೋ ಬಣ್ಣಗಳೆಲ್ಲ ಹೊರ್ಟೋಗುತ್ತೆ…

ಮೂಲ

15. ಈ ಚಿತ್ರದಲ್ಲಿ ಎಷ್ಟು ಬಣ್ಣಗಳು ಕಾಣಿಸ್ತಿದೆ ನಿಮ್ಗೆ?

ನೀಲಿ ಮತ್ತೆ ಹಸಿರು ಬಣ್ಣ ಕಾಣಿಸ್ತಿದ್ಯಾ? ಹಾಗಿದ್ರೆ ನಿಮ್ಮ ಕಣ್ಣು ನಿಮಗೆ ಮೋಸ ಮಾಡಿದೆ. ಯಾಕಂದ್ರೆ ಇಲ್ಲಿರೋದು ಹಸಿರು ಬಣ್ಣ ಮಾತ್ರ!! ಸರಿಯಾಗಿ ನೋಡಿ, ನೀಲಿ ಬಣ್ಣ ಇಲ್ವೇ ಇಲ್ಲ.

ಮೂಲ

16. ಇದ್ರಲ್ಲಿ ಕಂದು ಬಣ್ಣದ ಚೌಕ ಕಾಣಿಸ್ತಿದ್ಯಾ?

ಇಲ್ಲಿ ನಿಜ್ವಾಗ್ಲೂ ಕಂದು ಬಣ್ಣದ್ದು ಇಲ್ವೇ ಇಲ್ಲ. ಸ್ವಲ್ಪ ಕೆಳಗಿರೊ ಮತ್ತೊಂದ್ ಚಿತ್ರ ನೋಡಿ…

ಮೂಲ

ಮೂಲ

ಇಷ್ಟೊತ್ತು ನಿಮ್ಮ ಕಣ್ಣಿಗೆ ಒಳ್ಳೆ ಕಸರತ್ತು ಆಯ್ತು ಅಂದ್ಕೊಳ್ತೀವಿ. ಖುಷಿಪಡಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: