ಚಳಿಗಾಲದಲ್ಲಿ ಕೂತ್ ಕೂತಂಗೇ ತೂಕಡಿಗೆ ಬರ್ತಿದ್ರೆ ಈ 12 ಉಪಾಯ ಮಾಡಿ

ಬಿಟ್ಟು ಬಿಟ್ಟು ಕೆಲ್ಸ ಮಾಡಿ

ಚಳಿ ಬೇರೆ. ಹೊದ್ದಿಗೆ ಬಿಟ್ಟು ಎದ್ರೆ ಸಾಕು ಮತ್ತೆ ಹೊದ್ಕೊಂಡು ಮಲ್ಕೊಳೋಣ ಅನ್ಸತ್ತ್ತೆ. ಎದ್ದ ನಂತರ ಮನೆ ಕೆಲ್ಸ, ಆಫಿಸ್ ಕೆಲ್ಸ...ಇವೆಲ್ಲದರ ಮಧ್ಯ ಮತ್ತೆ ನಿದ್ದೆ ಮಾಡಕ್ಕಾಗಲ್ಲ. ಅದ್ರೂ ಆಕಳಿಕೆ ಏನೂ ಕಡಿಮೆ ಆಗಲ್ಲ. ಆಕಳಿಸಿ ಆಕಳಿಸಿ ತೂಕಡಿಸಿ ಹೆಂಗೋ ಕೆಲ್ಸ ಮುಗಿಸಿಬಿಡಬೇಕಪ್ಪಾ ಅನ್ನೋರಿಗೆ ಇಲ್ಲ್ವೆ ಕೆಲವು ಟಿಪ್ಸ್, ಟ್ರೈ ಮಾಡಿ, ನಿದ್ದೆಗಣ್ಣು ಕಮ್ಮಿ ಮಾಡ್ಕೊಳಿ...

1. ಸಂಗೀತ ಕೇಳಿ

ಆಫಿಸ್ನಲ್ಲಿ ಇದ್ದಿರೋ ಅಥವಾ ಎಟಿಎಂ ಕ್ಯೂ ನಲ್ಲಿದ್ದಿರೋ, ರಾತ್ರಿ ನಿದ್ದೆ ಸಾಕಷ್ಟು ಮಾಡ್ಲಿಲ್ಲ ಅಂದ್ರೆ ತೂಕಡಿಕೆ ಬರತ್ತೆ. ಆಗ ನಿಮ್ಮ ಇಷ್ಟವಾದ ಒಂದು ಹಾಡು ಹಾಕೊಳ್ಳಿ.. ಎಚ್ಚರವಾಗಿರ್ತೀರಿ.

2. ಬಿಟ್ಟು ಬಿಟ್ಟು ಕೆಲ್ಸ ಮಾಡಿ

ಒಂದೇ ಕಡೆ ಒಂದೇ ಕೆಲ್ಸ ಮಾಡ್ತಿದ್ರೆ ನಿದ್ದೆ ಮಂಪರಾಗತ್ತೆ. ಸ್ವಲ್ಪ ಹೊತ್ತು ಕಂಪ್ಯೂಟರ್ ನೋಡಿದ್ರೆ ಇನ್ನೊಂದ್ ಸ್ವಲ್ಪ ಹೊತ್ತು ನಿಮ್ಮ ಡೈರಿ ಬರೀರಿ ಅಥವಾ ಅಡುಗೆಮನೆ ಕೆಲ್ಸ ಮಾಡಿ. 

3. ಪೆಪ್ಪರ್ಮೆಂಟ್ ಟೂತ್ಪೇಸ್ಟ್ ತೊಗೊಂಡು ಹಲ್ಲುಜ್ಜಿ

ಒಳ್ಳೆ ನಿದ್ದೆ ಮಾಡಿ ಎದ್ರೂ ಬೆಳಗ್ಗೆ ಚಳಿಗೆ ಇನ್ನೂ ನಿದ್ದೆ ಅನ್ಸಿದ್ರೆ ಒಂದೊಳ್ಳೆ ಪೆಪ್ಪರ್ಮೆಂಟ್ ಟೂತ್ಪೇಸ್ಟ್ ಹಾಕೊಂಡು ಹಲ್ಲುಜ್ಜಿ. ಆ ಪುದಿನ ವಾಸ್ನೆಗೆ ನಿಮ್ಗೆ ಎಚ್ಚರ ಆಗತ್ತೆ, ತಲೆ ಓಡತ್ತೆ.

4. ಕಿಟಕಿಗಳನ್ನ ತೆಗೀರಿ, ಬಿಸಿಲು ಬರ್ಲಿ

ಬಿಸಿಲಿಗೆ ಮೈ ಒಡ್ಡಿ. ಕಿಟಕಿಗಳು ಓಪನ್ ಮಾಡಿ. ಬೆಳಕು ಮನೆಯೋಳಗೆ ಬಂದ್ರೆ ನಿದ್ದೆ ಮಬ್ಬು ಹೋಗತ್ತೆ. ಲವಲವಿಕೆ ಬರತ್ತೆ.

ಮೂಲ

5. ಗಾಳೀಲಿ ಅಡ್ಡಾಡಿ ಬನ್ನಿ 

ಆಫಿಸ್ಸು ಅಥವಾ ಮನೆ ಹೊರಗಡೆ ಹೋಗಿ ಹೊಸ ಗಾಳಿ ಕುಡ್ಕೊಂಡು ಬನ್ನಿ. ನಿದ್ದೆ ಪುರ್ ಅಂತ ಹಾರ್ ಹೋಗತ್ತೆ. ಏನಂತೀರಿ?

6. ನಿದ್ದೆ ಬರೋ ಹಾಗೆ ಹೊಟ್ಟೆ ತುಂಬಾ ತಿನ್ಬೇಡಿ

ನಾವು ಏನ್ ತಿಂತೀವಿ ಆನೋದರ ಮಏಲೆ ನಮ್ಗೆ ನಿದ್ದೆ ಬರತ್ತೋ ಇಲ್ವೋ ಹೇಳ್ಬೋದು. ಉದಾಹರಣೆಗೆ, ಸಿಕ್ಕಾಪಟ್ಟೆ ಸಿಹಿ ತಿಂದ್ರೆ ನಿದ್ದೆ ಗ್ಯಾರಂಟಿ, ಹಬ್ಬದ ಊಟ ಮಾಡಿ ನಿದ್ದೆ ಬರ್ಬೇಡ ಅಂದ್ರೆ ಆಗತ್ತಾ?

7. ಅವಾಗವಾಗ ಕಾಫಿ ಕುಡಿರಿ

ಕಾಫಿ ಒಂಥರಾ ಕಿಕ್ ಕೊಡತ್ತೆ. ನಿದ್ದೆ ಹೋಗ್ಸತ್ತೆ ಅನ್ನೊದು ಎಲ್ರಿಗೂ ಗೊತ್ತಿರೋ ವಿಷಯ :-) ಆಫಿಸ್ ಮಂದಿ ಅಗಾಗ ಕಾಫಿ/ಟೀ ಬ್ರೇಕ್ ತೊಗೊತಾರೆ. ಕೆಲ್ಸಕ್ಕೆ ಸ್ವಲ್ಪ ಬ್ರೇಕ್ ಹಾಗೆ ನಿದ್ದೆಗೂ ಬ್ರೇಕ್ :-))

8. ಮಧ್ಯಾಹ್ನ ಊಟ ನಂತರ ಒಂದು ಚೋಟ ನಿದ್ದೆ ಮಾಡಿ

ತೀರಾ ಕಾಫಿ ಕುಡಿದ ಮೇಲೂ ನಿದ್ದೆ ತಡ್ಕೊಳಕ್ಕಾಗಲ್ಲ ಅನ್ನೋರು ಮಧ್ಯಾಹ್ನ ಊಟ ಆದ ಮೇಲೆ ಒಂದು ಚಿಕ್ಕ ನಿದ್ದೆ ಹೊಡಿರಪ್ಪ... ಚಳಿಗಾಲದಲ್ಲಿ ಇವೆಲ್ಲಾ ನಡೆಯತ್ತೆ. ಎದ್ದ ಮೇಲೆ "ಪವರ್" ಬರತ್ತೆ ಕೆಲ್ಸ ಮಾಡಕ್ಕೆ.

9. ಆಗಾಗ ಬಾಯ್ ಅಲಾಡಿಸಕ್ಕೆ ಎನಾದ್ರು ಇಟ್ಕೊಂಡಿರಿ

ಖಾರ ಕಡಲೆಬೀಜ, ಹುರಿಗಾಳು, ಕಳ್ಳೆಪುರಿ ಅಥವಾ ಚಾಕೊಲೇಟ್..್ಈಗೆ ಎನಾದ್ರೂ ಒಂದು ಬಾಯಲ್ಲಿ ಹಾಕೊಂಡು ಅಗೀತಾ ಕೆಲ್ಸ ಮಾಡಿ, ನಿದ್ದೆ ಮಂಪರು ಹೋಗತ್ತೆ.

ಮೂಲ

10. ಮುಖಕ್ಕೆ ತಣ್ಣೀರು ಎರೆಚಿಕೊಳ್ಳಿ

ತಕ್ಷಣ ನಿದ್ದೆಗಣ್ಣಿಂದ ಸರೀ ಹೋಗ್ಬೇಕಂದ್ರೆ ಮುಖಕ್ಕೆ ತಣ್ಣಿರ್ ಎರೆಚಿ. ಹೆಂಗಾಗತ್ತೆ ಅಂತ ಗೊತ್ತಲ್ವಾ :-) ತಕ್ಷಣ ಸೂಪರ್ ಫ್ರೆಶ್ ಲಿಕ್ ಬಂದ್ಬಿಡತ್ತೆ.

11. ನಿಂಬೆ ಪಾನಕ ಅಥವಾ ಬಿಸಿ ಬಿಸಿ ಗ್ರೀನ್ ಟಿ ಚಪ್ಪರಿಸಿ

ಕಾಫಿ ಬೇಡ, ಟೀ ಬೇಡ ಅನ್ನೋರಿಗೆ ನಿಂಬೆ ಪಾನಕ ಬೇಕು. ಚಳಿಗೆ ನಿಂಬೆ ಪಾನಕ ಕುಡ್ಯೋದು ಭಾಳ ಒಳ್ಳೆದು ಕೂಡ. ಅಯ್ಯೋ ತಣ್ಣಗೇನೂ ಬೇಡ, ಬಿಸಿ ಬಿಸಿ ಬೇಕು ಅನ್ನೋರು ಗ್ರೀನ್ ಟಿ ಬೇಗ ಮಾಡ್ಕೋಂಡು ಕೂದಿರಿ. ನಿದ್ರಾದೇವಿ ಮೈ ಬಿಟ್ಟು ಹೋಗ್ತಾಳೆ.

12. ಏನೂ ಬೇಡ, ಬೆಳಗ್ಗೆ ಎದ್ದ ಮೇಲೆ ಒಂದಿಷ್ಟು ಎಕ್ಸರ್ಸೈಸ್ ಮಾಡಿ

ಬೆಳಗ್ಗೆ ಸ್ವಲ್ಪ ಬೇಗ ಎದ್ದು ಯಾವುದೇ ಕೆಲ್ಸ ಶುರು ಮಾಡೊ ಮುನ್ನ ನಿಮ್ಗೆ ಮೈಗೆ ಹೊಂದೊ ಓಮ್ದು ವ್ಯಾಯಮ್ಮದ ಪಟ್ಟಿ ರೆಡಿ ಮಾಡ್ಕೊಳಿ. ಅದರ ಪ್ರಕಾರ ಎಕ್ಸರ್ಸೈಸ್ ಮಾಡಿ. ಇದಕ್ಕಿಂತ ಬೆಸ್ಟ್ ಉಪಾಯ ಇನ್ಯಾವುದೂ ಇಲ್ಲ!

ಯಾವಾಗ ನಾವು ನಮ್ಗೇ "ಡಲ್" ಅನ್ನಿಸುತ್ತೀವೋ ಆಗ್ಲೆಲ್ಲಾ ಇಷ್ಟ್ ಮಾಡಿ ಸಾಕು!

ಜಿಫ್ ಮೂಲ: gif.com

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: