ಜೀವನದಲ್ಲಿ ಎತ್ತರಕ್ಕೆ ಬೆಳೀಬೇಕು ಅಂತಿದ್ರೆ ಈ 7 ವಾಕ್ಯ ನಿಮ್ಮ ಬಾಯಿಂದ ಬರಬಾರದು

"ನನಗೆ ಬೇರೆ ದಾರಿ ಇಲ್ಲ"

ಜೀವನದಲ್ಲಿ ಯಶಸ್ಸು ಅನ್ನೋದು ಆಕಾಶದಿಂದ ಉದುರಲ್ಲ. ಅಥವಾ ರಾತ್ರೋ ರಾತ್ರಿ ಸಿಕ್ಕಿಬಿಡಲ್ಲ. ಅದಕ್ಕೆ ವರ್ಷಾನುಗಟ್ಲೆ ಬೆವರು ಸುರಿಸಿಕೊಂಡು ದುಡೀಬೇಕು … ಜೀವನದಲ್ಲಿ ಏನ್ ಆಗ್ತಿದೆ, ಏನ್ ಆಗಬೇಕು ಅನ್ನೋದು ನಿಮಗೆ ಯಾವಾಗಲೂ ಗೊತ್ತಿರಬೇಕು. ಹೀಗಿರುವಾಗ ಯಶಸ್ಸಿನ ಕಡೆಗೆ ಹೋಗ್ತಿರುವಾಗ ನಿಮ್ಮ ಮಾತಿಂದ ಕೆಲವು ವಾಕ್ಯಗಳ್ನ ತೆಗೆದು ಹಾಕಿಬಿಡೋದು ಒಳ್ಳೇದು. ಯಾವುದು ಅಂತ ಓದ್ತಾ ಹೋಗಿ:

1. "ನನ್ನ ಕೆಲಸ ನನಗೆ ಒಂಚೂರೂ ಇಷ್ಟ ಇಲ್ಲ"

ಜೀವನದಲ್ಲಿ ಎತ್ತರಕ್ಕೆ ಬೆಳೆಯೋರು ತರ್ಕಬದ್ಧವಾಗಿ ಯೋಚನೆ ಮಾಡ್ತಾರೆ, ಪರಿಸ್ಥಿತೀನ ಪೂರ್ತಿ ಅರ್ಥ ಮಾಡಿಕೊಳ್ತಾರೆ. ಸುಮ್ನೆ ಅವರಿವರನ್ನ ಬೈಯೋ ಮುಂಚೆ ನಿಮ್ಮ ಮುಂದೆ ಬೇರೆ ಯಾವ ಆಯ್ಕೆಗಳಿವೆ ಅಂತ ಯೋಚನೆ ಮಾಡಿ. ಈಗಿರೋ ಕೆಲಸಕ್ಕಿಂತ ಒಳ್ಳೇ ಕೆಲಸ ಸಿಗೋ ಸಾಧ್ಯತೆ ಇದ್ದರೆ ಅದೆಕ್ಕೆ ಜಾರಿಕೊಳ್ಳಿ; ಅದು ಬಿಟ್ಟು ಈಗಿನ ಕೆಲಸ ಒಂಚೂರೂ ಇಷ್ಟ ಇಲ್ಲ ಅಂತ ಯಾಕೆ ಅನ್ಕೋಬೇಕು? ಈ ಕೆಲಸದಿಂದಾನೂ ನಿಮಗೆ ಸಿಗೋದು ಸಿಕ್ಕಿದೆ ಅಂತ ಅರ್ಥ ಮಾಡಿಕೊಳ್ಳಿ.

2. "ನನಗೆ ಮೋಸ ಆಗಿದೆ"

ನನಗೆ ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ, ನನ್ನ ಕೆಲಸಕ್ಕೆ ಯಾರೂ ಬೆಲೆ ಕೊಡಲಿಲ್ಲ ಅಂತೆಲ್ಲ ಗೋಳು ಹುಯ್ಕೊಳೋದು ಎತ್ತರಕ್ಕೆ ಬೆಳೆಯೋರ ಲಕ್ಷಣ ಅಲ್ಲ. ಜೀವನದಲ್ಲಿ ಎಲ್ಲರಿಗೂ ಮೋಸ ಆಗುತ್ತೆ. ನಿಮಗೊಬ್ಬರಿಗೇ ಅಲ್ಲ. ಅದಕ್ಕೇ ಅದನ್ನ ತುಂಬ ತಲೆಗೆ ಹಚ್ಚಿಕೊಂಡು ಕೂತ್ಕೋಬಾರ್ದು ಅನ್ನೋದು.

3. "ಇಲ್ಲಿ ನಿಮ್ಮ ಐಡಿಯಾಗಳೆಲ್ಲ ನಡೆಯಲ್ಲ"

ಬೇರೆಯೋರು ಯಾರಾದರೂ ತಮ್ಮ ಐಡಿಯಾಗಳ್ನ ನಿಮ್ಮ ಮುಂದೆ ಹೇಳಿದಾಗ ಅದಕ್ಕೆ ಆದಷ್ಟೂ ಪ್ರೋತ್ಸಾಹ ಕೊಡಬೇಕು. ಅದು ಬಿಟ್ಟು ನಿಮ್ಮ ಕಂಪನಿಯಲ್ಲಿ ಹಳಬರು ಹಾಕಿರೋ ಆಲದ ಮರಕ್ಕೇ ಹೋಗಿ ಜೋತು ಹಾಕಿಕೊಂಡರೆ ನಿಮ್ಮ ಬೆಳವಣಿಗೆನೇ ಕಡಿಮೆ ಆಗೋದು. ಜೀವನದಲ್ಲಿ ಯಶಸ್ಸು ಪಡ್ಕೊಳೋರು ಯಾವತ್ತೂ‌ ಹೊಸದಕ್ಕೆ, ಬದಲಾವಣೆಗೆ ತರೆದುಕೊಂಡಿರಬೇಕು. ಆಗಲೇ ನಿಮಗೆ ಹೊಸ ಹೊಸ ಅವಕಾಶಗಳೂ ಕಣ್ಣಿಗೆ ಬೀಳೋದು.

ಮೂಲ

4. "ಅದು ನನ್ನ ಕೆಲಸ ಅಲ್ಲ"

ಯಾರಾದರೂ ನಿಮ್ನ ಸಹಾಯ ಕೇಳಕ್ಕೆ ಬರ್ತಾರೆ ಅನ್ಳ್ಕೊಳಿ. ಆಗ ಏನಾದರೂ‌ ಮಾಡಿ ಕೆಲಸ ತಪ್ಪಿಸಿಕೋಬೇಕು ಅನ್ನೋ ಗುಣ ನಿಮಗಿದ್ದರೆ ಬಿಟ್ಟುಬಿಡಿ. ಅದರಿಂದ ನೀವು ಅವರಿಗೂ ಸಹಾಯ ಮಾಡಿದಂಗಾಗಲ್ಲ, ನಿಮಗೂ ಸಹಾಯ ಮಾಡ್ಕೊಂಡಂಗಾಗಲ್ಲ. ಬೇರೆಯೋರಿಗೆ ಸಹಾಯ ಮಾಡೋದು ಬಹಳ ಮುಖ್ಯ. ಯಾಕಂದ್ರೆ ಇವತ್ತಿನ ದಿನ ಒಂದು ತಂಡದಲ್ಲಿ ಕೆಲಸ ಮಾಡೋದು ಗೊತ್ತಿಲ್ಲದೆ ಹೋದ್ರೆ ಏನೂ ಮಾಡಕ್ಕಾಗಲ್ಲ. ಅಷ್ತೇ ಅಲ್ಲ, ನಗ್-ನಗ್ತಾ ಬೇರೆಯೋರ್ಗೆ ಸಹಾಯ ಮಾಡೋದು ಕಲಿತುಕೊಳ್ಳಿ. ಈ ಗುಣಗಳಿಲ್ಲದೆ ಹೋದ್ರೆ ನೀವು ಎತ್ತರಕ್ಕೆ ಬೆಳೆದ್ರಿ ಅದಾಯಿತು.

5. "ಅದು ಸಾಧ್ಯವೇ ಇಲ್ಲ"

ಕೆಲಸ ತುಂಬ ಕಷ್ಟ ಇದ್ದಾಗ ಪುಸುಕ್ ಅಂತ ಜಾರಿಕೊಳ್ಳೋದು ಒಳ್ಳೇ ಲಕ್ಷಣ ಅಲ್ಲ. ಪ್ರತಿಯೊಂದು ಕಷ್ಟಾನೂ ಒಂದು ಚಾಲೆಂಜಾಗಿ ತೊಗೋಬೇಕು. ಹಂಗೆ ತೊಗೊಂಡ್ರೆ ನಿಮಗೇ ಆಶ್ಚರ್ಯ ಆಗುತ್ತೆ … ನೀವು ಎಷ್ಟು ಸುಲಭವಾಗಿ ಆಗಲ್ಲ ಅಂದುಬಿಟ್ಟಿದ್ರಿ ಅಂತ…

6. "ಛೆ! ದೊಡ್ಡ ತಪ್ಪು ಮಾಡಿಬಿಟ್ಟೆ!"

ನೀವು ಮಾಡಬೇಕಾದ ಕೆಲಸ ಏನೋ‌ ಸರಿಯಾಗಿ ಆಗ್ಲಿಲ್ಲ ಅನ್ಳ್ಕೊಳಿ. ಆಗ ನಿಮ್ನ ನೀವೇ ತೀರಾ ಬೈಕೊಳೋದು ಒಳ್ಳೇದಲ್ಲ. ಅದರ ಬದಲು ಆ ತಪ್ಪಿಂದ ನೀವು ಕಲೀಬೇಕಾದ್ದು ಕಲಿತು ಮುಂದುವರೀರಿ.

7. "ನನಗೆ ಬೇರೆ ದಾರಿ ಇಲ್ಲ"

ನೀವು ಮಾಡ್ತಿರೋ ಕೆಲಸ ಬಿಟ್ಟರೆ ನಿಮಗೆ ಬೇರೆ ದಾರೀನೇ ಇಲ್ಲ ಅನ್ಳ್ಕೊಳೋದು ಒಳ್ಳೇದಲ್ಲ. ಯಾಕಂದ್ರೆ ಅದು ಮೊದಲಾಗಿ ನಿಜ ಅಲ್ಲ. ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಜೀವನದಲ್ಲಿ ಎತ್ತರಕ್ಕೆ ಬೆಳೆಯೋರಿಗೆ ಎಂಥ ಪರಿಸ್ಥಿತಿಯಲ್ಲೂ ದಾರಿಗಳು ಕಂಡೇ ಕಾಣುತ್ವೆ. ತಮ್ಮ ಯಶಸ್ಸಿಗೆ ದಾರಿ ಕಂಡುಕೊಳೋದು ಅವರಿಗೆ ಕಷ್ಟವೇ ಅಲ್ಲ. ನಿಮಗೂ ಸಾಧ್ಯ. ನಿಮ್ಮ ತಲೇಲಿ ಆಗಲ್ಲ ಅಂತ ಕೂತಿರೋದನ್ನ ಮೊದಲು ತೆಗೀರಿ, ಅಷ್ಟೇ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: