ನೋವು ಹೋಗಿಸೋ ಟೇಬಲ್ ಕೇಳಿದೀರಾ? ಜಪಾನಲ್ಲಿ ಇನ್ನೂ ಏನೇನ್ ಅದ್ಭುತಗಳಿವೆ ನೋಡಿ

ಎಂಥಾ ತಲೆ ರೀ ಇವರದ್ದು!

ಜಪಾನ್ ಅಂದ್ರೇ ಗೊತತ್ತಲ್ವಾ? ಸಿಕ್ಕಾಪಟ್ಟೆ ಶಿಸ್ತಿನ ದೇಶ. ಹಾಗೆ ಅಲ್ಲಿನ ಜನ ಯವಾಗ್ಲೂ ಏನಾದ್ರೂ ಹೊಸ ಹೊಸಾದನ್ನ ಕಂಡುಹಿಡಿಯೋದ್ರಲ್ಲಿ ಎತ್ತಿದ ಕೈ. ಬೇರೆ ಎಲ್ಲೂ ಸಿಗದೇ ಇರೋಂತದ್ದನ್ನೆಲ್ಲ ಈ ದೇಶದಲ್ಲಿ ನೋಡ್ಬೋದು. ಅಂಥಾದ್ದು ಸುಮಾರು ಇಲ್ಲಿ ಕೊಟ್ಟಿದೀವಿ. ನೋಡಿ...ದಂಗಾಗ್ತೀರಿ...

1.  ನಾವೇ ಪೆಟ್ರೋಲ್ ತುಂಬಿಸಿಕೊಳ್ಳೋ ಬಂಕುಗಳು

ನಮ್ಮ ದೇಶದಲ್ಲಿರೋ ಪೆಟ್ರೋಲ್ ಬಂಕ್ ತರ ಇಲ್ಲಿ ಗ್ಯಾಸ್ ಬಂಕ್ ಇರತ್ತೆ. ಆದ್ರೆ ನಮ್ ತರ ಪೆಟ್ರೋಲ್ ಹಾಕಕ್ಕೆ ದೊಡ್ಡ ಮಶಿನ್ ಇರೊಲ್ಲ, ಮುಂದೆ ಬನ್ನಿ, ಹಿಂದೆ ಹೋಗಿ, ಸ್ವಲ್ಪ ಮಶಿನ್ ಹತ್ರ ಗಾಡಿ ತನ್ನಿ ಅಂತ ಹೇಳೊಲ್ಲ. ಬದಲಿಗೆ ಕಾರ್ಗೆ ಗ್ಯಾಸ್ ತುಂಬ್ಸಕ್ಕೆ ಪೈಪ್ಗಳನ್ನೇ ಮೇಲೆ ನೇತು ಬಿಟ್ಟಿರ್ತಾರೆ. ಕಾರ್ ಡ್ರೈವರ್ ಯಾವ ಮೂಲೆಯಿಂದಾನಾದ್ರು ಗ್ಯಾಸ್ ಕಾರಿಗೆ ತುಂಬ್ಸ್ಕೊಬೋದು.

ಮೂಲ

2. ದುಡ್ಡು ಹಾಕಿದ್ರೆ ತಿಂಡಿ ಕೊಡೋ ಮೆಶೀನ್ಗಳು

ಜಪಾನೋರು ಟೈಂಗೆ ತುಂಬಾ ಬೆಲೆ ಕೊಡ್ತಾರೆ ಅಂತ ಈ ಮೆಶಿನ್ಗಳ್ ಬಗ್ಗೆ ಕೇಳಿದ್ರೆನೇ ಗೊತ್ತಾಗುತ್ತೆ. ಇದ್ರಲ್ಲಿ ಬರೀ ಚಿಪ್ಸ್, ಚಾಕೊಲೇಟ್ಸ್ ಅಷ್ಟೇ ಅಲ್ಲಾ, ಬೆಳಗ್ಗಿನ ತಿಂಡಿಗೂ ಉಪ್ಯೋಗ ಆಗೋತರ ಬೇಯಿಸಿದ ಮೊಟ್ಟೆ, ಆಲೂಗೆಡ್ಡೆ, ಪಾಸ್ತಾ, ಅಲ್ಲದೆ ಪ್ರಾಣಿಗಳಿಗೆ ಕೊಡೊ ಆಹಾರ ಸಹ ಬರುತ್ತಂತೆ.

ಸುಮ್ನೆ ತಿಂಡಿ ಕೊಡಕ್ಕೆ ಜನ ಯಾಕೆ ಅಂತಾ :-)

ಮೂಲ

3. ಕಾರ್ ಪಾರ್ಕಿಂಗ್ಗೆ ಎಷ್ಟು ಬೇಕಾದರಷ್ಟು ಜಾಗ

127 ಮಿಲಿಯನ್ ಜನಸಂಖ್ಯೆ ಇರೊ ದೇಶ. ಹೇಳ್ಕೊಳೋಷ್ಟು ದೊಡ್ಡದಲ್ಲ. ಹಂಗಾಗಿ ಇರೋ ಜಾಗದಲ್ಲೆ ಎಲ್ಲಾನು ಹೊಂದಿಸ್ಬೇಕು. ಎಲ್ಲರತ್ರಾನೂ ಕಾರ್ ಇದ್ರು ಎಲ್ಲು ಪಾರ್ಕಿಂಗ್ ಸಮಸ್ಯೆ ಇಲ್ಲ. ಏಕೆಂದ್ರೆ ಅಲ್ಲಿ ಒಂದರ ಮೇಲೊಂದ್ ಕಾರ್ ನಿಲ್ಸಕ್ಕಾಗೋತರ ವ್ಯವಸ್ಥೆ ಮಾಡ್ಕೊಂಡಿದ್ದಾರೆ.

ಮೂಲ

4. ಬ್ರೈಲ್ ಗುರುತಿರೋ ಜೂಸ್ ಬಾಟಲ್ಗಳು, ಕ್ಯಾನ್ಗಳು

ಜಪಾನ್ ಸ್ಪೆಷಾಲಿಟಿನೆ ಅದು, ಕಣ್ಣಿಲ್ಲದವರು ಯಾವ್ ಜೂಸ್ ಬಾಟ್ಲು ಹಿಡ್ಕೊಂಡಿದಿವಿ ಅಂತ ತಿಳ್ಕೊಳ್ಳಿ ಅಂತ ಬ್ರೈಲ್ ಲಿಪಿಲಿ ಹೆಸರನ್ನ ಎಲ್ಲಾ ಬಾಟ್ಲು ಮೇಲೆ ಬರ್ದಿರ್ತಾರೆ.

ಮೂಲ

5. ಬ್ಯಾಗ್ ನೇತಾಕಕ್ಕೆ ಜಾಗ ಇರೋ ಕುರ್ಚಿಗಳು

ಆಫೀಸಲ್ಲೋ, ಥಿಯೇಟ್ರಲ್ಲೋ ಅಥವಾ ಹೋಟೆಲ್ಲಲ್ಲೋ ಕೂತಿದ್ದಾಗ ಬ್ಯಾಗ್ ಕಾಣಿಸ್ತಿಲ್ಲ ಅಂದ್ರೆ ಗಾಬರಿ ಆಗುತ್ತಲ್ವಾ. ಜಪಾನಲ್ಲಿ ಈ ಭಯ ಇಲ್ಲ. ಏಕೆಂದ್ರೆ ಪ್ರತಿ ಚೇರಲ್ಲು ಕೂತ್ಕೊಳ್ಳೊ ಜೊತೆ ಬ್ಯಾಗ್ ನೇತಾಕಕ್ಕೆ ಸಹ ಜಾಗ ಇರುತ್ತೆ.

ಮೂಲ

6. ಮೆಟ್ರೋ ರೈಲಲ್ಲಿ ಕಾಲಿಗೆ ಬಿಸಿನೀರಿನ ಆರೈಕೆ

ಕೆಲ್ಸ ಮಾಡಿ ಸುಸ್ತಾಗಿದ್ರೆ, ಆಫೀಸಿಂದ ಮನೆಗೆ ಸೆರ್ಕೋಳದ್ರೊಳಗೆ ರೈಲಲ್ಲಿ ಬಿಸಿನೀರಲ್ಲಿ ಕಾಲುಗಳನ್ನ ಮುಳುಗಿಸಿ ಆರಾಮಾಗಿ ಸ್ಪಾ ಮಾಡ್ಕೊಬೋದು.

ಮೂಲ

7. ರೋಡಲ್ಲಿ ಟಿಶ್ಯು ಪೇಪರ್ ಫ್ರೀಯಾಗಿ ಕೊಡೋ ಜನ

ನಿಮ್ಗೆ ಹುಶಾರಿಲ್ದೆ ಶೀತ, ನೆಗಡಿ ಆಗಿದ್ರೆ ಉಪ್ಯೋಗ ಆಗ್ಲಿ ಅಂತ ಟಿಶ್ಯುಗಳ್ನ ಕೊಡ್ತಾರೆ. ಬೇಗ ಹುಶಾರಾಗ್ಲಿ ಅಂತ ಹಾರೈಸ್ತಾರೆ.

ಮೂಲ

8. ಅದೇ ತೊಳೆಯೋ ಕಮೋಡು

ಇಲ್ಲಿನ ಟಾಯ್ಲೆಟ್ಗಳು ಚಿಕ್ಕ ಪುಟ್ಟ ಕೆಲ್ಸಗಳ್ನ ಅವಾಗೇ ಮಾಡ್ಕೊತಾವಂತೆ. ಅದೇ ಕ್ಲೀನ್ ಮಾಡ್ಕೊಳೋದು, ಅಲ್ಲದೆ ಅಂಗವಿಕಲರಿಗೆ ಸಹಾಯ ಆಗೋತರ ಕೆಲ್ಸ ಮಾಡುತ್ತಂತೆ. ಅಷ್ಟೇ ಅಲ್ಲ, ಒಂದು ಬಟನ್ ಒತ್ತುದ್ರೆ ಅದೇ ತೊಳೆಯುತ್ತೆ. ಏನ್ನ ಅಂತೀರಾ? :-)

ಮೂಲ

9. ಒತ್ತಡ ಕಮ್ಮಿ ಮಾಡೋ ಕೀ ಚೈನು

ಜಪಾನ್ ಜನ ಬಿಡುವಿಲ್ಲದೇ ಕೆಲ್ಸ ಮಾಡ್ತಾರೆ. ಇದ್ರಿಂದ ಆಗೋ ಒತ್ತಡ ಕಡಿಮೆ ಮಾಡ್ಕೊಳಕ್ಕೆ ಬಬಲ್ಸ್ ಇರೋ ಕೀ ಚೈನ್ ಇರುತ್ತೆ. ಅವಾಗವಾಗ ಅದನ್ನ ಒತ್ತಿ ಒತ್ತಿ ಒತ್ತಡ ಕಡಿಮೆ ಮಾಡ್ಕೊತಾರೆ. 

ಮೂಲ

10. ನಿದ್ದೆ ಮಾಡಕ್ಕೆ ಗೂಡುಗಳು

ಕೆಲ್ಸಮಾಡಿ ತುಂಬ ಸುಸ್ತಾಗಿ, ಸಕ್ಕತ್ತಾಗಿ ನಿದ್ರೆ ಮಾಡಬೇಕು ಅನ್ಸಿದ್ರೆ, ಹೋಟೆಲ್ ಗಳಲ್ಲಿ ಪುಟ್ಟ ಪುಟ್ಟ ಗೂಡಿನ ತರ ಇರೋ ರೂಮ್ ಗಳು ಸಿಗುತ್ತೆ. ಯಾರ ತೊಂದರೆನು ಇಲ್ಲದೆ ಆರಾಮಾಗಿ ನಿದ್ರೆ ಮಾಡಬಹುದು.

ಮೂಲ

11. ಬಾಗಿಲು ತಂತಾನೇ ತೆಗೆದು ಹಾಕಿ ಮಾಡ್ಕೊಳೋ ಕಾರುಗಳು

ಜಪಾನಲ್ಲಿ ಇರೊ ಎಲ್ಲಾ ಟ್ಯಾಕ್ಸಿ ಕಾರ್ಗಳ ಬಾಗಿಲು ಆಟೋಮ್ಯಾಟಿಕ್ ಆಗಿ ತೆಗಿಯೋದು, ಮುಚ್ಚೋದು ಮಾಡ್ಕೊಳುತ್ತೆ.

ಸದ್ಯ ಹತ್ತೊವಾಗ ಇಳಿಯೋವಾಗ ದಡ್, ದಡ್ ಅಂತ ಬಡಿದು ಬಾಗಿಲು ಹಾಕಬೇಕಿಲ್ಲ :-)

ಮೂಲ

12. ಹಾಡು ಹೇಳೋ ರೋಡು

ಇಲ್ಲಿನ ಕೆಲವೊಂದು ರೋಡುಗಳಲ್ಲಿ ಸಣ್ಣದಾಗಿ ಹಾಡು ಬರ್ತಾಇರುತ್ತೆ. ಇದನ್ನ ಕೇಳ್ಕೊಂಡು ಟೆನ್ಷನ್ ಇಲ್ಲದೆ ಕಾರಲ್ಲಿ ಟ್ರಿಪ್ ಹೋಗ್ಬೋದು.

ಮೂಲ

13. ಬೆಕ್ಕುಗಳಿಗೆ ಮೀಸಲಾಗಿರೋ ಕೆಫೆಗಳು

ಬೆಕ್ಕುಗಳ ಜೊತೆ ಕಾಲ ಕಳೆಯೊದ್ರಿಂದ ಮನಸ್ಸಿಗೆ ಆರಾಮ ಅನ್ಸುತ್ತೆ ಅನ್ನೊದನ್ನ ಜಪಾನಿನವರು ಚೆನ್ನಾಗಿ ತಿಳ್ಕೊಂಡಿದಾರೆ. ಹೀಗಾಗೆ ತುಂಬಾನೆ ಕ್ಯಾಟ್ ಕಫೆಗಳು ಇದ್ದಾವೆ.

ಮೂಲ

14. ನೋವು ಕಡಿಮೆ ಮಾಡೋ ಟೇಬಲ್ಗಳು

ಇದಕ್ಕೆ ಕೊಟಟ್ಸು ಅಂತ ಕರಿತಾರೆ. 14ನೇ ಶತಮಾನದಲ್ಲಿ ಇದನ್ನ ಕಂಡು ಹಿಡಿದಿದ್ದರಂತೆ. ಇದಕ್ಕೆ ಕೆಳಗಿಂದ ಕಾವು ಕೊಡ್ತಾರೆ. 

ಟೇಬಲ್ಗೆ ತಲೆ ಇಟ್ಟು ರಗ್ ಹೊದ್ಕೊಂಡ್ರೆ, ಬೆಚ್ಚಗಿನ ಹಬೆಯಿಂದ ತಲೆ ನೋವು ಮಾಯ ಆಗುತ್ತಂತೆ. ಅದರೊಳಗೆ ಮಲ್ಕೊಂಡ್ರೆ ಮೈಕೈ ನೋವು ಕಡ್ಮೆ ಆಗಿ ಸ್ವಲ್ಪ ಆರಾಮ್ ಅನ್ಸುತ್ತೆ. ಮತ್ತೆ ಕೆಲ್ಸ ಮಾಡಕ್ಕೆ ರೆಡಿ ಅಗ್ತಾರೆ ಜಪಾನಿಯರು!

ಮೂಲ

15. ತುರ್ತು ಪರಿಸ್ಥಿತಿ ಇದ್ದಾಗ ಜನರಿಗೆ ಎಚ್ಚರಿಕೆ ಕೊಡಕ್ಕೆ ಬೀದ್-ಬೀದೀಲಿ ಸ್ಪೀಕರ್ಗಳು

ಜಪಾನಿನ ಎಲ್ಲಾ ರೋಡುಗಳಲ್ಲಿ ಸ್ಪೀಕರ್ ಹಾಕಿದಾರೆ. ತುರ್ತು ಪರಿಸ್ಥಿತಿ ಅಂದರೆ ಭೂಕಂಪ, ಸುನಾಮಿಯಂತ ಸಂದರ್ಭಗಳಲ್ಲಿ ಅನೌನ್ಸ್ಮೆಂಟ್ ಗೆ ಬಳಸುತ್ತಾರೆ. ಬೇರೆ ಸಮಯದಲ್ಲಿ ಸುಮಧುರ ಹಾಡುಗಳನ್ನ ಹಾಕಲಾಗುತ್ತೆ.


ಮೂಲ   

16. ಆಫೀಸಲ್ಲಿ ಸುಸ್ತಾದಾಗ ಮಲ್ಕೊಳೋ ಅವಕಾಶ

ಆಫೀಸಲ್ಲಿ ಊಟ ಆದ ಮೇಲೆ ತೂಕಡಿಕೆ ಬರೋದು ಮಾಮೂಲಿ. ಆದ್ರೆ ಜಪಾನ್ ನಲ್ಲಿ ಬಾಸ್ ಮುಂದೆನೇ ಮಲ್ಕೊಬೋದು. ಕಾನೂನು ಸಹ ಅದಕ್ಕೆ ಅವಕಾಶ ಕೊಟ್ಟಿದೆ. ಇದಕ್ಕೆ ಇನೆಮುರಿ ಅಂತ ಕರಿತಾರೆ.

ಜಪಾನಲ್ಲಿ ನಿಮ್ಗೂ ಒಂದು ಕೆಲ್ಸ ಸಿಕ್ಕಿದ್ರೆ ಹೆಂಗಿರತ್ತೆ ಅಲ್ವ?


ಮೂಲ

ಚಿಂದಿ ಅಲ್ವಾ? ಇವೆಲ್ಲ ನಮ್ಮಲ್ಲೂ ಇದ್ದರೆ ಚೆನ್ನಾಗಿರುತ್ತೆ ಅನ್ನಿಸಲ್ವಾ ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: