ಮನೋವಿಜ್ಞಾನದ ಪ್ರಕಾರ ನಗದು ಹಣ (ಕ್ಯಾಶ್) ಸಾಮಾನ್ಯ ಜನರಿಗೆ ಈ 10 ರೀತಿಯಲ್ಲಿ ಒಳ್ಳೇದು

ಎಲ್ಲಾ ಡಿಜಿಟಲ್ಲೇ ಆದರೆ ಕಷ್ಟ ಇದೆ

ಇತ್ತೀಚೆಗೆ ಕ್ಯಾಶ್ ಬದಲು ಡಿಜಿಟಲ್ಲು, ಮೊಬೈಲು, ಈ-ವಾಲೆಟ್ಟು ಮುಂತಾದ ಸಾಧನಗಳ್ನ ಬಳಸಿ ದುಡ್ಡು ಕೊಡಿ/ಇಸ್ಕೊಳಿ ಅಂತ ಭಾರತ ಸರ್ಕಾರ ಹೇಳ್ತಾ ಇದೆ. ಇವುಗಳನ್ನ ಉಪಯೋಗಿಸಿದರೆ ಕೆಲವು ಕಡೆ ಡಿಸ್ಕೌಂಟ್ ಕೂಡ ಕೊಡ್ತಾ ಇದೆ ಸರ್ಕಾರ. ಈ ಸಂದರ್ಭದಲ್ಲಿ ಕ್ಯಾಶ್ ಅಂದರೆ ಎನೋ ಒಂಥರಾ ಕೆಟ್ಟದು ಅನ್ನುವ ಅನಿಸಿಕೆ ಮೂಡ್ತಾ ಇದೆ. ಆದರೆ ನಿಜಕ್ಕೂ ಹಾಗೇನಿಲ್ಲ. ಮನೋವಿಜ್ಞಾನದ ದೃಷ್ಟಿಯಿಂದ ನೋಡಿದಾಗ ಕ್ಯಾಶಿಂದ ಸಾಕಷ್ಟು ಲಾಭಗಳಿವೆ…

1) ಕ್ಯಾಶ್ ಬಳಸುವಾಗ ಕಡಿಮೆ ಖರ್ಚು ಮಾಡ್ತೀವಿ

ಡಿಜಿಟಲ್ಲಲ್ಲಿ ಅಥವಾ ಕಾರ್ಡ್-ಗೀರ್ಡ್ ಉಜ್ಜಿ ದುಡ್ಡು ಕೊಟ್ಟರೆ ದುಡ್ಡು ಕೊಟ್ಟಿದ್ದೇ ಗೊತ್ತಾಗುವುದಿಲ್ಲ. ಆದ್ದರಿಂದ ನಾವು ಜಾಸ್ತಿ ದುಡ್ದು ಕೊಡುವ ಸಾಧ್ಯತೆ ಇರುತ್ತೆ. ಆದರೆ ಕ್ಯಾಶ್ ಬಳಸುವಾಗ ಕೈಯಿಂದ ದುಡ್ಡು ಹೋಗಿದ್ದರ ಅನುಭವ ಆಗೋದ್ರಿಂದ ಕಡಿಮೆ ಖರ್ಚು ಮಾಡ್ತೀವಿ.

2) ಕ್ಯಾಶ್ ಕೊಟ್ಟಾಗ ಕೊಡೋ ನೋವು ಗೊತ್ತಾಗುತ್ತೆ

ಏನಾದರೂ ಕೊಂಡುಕೊಳ್ಳುವಾಗ ದುಡ್ಡು ಕೊಡೋದು ನಿಜಕ್ಕೂ ನೋವಿನ ಕೆಲಸ! ಬಿಟ್ಟಿ ಕೊಟ್ಟರೆ, ಅಥವಾ ಅವರು ಹೇಳಿದ್ದಕ್ಕಿಂತ ಕಡಿಮೆಗೆ ಕೊಟ್ಟರೆ ಸಂತೋಷ ಆಗೋದೇ ಇದಕ್ಕೆ ಪುರಾವೆ! ಅದು ಬಿಟ್ಟು ಎಲ್ಲೋ ಒಂದು ನಂಬರ್ ಕಡಿಮೆ ಆಗುತ್ತೆ ಅನ್ನೋದಾದರೆ ಕೊಡೋದರ ನೋವು ಗೊತ್ತಾಗಲ್ಲ. ಗಮನಿಸಿ: ಲೆಕ್ಕವಿಲ್ಲದಷ್ಟು ದುಡ್ಡಿರೋರ್ಗೆ ಒಳ್ಳೇದಲ್ಲದೆ ಇರಬಹುದು, ಆದರೆ ನಮ್ಮ-ನಿಮ್ಮಂತಹ ಸಾಮಾನ್ಯ ಜನರಿಗೆ ಈ ನೋವು ಒಳ್ಳೇದೇ.

ಮೂಲ

3) ಕ್ಯಾಶ್ ಕೊಟ್ಟಾಗ ಇಷ್ಟು ಕೊಟ್ಟೆ, ಇಷ್ಟು ಉಳಿದಿದೆ ಅಂತ ತಕ್ಷಣ ಗೊತ್ತಾಗುತ್ತೆ

ಇಷ್ಟು ರಾಶಿ ಹೋಯಿತು, ಇಷ್ಟು ಉಳಿದಿದೆ ಅಂತ ಗೊತ್ತಾಗುವುದಕ್ಕೆ ದುಡ್ಡು ಅನ್ನೋದು ಅಮೂರ್ತವಾಗಿರದೆ ಮೂರ್ತವಾಗಿದ್ದರೆ ಒಳ್ಳೇದು. ಅಂದರೆ - ಅದನ್ನ ಮುಟ್ಟಕ್ಕೆ ಆಗಬೇಕು. ಹೀಗಿದ್ದಾಗ ಎಷ್ಟು ದುಡ್ದು ಕೊಟ್ಟೆ, ಎಷ್ಟು ಉಳಿದಿದೆ ಅಂತ ಸುಲಭವಾಗಿ ಗೊತ್ತಾಗುತ್ತೆ. ಇದೂ ಕೂಡ ಸಾಮಾನ್ಯ ಜನರಿಗೆ ಒಳ್ಳೇದು.

4) ಕ್ಯಾಶ್ ಬಳಸುವಾಗ ಬೇರೆ ಬೇರೆ ಜನರಿಗೆ/ಕೆಲಸಗಳಿಗೆ ಇಷ್ಟು ದುಡ್ಡು ಅಂತ ಬುದ್ಧಿವಂತಿಕೆಯಿಂದ ಹಂಚಬಹುದು

ಮೂರ್ತರೂಪದ ದುಡ್ಡು ಇಟ್ಟುಕೊಂಡು ಹಂಚಿಕೆ ಮಾಡೋದು ಸುಲಭ. ಹಂಚುವುದರ ಅನುಭವವೂ ಆಗುತ್ತದೆ. ಈ ಅನುಭವವೇ ಹೊರಟು ಹೋಗಿ ಅದು ಬರೀ ಒಂದು ಮಿದುಳಿನ ಮತ್ತು ಕಂಪ್ಯೂಟರ್ ಕೆಲಸ ಆಗಿಹೋದರೆ ಹಂಚಿಕೆಯ ಕೆಲಸ ಬುದ್ಧಿವಂತಿಕೆಯಿಂದ ಮಾಡಲು ಆಗದಿರಬಹುದು.

ಮೂಲ

5) ಕ್ಯಾಶಿಂದ ನಮ್ಮ ಹತ್ತಿರ ದುಡ್ಡು ಇರೋದು ಮತ್ತೆ ಇಲ್ಲದಿರೋದರ ಅನುಭವ ಸತತವಾಗಿ ಆಗುತ್ತಾ ಇರುತ್ತೆ

ಮೂರ್ತರೂಪ ಅಂತ ಹೇಳಿದ್ದನ್ನೇ ಇನ್ನೊಂದು ರೀತಿಯಲ್ಲಿ ಇಲ್ಲಿ ಹೇಳಿದೆ, ಅಷ್ಟೆ. ನಮ್ಮ ದುಡ್ಡನ್ನ ನಮಗೇ ಮುಟ್ಟಕ್ಕೆ ಆಗದೆ ಹೋದರೆ ಇರೋದರ ಅನುಭವ ಕೈಗಿರುವುದಿಲ್ಲ, ಕಣ್ಣಿಗಿರುವುದಿಲ್ಲ. ಅದು ಬರೀ ಒಂದು ಸಂಖ್ಯೆ… ಅದು ಬರೀ ಮಿದುಳಿಗೆ ಮಾತ್ರ. ಮಿದುಳು ದೇಹದ ಮಿಕ್ಕ ಅಂಗಗಳ ಜೊತೆಗೂಡಿ ಕೆಲಸ ಮಾಡಿದರೇ ಅತ್ಯಂತ ಸಮರ್ಥವಾಗಿ ಕೆಲಸ ಮಾಡುವುದು.

6) ಕ್ಯಾಶ್ ಕೊಟ್ಟು ಕೊಂಡುಕೊಳ್ಳೋ ಸಾಮಾನನ್ನ ಬಹಳ ಕೂಲಂಕಷವಾಗಿ ಪರೀಕ್ಷೆ ಮಾಡಿ ತೊಗೋತೀವಿ

ಕೊಡುವ ಅನುಭವ ಆಗುತ್ತಲ್ಲ, ಆ ನೋವಾಗುತ್ತಲ್ಲ, ಆದ್ದರಿಂದ ಹೀಗೆ. ತೊಗೊಳೋ ಸಾಮಾನನ್ನ ಬಹಳ ಅಳೆದು ತೂಗಿ ನೋಡ್ತೀವಿ. ದುಡ್ದು ಕೊಡೋ ಅನುಭವಾನೇ ಆಗದೆ ಹೋದರೆ ತೀರಾ ಕಡಿಮೆ ದುಡ್ಡಿಗೆ ಯಾರಾದರೂ ಒಂದು ಸಾಮಾನು ಕೊಟ್ಟರೆ ಹೇಗೆ ಸುಮ್ಮನೆ ತೊಗೊಂಡು ಬರ್ತೀವೋ ಹಾಗೆ ಕೂಲಕಷವಾಗಿ ಪರೀಕ್ಷೆ ಮಾಡದೆ ತೊಗೊಂಡ್ ಬರ್ತೀವಿ.

ಮೂಲ

7) ಕ್ಯಾಶ್ ಕೊಟ್ಟಾಗ ಕೊಟ್ಟಿದ್ದು ಜಾಸ್ತಿ ನೆನಪಿರುತ್ತೆ

ಇದೂ‌ ಕೂಡ ಕ್ಯಾಶ್ ಮೂರ್ತರೂಪದ್ದು ಅನ್ನೋದರಿಂದಾನೇ ಬರೋದು. ದುಡ್ಡು ಕೊಡೋ ಕೆಲಸ ಬರೀ ಮಿದುಳಿಂದಾದರೆ ಅದರ ನೆನಪು ಉಳಿಯುವುದು ಕಷ್ಟ. ಅದರ ಬದಲಾಗಿ ಕಣ್ಣು, ಕೈ, ಎಲ್ಲವೂ ಆ ಕೆಲಸದಲ್ಲಿ ಸೇರಿದ್ದರೆ ಎಷ್ಟು ಕೊಟ್ವಿ, ಯಾರಿಗೆ ಕೊಟ್ವಿ, ಯಾಕೆ ಕೊಟ್ವಿ ಅನ್ನೋದರ ನೆನಪಾಗುವುದು ಸುಲಭ. ಯಾಕಂದ್ರೆ ಆಗ ಮಿದುಳಿಗೆ ಹೊರಗಿನ ಅಂಗಾಂಗಗಳಿಂದ ಬಂದ ಸಂದೇಶಗಳು ಸಹಾಯಕ್ಕೆ ಬರುತ್ತವೆ.

8) ಕಣ್ಮುಂದೆ ಕ್ಯಾಶ್ ಇದ್ದಾಗ ಅದನ್ನ ಹೇಗೆ ಬಳಸಬೇಕು ಅಂತ ಪ್ಲಾನ್ ಮಾಡುವುದು ಸುಲಭ

ಇಷ್ಟು ಮನೆ ಸಾಮಾನಿಗೆ, ಇಷ್ಟು ಮಕ್ಕಳ ಸ್ಕೂಲ್ ಫೀಸಿಗೆ… ಅಂತ ತೆಗೆದು ತೆಗೆದು ದುಡ್ಡು ಇಟ್ಟರೆ ಪ್ಲಾನ್ ಮಾಡುವುದು ಸುಲಭ. ಈ ಪ್ಲಾನಿಂಗಲ್ಲಿ ಬರೀ ಮಿದುಳಿನ ಕೆಲಸ ಮಾತ್ರ ಆದರೆ ಪ್ಲಾನ್ ಮಾಡುವುದರಲ್ಲಿ ಏರುಪೇರುಗಳಾಗುವ ಸಾಧ್ಯತೆ ಹೆಚ್ಚು.

ಮೂಲ

9) ಯಾರಿಗಾದರೂ ದಾನ ಕೊಡುವಾಗ ಕ್ಯಾಶ್ ಬಳಸಿದರೆ ಅದರಿಂದ ನಮಗಾಗುವ ಆನಂದ ಹೆಚ್ಚು

ಕೊಟ್ಟಿದ್ದು ಗೊತ್ತಾಗುತ್ತಲ್ಲ, ಅದಕ್ಕೇ. ಇಷ್ಟು ಕೊಟ್ಟೆ ಅನ್ನೋದರ ಅನುಭವ ಆಗುತ್ತಲ್ಲ, ಅದಕ್ಕೇ. ಅದರ ಬದಲು ಕಾರ್ಡ್ ಉಜ್ಜಿದರೆ, ಅಥವಾ ಮೊಬೈಲ್ ಬಳಸಿ ಒಂದು ಬಟನ್ ಒತ್ತಿದರೆ ಆ ಅನುಭವ ಬಹಳ ಕಡಿಮೆ.

10) ಕ್ಯಾಶ್ ಬಳಸಿ ಖಾಸಗಿ ಕೊಡು-ಕೊಳ್ಳುವಿಕೆ ಮಾಡಿಕೊಳ್ಳಬಹುದು

ಕಾನೂನುಬದ್ಧವಾಗಿ ನಡೆಯುವ ಸಾಮಾನ್ಯ ಜನರಿಗೆ ಖಾಸಗಿ ಕೊಡು-ಕೊಳ್ಳುವಿಕೆಗಳ್ನ ಮಾಡಿಕೊಳ್ಳುವ ಹಕ್ಕಿದೆ. ಆಗ ಯಾರಿಗೂ ಗೊತ್ತಾಗದ ಹಾಗೆ ದುಡ್ಡು ಕೊಡಬೇಕಾದ ಪರಿಸ್ಥಿತಿ ಇರುತ್ತದೆ. ಉದಾಹರಣೆಗೆ ಗೆಳತಿಯೊಬ್ಬಳು ಕಷ್ಟದಲ್ಲಿದ್ದಾಗ ಅವಳಿಗೆ ದುಡ್ದು ಕೊಡಬೇಕು ಅನ್ನುವ ಅನಿಸಿಕೆ ಹೆಂಡತಿಗೆ ಇದ್ದರೆ ಅವಳು ಗಂಡನಿಗೆ ಗೊತ್ತಾಗದ ಹಾಗೆ ಕೊಡುವುದಕ್ಕೆ ಕ್ಯಾಶೇ ಬೇಕು. ಇನ್ನು ಹೇಗೆ ಕೊಟ್ಟರೂ ಗಂಡ ನೋಡಿಬಿಡುವ ಸಾಧ್ಯತೆ ಇರುತ್ತೆ…

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: