ಕೇಳಿಸಿಕೊಂಡ ತಕ್ಷಣ ಗ್ಯಾರಂಟಿ ತಪ್ಪು ಅನ್ನಿಸೋ 12 ಅದ್ಭುತವಾದ ಸತ್ಯಗಳು

ಬೆಂಕಿಕಡ್ಡಿ ಕಂಡ್ ಹಿಡಿಯಕ್ಕೂ ಮುಂಚೆ ಲೈಟರ್ ಇತ್ತು

ಒಂದೊಂದ್ಸಲ ನಿಜ ಹೇಳಿದಾಗ ಒಪ್ಪೋದು ಕಷ್ಟ. ಕೇಳಿಸಿಕೊಂಡರೆ ಬಹಳ ವಿಚಿತ್ರ ಅನ್ನಿಸುತ್ತೆ. ಅಂಥ 12 ಸತ್ಯಗಳ್ನ ಇಲ್ಲಿ ಕೊಟ್ಟಿದೀವಿ, ಓದಿ ಮಜಾ ಮಾಡಿ!

1. ಇಂಗ್ಲಿಷಿನ "ಹ್ಯಾಪಿ ಬರ್ತಡೇ ಟು ಯು" ಹಾಡಿಗೆ 2016 ಫೆಬ್ರವರಿ ವರೆಗೆ "ಹಕ್ಕುಗಳನ್ನು ಕಾದಿರಿಸಿ"ತ್ತು

2016 ಫೆಬ್ರವರಿಗೂ ಮುಂಚೆ ಈ ಹಾಡನ್ನ ಯಾವದೇ ಸಿನೆಮಾಲಿ, ಟೀವಿಲಿ, ಕಿರುಚಿತ್ರದಲ್ಲಿ, ಹಾಕಿದ್ರೆ ಅವರು ವಾರ್ನರ್ ಬ್ರದರ್ಸ್ ಅನ್ನೋ ಕಂಪನಿಗೆ ಕಾಸ್ ಕೊಡ್ಬೇಕಿತ್ತು. ವಾರ್ನರ್ ಮ್ಯೂಸಿಕ್ಕವರು ಆಮೇಲೆ 14 ಮಿಲಿಯನ್ ಡಾಲರ್ ಕೊಟ್ಟು ಈ ಹಕ್ಕಿಗೆ ತಿಲಾಂಜಲಿ ಬಿಟ್ರು, ಆಮೇಲೆ ಅದು ಜನರಿಗೆ ಫ್ರೀಯಾಗಿ ಸಿಕ್ಕಿದ್ದು.

ಮೂಲ

2. ಚಾರ್ಲಿ ಚಾಪ್ಲಿನ್ ತರಹ ಕಾಣಿಸೋ ಹಾಗೆ ಡ್ರಸ್ ಮಾಡ್ಕೊಳೋ ಸ್ಪರ್ಧೆಯಲ್ಲಿ ಚಾರ್ಲಿ ಚಾಪ್ಲಿನ್ನೇ ಸೋತಿದ್ರು

ಚಾರ್ಲಿ ಚಾಪ್ಲಿನ್ನೇ ಸ್ಪರ್ಧೆಲಿ ಎರಡನೇ ಪ್ರೈಸ್ ತೊಗೊಂಡ್ರು. ಇದ್ರು ಬಗ್ಗೆ ಎಲ್ಲೂ ಸಾಕ್ಷಿ ಇಲ್ಲ ಆದ್ರೆ ಇದು ಸತ್ಯ ಅಂತ ಹೇಳ್ತಾರೆ.

ಮೂಲ

3. ಸಮುದ್ರದ ಏಡಿಗೆ ವಯಸ್ಸಾದರೂ ವಯಸ್ಸಾಗುವ ಯಾವುದೇ ಲಕ್ಷಣಗಳು ಕಾಣಿಸಲ್ಲ

ವಯಸ್ಸಾಗ್ತಾ ಆಗ್ತಾ ದೊಡ್ಡದಾಗತ್ತೆ, ಅಷ್ಟೇ ಗಟ್ಟು-ಮುಟ್ಟಾಗಿರತ್ತೆ. ಇದರ ವಯಸ್ಸು ಕಂಡಹಿಡಿಯೋದು ತುಂಬಾ ಕಷ್ಟ. ಅಂದಾಜ್ ಮೇಲೆ 100 ವರ್ಷ ಬದುಕತ್ತೆ ಅಂತಾರೆ.

ಮೂಲ

4. ಪ್ಲೂಟೋ ಒಂದು ಗ್ರಹ ಅಂತ ಕರೆದು, ಆಮೇಲೆ ಅಲ್ಲ ಅಂತ ತೀರ್ಮಾನಿಸಿದರೂ, ಅಷ್ಟರಲ್ಲಿ ಅದು ಸೂರ್ಯನ ಸುತ್ತ ಒಂದ್ಸಲಾನೂ ಸುತ್ತಿಲ್ಲ

ಪಾಪ ಪ್ಲೂಟೋ, ಇದು ಸೂರ್ಯನ್ ಸುತ್ತ ಒಂದ್ ಸುತ್ತಾಕಾಕ್ಕೆ 248.09 ವರ್ಷ ಬೇಕಾಗತ್ತೆ. ಈ ಗ್ರಹನ ಕಂಡುಹಿಡಿದಿದ್ದು 1930, ಆದ್ರೆ ಇದ್ರು ಸೂರ್ಯನ್ ಸುತ್ತ ಸುತ್ತ ಮುಗಿಸೋದು ಮಾರ್ಚ್ 2178.

ಮೂಲ

5. ಬೆಂಕಿಕಡ್ಡಿ ಕಂಡ್ ಹಿಡಿಯಕ್ಕೂ ಮುಂಚೆ ಲೈಟರ್ ಇತ್ತು

ಲೈಟರ್ನ ಕಂಡಹಿಡಿದಿದ್ದು 1823. ಬೆಂಕಿಕಡ್ಡಿ ಕಂಡಹಿಡಿದಿದ್ದು 1826.

ಮೂಲ

6. ಶನಿ ಮತ್ತೆ ಗುರು ಗ್ರಹದಲ್ಲಿ ವಜ್ರದ್ ಮಳೆ ಬರತ್ತೆ

ಮೂಲ

7. ಕಾರಲ್ಲಿ ಭೂಮಿ ಬಿಟ್ಟು ಬಾಹ್ಯಾಕಾಶಕ್ಕೆ ಹೋಗಕ್ಕೆ 1 ಗಂಟೆ ಸಾಕು 

ನಿಮ್ಮ್ ಕಾರನ್ನ ಮೇಲಕ್ಕೆ 95 ಕಿ.ಮಿ. ಸ್ಪೀಡಲ್ಲಿ ಓಡ್ಸುದ್ರೆ 1 ಗಂಟೆ ಒಳ್ಗಡೆ ಬಾಹ್ಯಾಕಾಶ ತಲ್ಪಿರ್ತೀರಾ

ಮೂಲ

8. ತಿಮಿಂಗಿಲದ ರಕ್ತನಾಡಿಲಿ ಒಂದು ಮಗು ಈಜೋಷ್ಟು ಜಾಗ ಇರತ್ತೆ

ಮೂಲ

9. ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡರೆ ಹಳೆ 2 ಕಿಡ್ನಿ ಹಾಗೇ ಬಿಡ್ತಾರೆ

ಅದನ್ನ ತೆಗೆಯಕ್ಕೆ ಹೋಗಲ್ಲ.

ಮೂಲ

10. ಭೂಮಿ ವಯಸ್ಸು 1 ವರ್ಷ ಅನ್ಕೊಂಡ್ರೆ ಮನುಷ್ಯ ಹುಟ್ಟೋದು ಡಿಸೆಂಬರ್ 31ರಾತ್ರಿ 11 ಗಂಟೆ 58 ನಿಮಿಷಕ್ಕೆ 

ಅಂದ್ರೆ ಮನುಷ್ಯ ಭೂಮಿಮೇಲೆ ಕಾಣಿಸಿಕೊಂಡಿರೋದು ಬಹಳ ಇತ್ತೀಚೆಗೆ ಅಂತರ್ಥ.

ಮೂಲ

11. ಹಸುಗಳು ಗೆಳೆತನ ಬೆಳೆಸುತ್ತವೆ; ಫ್ರೆಂಡ್ಸಿಂದ ದೂರ ಇರಕ್ಕೆ ಇಷ್ಟ ಪಡಲ್ಲ.

ಹಸೂಗೂ ಬೆಸ್ಟ್ ಫ್ರೆಂಡ್ಸ್ ಇರುತ್ತವೆ. ಫ್ರೆಂಡ್ಸಿಂದ ದೂರ ಮಾಡುದ್ರೆ ಇವಕ್ಕೆ ಸಿಕ್ಕಾಪಟ್ಟೆ ಬೇಜಾರಾಗುತ್ತೆ.

ಮೂಲ

12. ಭೂಮಿ ಮತ್ತೆ ಚಂದ್ರನ ಮಧ್ಯದಲ್ಲಿ ಎಲ್ಲ ಗ್ರಹಗಳನ್ನೂ ಇಡಬಹುದು

ಭೂಮಿ ಮತ್ತೆ ಚಂದ್ರನ ಮದ್ಯೆ ಇರೋ ಜಾಗ 384,400 ಕಿ.ಮಿ. ಅಷ್ಟರಲ್ಲಿ ಎಲ್ಲ ಗ್ರಹಗಳ್ನೂ ಒಂದರ ಪಕ್ಕ ಒಂದು ಜೋಡುಸ್ಕೊಂಡ್ ಹೋಗ್ಬೋದು.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: