ತುಂಬಾ ದಿನ ಮನೆಗೆ ಬೀಗ ಹಾಕೊಂಡ್ ಹೋದ್ರೆ ಐಸ್ ಮೇಲೆ ಒಂದು ನಾಣ್ಯ ಇಟ್ಟು ಹೋಗಿ, ಒಳ್ಳೇದು

ತೀರಾ ಸಿಂಪಲ್ ಐಡಿಯಾ, ಆದರೆ ಉಪಯೋಗ ಸಕ್ಕತ್ತಿದೆ

ವೀಕೆಂಡು, ರಜಾ ಗಿಜಾ ಅಂತ ಆಗಾಗ ಮನೆ ಬಿಟ್ಟು ಎಲ್ಲಿಗಾದ್ರೂ ಹೋಗೋಂತ ಸಂದರ್ಭ, ಪರಿಸ್ಥಿತಿ ಬಂದೇ ಬರುತ್ತೆ. ಆಗ ಫ್ರಿಜಲ್ಲಿ ಒಂದಷ್ಟು ಅನ್ನ ಸಾಂಬಾರ, ಇನ್ನೇನೋ ತಿಂಡಿತೀರ್ಥ ಇಟ್ಟುಬಿಟ್ಟು ಹೋಗಿರ್ತೀವಿ.

ಮನೆಗೆ ವಾಪಸ್ ಬಂದ ಮೇಲೆ ಫ್ರಿಜ್ಜಲ್ಲಿ ಇಟ್ಟಿರೋದನ್ನ ತಿನ್ನೋದೋ ಬೇಡ್ವೋ?

ಈ ಪ್ರಶ್ನೆಗೆ ಉತ್ತರ ಗೊತ್ತಾಗಬೇಕಾದ್ರೆ ನೀವು ಮಾಡಬೇಕಾದ್ದು ಇಷ್ಟೇ:

ಒಂದ್ ಕಪ್ಪಲ್ಲಿ ನೀರು ಹಾಕಿ ಅದನ್ನ ಫ್ರಿಜ್ಜಲ್ಲಿಡಿ. ಅದು ಐಸಾದ ಮೇಲೆ ಅದರ ಮೇಲೆ ಒಂದ್ ನಾಣ್ಯ ಇಟ್ಟು ಫ್ರೀಜರ್ ಮುಚ್ಚಿಬಿಡಿ. ನೀವು ಮನೆ ಬಿಟ್ಟು ಎಲ್ಲಿಗೆ ಹೋಗ್ತೀರೋ ಹೋಗಿ. ವಾಪಸ್ ಬಂದ ಮೇಲೆ ನಾಣ್ಯ ತಳ ಸೇರಿದ್ರೆ ಫ್ರಿಜ್ಜಲ್ಲಿ ಇಟ್ತಿರೋ ಅಡುಗೆ ಪದಾರ್ಥಗಳ್ನ ತಿನ್ನಬೇಡಿ. ಯಾಕೆ ಅಂತೀರಾ? ಕರೆಂಟ್ ಹೋಗಿ ಕಪ್ಪಲ್ಲಿದ್ದ ಐಸು ನೀರಾಗಿದೆ. ಅದಕ್ಕೇ ನಾಣ್ಯ ಕೆಳಕ್ಕೆ ಬಿದ್ದಿರೋದು. ಅಷ್ಟು ಹೊತ್ತು ಕರೆಂಟ್ ಹೋಗಿದ್ರೆ ನೀವು ಇಟ್ಟಿರೋ ಅಡುಗೆ ಪದಾರ್ಥಗಳು ಇನ್ನು ತಿನ್ನಕ್ಕೆ ಯೋಗ್ಯವಾಗಿರಲ್ಲ. ನಾಣ್ಯ ಐಸೊಳಗೆ ಅಥವಾ ಐಸ್ ಮೇಲೆ ನೀವು ಇಟ್ಟಂಗೇ ಇದ್ರೆ ನೀವು ಇಟ್ಟು ಹೋದ ಅಡುಗೆ ಪದಾರ್ಥಗಳ್ನ ತಿನ್ಬೋದು ಅಂತರ್ಥ… ಯಾಕಂದ್ರೆ ಕರೆಂಟ್ ಜಾಸ್ತಿ ಹೊತ್ತು ಹೋಗಿಲ್ಲ ಅಥವಾ ಹೋಗೇ ಇಲ್ಲ.

ಮೂಲ

ಸಕ್ಕತ್ ಅಲ್ವಾ?! ಈ ಸಲ ಮನೆ ಬಿಟ್ಟು ಹೋಗ್ಬೇಕಾದ್ರೆ ಈ ತರ ಮಾಡಿ ನೋಡಿ. 

ಐಡಿಯಾ: ಶೀಲಾ ರಸೆಲ್

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: