ಈ 7 ವಿಷ್ಯ ನಿಮಗೆ ಮುಂಚೇನೇ ಗೊತ್ತಿದ್ರೆ ಲವ್ ಫೇಲ್ಯೂರಾದಾಗ ಅಷ್ಟಾಗಿ ನೋವಾಗಲ್ಲ

ಪ್ರೀತಿಸಿದೋರೆಲ್ಲ ಜೀವನ ಇಡೀ ಜೊತೆಲಿರ್ತಾರೆ ಅಂತೇನಿಲ್ಲ

ನಿನ್ನ ಇಷ್ಟ ಪಡ್ತೀನಿ ಅಂದ್ರು....ಐ ಲವ್ ಯೂ ಅಂದ್ರು...ಇವೆಲ್ಲಾ ಇದ್ದಕಿದ್ದಂಗೆ ಮುಗಿದು ಹೋಯ್ತು. ಆದ್ರೂ ನೀವು ಅದಕ್ಕೆ ತಗ್ಲಾಕೊಂಡು ದಿನ ಕಳೀತಿದ್ದೀರಿ...ಒಬ್ರೇ ಒಂಟಿ. ಮುಂದಿನ ಜೀವನ ನಂದು ಸೆಟಲ್ ಆಯ್ತು ಅನ್ಕೊಂಡಿದ್ರಿ, ಆದ್ರೆ ಏನಾಯ್ತು? ಏನ್ ಸಾಹಸ ಮಾಡಿದ್ರೂ ಪ್ರೀತಿ ಉಳಿಸ್ಕೊಳಕ್ಕೆ ಆಗ್ಲಿಲ್ಲ! ಮನಸ್ಸು ಮುರಿದುಹೋಯ್ತು ಅಂದ್ರೆ ಪ್ರೀತೀಲಿ ಇನ್ನೇನು ಸಾರ ಇದೆ ಹೇಳಿ?

ಕೈ ಬಿಟ್ಟು ಹೋಗಿದ್ದನ್ನ ಚಿಂತೆ ಮಾಡಿ ಯಾವ್ದೇ ಲಾಭ ಇಲ್ಲ. ನಮ್ ಜೀವನದಲ್ಲಿ ಏನೇನಾಗತ್ತೋ ಅವೆಲ್ಲಾ ಒಂದೊಂದು ಪಾಠ ಕಲಿಸ್ತಾ ಹೋಗತ್ತೆ. ಪ್ರೀತಿ ಮಾಡೋರು ಕೆಳಗಿನ 7 ಸತ್ಯಗಳ್ನ ತಿಳ್ಕೊಂಡ್ರೆ ಲವ್ ಫೇಲ್ ಆದಾಗ ಹೃದಯಕ್ಕೆ ಅಷ್ಟಾಗಿ ಘಾಸಿ ಆಗಲ್ಲ, ನೋವು ತಡ್ಕೊತೀರಿ. ಪ್ರೀತಿ ಮಾಡಿ ಕೈ ಸುಟ್ಕೊಂಡಿರೋರ್ಗಂತೂ ಈ ಕೆಳಗಿನ 7 ಸತ್ಯಗಳು ಇನ್ನಷ್ಟು ಮೇಲೇಳಕ್ಕೆ ಸಹಾಯ ಮಾಡತ್ತೆ.

1.  ನಾನು ಪ್ರೀತಿಸೊರೆಲ್ಲ ನನಗೆ ಸರಿ ಅಂತೇನಿಲ್ಲ

ನೀವು ಯಾರನ್ನಾದ್ರೂ ಪ್ರೀತಿಸ್ತಿದ್ರೆ ಅವ್ರು ನಿಮಗೆ ಸರಿ ಅಂತೇನೂ ಇಲ್ಲ. ಅವರಿಗೆ ನೀವು ಅಂದ್ರೆ ಎಷ್ಟು ಗೌರವ ಇದೆ ಅಂತ ಅಳಿದು ನೋಡಿ. ಯಾವುದೇ ಸಂಬಂಧ ಆಗ್ಲಿ ಅಲ್ಲಿ ಪರಸ್ಪರ ಗೌರವ ಇಲ್ಲ ಅಂದ್ರೆ ಅದ್ರಲ್ಲಿ ಮುಂದುವರೆಯೋದ್ರಲ್ಲಿ ಅರ್ಥ ಇಲ್ಲ.

ಮೂಲ

2. ಪ್ರೀತಿಸಿದೋರೆಲ್ಲ ಜೀವನ ಇಡೀ ಜೊತೆಲಿರ್ತಾರೆ ಅಂತೇನಿಲ್ಲ

ಪ್ರೀತ್ಸೋವಾಗ ಜೀವನ ಇಡೀ ನಿನ್ನ ಜೊತೆ ಇರ್ತೀನಿ ಅಂತ ಹೇಳೋದು ವಾಡಿಕೆ. ಆದ್ರೆ ಅದು ನಿಜ ಆಗ್ಬೇಕು ಅಂತಿಲ್ಲ. ನಿಮ್ಮ ಸುತ್ತ ಹತ್ತು ಹಲವು ನಿದರ್ಶನಗಳು ಇರುತ್ವೆ ಅಲ್ವಾ?

3. ಕಾರಣ ಇಲ್ದೆ ಪ್ರೀತ್ಸಿದೋರು ಕಾರಣ ಇಲ್ಲದೆ ದೂರ ಆಗ್ತಾರೆ

ಕೆಲವೊಮ್ಮೆ ಏನೂ ಕಾರಣ ಇಲ್ದೆ ಪ್ರೀತಿಸೋರು ಬೇರೆ ಆಗಿರ್ತಾರೆ. ಇದ್ರಲ್ಲಿ ತಪ್ಪು ಸರಿ ಅಂತ ಯೋಚ್ನೆ ಮಾಡೋಕಾಗಲ್ಲ. ವಾಸ್ತವ ಅರ್ಥ ಮಾಡ್ಕೊಂಡು ಜೀವನ ಮಾಡಬೇಕಷ್ಟೆ.

4. ನಿಮ್ಮದು ನಿಜ್ವಾಗ್ಲೂ ಪ್ರೀತೀನಾ, ಬರೀ ಆಕರ್ಷಣೆ ಅಷ್ಟೇನಾ?

ಆಕರ್ಷಣೇನೇ ಪ್ರೀತಿ ಅನ್ಕೊಂಡು ಮುಂದುವರಿರೆದಿದ್ರೆ ಯೋಚ್ನೆ ಮಾಡಿ. ನಿಮ್ಮ ಹಳೆ ನೆನಪುಗಳು ನಿಮ್ಮನ್ನ ತುಂಬಾ ನೋಯಿಸ್ತಿದ್ರೆ ಅದು ಪ್ರೀತಿನೇ. ನೀವು ಒಪ್ಪದೆ ಇರಬಹುದು, ಆದರೆ ಈ 24 ಗುರುತುಗಳು ಸುಳ್ಳು ಹೇಳಲ್ಲವಲ್ಲ?

ಮೂಲ

5. ಎಲ್ಲರೂ ಯಾವಾಗ್ಲೂ ಸರಿಯಾದೋರ್ನೇ ಆರಿಸಿಕೊಂಡಿರಲ್ಲ 

ಗೆಳೆಯ/ಗೆಳತಿ ಪಡೆಯೋ ಭರಾಟೆಲಿ ಆಯ್ಕೆ ಮಾಡಿಕೊಂಡೋರು ಸರೀನಾ ಅಂತ ಒಮ್ಮೆ ಯೋಚ್ನೆ ಮಾಡಿ. ತಪ್ಪು ಆಯ್ಕೆ ಮುಂದೆ ನೋವು ಕೊಡೋದೇ ಹೆಚ್ಚು. 

6. ನಾವು ಪ್ರೀತಿಸೋಷ್ಟೇ ಅವರು ನಮ್ನ ಪ್ರೀತಿಸ್ಬೇಕು ಅಂತೇನಿಲ್ಲ

ಪ್ರೀತಿಸೊರೆಲ್ಲ ನಾನೇ ಹೆಚ್ಚು ಪ್ರೀತಿಸೋದು ಅಂತಾರೆ ಆದ್ರೆ ನೀವು ಪ್ರೀತ್ಸೋಷ್ಟು ಅವ್ರು ನಿಮ್ಮನ್ನ ಪ್ರೀತಿಸ್ಬೇಕು ಅಂತಿಲ್ಲ. 

7. ಹೊರಗೆ ಬರೋಕೆ ಸಾಧ್ಯ ಇಲ್ಲ ಅಂತೇನಿಲ್ಲ

ಪ್ರೀತಿ ಸಾಗರದಲ್ಲಿ ಮಿಂದೆದ್ದ ಮೇಲೆ ಅದ್ರಿಂದ ಹೊರಗ್ ಬರೋಕೆ ಸಾಧ್ಯ ಇದ್ಯಾ ಅಂತ ಹೆದರಿದ್ರೆ ಖಂಡಿತ ಹೊರಗ್ ಬರಬಹುದು ಅಂತ ಗೊತ್ತಿದ್ರೆ ನಿಮ್ಮ ಹಳೆ ಪ್ರೀತಿ ನಿಮ್ಮನ್ನ ಅಷ್ಟು ಕಾಡಲ್ಲ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: