ಸುದೀಪ್ ಜೀವನಶೈಲಿಯಲ್ಲಿ ಮಿಕ್ಕಿದ್ದೆಲ್ಲ ಓಕೆ, ಆದ್ರೆ ಒಂದ್ ತೊಂದರೆ ಇದೆ

ಆದಷ್ಟು ಬೇಗ ಆ ಅಭ್ಯಾಸ ನಿಲ್ಲಿಸಿದರೆ ಒಳ್ಳೇದು

ಕಿಚ್ಚ ಸುದೀಪ್ ಅವರನ್ನ ನೋಡ್ತಿದ್ರೆ ಈ ಹೀರೋಗಳಿಗೆ ವಯಸ್ಸೇ ಆಗಲ್ವಾ ಅನ್ಸತ್ತೆ. ಏನಪ್ಪಾ ಇವ್ರ ವಯಸ್ಸಿನ ಮರ್ಮ, ಅಷ್ಟೊಂದು ಹ್ಯಾಂಡ್ಸಮ್ ಆಗಿ ಇರೋದಕ್ಕೆ ಹೇಗ್ ಸಾಧ್ಯ? ಹೊಟ್ಟೆ ಬರೋದೇ ಇಲ್ವಾ? ಇಷ್ಟೆಲ್ಲಾ ಫಿಟ್ ಆಗಿದ್ದಾರೆ ಅಂದರೆ ಅವರು ಏನು ತಿಂತಾರೆ, ಏನು ಮಾಡ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಟೈಮ್ಸ್ ಆಫ್ ಇಂಡಿಯಾದೋರ ಜೊತೆ ಇತ್ತೀಚೆಗೆ ಮಾತಾಡ್ತಾ ತಮ್ಮ ಸೀಕ್ರೆಟ್ ಬಿಟ್ಟುಕೊಟ್ರು ಸುದೀಪಣ್ಣ.

ಅವರು ಬಿಟ್ಕೊಟ್ಟಿರೋ ರಹಸ್ಯಗಳಲ್ಲಿ ಹತ್ತು ನಿಜಕ್ಕೂ ಎಲ್ಲರೂ ಕಲಿಯುವಂಥದ್ದು. ಕಡೇದು ಸ್ವಲ್ಪ ಸರಿಯಿಲ್ಲ. ಅವರಿಗೂ ಒಳ್ಳೇದಲ್ಲ, ನಮಗೂ ಒಳ್ಳೇದಲ್ಲ. ಆದ್ದರಿಂದ ಆ ಅಭ್ಯಾಸ ಬಿಟ್ಟುಬಿಡಿ ಅಂತ ಅಂತೆಕಂತೆ ತಂಡದಿಂದ ಈ ಮುಲಕ ಕೇಳ್ಕೋತಿದೀವಿ.

1. ಏನೇ ತಿಂದ್ರೂ ಮಿತಿ ಇರಲಿ ಅಂತಾರೆ ಸುದೀಪ್ 

"ನಿಮ್ಮ ದೇಹಕ್ಕೆ ಎಷ್ಟು ಆಹಾರ ಅಗತ್ಯ ಇದೆ ಅನ್ನೋದು ನಿಮಗೇ ಚೆನ್ನಾಗಿ ಗೊತ್ತಿರುತ್ತೆ. ಏನೇ ತಿಂದರೂ ಲಿಮಿಟ್ ಆಗಿ ತಿನ್ನಿ. ಅನಾವಶ್ಯಕವಾಗಿ ತಿಂದು ಮತ್ತೆ ಒದ್ದಾಡೋದು ಬೇಡ. ಮೊದಲೇ ಏನು ತಿನ್ನಬೇಕು ಎಷ್ಟು ತಿನ್ನಬೇಕು ಅನ್ನೋದು ಗೊತ್ತಿರ್ಲಿ. ನಮ್ಮ ದೇಹಕ್ಕೆ ಯಾವುದು ಒಳ್ಳೇದು, ಯಾವುದು ಹಿತ ಅನ್ನೋದು ನಮಗಷ್ಟೇ ಗೊತ್ತು" ಅಂತಾರೆ ಸುದೀಪ್. 

ಮೂಲ

2. ಸೈಕ್ಲಿಂಗ್ ಅಂದ್ರೆ ಅವರಿಗೆ ತುಂಬಾ ಇಷ್ಟ, ಶೂಟಿಂಗ್ ಸ್ಪಾಟ್ಗೂ ಸೈಕಲ್ ತಗೊಂಡ್ ಹೋಗ್ತಾರೆ

ಅವರು ಪ್ರತಿದಿನ ಸ್ಕಿಪ್ಪಿಂಗ್ ಮಾಡ್ತಾರೆ. ಒಮ್ಮೆ 250 ಸ್ಕಿಪ್ಸ್ ಮಾಡಿದ್ರೆ ದಿನಾ 2000 ಸ್ಕಿಪ್ಸ್ ಮಾಡೋದು ಅವರ ಹವ್ಯಾಸ ಮತ್ತೆ ಅಭ್ಯಾಸ. ಸುಸ್ತಾಗೋ ತನಕ ಸೈಕ್ಲಿಂಗ್ ಮಾಡ್ತಾರೆ. ಅವರ ಹತ್ರ ನಾಲ್ಕು ಸೈಕಲ್ ಗಳಿದ್ದು, ಆಗಾಗ ಶೂಟಿಂಗ್ ಸ್ಪಾಟ್ಗೂ ತಗೊಂಡ್ ಹೋಗ್ತಾರಂತೆ. 

ಮೂಲ

3. ಬೆಳಗ್ಗೆ 6 ರಿಂದ 7.30ರ ಒಳಗೆ ಎದ್ದೇಳೋ ಅಭ್ಯಾಸ ಇಟ್ಕೊಂಡಿದಾರೆ

ಇನ್ನು ವರ್ಷದಲ್ಲಿ ಒಂದಷ್ಟು ದಿನ ಫೀಲ್ಡಿಗೆ ಇಳಿದು ಕ್ರಿಕೆಟ್ ಆಡೋದು ಗೊತ್ತೇ ಇದೆ.  ಅದೆಲ್ಲಾ ಸರಿ ಸುದೀಪ್ ಏನೆಲ್ಲಾ ಡಯಟ್ ಮಾಡ್ತಾರೆ ಅಂದ್ರೆ. ಅವರಿಗೆ ಎಲ್ಲಾ ತರಹದ ಆಹಾರ ಇಷ್ಟ ಅಂತೆ. ಆದರೆ ಎಲ್ಲನೂ ಲಿಮಿಟೆಡ್. ರೈಸ್ ಮಟ್ಟೋದೇ ಇಲ್ಲ. ಬೆಳಗ್ಗೆ 6 ರಿಂದ 7.30ರ ಒಳಗೆ ಎದ್ದೇಳೋ ಅಭ್ಯಾಸ ಇಟ್ಕೊಂಡಿದ್ದಾರಂತೆ.

ಮೂಲ

4. ಸುದೀಪ್ಗೆ ಇಡ್ಲಿ, ಅನ್ನ ಎಲ್ಲ ಇಷ್ಟ ಆಗಲ್ಲ

ಬೆಳಗಿನ ತಿಂಡಿಗೆ ಒಂದೂವರೆ ದೋಸೆ ಆದರೆ ಸಾಕು. ಅದೂ ತುಂಬಾ ಕಮ್ಮಿ ಎಣ್ಣೆ ಹಾಕಿ ನಾನ್ ಸ್ಟಿಕ್ ತವಾ ಮೇಲೆ ಮಾಡಿರೋಂತ ದೋಸೆ ಆದರೆ ಮಾತ್ರ ತಿಂತಾರಂತೆ. ಇನ್ನು ಇಡ್ಲಿ ಎಂದರೆ ಅವರಿಗೆ ಆಗಲ್ಲ. ಅಮ್ಮ ಮಾಡಿದ ಅನ್ನ ಆದರೆ ಕೇವಲ ರುಚಿಗಾಗಿ ಒಂದು ಸ್ಫೂನ್ ಬಾಯಿಗೆ ಹಾಕಿಕೊಳ್ತಾರಂತೆ ಅಷ್ಟೇ.

ಮೂಲ

5. ಮಧ್ಯಾಹ್ನದ ಊಟಕ್ಕೆ ಒಂದು ರಾಗಿಮುದ್ದೆ ಒಂದು ಕಪ್ ಸಾರು ಸಾಕು

ಮಧ್ಯಾಹ್ನದ ಮೆನು ಕೇಳಿದರೆ ನೀವು ಬೆರಗಾಗ್ತೀರ. ಅಷ್ಟೆಲ್ಲಾ ಸಂಪಾದ್ನೆ ಮಾಡೋ ಬಿಗ್ ಸ್ಟಾರ್ ಚೈನೀಸೋ, ಫ್ರೆಂಚೋ, ವೆಸ್ಟರ್ನ್ ತಿಂಡಿ ತಿನಿಸುಗಳನ್ನ ಇಷ್ಟಪಡ್ಬೋದು ಅಂದ್ಕೊಂಡಿರ್ತೀರ. ಊಹುಂ ಬಿಲ್ ಕುಲ್ ಅಲ್ಲವೇ ಅಲ್ಲ. ಮಧ್ಯಾಹ್ನದ ಊಟಕ್ಕೆ ಒಂದು ರಾಗಿಮುದ್ದೆ ಒಂದು ಕಪ್ ಸಾರು ಸಾಕು.

ಮೂಲ

6. ಕಾಫಿ - ಟೀ ಅಂದ್ರೆ ಸುದೀಪ್ಗೆ ತುಂಬಾ ಇಷ್ಟ

ರಾತ್ರಿ ಊಟಕ್ಕೆ ರಾಗಿ ರೊಟ್ಟಿ ಅಥವಾ ಎರಡು ಚಪಾತಿ ಜೊತೆಗೆ ತರಕಾರಿ ಪಲ್ಯ. ಇದಿಲ್ಲದಿದ್ದರೆ ತಂದೂರಿ ಚಿಕನ್. ಗ್ರೇವಿ ಗೀವಿ ಎಲ್ಲಾ ಬಿಲ್ ಕುಲ್ ಮುಟ್ಟೋ ಪೈಕಿ ಅಲ್ಲ ಸುದೀಪ್. ಇದ್ಯಾವುದೂ ಇಲ್ಲಾ ಅಂದ್ರೆ ಸೀಫುಡ್ ಅಥವಾ ಚಿಕನ್ ಇದ್ರೆ ಸಾಕು. ಇನ್ನು ಸ್ನಾಕ್ಸ್ ಅಂತೀರೋ ತಾಜಾ ಹಣ್ಣುಗಳು ಹಾಗೂ ಜ್ಯೂಸ್ ಅಷ್ಟೇ. ಕಾಫಿ ಮತ್ತೆ ಟೀ ಅವರಿಗೆ ತುಂಬಾ ಇಷ್ಟ ಆಗಿರೋಂತ ಪಾನೀಯಗಳು. 

ಮೂಲ

7. ಅವರಿಗೆ ಯಾವ್ ತರ ಟೀ ಮಾಡ್ಕೊಡ್ಬೇಕು ಅಂತ ಅವರಮ್ಮ ಮತ್ತೆ ಹೆಂಡ್ತಿಗೆ ಮಾತ್ರ ಗೊತ್ತಂತೆ 

ಟೀ ಬಗೆಗಿನ ಅವರ ವರ್ಣನೆ ಕೇಳಿದರೆ ನೀವೂ ಒಂದು ಕಪ್ ಚಹಾ ಕುಡಿಲೇಬೇಕು ಅನ್ಕೋತೀರ. ಮಸಾಲ ಇಲ್ಲದಂತೆ ಕಡಿಮೆ ಪ್ರಮಾಣದ ಹಾಲು, ಹೆಚ್ಚಿಗೆ ನೀರು ಹಾಕಿ ಮಾಡಿದ ಹಬೆ ಆಡ್ತಾ ಇರೋಂತ ಟೀ ಅಂದ್ರೆ ಅವರಿಗೆ ಇಷ್ಟ. ಎಷ್ಟು  ಹಾಲು ಹಾಕ್ಬೇಕು ಎಷ್ಟು ನೀರು ಹಾಕಿ ಮಾಡಬೇಕು ಅನ್ನೋದ್ರ ಬಗ್ಗೆ ಅವರ ತಾಯಿ ಮತ್ತೆ ಹೆಂಡಗಿಗೆ ಮಾತ್ರ ಚೆನ್ನಾಗಿ ಗೊತ್ತಂತೆ. 

ಮೂಲ

8. ಕಾಫಿ-ಟೀ ವಿಚಾರದಲ್ಲಿ ಸುದೀಪ್ ಇಷ್ಟೇ ಕುಡೀಬೇಕು ಅಂತ ರೂಲೇನು ಇಟ್ಕೊಂಡಿಲ್ವಂತೆ

ಇನ್ನು ಫಿಲ್ಟರ್ ಕಾಫಿ ಅಂದ್ರೆ ಸಖತ್ ಇಷ್ಟ. ಕಾಫಿ ಟೀ ವಿಚಾರದಲ್ಲಿ ಮಾತ್ರ ಅವರು ಇಷ್ಟೇ ಕಪ್ ಕುಡಿಯಬೇಕು ಅನ್ನೋ ರೂಲೇನೂ ಹಾಕ್ಕೊಂಡಿಲ್ವಂತೆ. ಹೆಚ್ಚಾಗಿ ನೀರು ಕುಡೀತಾರೆ.

ಮೂಲ

9. ಸೂಪರ್ ಮಾರ್ಕೆಟ್ಟಲ್ಲಿ ಅವರು ತಗೊಳ್ಳೋದು ಬಿಸ್ಕೆಟ್, ಜ್ಯೂಸು, ಚಿಪ್ಸು, ಚಾಕೊಲೇಟ್

ಇನ್ನು ಸೂಪರ್ ಮಾರ್ಕೆಟ್‌ಗೆ ಹೋದ್ರೆ ಕಣ್ಣಿಗೆ ಬಿದ್ದಿದ್ದೆಲ್ಲಾ ಬ್ಯಾಸ್ಕೆಟ್‌ಗೆ ತುಂಬ್ಕೋತಾರೆ. ಬಿಸ್ಕೆಟ್, ಜ್ಯೂಸು, ಚಿಪ್ಸು, ಚಾಕೊಲೇಟ್... ಹೀಗೆ. ಮನೆಗೆ ಬಂದ ಅತಿಥಿಗಳಿಗೆ ಸರ್ವ್ ಮಾಡೋದು ಅಂದ್ರೆ ಅವರಿಗೆ ತುಂಬಾ ಇಷ್ಟ. ಇನ್ನು ವಿದೇಶಕ್ಕೆ ಹೋದ್ರೂ ಅಷ್ಟೆ. ಅಲ್ಲಿನ ಸೂಪರ್ ಮಾರ್ಕೆಟಲ್ಲಿ ಸಿಗೋಂತ ಸಾಸು, ಕೇಕು, ವಾಪರ್ಸ್ ಸೂಟ್‌ಕೇಸ್‌ಗಳಲ್ಲಿ ತುಂಬ್ಕೊಂಡ್ ಬರ್ತಾರೆ. ಇದನ್ನ ಬಿಟ್ಟು ಸೂಪರ್ ಮಾರ್ಕೆಟಲ್ಲಿ ಅವರು ಇನ್ನೇನು ತಗೊಳ್ಳಲ್ಲ. 

ಮೂಲ

10. ಇಂತದ್ದೇ ಶಾಂಪು, ಸೋಪು ಅಂತೇನಿಲ್ಲ ಕೈಗೆ ಸಿಕ್ಕಿದ್ದು ಉಪಯೋಗಿಸ್ತಾರೆ

ಇನ್ನು ಅವರು ಯಾವ ಶಾಂಪು, ಸೋಪ್ ಯೂಸ್ ಮಾಡ್ತಾರೆ ಅಂತ ಕೇಳಿದ್ರೆ  ಆಶ್ಚರ್ಯ ಆಗುತ್ತೆ. ನನ್ ಕೈಗೆ ಯಾವ ಸೋಪ್ ಸಿಗುತ್ತೋ ಅದನ್ನೇ ಯೂಸ್ ಮಾಡೋದು ಅಂತಾರೆ. 

ಮೂಲ

11. ಮೇಲಿಂದೆಲ್ಲ ಓಕೆ, ಆದ್ರೆ ಸುದೀಪ್ ನಿದ್ದೆ ಮಾಡೋದು ತುಂಬಾ ಕಡಿಮೆ… ಇದು ಅಷ್ಟು ಒಳ್ಳೇದಲ್ಲ

ಸುದೀಪ್ ಸಾಮಾನ್ಯವಾಗಿ ಹೆಚ್ಚಾಗಿ ನಿದ್ದೆ ಮಾಡಲ್ಲ. ಅಬ್ಬಬ್ಬಾ ಅಂದ್ರೆ ಕೇವಲ ನಾಲ್ಕು ಗಂಟೆ ಕಾಲ ಅಷ್ಟೇ. ನನ್ನ ದೇಹಕ್ಕೆ ಅಷ್ಟು ನಿದ್ದೆ ಸಾಕು ಅಂತಾರೆ ಕಿಚ್ಚ. ಆದರೆ ಇದು ನಿಜಕ್ಕೂ ಪಾಲಿಸುವಂತಹ ವಿಷಯ ಅಂತ ನಮಗೆ ಅನ್ನಿಸಲ್ಲ. ಸುದೀಪ್ ಏನಾದರೂ ಕೆಲಸದ ಒತ್ತಡದಿಂದ ಹೀಗೆ ಕಡಿಮೆ ನಿದ್ದೆ ಮಾಡ್ತಿದಾರಾ? ಇಷ್ಟು ಕಡಿಮೆ ನಿದ್ದೆ ಮಾಡಿದರೆ ದೇಹಕ್ಕೆ ಒಳ್ಳೇದಾ? ಅವರು ಅನ್ಕೊಂಡಿರೋಹಂಗೆ ನಿಜಕ್ಕೂ ಅಷ್ಟು ನಿದ್ದೆ ಅವರಿಗೆ ಸಾಕಾ? ಈ ತೀರ್ಮಾನ ಅವರೇ ಮಾಡೋದು ಸರೀನಾ ಅಥವಾ ಯಾರಾದರೂ ಡಾಕ್ಟರ್ ಹೇಳಿದಂಗೆ ಮಾಡೋದು ವಾಸಿ ನಾ? ನಮಗೇನೋ ಕಿಚ್ಚನ ಈ ಅಭ್ಯಾಸ ಅಷ್ಟು ಸರಿಯಿಲ್ಲ ಅನ್ನಿಸುತ್ತಿದೆ.'

ಮೂಲ

ಸುದೀಪಣ್ಣ, ನಿಮ್ಮ ಅಭಿಮಾನಿಗಳಾಗಿ ಹೇಳ್ತಾ ಇದೀವಿ… ದಯವಿಟ್ಟು ಇನ್ನಷ್ಟು ನಿದ್ದೆ ಮಾಡಿ… ಕಡಿಮೆ ಅಂದರೂ 6 ಗಂಟೆ ನಿದ್ದೆ ಎಲ್ಲರಿಗೂ ಬೇಕು, ನಿಮಗೂ ಬೇಕು. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೇದು, ನಿಮ್ಮ ಕೋಟಿಗಟ್ಟಲೆ ಅಭಿಮಾನಿಗಳಿಗೂ ನೀವು ಕೊಡಬೇಕಾದ ಸರಿಯಾದ ಸಂದೇಶ… ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಮೆಚ್ಚಿನ ಅಂತೆಕಂತೆ ಈಗ YouTube ನಲ್ಲಿ

ಈ ಬಟನ್ ಒತ್ತಿ subscribe ಮಾಡಿಕೊಳ್ಳಿ:
 

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: