ಜೀವನದಲ್ಲಿ ಮೇಲೆ ಬರಬೇಕಾದ್ರೆ ನಮಗೆ ನಾವೇ ಈ 9 ಮಾತು ಹೇಳ್ಕೋಬಾರ್ದು

ಅದರಿಂದ ಇನ್ನೂ ಕೆಳಗ್ ಹೋಗ್ತೀವಿ

ಬೇರೆಯೋರು ಯಾರಾದ್ರೂ ನಮಗೆ ತೊಂದರೆ ಆಗುವಂಥ ಮಾತು ಹೇಳುದ್ರೆ ಎಷ್ಟು ಬೇಜಾರಾಗುತ್ತೆ… ಆದರೆ ನಮಗೆ ನಾವೇ ಅಂಥ ಎಷ್ಟೋ ಮಾತು ಹೇಳ್ಕೋತೀವಲ್ಲ, ಅದರ ಬಗ್ಗೆ ಏನ್ ಮಾಡೋದು? ಅಂಥ 9 ಮಾತುಗಳ್ನ ಕೆಳಗೆ ಕೊಟ್ಟಿದೀವಿ, ಓದಿ ಇವುಗಳ್ನ ನಿಮ್ಮ ತಲೆಯಿಂದ ತೆಗೆದು ಹಾಕಿ!

1. "ಈ ಪರಿಸ್ಥಿತಿಗೆ ನಾನು ಹಿಂದೆ ಮಾಡಿದ್ದೇ ಕಾರಣ"

ನಿಮ್ಮ ನಿನ್ನೆ ಎಷ್ಟೇ ಕೆಟ್ಟದಾಗಿರಲಿ, ಅದಕ್ಕೊಂದು ಕಾರಣ ಇದೆ. ನೀವು ತಗೊಂಡಿರೋ ನಿರ್ಧಾರಗಳು ತಪ್ಪಾಗಿತ್ತು ಅಂತ ಇವತ್ತು ಕೊರಗೊದ್ರಿಂದ ನೀವು ಮತ್ತಷ್ಟು ತಪ್ಪು ಮಾಡ್ಬಹುದೇ ಹೊರತು ಹಿಂದಿನ ಘಟನೆಗಳನ್ನ ಬದಲಾಯಿಸೋಕೆ ಸಧ್ಯ ಇಲ್ಲ. ನಿನ್ನೆ ಬಗ್ಗೆ ಕೊರಗೋದರ ಬದಲು ಇಂದಿನಲ್ಲಿ ಜೀವನ ಮಾಡಿ ಜೀವನ ಇನ್ನೂ ಸುಖವಾಗಿರುತ್ತೆ.

ನೆನಪಿರಲಿ - ಈ ಕ್ಷಣದಲ್ಲಿ ಜೀವನ ಮಾಡಿ; ತಲೆ ತುಂಬ ನಿಮ್ಮ ಇತಿಹಾಸವೇ ತುಂಬ್ಕೊಂಡಿದ್ರೆ ಇವತ್ತು ಮಾಡಬೇಕಾಗಿರೋದ್ರಿಂದ ನಿಮ್ಮ ಸಮಯ ಕಿತ್ಕೊಂಡಂಗಾಗುತ್ತೆ.

ಮೂಲ

2. "ಅದನ್ನೆಲ್ಲ ಮಾಡಕ್ಕೆ ನನಗೆ ವಯಸ್ಸಾಗೋಯ್ತು"

ನಿಮಗೆ ಏನೇ ಇಷ್ಟಗಳಿದ್ರೂ ಅದನ್ನ ಮಾಡೋಕೆ ಜೀವನದ ಯಾವುದೇ ಸಮಯದಲ್ಲಿ ಸಾಧ್ಯ ಇದೆ. ಯಾವ ಕೆಲಸ ಮಾಡೋಕು ನಿಮಗೆ ಇನ್ನು ಅವಕಾಶ ಇದೆ ಅಂತ ನೆನಪಿರಲಿ

ನಿಮಗೆ ಗೊತ್ತಿದ್ಯಾ? ನೆಲ್ಸನ್ ಮಂಡೇಲ ಅವ್ರು ಪ್ರಧಾನಿ ಆದಾಗ ಅವರ ವಯಸ್ಸು 76 ಆಗಿತ್ತು. ಜದದ್ವಿಖ್ಯಾತ ಮೊನ ಲೀಸ ಚಿತ್ರ ಬಿಡಿಸಿದಾಗ ಡಾ ವಿಂಚಿಗೆ ವಯಸ್ಸು 51 ಆಗಿತ್ತು.

ಇವರಿಗೆಲ್ಲ ಸಾಧ್ಯವಾದಾಗ ನಿಮಗ್ಯಾಕೆ ಸಾಧ್ಯ ಆಗೊಲ್ಲ? ನಿಮ್ಮ ಯೋಚನೆ ನಿಮಗೆಂದೂ ಮುಳುವಾಗದಿರಲಿ.

ನೆನಪಿರಲಿ - ವಯಸ್ಸು ಎಷ್ಟಾಗಿದ್ದರೂ ನಿಮಗೆ ಮನಸ್ಸಿದ್ರೆ ಏನು ಬೇಕಾದ್ರೂ ಮಾಡಬಹುದು.

ಮೂಲ

3. "ನನ್ನ ಹಣೇಲಿ ದುಡ್ಡು ಬರೆದಿಲ್ಲ"

ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ, ಆದರೆ ದುಡ್ಡೂ ಮುಖ್ಯ. ಜೀವನದ ಪ್ರತಿ ಕ್ಷಣನ ದುಡ್ಡಿಗಾಗಿ ಕಳೆದ್ರೆ ಸುಖ ಸಿಗಲ್ಲ. ಹಾಗಂತ ದುಡ್ಡಿನ ಜೊತೆ ಹಗೆತನ ಕಟ್ಕೋಬೇಡಿ.

ನೆನಪಿರಲಿ - ಚಿಕ್ಕದಾಗಿ ಶುರು ಮಾಡ್ಕೊಂಡ್ರೂ ಪರವಾಗಿಲ್ಲ, ದೊಡ್ಡ ದೊಡ್ಡ ಕನಸು ಕಾಣ್ರಿ.

ಮೂಲ

4. "ನನಗೆ _____ ಸಿಕ್ಕಾಗಲೇ ಜೀವನದಲ್ಲಿ ಸಂತೋಷ ಸಿಗೋದು"

ಯಾವುದೋ ವಸ್ತು, ವ್ಯಕ್ತಿ  ಅಥವಾ ವಿಷಯ ನಿಮಗೆ ಖುಷಿ ತರಲಾರದು. ಖುಷಿ ಅನ್ನೋದು ಮನುಷ್ಯನ ಮನಸ್ಸಿನಲ್ಲಿದೆ ಅದನ್ನ ಹೊರಗಡೆ ಹುಡುಕೋದ್ರಲ್ಲಿ ಅರ್ಥ ಇಲ್ಲ.

ನೆನಪಿರಲಿ - ಸಂತೋಷ ಒಂದು ಮನಃಸ್ಥಿತಿ ಮಾತ್ರ. ಅದಕ್ಕೆ ಯಾವುದೇ ಹೊರಗಿನ ವಸ್ತು ಬೇಕಗಿಲ್ಲ.

ಮೂಲ

5. "ಅದನ್ನ ಆಮೇಲೆ ಮಾಡ್ಬೋದು"

ನಮಗೆ ಇಷ್ಟ ಆಗೋದನ್ನ ಆಗಲೇ ಮಾಡಿ. ನಾಳೆ ಮಾಡೋಣ ಅಂತ ಮುಂದೂಡಿದ್ರೆ ಆ ನಾಳೆ ನಿಮ್ಮ ಬಾಳಲ್ಲಿ ಬರದೇ ಹೋಗಬಹುದು. 

ನೆನಪಿರಲಿ - ಎಲ್ಲ ಸರಿ ಹೋಗೋ ತನಕ ಕಾಯ್ತೀನಿ, ಆಮೇಲೆ ಮಾಡ್ತೀನಿ ಅನ್ನೋದಾದ್ರೆ ಆ ದಿನ ಎಂದಿಗೂ ಬರದೆ ಇರಬಹುದು.

ಮೂಲ

6. "ಪ್ರಯತ್ನ ಮಾಡಿದರೂ ಗೆಲ್ಲಲಿಲ್ಲ, ಆದ್ದರಿಂದ ನಾನೋಬ್ಬ ವೇಸ್ಟು"

ಒಂದೆರಡು ಬಾರಿ ನಿಮ್ಮ ಪ್ರಯತ್ನ ವಿಫಲ ಆದ ಮಾತ್ರಕ್ಕೆ ನೀವು ಸೋತಂತಲ್ಲ. ನೀವು ನಿಜವಾಗ್ಲೂ ಸೋಲೋದು ಪ್ರಯತ್ನ ಮಾಡೋದನ್ನ ನಿಲ್ಲಿಸಿದಾಗ.

ನೆನಪಿರಲಿ - ನಿಮ್ಮ ಪ್ರತೀ ಪ್ರಯತ್ನ ನಿಮಗೊಂದು ಹೊಸತನ್ನ ತಿಳಿಸಿಕೊಡುತ್ತೆ. ಆ ಕಲಿಕೆಯೆಲ್ಲ ಸೇರಿ ಕೊನೆಗೆ ಗೆದ್ದೇ ಗೆಲ್ತೀರಿ.

ಮೂಲ

7. "ನನ್ನ ಯಾರೂ ಅರ್ಥ ಮಾಡ್ಕೊಳಲ್ಲ"

ಯಾರಿಗೂ ನನ್ನ ಮನಸ್ಸು ಅರ್ಥ ಮಾಡ್ಕೋಳೋಕೆ ಆಗಲ್ಲ ಅಂತ ಕೊರಗೋ ಬದಲು ನಿಮ್ಮನ್ನ ನೀವು ಅರ್ಥ ಮಾಡಿಕೊಂಡು ಮುನ್ನುಗ್ಗೋ ಪ್ರಯತ್ನ ಮಾಡಿ.

ನೆನಪಿರಲಿ - ನಿಮ್ಮ ತರಹಾನೇ ಯೋಚನೆ ಮಾಡೋರ ಹತ್ತಿರ ಮಾತಾಡಬೇಕು ಅಂತೇನಿಲ್ಲ. ಬೇರೆ ರೀತಿಯಲ್ಲಿ ಯೋಚನೆ ಮಾಡೋರಿಂದಲೂ ಸಾಕಷ್ಟು ಕಲಿಯಬಹುದು.

ಮೂಲ

8. "ನಾನೇನು ಅವರ ತರಹ ನಾ? ನನ್ನ ಕೈಲಿ ಈ ಕೆಲಸ ಮಾಡೋಕಾಗಲ್ಲ"

ಮಿಕ್ಕವರಿಗಿರೋ ಅವಕಾಶಗಳು ನನಗಿಲ್ಲ, ನನ್ನಿಂದ ಏನೂ ಮಾಡೋಕಾಗಲ್ಲ ಅನ್ನೋ ಯೋಚ್ನೆ ಬಿಡಿ. ಸಕಾರಾತ್ಮಕವಾಗಿ ಚಿಂತಿಸಿ, ಆಗ ಅವರಲ್ಲಿ ಎಷ್ಟೋ ಜನರು ಸೊನ್ನೆಯಿಂದ ಶುರು ಮಾಡಿರೋದು ನಿಮಗೆ ಕಾಣುತ್ತೆ. ನೀವ್ಯಾಕೆ ಹಾಗೇ ಆಗಬಾರದು?

ನೆನಪಿರಲಿ - ಅವರ ಕೈಯಲ್ಲಿ ಆಗುತ್ತೆ ಅನ್ನೋದಾದ್ರೆ ನನ್ನ ಕೈಯಲ್ಲೂ ಆಗುತ್ತೆ ಅಂತ ಅನ್ಕೊಳಕ್ಕೆ ಶುರು ಮಾಡಿ. ಇದು ನಿಜ.

ಮೂಲ

9. "ನನ್ನ ವ್ಯಕ್ತಿತ್ವದ ಕೆಲವು ದೋಷಗಳಿಂದ ನಾನು ಮೇಲೆ ಬರಕ್ಕಾಗಲ್ಲ"

ನಿಮಗೆ ನಿಮ್ಮ ಬಗ್ಗೆ ಕೀಳರಿಮೆ ಇದ್ರೆ ಅದು ನೀವು ಯೋಚಿಸೋ ರೀತಿ ಅಷ್ಟೇ ವಾಸ್ತವ ಅಲ್ಲ. ಅಷ್ಟೇ ಅಲ್ಲ, ಎಲ್ಲರ ವ್ಯಕ್ತಿತ್ವದಲ್ಲೂ ದೋಷಗಳಿರುತ್ತವೆ. ಅವುಗಳಿಂದಲೇ ಅವರು ಅವರಾಗೋದು. ಚಂದ್ರನ ಮೇಲೆ ಕಲೆ ಇಲ್ಲವಾ? ಕಲೆ ಇಲ್ಲದಿರೋ ಚಂದ್ರ ಚಂದ್ರ ನಾ?

ನೆನಪಿರಲಿ - ನೀವು ಯಾವುದನ್ನ ದೋಷ ಅನ್ತಿದೀರೋ ಅದು ಎಲ್ಲರಿಗೂ ಇದೆ

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: