ಧರ್ಮ ಅಂದ್ರೇನು ಅಂತ ಬದುಕಿ ತೋರುಸ್ತಿರೋ ವೀರೇಂದ್ರ ಹೆಗ್ಗಡೆಯವರ ಜೀವನದ 19 ಮುಖಗಳು

ಒಳ್ಳೇ ಫೋಟೋಗ್ರಾಫರ್ ಇವರು

ವೀರೇಂದ್ರ ಹೆಗ್ಗಡೆ ಅಂದ್ರೆ ಯಾರಿಗ್ ಗೊತ್ತಿಲ್ಲಾ ಹೇಳಿ...ಧರ್ಮಸ್ಥಳಕ್ಕೆ ಹೋದ್ರೆ ಮಂಜುನಾಥೇಶ್ವರನ್ನ ನೋಡಕ್ಕೆ ಅಂತ ಒಂದು ಕಾರಣ ಆದ್ರೆ ಹೆಗ್ಗಡೆಯೋರ್ನ ನೋಡೋದು, ಮಾತಾಡ್ಸೋದು ಇನ್ನೊಂದು ಮುಖ್ಯ ಕಾರಣ.  ಒಂಥರಾ ಕೋಟಿ ಕೋಟಿ ಭಕ್ತರಿಗೆ ಕಣ್ಣಿಗೆ ಕಾಣಿಸೋ ದೇವ್ರು ಇವರು. ಅವರ ಬಗ್ಗೆ ತಿಳ್ಕೊಳಕ್ಕೆ ಬೇಕಾದಷ್ಟು ಇದೆ. ಅಷ್ಟೆಲ್ಲಾ ಹೇಳಕ್ಕಾಗ್ದೇದ್ರೂ ಅವರ ಬಗ್ಗೆ ಇಷ್ಟು ತಿಳ್ಕೊಂಡ್ರೆ ಅವರ ನಡೆದು ಬಂದ ಹಾದಿ ಏನು, ಅವರ ವ್ಯಕ್ತಿತ್ವ ಏನು, ಸಮಾಜಕ್ಕಾಗಿ ಮಾಡಿರೋ ಸೇವೆಗಳನ್ನ ಅರ್ಥ ಮಾಡ್ಕೊಬೋದು...

1. ವೀರೇಂದ್ರ ಹೆಗ್ಗಡೆ ಹುಟ್ಟಿದ್ದು ನವಂಬರ್ 25, 1948

2. ಧರ್ಮಾಧಿಕಾರಿ ಆಗಿದ್ದು 20ನೇ ವಯಸಲ್ಲಿ 

ಧರ್ಮಾಧಿಕಾರಿ ಆದ ನಂತರ ಕ್ಷೇತ್ರದ ಆಡಳಿತದಲ್ಲಿ ಆಧುನಿಕತೆಯ ಸೊಬಗನ್ನ ತಂದ್ರು. ಇದರಿಂದ ಧರ್ಮಸ್ಥಳ ಹೆಚ್ಚು ಹೆಚ್ಚು ಪ್ರಸಿದ್ಧಿ ಆಯ್ತು.

3. 1971ರಲ್ಲಿ ಮೊಟ್ಟ ಮೊದಲ ಬಾರಿಗೆ "ಸಾಮೂಹಿಕ ಮದುವೆ" ಏರ್ಪಾಟು ಮಾಡಿದ್ರು

ಭಾಗವಹಿಸಿದ್ದ ಜೋಡಿಗಳ ಎಲ್ಲಾ ಖರ್ಚು-ವೆಚ್ಚನಾ ದೇವಸ್ಥಾನದ ವತಿಯಿಂದನೇ ಕೊಡ್ತಾರೆ. ಪ್ರತಿ ವರ್ಷ 500 ಜೋಡಿ ಇದರ ಪ್ರಯೋಜನ ಪಡ್ಕೊತಿದ್ದಾರೆ. ಇದುವರೆಗೆ ಸುಮಾರು 12000 ಜೋಡಿಗಳಿಗೆ ಕಂಕಣ ಭಾಗ್ಯ ದೊರೆತಿದೆ. ಈ ಕಾರ್ಯಕ್ರಮ ಎಷ್ಟು ಯಶಸ್ವಿ ಆಗಿದೆ ಅಂದ್ರೆ ರಾಜ್ಯದ ಹಲವು ಕಡೆ ಅನುಕರಣೆ ಮಾಡಲಾಗ್ತಿದೆ.

4. 1981ರಲ್ಲಿ "ಅನ್ನಪೂರ್ಣ ಭೋಜನಾಲಯ" ಅನುಷ್ಟಾನಕ್ಕೆ ತಂದ್ರು

ಅನ್ನಪೂರ್ಣದಲ್ಲಿ ಒಂದೇ ಸಲಿ 5000 ಮಂದಿ ಒಟ್ಟಿಗೆ ಕೂತು ಊಟ ಮಾಡ್ಬೋದು. ಸಾಮಾನ್ಯ ದಿನಗಳಲ್ಲಿ 10000 ಹಾಗೂ ವಿಶೇಷ ದಿನಗಳಲ್ಲಿ 60000 ಮಂದಿಗೆ ಊಟದ ವ್ಯವಸ್ಥೆ ಇರತ್ತೆ.

5. 1982ರಲ್ಲಿ ಬಾಹುಬಲಿ ವಿಗ್ರಹ ಪ್ರತಿಷ್ಠಾಪಿಸಿದ್ರು

ಬಾಹುಬಲಿ ವಿಗ್ರಹಾನ ಪ್ರತಿಷ್ಠಾಪನೆ ಮಾಡ್ಬೇಕು ಅಂತ ವೀರೆಂದ್ರ ಹೆಗ್ಗಡೆ ತಂದೆಗೆ ಬಹಳ ಆಸೆ ಇತ್ತಂತೆ. ಬಾಹುಬಲಿ ವಿಗ್ರಹದ ಎತ್ತರ 39 ಅಡಿ. ಒಂದೇ ಕಲ್ಲಿಂದ ಮಾಡಿದ್ದು. ವೀರೇಂದ್ರ ಹೆಗ್ಗಡೆ ಬಾಹುಬಲಿ ವಿಗ್ರಹ ಪ್ರತಿಷ್ಠಾಪಿಸಿದ್ದಕ್ಕಾಗಿ "ಅಭಿನವ ಚಾವುಂಡರಾಯ" ಬಿರುದು ಪಡೆದಿದ್ದಾರೆ.

6. 1982ರಲ್ಲಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಜಿತೆ ಸೇರಿ "ರೂಡ್ ಸೆಟ್" ಸಂಸ್ಥೆ ಸ್ಥಾಪಿಸಿದ್ರು

ರೂಡ್ ಸೆಟ್ (ಗ್ರಾಮೀಣ ಅಭಿವೃದ್ಧಿ ಸ್ವ ಉದ್ಯೋಗ ತರಬೇತಿ ಕೇಂದ್ರ) ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ಮಾಡತ್ತೆ. ಇಲ್ಲಿವರೆಗೆ 13 ರಾಜ್ಯದಲ್ಲಿ 26 ಕೇಂದ್ರಗಳಿಂದ ಸುಮಾರು 2,00,000ಕ್ಕೂ ಹೆಚ್ಚು ಯುವಕರಿಗೆ ಸಹಾಯ ಮಾಡಿದೆ.

7. 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿದ್ರು

ಸಣ್ಣ ಹಾಗೂ ಬಡ ರೈತರು ಮತ್ತು ಮಹಿಳೆಯರ ಸ್ವ ಸಹಾಯ ಸಂಘಗಳ್ನ ಮಾಡಿ ಅವರಿಗೆಲ್ಲಾ ಹಣ ಸಹಾಯ ಮಾಡೋ ಮೂಲಕ ಹಲವು ಕುಟುಂಬಕ್ಕೆ ಆಶಾಕಿರಣ ಆಗಿದ್ದಾರೆ.

8. ಶಿಥಿಲ ಆಗಿರೋ ದೇವಸ್ಥಾನ, ಜೈನ ಮಂದಿರ ಹಾಗೂ ಇತಿಹಾಸ ಸಾರೋ ಸ್ಮಾರಕಗಳ ನವೀಕರಣಕ್ಕೆ "ಧರ್ಮೋತ್ಥಾನ ಟ್ರಸ್ಟ್" ಸ್ಥಾಪಿಸಿದ್ರು

ಇಲ್ಲಿವರೆಗೆ ಸುಮಾರು 200ಕ್ಕೂ ಹೆಚ್ಚು ದೇವಸ್ಥಾನಗಳು ಹಾಗೂ ಸ್ಮಾರಕಗಳನ್ನು ನವೀಕರಣ ಮಾಡ್ಸಿದಾರೆ.

9. ಉತ್ತಮ ಗುಣಮಟ್ಟದ ಶಿಕ್ಷಣಕ್ಕೋಸ್ಕರ "ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆ" ಕಟ್ಟಿದ್ರು.

ಆಯುರ್ವೇದ ಕಾಲೇಜು, ಪ್ರಕೃತಿ ಚಿಕಿತ್ಸೆ ಕಾಲೇಜು, ಡೆಂಟಲ್, ಮೆಡಿಕಲ್, ಇಂಜಿನೀಯರಿಂಗ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜ್ಗಳನ್ನ ನಡೆಸ್ತಿದಾರೆ. ಮುಖ್ಯಸ್ಥರೂ ಕೂಡ.

10. ಕಾರ್ ಸಂಗ್ರಹಾಲಯದಲ್ಲಿ ಇವರು ಕಲೆಕ್ಟ್ ಮಾಡಿದ ಹಳೇ ಕಾರ್ಗಳನ್ನ ಇಟ್ಟಿದಾರೆ 

ಸಂಗ್ರಹಾಲಯದಲ್ಲಿರೋ ಕಾರ್ಗಳು ಯೋಗ್ಯ ಸ್ಥಿತಿಯಲ್ಲಿ ಇವೆಯಂತೆ. ರಸ್ತೆಗೆ ಬಿಟ್ರೆ ಸಕತ್ತಾಗಿ ಓಡತ್ತಂತೆ.

11. ಕನ್ನಡ, ತುಳು ಹೀಗೆ ನಮ್ಮ ಸಂಸ್ಕೃತಿ ರಕ್ಷ ಣೆ ಕೆಲ್ಸನಾ ಬಿಡುವಿಲ್ಲದೆ ಮಾಡ್ತಿದಾರೆ

ಕನ್ನಡ ಸಾಹಿತ್ಯ ಸಮ್ಮೇಳನ, ತುಳು ಸಮ್ಮೇಳನ, ರೈತ ಮೇಳಗಳನ್ನ ಮಾಡಿದಾರೆ.

12. ಒಳ್ಳೆ ಫೋಟೋಗ್ರಾಫರ್ ಕೂಡ...

13. ಧರ್ಮಸ್ಥಳದ ರಸ್ತೆ ದೀಪ, ಅಂಗಡಿ ದೀಪ ಸೌರಶಕ್ತಿಯಿಂದ ಮಿನುಗೋ ಹಾಗೆ ಮಾಡಿದಾರೆ

ಅಷ್ಟೇ ಅಲ್ಲ, ಧರ್ಮಸ್ಥಳದ ಎಲ್ಲಾ ಅತಿಥಿ ಗೃಹಗಳಲ್ಲಿ ಸೌರಶಕ್ತಿ ಬಿಸಿನೀರಿನ ವ್ಯವಸ್ಥೆ ಇದೆ. ಪ್ರತಿನಿತ್ಯ 1 ಲಕ್ಷ ಲೀಟರ್ ಬಿಸಿನೀರು ಸಿಗತ್ತೆ!

ಭಕ್ತರಿಗೆ ಅಡಿಗೆ ಮನೆ ವ್ಯವಸ್ಥೆ ಮಾಡಿದಾರಲ್ಲ, ಅಲ್ಲಿ ಕೂಡ ಬಯೋ ಗ್ಯಾಸ್ ಉಪ್ಯೋಗ್ಸ್ತಾರೆ.

14. ಮಧ್ಯಪಾನ ದುಶ್ಚಟಗಳಿದಾಗೋ ತೊಂದ್ರೆ ಬಗ್ಗೆ "ಜನ ಜಾಗೃತಿ" ಕಾರ್ಯಕ್ರಮ ಹಮ್ಮಿಕೊಂಡಿದಾರೆ

15. ಎಲ್ಲಾ ವರ್ಗದ ಜನರಿಗೂ ಮಾರ್ಗದರ್ಶಕರಾಗಿದಾರೆ

ವೀರೇಂದ್ರ ಹೆಗ್ಗಡೆಯವರಿಂದ ರಾಜಕಾರಣಿಗಳು, ಶಿಕ್ಷಣ ಕ್ಶೇತ್ರದವರು, ಆಡಳಿತಾಧಿಕಾರಿಗಳು, ಸಿರಿವಂತರು, ಬಡವರು ಹೀಗೆ ಎಲ್ಲಾ ವರ್ಗದೊರು ಮಾರ್ಗದರ್ಶನ ಪಡಿತಿದಾರೆ

16. ವೀರೇಂದ್ರ ಹೆಗ್ಗಡೆ ಅವರ ಶ್ರೀಮತಿ ಹೇಮಾವತಿ ಕೂಡ ಸಮಾಜ ಸೇವೆ ಮಾಡ್ತಿದಾರೆ

ಮಹಿಳಾ ಸಬಲೀಕರಣವೇ ಅವರ ಮುಖ್ಯ ಮಂತ್ರವಂತೆ.

17. ವೀರೇಂದ್ರ ಹೆಗ್ಗಡೆ ದಂಪತಿಗೆ ಒಬ್ಬಳೇ ಮಗಳು ಶ್ರದ್ಧಾ

ಶ್ರದ್ಧಾ ಮದುವೆ ಬೆಂಗಳೂರು ಮೂಲದ ಉದ್ಯಮಿ ಅಮಿತ್ ಜೊತೆ ಆಗಿದೆ. ಮಾನ್ಯ ಇವರ ಮಗಳು.

18. ಮೊಮ್ಮಗಳು ಮಾನ್ಯ ಅಂದ್ರೆ ಭಾಳ ಪ್ರೀತಿ

19. ವೀರೇಂದ್ರ ಹೆಗ್ಗಡೆ ಈಗಲೂ ಯುವಕರ ತರ ದಿನಕ್ಕೆ 18 ಗಂಟೆ ಉತ್ಸಾಹದಿಂದ ಕೆಲ್ಸ ಮಾಡ್ತಾರೆ

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಮೆಚ್ಚಿನ ಅಂತೆಕಂತೆ ಈಗ YouTube ನಲ್ಲಿ

ಈ ಬಟನ್ ಒತ್ತಿ subscribe ಮಾಡಿಕೊಳ್ಳಿ:
 

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: