ಹಂಪೆ ಬಗ್ಗೆ ಈ 20 ಅದ್ಭುತವಾದ ವಿಷಯಗಳು ಗೊತ್ತಾದ್ರೆ ನಿಮ್ಮ ಮುಂದಿನ ಟ್ರಿಪ್ಪು ಗ್ಯಾರಂಟಿ ಅಲ್ಲೀಗೇ

ಒಂದೊಂದ್ ಕಡೆ ವಿಜ್ಞಾನಿಗಳೇ ತಲೆ ಕೆರ್ಕೋಬೇಕು ಹಂಗಿದೆ

1. ಸಾಕ್ಷಾತ್ ಶ್ರೀರಾಮನೇ ಬೇಕಾದಾಷ್ಟು ಸಲ ಹಂಪೆಗೆ ಭೇಟಿ ಕೊಟ್ಟಿದ್ದನಂತೆ

ರಾಮಾಯಣದ ಪ್ರಕಾರ ಶ್ರೀರಾಮ ಮತ್ತವನ ತಮ್ಮ ಲಕ್ಷ್ಮಣ ಇಬ್ರೂ ಸೀತೆಯ ಹುಡುಕಾಟದಲ್ಲಿದ್ದಾಗ ವಾಲಿ ಮತ್ತೆ ಸುಗ್ರೀವರ ಸಹಾಯವನ್ನ ಕೇಳೋ ಸಲುವಾಗಿ ಸಾಕಷ್ಟು ಸಲ ಹಂಪೆಗೆ  ಭೇಟಿ ಕೊಟ್ಟಿದ್ರಂತೆ.

ಮೂಲ

2. ಸುಗ್ರೀವ ವಾಸ ಮಾಡ್ತಿದ್ದ ಗುಹೆ ಇರೋದು ಇಲ್ಲೇ

ವಾನರರ ರಾಜ ಅನ್ನಿಸ್ಕೊಂಡಿದ್ದ ಸುಗ್ರೀವ ಈ ಗುಹೆನೆಲ್ಲೇ ವಾಸ ಮಾಡ್ತಾ ಇದ್ದ ಅಂತ ಈಗ್ಲೂ ಜನ ನಂಬ್ತಾರೆ. ಅಷ್ಟೇ ಅಲ್ಲ ಇದೇ ಜಾಗದಲ್ಲೇ ರಾವಣ ಸೀತೆನ ಅಪಹರಿಸ್ಕೊಂಡು ಹೋಗೋವಾಗ ಆಕೆ ತನ್ನ ಎಲ್ಲಾ ಆಭರಣಗಳನ್ನೂ ಬಿಸಾಕಿ ತನ್ನ ಅಪಹರಣದ ವಿಶ್ಯ ತಿಳಿಯೋಕೆ ಸಹಾಯ ಮಾಡಿದ್ಲಂತೆ. ಇಲ್ಲೇ ಒಂದು ಕಲ್ಲಿನ ಮೇಲಿರೋ ಡಿಸೈನ್ ನೋಡಿ ಜನ ಈಗ್ಲೂ ಇದೆ ಸೀತೆಯ ಸೀರೆ ಅಂತಂದ್ಕೊಂಡಿದಾರೆ.  

ಮೂಲ

3. ಯುನೆಸ್ಕೋ ಪ್ರಕಾರ ಹಂಪೆ ಅಳಿವಿನಂಚಿನಲ್ಲಿರೋ ಪ್ರಪಂಚದ ಪಾರಂಪರಿಕ ಪ್ರದೇಶಗಳಲ್ಲಿ ಒಂದು

ಬೇಜಾರಿನ ವಿಶ್ಯ ಏನಂದ್ರೆ ಒಂದು ಕಾಲದಲ್ಲಿ ವೈಭವಕ್ಕೆ ಎರಡನೇ ಹೆಸರಾಗಿದ್ದ ಹಂಪೆ ಈಗ ಹಾಳು ಬಿದ್ದ ಹಂಪೆ ಆಗಿದೆ. ಅಷ್ಟು ಮಾತ್ರ ಅಲ್ಲ ಈಗ ಈ ಹಾಳು ಬಿದ್ದಿರೋ ಹಂಪೆ ಯುನೆಸ್ಕೋದ ಕಣ್ಣಲ್ಲಿ " ಅಳಿವಿನಂಚಿನಲ್ಲಿರೋ ಪ್ರಪಂಚದ ಪಾರಂಪರಿಕ ಪ್ರದೇಶಗಳಲ್ಲಿ ಒಂದು" .ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಬೇಕಾ ಬೇಡ್ವಾ ಅನ್ನೋ ವಿವಾದದ ಮಧ್ಯೆ, ಈ ಪ್ರದೇಶ ಅಳಿವಿನಂಚಲ್ಲಿದೆ ಅಂತ 1999 ರಲ್ಲಿ ಯುನೆಸ್ಕೋ ಘೋಷಣೆ ಮಾಡಿದೆ.

ಮೂಲ

4. ಹಂಪೆ ಸುಮಾರು 600 ವರ್ಷಗಳಷ್ಟು ಹಳೇದು

ಹಂಪೆನಲ್ಲಿರೋ ಪೈಂಟಿಗ್ಸು ಏಷ್ಟು ಹಳೇದು ಅಂದ್ರೆ ಬಹುಶಃ ನಮ್ಮ ತಾತನೋರ ತಾತ ಕೂಡ ಇನ್ನೂ ಹುಟ್ಟಿರಲಿಲ್ಲ ಆಗ ಬರೆದಿರೋದು ಅನ್ಸುತ್ತೆ. ಆದ್ರೆ ಈ ಪೈಂಟಿಂಗ್ಸನ್ನ ನಾವೀಗ್ಲೂ ನೋಡ್ಬಹುದು.

ಮೂಲ

5. ಹಂಪೆ ನೋಡೋಕೆ ಮೈ ಕೈ ಗಟ್ಟಿಯಾಗಿರ್ಬೇಕು, ಯಾಕಂದ್ರೆ ಸಿಕ್ಕಾಪಟ್ಟೆ ದೊಡ್ಡದು

ಒಟ್ಟು 24 ಚದರ ಕಿಲೋಮೀಟರ್ ಇದೆ.

ಮೂಲ

6. ವಿಜಯನಗರದ ಮುಖ್ಯವಾದ ಟಂಕಸಾಲೆ ಇದ್ದದ್ದು ಹಂಪಿನಲ್ಲೇ

ವಿಜಯನಗರ ಕಾಲದಲ್ಲಿ ಚಿನ್ನ,  ಬೆಳ್ಳಿ ಮತ್ತೆ ತಾಮ್ರದ ನಾಣ್ಯಗಳ ಮೇಲೆ ದೇವರ ಚಿತ್ರ, ಪ್ರಾಣಿ ಪಕ್ಷಿಗಳ ಚಿತ್ರವನ್ನ ಮುದ್ರಿಸಿ ಉಪಯೋಗಿಸ್ತಾ ಇದ್ರು. ನಾವೂ ಈಗಲೂ ಆ ವೈಭವಾನ ಗೋಡೆಗಳಲ್ಲಿ ನೋಡಬಹುದು. 

ಮೂಲ

7. ಹಂಪೆಯಲ್ಲಿ ಮೊಟ್ಟಮೊದಲಿಗೆ ಜನರು ಇದ್ದ ದಾಖಲೆಗಳು ಕ್ರಿ.ಶ. 1 ನೇ ಶತಮಾನದಲ್ಲಿ

ಅಂದ್ರೆ ನಮ್ ಹೆಮ್ಮೆಯ ಹಂಪೆ ಅದೆಷ್ಟು ಪುರಾತನವಾದದ್ದೋ ಯೋಚ್ಸಿ.

ಮೂಲ

8. ಹಿಂದೂ ಧರ್ಮದ ಅಪಾರ ಹಿರಿಮೆ ಮತ್ತು ವೈಭವಗಳ್ನ ಹಂಪೇಲಿ ನೋಡ್ಬೋದು

ಅದು ಹೇಗೆ ಅಂತೀರ? ಹಂಪೆನಲ್ಲಿರೋ ಹಜ಼ಾರ್ ರಾಮ ದೇವಸ್ಥಾನ ಮಂದಿರ ಇದು ಹಿಂದೂ ಪುರಾಣದ ಬಗ್ಗೆ ಸಾಕಷ್ಟು ವಿಷ್ಯ ತಿಳಿಸಿ ಕೊಡುತ್ತೆ. ಸಾವಿರಾರು ಕೆತ್ತನೆಗಳು, ಬರಹಗಳೂ, ಚಿತ್ರ ಚಿತ್ತಾರಗಳೂ ರಾಮಾಯಣದ ಕತೆಯನ್ನ ಸಾರಿ ಸಾರಿ ಹೇಳ್ತಾ ಇವೆ.

ಮೂಲ

9. ಇನ್ನೂ ಪೂಜೆ ನಡೀತಿರೋ ಕೆಲವೇ ಹಳೇ ದೇವಸ್ಥಾನಗಳಲ್ಲಿ ಹಂಪೆ ದೇವಸ್ಥಾನ ಕೂಡ ಒಂದು (ಇಡೀ ಭಾರತದಲ್ಲಿ)

ವಿರೂಪಾಕ್ಷ ದೇವಸ್ಥಾನ ಅಥವಾ ಪಂಪಾಪತಿ ದೇವಸ್ಥಾನ ಅಂತ ಕರೆಯೋ ಈ ದೇವಸ್ಥಾನದ ಎತ್ತರ 120 ಅಡಿ. ಶಿವನ ವಿಗ್ರಹದ ಜೊತೇನೇ ಭುವನೇಶ್ವರಿ ಮತ್ತೆ ಪಂಪನ ವಿಗ್ರಹಗಳೂ ಈ ದೇವಸ್ಥಾನದಲ್ಲಿದೆ.ವಿರೂಪಾಕ್ಷ ಅಂದ್ರೆ ಮೂರು ಕಣ್ಣಿರೋ ಶಿವ ಅಂತ ಅರ್ಥ. ಈ ದೇವಸ್ಥಾನದಲ್ಲಿ ೭ನೇ ಶತಮಾನದಿಂದ್ಲೇ ಪೂಜೆ ಆಚರಣೆ ಎಲ್ಲಾ ನಡೀತಾ ಬಂದಿದೆ. 

ಮೂಲ

10  ಹಂಪೆ ಸುತ್ತಮುತ್ತ ತುಂಬಾ ಸೊಗಸಾಗಿರೋ ಸ್ಥಳಗಳೂ ಕೂಡ ನೋಡೋಕೆ ಸಿಗುತ್ತೆ.

ಮೂರು ತಲೆ ಇರೋ ನಂದಿ ಹಾಗೆ ನೋಡಲೇಬೇಕಗಿರೋವಂತಾ ಜಾಗಗಳಲ್ಲಿ ಒಂದು.

ಮೂಲ

11. ವಿರೂಪಾಕ್ಷ ದೇವಸ್ಥಾನದ ಮುಂದಿರೋ ಆನೆಗೆ ದುಡ್ಡು ಕೊಟ್ರೆ ಆಶೀರ್ವಾದ ಮಾಡುತ್ತೆ :-)

ಎಲ್ಲಾ ದೇವಸ್ಥಾನಗಳಲ್ಲಿರೋ ಹಾಗೇ ಈ ವೀರೂಪಾಕ್ಷ ದೇವಸ್ಥಾನದಲ್ಲೂ ಆನೆ ಒಂದಿದೆ. ದೇವಸ್ಥಾನದ ಒಳಗೆ ಹೋಗ್ತಾ ಅದರ ಎರಡನೇ ಗೋಪುರದ ಹತ್ತಿರ ಹೋಗ್ತಿದ್ದಂಗೇ ನಿಮಗೊಂದು ಆನೆ ಕಾಣುತ್ತೆ. ಆ ಆನೆ ನೀವು ಕೊಡೋ 1 ರೂಪಾಯನ್ನ ಟಪಕ್ಕಂತ ಸೊಂಡ್ಲಲ್ಲಿ ಎತ್ಕೊಂಡು ನಿಮಗೆ ಆಶೀರ್ವಾದನೂ ಮಾಡತ್ತೆ. ಕಾಸು ಕೊಡದೆ ಇದ್ರೆ ಆಶೀರ್ವಾದ ಕಟ್. ಅದಕ್ಕೆ ಈ ಆನೇನ ತುಂಟ ಅಂದಿದ್ದು.

ಮೂಲ

12. ಅಲ್ಲೊಂದು ಕಡೆ ಗೋಪುರದ ನೆರಳು ತಲೆಕೆಳಗಾಗಿ ಕಾಣುತ್ತೆ!

ಹಂಪೆ ಒಂಥರಾ ವಿಜ್ಞಾನ ಮತ್ತೆ ಪ್ರಕೃತಿ ಎರಡರ ಮಿಶ್ರಣ ಅನ್ನಬಹುದು. ದೇವಸ್ಥಾನದ ಹಿಂದೆ ಇರೋ ಒಂದಷ್ಟು ಮೆಟ್ಟಿಲು ಹತ್ತಿ ಹೋದ್ರೆ ಹಿಂದಿನ ಬಾಗಿಲನ್ನ ತಲುಪೋ ಮೊದ್ಲೇ ನಿಮ್ಮ ಬಲಭಾಗಕ್ಕೊಂದು ಕತ್ತಲೆ ಕೋಣೆ ಕಾಣ್ಸುತ್ತೆ. ಆ ಕತ್ಲೆ ರೂಮ್ನಲ್ಲಿರೋ ಒಂದು ಗೋಡೆನಲ್ಲಿ ಒಂದು ಸೀಳಿಕೆ ಇದೆ. ಆ ಸೀಳು ಗೋಡೆಯಿಂದ ರೂಮೊಳಗೆ ಬೀಳೋ ಸೂರ್ಯನ ಕಿರಣಗಳು ಎದುರ್ಗಡೆ ಇರೋ ಗೋಡೆ ಮೇಲೆ ಬೀಳುತ್ತೆ. ಆದ್ರೆ ಅಲ್ಲಿ ಬೀಳೋ ಗೋಪುರದ ನೆರಳು ಮಾತ್ರ ತಲೆಕೆಳಗಾಗಿರುತ್ತೆ. ತುಂಬಾ ಜನ ತುಂಬ್ಕೊಂಡು ನುಗ್ಗಾಟ ಇಲ್ದೇ ಇದ್ರೆ ಈ ನೆರಳಿನ ವಿಚಿತ್ರಾನ ಕಣ್ತುಂಬಾ ನೋಡ್ಬೋದು. 

ಮೂಲ

13. ಇತಿಹಾಸ, ಪುರಾಣ ಎಲ್ಲವೂ ಇದೆ ಹಂಪೇಲಿ

ಹೇಮ ಕೂಟ ಅಂತ ಒಂದು ಪರ್ವತ ಇದೆ ಇಲ್ಲಿ. ಅದ್ರ ಜೊತೇನೇ ಒಂದು ಪುರಾಣದ ಕತೆ ಕೂಡ ಇದೆ. ಅದೇನಪ್ಪಾ ಅಂದ್ರೆ, ಶಿವ ಕಾಮನನ್ನ ತನ್ನ ಮೂರ್ನೇಕಣ್ಣಿಂದ ಸುಟ್ಟು ಭಸ್ಮ ಮಾಡಿದ್ದು ಇಲ್ಲೇ ಅಂತ. ಅದೇ ಕಾರಣಕ್ಕೆ ಇಲ್ಲಿ ವಿರೂಪಕ್ಷ ಅನ್ನೋ ಹೆಸ್ರಲ್ಲಿ ಶಿವನನ್ನ ಕರ್ಯೋದು. ಅಷ್ಟೇ ಅಲ್ಲ ಇಲ್ಲಿರೋ ಸುಮಾರು ಎಲ್ಲಾ ದೇವಸ್ಥಾನದಲ್ಲೂ ಇರೋದು ಶಿವಲಿಂಗನೇ.

ಮೂಲ

14. ಗಣೇಶನ ಹೆಸರು ಮಾತ್ರ ಸಾಸಿವೆ ಕಾಳು, ಆದರೆ ಇರೋದು 8 ಅಡಿ!

ಹೊಟ್ಟೆಗೆ ಹಾವ್ ಸುತ್ಕೊಂಡು ಒಂದ್ಕಯ್ಯಲಿ ಮೋದ್ಕ, ಇನ್ನೊಂದ್ಕಯ್ಯಲ್ಲಿ ದಂತ, ಮತ್ತೊಂದ್ಕಯ್ಯಲ್ಲಿ ಪಾಶ, ಇನ್ನೊಂದು ಅಭಯ ಹಸ್ತ ಇಟ್ಕೊಂಡಿರೋ ಗಣೇಶ ಇರೋದು ಬರೋಬ್ಬರಿ 8 ಅಡಿ. ಆದ್ರೆ ಹೆಸ್ರು ಮಾತ್ರ ಅದ್ಯಾಕೋ ಸಾಸಿವೆಕಾಳು ಗಣೇಶ ಅಂತ. ಈ ಗಣೇಶ ಸ್ವಲ್ಪ ಭಿನ್ನ ಆಗಿದ್ರೂ ನೋಡೋಕೆ ತುಂಬಾ ಚೆಂದ ಇದಾನೆ.

ಮೂಲ

15. ತೆಪ್ಪದಲ್ಲಿ ನದಿ ದಾಟೋ ಮಜಾನೇ ಮಜಾ

ನದಿ ದಾಟೋದಿಕ್ಕೆ ತೆಪ್ಪ ಉಪಯೋಗ್ಸೋದು ನಿಮ್ಗೆಲ್ಲಾ ಗೊತ್ತೇ ಇರುತ್ತೆ. ಬುಟ್ಟಿ ತರ ಇಓ ಈ  ತೆಪ್ಪದಲ್ಲಿ ಸುಮಾರು 6-8 ಜನ ಒಟ್ಟಿಗೆ ಕೂತ್ಕೊಂಡು ನದಿ ದಾಟ್ಬೋದು.  ಇದೆಲ್ಲಿದ್ಯಪ್ಪಾ ಹಂಪೇಲಿ ಅಂದ್ಕೊಂಡ್ರಾ. ವಿರೂಪಾಕ್ಷ ದೇವಸ್ಥಾನ, ಕೋದಂಡರಾಮನ ದೇವಸ್ಥಾನ ಮತ್ತೆ ವಿಠ್ಠಲನ ದೇವಸ್ಥಾನದ ಹತ್ರ.

ಮೂಲ

16. ಗೂಗಲ್ಲಲ್ಲಿ ಜನ ಜಾಸ್ತಿ ಹುಡುಕೋ ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಹಂಪೇನೇ ಮೊದಲನೇದು

2014 ರ ಸರ್ವೇ ಪ್ರಕಾರ ಕರ್ನಾಟಕದಲ್ಲಿರೋ ಪ್ರಸಿದ್ದ ಐತಿಹಾಸಿಕ ಸ್ಥಳ ಅಂತ ಸರ್ಚ್ ಆಗಿರೋ ಜಾಗ ಅಂದ್ರೆ ಹಂಪೆ. ಹಾಗಾದ್ರೆ ಈ ಊರು ಅದೆಷ್ಟು ಫ಼ೇಮಸ್ಸೋ ನೀವೇ ಲೆಕ್ಕ ಹಾಕಿ.

ಮೂಲ

17. ಕಮಲ ಮಹಲ್ / ಲೋಟಸ್ ಮಹಲ್ ಕೇಳಿದೀರಾ? ಇದು ಆ ಕಾಲದ ಶ್ರೀಮಂತ ಹೆಂಗಸರ ಅರಮನೆ

ಇದು ಆಗಿನ ಕಾಲದ ಶ್ರೀಮಂತ ಕುಟುಂಬ ಅತ್ವಾ ರಾಜರ ಕುಟುಂಬದ ಹೆಂಗಸರಿಗೋಸ್ಕರ ಕಟ್ಟಲಾಗಿದ್ದ ಕಟ್ಟಡ. ಸಿಕಾಪಟ್ಟೆ ಸೂಪರ್ರಾಗಿದೆ.

ಮೂಲ

18. ಕೃಷ್ಣದೇವರಾಯನ ಕಾಲದಲ್ಲಿ ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ್ನ ತಕ್ಕಡಿಯಲ್ಲಿ ಹಾಕಿ ತೂಗ್ತಿದ್ರಲ್ಲ, ಆ ಮಾರುಕಟ್ಟೆ ಬೀದಿ ಈಗಲೂ ನೋಡಕ್ಕೆ ಸಿಗುತ್ತೆ

1 ಕಿ.ಮೀ. ಗೂ ಜಾಸ್ತಿ ಜಾಗದಲ್ಲಿ ಈ ಮಾರ್ಕೆಟ್ ಇದೆ. ಆ ಕಾಲದಲ್ಲಿ ಹೇಗೆಲ್ಲಾ ಮಾರ್ಕೆಟ್ ಇತ್ತು ಅನ್ನೋದು ನೋಡ್ಲೇಬೇಕು. ಈಗ್ಲೂ ವ್ಯಾಪರ ನಡೆಯುತ್ತೆ, ಆದ್ರೆ  ಯಾವ ಗದ್ಲ ಗಲಾಟೆ ಇಲ್ಲದಿರೋವಾಗ ಓಡಾಡೋದ್ರ ಮಜಾನೇ ಬೇರೆ.

 

ಮೂಲ

19. ಸಂಗೀತದ ಸ್ವರಗಳು ಬರೋ ಕಂಬಗಳು ಬೇರೆ ಎಲ್ಲೂ ನೋಡೋಕೆ ಸಿಗೋದಿಲ್ಲ

ವಿಠ್ಠಲನ ದೇವಸ್ಥಾನದಲ್ಲಿ 56 ಸಂಗೀತದ ಕಂಬಗಳಿವೆ. ಈ ಕಂಬಗಳನ್ನ ಅದ್ ಹೇಗೆ ಮಾಡಿದಾರೋ ಗೊತ್ತಿಲ್ಲ ಆದ್ರೆ ಇದರ ಮೇಲೆ ಕೈಯ್ಯಿಂದ ತಟ್ಟಿದ್ರೆ ತಬಲದ ಹಾಗೇ ಇವೂ ಕೂಡ ಸುಮಧುರವಾಗಿ ಸಂಗೀತ ಹೊಮ್ಮಿಸುತ್ತೆ.

ಮೂಲ

20. ಮಾಲ್ಯಂತ ಬೆಟ್ಟದಲ್ಲಿ ಲಕ್ಷ್ಮಣ ಬಾಣ ಹೊಡೆದು ಮಾಡಿರೋ ಒಂದು ಗುಹೆ ಇದೆ

ರಾಮ ಲಕ್ಷ್ಮಣ ಇಬ್ರೂ ಸೀತೆ ಹುಡುಕ್ಕೊಂಡು ಈ ಬೆಟ್ಟಕ್ಕೆ ಬಂದ್ರಂತೆ. ಆಗ ಜೋರ್ ಮಳೆ ಶುರು ಆಗೋಯ್ತಂತೆ. ನಿಲ್ಲೋಕೆ ಜಾಗನೇ ಇಲ್ದೇ ಲಕ್ಷ್ಮಣ ತನ್ನ ಬಾಣದಿಂದ ಒಂದು ಗುಹೆ ನಿರ್ಮಾಣ ಮಾಡಿದ್ನಂತೆ. ರಾಮನಿಗೇ ಮೀಸಲಾಗಿರೋ ಇಲ್ಲಿನ ದೇವಸ್ಥಾನದಲ್ಲಿ ಈ ಕತೆಯ ಕೆತ್ತನೆ ಮಾಡಿಟ್ಟಿದಾರೆ. ಈಗ್ಲೂ ಆ ಗುಹೆ ಹಾಗೇ ಇದೆ.

ಮೂಲ

ಕಣ್ಣಾರೆ ನೋಡ್ಬೇಕು ಅನ್ನಿಸ್ತಿಲ್ವಾ? ಹೋಗಿ ಬನ್ನಿ ಮತ್ತೆ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: