ಈ 9 ಗುಣಗಳಿರೋ ಹುಡುಗ್ರು ಸಿಕ್ರೆ ಹುಡುಗೀರು ಕಣ್ ಮುಚ್ಕೊಂಡ್ ಮಾಡ್ಕೋಬೋದು

ಈ ಥರದ ಹುಡುಗ್ರು ಕೈ ಕೊಡಲ್ಲ

21ನೇ ಶತಮಾನದಲ್ಲಿ ಪ್ರೀತಿಸಿ ಮದ್ವೆ ಆದೋರು ಮತ್ತೆ ಆಗ್ತಿರೋರು ಜಾಸ್ತಿ ಇದಾರೆ. ನೀವ್ ಹುಡುಕುತ್ತಿರೋ ಹುಡುಗಂಗೆ ನಾವು ಕೆಳಗೆ ಕೊಟ್ಟಿರೋ 9 ಗುಣಗಳಿದ್ರೆ ಸಾಕು, ಕಣ್ಮುಚ್ಕೊಂಡು ಮಾಡ್ಕೊಳ್ಳಿ...

1) ನೀವ್ ಹೇಳೋದನ್ನ ತಾಳ್ಮೆಯಿಂದ ಕೇಳ್ಸ್ಕೊಂಡು ನ್ಯಾಯವಾಗಿ ಮಾತಾಡೋನು

ಎಲ್ರೂ ಮಾತಾಡ್ತಾರೆ. ಬೇಕಾದಾಗ ಕೂಕೊತಾರೆ. ತಮ್ಮ ಭಾವನೆಗಳನ್ನ ಹೇಳ್ಕೊತಾರೆ. ಆದ್ರೆ ಅಪರೂಪಕ್ಕೆ ಸ್ವಲ್ಪ ಜನ ಮಾತ್ರ ಇನ್ನೊಬ್ರು ಹೇಳಿದ ಮಾತನ್ನ ಕಿವಿಗೊಟ್ಟು ಆಲಿಸ್ತಾರೆ. ಅಂಥಾ ಹುಡುಗ ಏನಾದ್ರೂ ಸಿಕ್ಕರೆ ಬಿಡ್ಬೇಡಿ. ನಿನಗೆ ಕಷ್ಟ ಅದಾಗ ಅವನ ಜೊತೆ ಮಾತಾಡಿದ್ರೆ ಮನಸ್ಸಿನ ಭಾರ ಇಳಿಯತ್ತೆ. ವಿಶ್ವಾಸ ಹೆಚ್ಚತ್ತೆ.

2) ನಿಮ್ ಕನಸನ್ನ ನನಸು ಮಾಡ್ಕೊಳಕ್ಕೆ ಸಾಥ್ ಕೊಡೋನು

ಈಗ ಕಾಲ ಬದ್ಲಾಗಿದೆ. ಹುಡುಗೀರ್ ಕೂಡ ಎಷ್ಟೋ ಕನಸುಗಳನ್ನ ಹೊತ್ಕೊಂಡು ಓದಿ ಬರ್ದು ಮಾಡಿರ್ತಾರೆ. ಮಧ್ಯಮ ವರ್ಗ ಮತ್ತೆ ಕೆಳ ವರ್ಗದೋರ್ಗಂತೂ ಓದಿ ಬರ್ದು ಕೆಲ್ಸಕ್ಕೆ ಸೇರ್ಬೇಕು ಅಂತ ಆಸೆ ಇಟ್ಕೊಂಡಿರ್ತಾರೆ. ಈ ಆಸೆಗೆ ಸಹಾಯ ಮಾಡೊ ಹುಡುಗ್ರು ಸಿಕ್ಕ್ರೆ ಬಿಡೋದು ಬೇಡ.

3) ಅವನು ಏನಾದ್ರು ಸಾಧಿಸಿದಾಗ ನಿಮ್ನ ಶಾಮೀಲ್ ಮಾಡ್ಕೊಳೋನು

ನಿಮ್ ಸಕ್ಸೆಸ್ಗೆ ಖುಷಿ ಪಡೋದಲ್ಲದೆ ಅವನ್ನ ಸಕ್ಸೆಸ್ಸಿಗೆ ನಿಮ್ಮದು ಕೂಡ ಒಂದು ಕೊಡುಗೆ ಇದೆ ಅಂತ ತುಂಬು ಮನಸ್ಸಿಂದ ಹೇಳೋ ಹುಡ್ಗ ನಿಜವಾಗ್ಲೂ ಒಳ್ಳೇಯೋನೆ. ನಿಮ್ಗೂ ಅವನ ಜೊತೆ ಬಾಳ್ವೆ ಮಾಡಕ್ಕೆ ಇಷ್ಟ ಆಗತ್ತೆ.

4) ಬೇರೇಯೋರ ಜೊತೆ ಒಳ್ಳೆ ರೀತೀಲಿ ನಡ್ಕೋಳೋನು

ಮಕ್ಕಳು ಜೊತೆ ಮತ್ತೆ ವಯಸ್ಸಾದೋರ್ ಜೊತೆ ಆ ಹುಡ್ಗ ನಡ್ಕೊಳ್ಳೊ ರೀತಿಯಿಂದ ಅವನ ನಿಜವಾದ ವ್ಯಕ್ತಿತ್ವ ಎಂಥದ್ದು ಅಂಥ ಕಂಡುಹಿಡಿಬೋದು. ಎಲ್ಲರನ್ನೂ ಸಮಭಾವನೆಯಿಂದ ನೋಡೊನು ಸಿಕ್ಕರೆ ಖಂಡಿತ ಹಿಡ್ಕೊಳ್ಳಿ. 

5) ನಿಮ್ ಮನಸ್ಸಿಲ್ಲಿರೋದನ್ನ ಅವನ್ ಜೊತೆ ಹಂಚಿಕೊಳ್ಳಕ್ಕೆ ಸದರ ಮಾಡ್ಕೋಡೋನು

ಅವನ ಜೊತೆ ನೀವ್ ಬರೀ ಮಾತಾಡೊದಲ್ಲ, ನಿಮ್ ಮನಸ್ಸಿನ ಅಂತರಾಳನ ಯಾವುದೆ ಆತಂಕ ಇಲ್ಲದೆ ಹಂಚ್ಕೊಬೋದು. ಸಮಯ ಸಂದರ್ಭ ನೋಡಿ ನಿಮ್ಗೆ ಒಳ್ಳೆ ಸಲಹೆ ಕೊಡೋನಾದ್ರೆ ನಿಮ್ಗೆ ಉಪಯೋಗ. ಜೀವನಾ ಪೂರ್ತಿ ಸುಖವಾಗಿ ಇರ್ತೀರಿ.

6) ಎಷ್ಟೇ ಜಗಳ ಆಡಿದ್ರೂ ಸ್ವಲ್ಪ ಹೊತ್ತಲ್ಲೇ ಸರಿಹೋಗೋನು

ಯಾವ್ದೇ ಸಂಬಂಧ ತೊಗೊಳ್ಳಿ, ಸ್ವಲ್ಪ ಜಗಳ, ಕೋಪ-ತಾಪ, ಭಿನ್ನಾಭಿಪ್ರಾಯ ಇದ್ದೇ ಇರತ್ತೆ ಅಲ್ವಾ? ಹಾಗೆ ನೀವ್ ಎನಾದ್ರೂ ಅವನ ಜೊತೆ ಜಗಳ ಮಾತುಕಥೆ ಆದ್ರೆ, ನೀವು ಅದೆಷ್ಟ್ ಬೇಗ ಅವನ್ ಜೊತೆ ಮತ್ತೆ ಮಾತಾಡಕ್ಕೆ ಹವಣಿಸುತ್ತೀರಿ ಅನ್ನೋದ್ರ ಮೇಲೆ ನಿಮ್ಗೆ ಅವನ ಮೇಲೆ ಎಷ್ಟ್ ಪ್ರೀತಿ ಇದೆ ಅಂತ ಗೊತ್ತಾಗತ್ತೆ. ಅವನಿಗೂ ಅಷ್ಟೆ ಎಷ್ಟ್ ಬೇಗ ವಾಪಸ್ ನಿಮ್ ಜೊತೆ ಮಾತಾಡಕ್ಕೆ ಶುರು ಮಾಡ್ತಾನೆ ಅನ್ನೋದ್ರಲ್ಲೇ ನಿಮ್ ಮೇಲೆ ಎಷ್ಟ್ ಪ್ರೀತಿ ಇದೆ ಅಂತ ಗೊತ್ತಾಗತ್ತೆ!

7) ನಿರ್ಧಾರ ತೊಗೋವಾಗ ನಿಮ್ನ ಕೇಳೋನು

ಅವನು ಸಣ್ಣ ಪುಟ್ಟ ವಿಷ್ಯ ಅಥವಾ ದೊಡ್ಡ ವಿಷ್ಯದಲ್ಲಿ ನಿರ್ಧಾರ ತೊಗೊಬೇಕಾದ್ರೆ ನಿಮ್ ಜೊತೆ ಚರ್ಚೆ ಮಾಡ್ತಾನೆ. ನಿಮ್ಮ ಭಾವನೆಗೆ, ಅಭಿಪ್ರಾಯಕ್ಕೆ ತಕ್ಕ ಬೆಲೆ ಕೊಡ್ತಾನೆ. ಅವನಲ್ಲಿ ಈ ಗುಣ ಭಾಳ ಮುಖ್ಯ. ಇದ್ರಿಂದ ನಿಮ್ಮಿಬ್ಬರ ನಡುವೆ ಅನ್ಯೋನ್ಯತೆ ಬೆಳೆಯತ್ತೆ. 

8) ನೀವ್ ಹೇಗಿದ್ದಿರೋ ಹಾಗೇನೇ ಪ್ರೀತ್ಸೋನು

ನೋಡಕ್ಕೆ ನೀವು ಅಂಥಾ ಏನ್ ಚೆನಾಗಿ ಕಾಣಿಸಲ್ಲ ಅಂದ್ರೂ ನಿಮ್ನ ಇಷ್ಟಪಡೋನು. ನಿಮ್ ಮೂಡ್ ಸರಿ ಇಲ್ಲದೆ ಅವನ ಜೊತೆ ಜಗಳ ಆಡಿದ್ರೂ ಸಿಕ್ಕಾಪಟ್ಟೆ ಬೈದಿದ್ರೂ ನಿಮ್ನ ಇಷ್ಟಪಡೋನು. ನಿಮ್ಮಲ್ಲಿರೋ ಕೆಲ ಕೆಟ್ಟ ವರ್ತನೆ ಅವನು ನೋಡಿದ್ರೂ ನೀವು ಹೇಗೋ ಹಾಗೇನೇ ಇಷ್ಟಪಡೋನಾದ್ರೆ ಅವನೇ ನಿಮ್ಗೆ ಸರ್ಯಾದ ಜೋಡಿ.

9) ನೀವ್ ಹೇಗೆ ನಂಬ್ತಿರೋ ಹಾಗೆ ಅವನು ನಂಬೋನು

ಪರಸ್ಪರ ನಂಬಿಕೆ ಇದ್ರೆ ಮಾತ್ರ ಜೀವನದಲ್ಲಿ ಸುಖ ಇರೋದು. ಎಲ್ಲಾ ಇದ್ದು ಅವನೇನೇ ಮಾಡಿದ್ರೂ ನೀವ್ ಒಳಗೊಳಗೆ ಸಿಐಡಿ ತರ ಜಾಲಾಡೋದು, ನೀವ್ ಏನೇ ಮಾಡಿದ್ರೂ ಅವ ಸಂದೇಹ ಪಡೋದಾದ್ರೆ ಜೀವನ ನರಕ ಆಗಬಿಡತ್ತೆ. 

ಯಾರೂ 100% ಪರ್ಫೆಕ್ಟ್ ಅಲ್ಲ, ಒಬ್ಬರಿಗೊಬ್ಬರು ಹೊಂದಿಕೊಂಡು ಹೋದ್ರೆ ಅದೇ ಸುಖ ಸಂಸಾರ ಆಗತ್ತೆ.

ಇಂಥಾ ಹುಡುಗ ಸಿಕ್ಕ್ರೆ ತಕ್ಷಣ ಮನೆಯೋರಿಗೆ, ತಂದೆ ತಾಯಿಗೆ ತಿಳಿಸಿ ಅದೇನ್ ಬೇಕೋ ಮಾಡಿ ಮದ್ವೆ ಆಗ್ಬಿಡಿ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಮೆಚ್ಚಿನ ಅಂತೆಕಂತೆ ಈಗ YouTube ನಲ್ಲಿ

ಈ ಬಟನ್ ಒತ್ತಿ subscribe ಮಾಡಿಕೊಳ್ಳಿ:
 

ಅವಳು ನಿನ್ನವಳೇ ಆಗಿದ್ದರೆ ಈಗಾಗಲೇ ಈ 23 ಗುರುತುಗಳಲ್ಲಿ ಕೆಲವಾದರೂ‌ ಕಂಡಿರಬೇಕು

ಕಂಡಿದ್ದರೆ ನಿನ್ನ ಜೀವನಸಂಗಾತಿ ಅವಳೇ

ಜೀವನದಲ್ಲಿ ಇಂತ ಅದ್ಭುತ ನಡಿಯೋದು ಒಂದೇ ಒಂದು ಸತಿ. ನಿಮ್ಮ ಜೀವನಕ್ಕೆ ಬೆಳಕ್ ತರ ಬಂದು, ನಿಮ್ಮ ಸುಖ ದುಃಖದಲ್ಲೆಲ್ಲ ಜೊತೆಗಿದ್ದು, ಇವಳೇ ನಿಮ್ಮ ಸಂಗಾತಿ ಇರ್ಬೋದೆನೋ ಅಂತ ಅನ್ನಿಸ್ತಿದ್ರೆ, ಅವ್ಳಲ್ಲಿ ಈ ಕೆಳ್ಗಿರೊ ಗುಣಗಳಿದ್ರೆ ಡೌಟೇ ಬೇಡ ಅವ್ಳು ನಿಮ್ ಹುಡ್ಗಿ...

1. ಅವಳು ನಿಮ್ಮ್ ಜೊತೆ ಇದ್ದಾಗ ನಿಮಗೆ ಏನೋ ಒಂದು ಪ್ರೇರಣೆ, ನಿನ್ನೆಗಿಂತ ನನ್ನ ಜೀವನ ಇನ್ನು ಚೆನಾಗ್ ಆಗ್ಬೇಕು, ಕಷ್ಟ ಪಟ್ಟು ಜೀವನದಲ್ಲಿ ಇನ್ನು ಮೇಲೇರಬೇಕು ಅಂತ ಅನ್ನಿಸತ್ತೆ.

2. ಏಯ್ ಗಟ್ಟಿ ಗಂಡಸು ಮಾರ್ರೆ ನಾನು, ಯಾವ್ ಸೆಂಟಿಮೆಂಟು ನನ್ನತ್ರ ನಡಿಯಲ್ಲ, ಕಲ್ಲು ಬಂಡೆ ಥರ ನಾನು ಅಂತಿದ್ದ ನಿಮ್ಮನ್ನ, ಈ ಹುಡುಗಿ ಹೋಗ್ತಾಹೋಗ್ತಾ ಕರ್ಗೋಗೊ ಹಾಗೆ ಮಾಡ್ಬಿಡ್ತಾಳೆ. ಅವ್ಳು ನಿಮ್ಮಲ್ಲಿ ಪ್ರೀತಿ, ವಾತ್ಸಲ್ಯ, ಸಂತೋಷ ಒಂತರ ಎಲ್ಲ ಭಾವನೆ ನಿಮ್ಮಲ್ಲಿ ಶುರು ಆಗೋ ಹಾಗೆ ಮಾಡಿರ್ತಾಳೆ. ಅವ್ಳಿಗೆ ನಿಮ್ ಕಣ್ಣಲ್ಲೂ ನೀರ್ ಹಾಕ್ಸೋ ತಾಕತ್ತಿರತ್ತೆ... ಇಂತ ಭಾವನೆಗಳು ನಿಮ್ಗೆ ಮುಂಚೆ ಅನುಭವಕ್ಕೆ ಬಂದಿರಲ್ಲ.

3. ಇದೊಂತರ ವಿಚಿತ್ರ. ಅವ್ಳ ಖುಷಿ ನಿಮಗೆ ಖುಷಿ ಕೊಡತ್ತೆ. ಅವಳ ಒಂದು ನಗು ಸಾಕು ನಿಮಗೆ ಸಿಕ್ಕಾಪಟ್ಟೆ ಖುಷಿಯಾಗಿರಕ್ಕೆ, ಅವ್ಳ ನಗು ಕಾರಣ ನಿಮ್ಗೆ ಬೇಕಿರಲ್ಲ, ಅವ್ಳ್ ನಕ್ರೆ ಸಾಕು.

4. ನಿಮ್ಮ ಎಲ್ಲ ಯೋಚನೆ, ನಿಮ್ಮ ಟೆನ್ಷನ್ನು ಎಲ್ಲ ದೂರ ಆಗಕ್ಕೆ ಅವಳ ಒಂದೇ ಒಂದು ನಗು ಸಾಕು. ಆ ಒಂದ್ ಕ್ಷಣ ಏನೋ ಒಂತರ ನೆಮ್ಮದಿ ಸಿಗೊಹಾಗ್ ಮಾಡತ್ತೆ.

ಮೂಲ

5. ಅವಳ ನಗು ನಿಮಗೆ ಖುಷಿ ತರತ್ತೆ ಅಂತ ಯಾವಾಗ್ಲೂ ಅವ್ಳು ನಿಮ್ಮತ್ರ ನಗ್ತನೇ ಇರ್ಬೇಕಿಲ್ಲ... ಅವ್ಳ್ ಜೊತೆ ಟೈಮ್ ಸ್ಪೆಂಡ್ ಮಾಡೊ ಭಾಗ್ಯ ನಿಮ್ಗೆ ಸಿಕ್ಕಿದ್ರೆ ಸಾಕಾಗಿರತ್ತೆ. ಅವ್ಳ್ ಜೊತೆ ಇರೋ ಅಷ್ಟೂ ಹೊತ್ತು ನಿಮ್ಗೆ ಮಧುರವಾದ ಕ್ಷಣ ಅನ್ನಿಸ್ತಿರತ್ತೆ.

6. ಎರಡು ದೇಹ ಒಂದೇ ಜೀವ ನಿಮ್ಮದು ಅನ್ನಿಸತ್ತೆ.

7. ಅವಳ ಎಲ್ಲ ಭಾವನೆ ನಿಮಗೆ ಆಕರ್ಷಕವಾಗಿರತ್ತೆ, ಅವಳ ಬಗ್ಗೆ ಪೂರ್ತಿ ತಿಳ್ಕೊಬೇಕು ಅಂತ ಅನ್ನಿಸತ್ತೆ ನಿಮಗೆ... ಅವ್ಳಲ್ಲಿರೊ ಒಳ್ಳೇದು, ಕೆಟ್ಟದ್ದು ಮತ್ತೆ ಸುಮಾರಾಗಿರೊ ವಿಚಾರ್ವೆಲ್ಲ ನಿಮ್ಗೆ ಓಕೆ ಆಗೋಗಿರತ್ತೆ... ಅವ್ಳನ್ನ ನೀವು ಆರಾಧಿಸಕ್ಕೆ ಶುರು ಮಾದ್ಬಿಟ್ಟಿರ್ತೀರ.

8. ಅವಳು ನಿಮ್ಮ ಕಡೆ ನಡ್ಕೊಂಡು ಬರ್ತಿದ್ರೆ ನಿಮ್ ಕಣ್ಣಿಗೆ ಬೇರೇನೂ ಕಾಣಲ್ಲ... ಎಲ್ಲ ಮಂಜ್ ಮಂಜು ಆಗೋಗತ್ತೆ... ಬರಿ ಅವಳೊಬ್ಬಳೇ... ನಿಮ್ಮ ಟೆನ್ಷನ್ನು, ನಿಮ್ಮ ಕೆಲಸಗಳೆಲ್ಲ ನೆನಪಾಗದೇ ಇಲ್ಲ, ಇಡೀ ಜೀವನ ಹೀಗೆ ಅವ್ಳನ್ನ ನೋಡ್ಕೊಂಡು ನೆಮ್ಮದಿಯಾಗಿದ್ಬಿಡ್ಬೇಕು ಅನ್ನಿಸತ್ತೆ.

ಮೂಲ

9. ಇವತ್ತಿನ ತಂಕ ಯಾರ್ ಹತ್ರನೂ ಹೇಳಿರದ ಗುಟ್ಟನ್ನ ಇವಳ ಹತ್ರ ಹೇಳ್ಕೊಬೇಕು ಅನ್ನಿಸತ್ತೆ. ನಿಮ್ಮ ಭಾವನೆಗಳ್ನೆಲ್ಲ ಅವ್ಳ್ ಹತ್ರ ಹಂಚ್ಕೊಬೇಕು ಅನ್ನಿಸತ್ತೆ. ನಿಮ್ಮೆಲ್ಲಾ ಗುಟ್ಟುಗಳ್ನ ಅವ್ಳು ಕಾಪಾಡ್ತಾಳೆ.

10. ನಿಮಗೆ ಗೊತ್ತಿಲ್ಲದ ಹಾಗೆ ಅವಳು ನಿಮ್ಮ ಪ್ರಪಂಚ ಆಗ್ಬಿಟ್ಟಿರ್ತಾಳೆ. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಮಾಡೋ ಪ್ರತಿಯೊಂದು ಯೋಚನೇಲು ಅವಳಿಗೆ ಜಾಗ ಕೊಟ್ಟಿರ್ತೀರ.

11. ಕನಸಲೂ ನೀನೆ ಮನಸಲೂ ನೀನೆ... ದಿನಾ ಕನಸಲ್ಲಿ ಅವಳೇ ಬರ್ತಾಳೆ. ನಿಮಗೆ ಅವಳ್ ಬಿಟ್ಟು ಬೇರೇನೂ ಬೇಕಿರಲ್ಲ.

12. ಯಾವತ್ತೂ ಅನುಭವಿಸದ ಅನ್ಯೋನ್ಯತೆ ನಿಮಗೆ ಅವ್ಳ ಬಗ್ಗೆ. ಅಪ್ಪಿ ತಪ್ಪಿ ಒಂದ್ಸತಿ ಅವ್ಳನ್ನ ಮುಟ್ಟಿದ್ರೆ ಮೈ ಜುಮ್ ಅನ್ನತ್ತೆ, ತಲೆ ನಿಲ್ಲದೇ ಇಲ್ಲ. ಅವ್ಳನ್ನ ನಿಮ್ಮ ತೋಳಲ್ಲಿ ತಬ್ಬಿ ಹಿಡ್ಕೊಬೇಕು ಅನ್ನಿಸತ್ತೆ, ಹೀಗೆ ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು ಅನ್ನಿಸ್ತಿರತ್ತೆ.

ಮೂಲ

13. ಬರಿ ಅದೇ ಅಂತಲ್ಲ, ಜಾಸ್ತಿ ಸುತ್ತಾಡ್ಬೇಕು ಅನ್ನೊಹಾಗೆ ಮಾಡ್ತಾಳೆ, ಬೇರೆ ಬೇರೆ ಹೋಟೆಲ್ಲಿಗೆ ಹೋಗಿ ಹೊಸ-ಹೊಸ ತಿಂಡಿ ಊಟ ಟ್ರೈ ಮಾಡ್ಬೇಕು ಅನ್ನಿಸೋ ಹಾಗೆ ಮಾಡ್ತಾಳೆ. ಪ್ರತಿ ಕ್ಷಣ ಜಗತ್ತು ಹೊಸದಾಗಿ ಕಾಣೋಹಾಗೆ ಮಾಡ್ತಾಳೆ. ನಿಮ್ಮ ಜೀವನ  ಇನ್ನು ಕುತೂಹಲಕಾರಿ ಆಗತ್ತೆ.

14. ನಿಮ್ಮ ಸ್ನೇಹಿತರಿಗೆ, ಮನೆಯವರಿಗೆಲ್ಲ ಅವಳನ್ನ ಪರಿಚಯ ಮಾಡ್ಸ್ ಬೇಕು ಅನ್ನಿಸತ್ತೆ. ಅವಳೆಷ್ಟು ಒಳ್ಳೇವ್ಳು ಅಂತ ನಿಮ್ಮ ಮನೆಯವರಿಗೆ ಖಂಡಿತ ಗೊತ್ತಾಗತ್ತೆ ಅಂತ ನಿಮಗನ್ನಿಸತ್ತೆ... ಅವ್ಳ ಗುಣ ಎಲ್ಲಾರ್ಗೂ ಹಿಡ್ಸೋ ಅಂತದ್ದು ಅಂತ ನಿಮ್ಗೆ ಎಷ್ಟರಮಟ್ಟಿಗೆ ಅನ್ನಿಸತ್ತೆ ಅಂದ್ರೆ ಕೆಲವೊಮ್ಮೆ ಇವಳನ್ನ ನನಗಿಂತ ಜಾಸ್ತಿ ನನ್ನ ಸ್ನೇಹಿತರೆ ಇಷ್ಟ ಪಡ್ತಿದಾರಲ್ಲಪ್ಪ ಅಂತ ಅನ್ನಿಸಿಬಿಡತ್ತೆ.

15. ನಿಮ್ಮ ಬಗ್ಗೆ ತುಂಬ ಕಾಳಜಿ ಮತ್ತೆ ಪ್ರೀತಿ ತೋರುಸ್ತಾಳೆ ಅವಳು, ಹೇಗೆ ಅಂತ ಹೇಳಕ್ಕಾಗಲ್ಲ. ದಿನ ನೀರ್ ಕುಡಿ ಅಂತ ಹೇಳೋದ್ರಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಒಂದು ಸುರ್ಪ್ರೈಸ್ ರೆಡಿ ಮಾಡೊತನ್ಕ ಎಲ್ಲ ಮಾಡಿರ್ತಾಳೆ... ನಿಮ್ಮನ್ನ ಯಾವಾಗ್ಲೂ ಖುಷಿಯಾಗಿ ನೋಡ್ಬೇಕು ಅನ್ನೋದು ಅವಳ ಆಸೆ ಆಗಿರತ್ತೆ.

16. ಅವ್ಳಿಗೆ ನಿಮ್ಮ ನಿಜವಾದ ಮುಖ ನೀವ್ ತೋರಿಸ್ತೀರ. ನಿಮಗೆ ಮೆಚ್ಚಿಸಕ್ಕೆ ನಾಟಕ ಆಡ್ಬೇಕು ಅಂತ ಅನ್ಸಲ್ಲ. ನೀವಾಗಿ ಅವಳೊಂದಿಗೆ ಆರಾಮಾಗಿ ಇರಬಹುದು. ನಿಮ್ಮ ಎಲ್ಲ ತುಂಟತನ ಮತ್ತೆ ತರ್ಲೆಗಳು ಅವ್ಳು ನಿಮ್ಮನ್ನ ಹೆಚ್ಚೆಚ್ಚು ಪ್ರೀತ್ಸೋ ಹಾಗೆ ಮಾಡತ್ತೆ. ಅವಳ ಜೊತೆ ನಿಮಗೆ ಯಾವ್ದೇ ಹಿಂಜರಿಕೆ ಇರಲ್ಲ.

ಮೂಲ

17. ಅವಳು ಸ್ವಂತಂತ್ರವಾಗಿ ತನ್ನ ಕೆಲಸ ತಾನು ಮಾಡ್ಕೊಂಡು ಇರೋಂತ ಹುಡುಗಿ ಆಗಿದ್ರು ಯಾವಾಗಾದ್ರೂ ಸಹಾಯ ಬೇಕು ಅನ್ಸಿದ್ರೆ, ನಿಮ್ಮನ್ನ ಕೇಳ್ತಾಳೆ. ನೀವು ಇಲ್ಲ ಅನ್ನಲ್ಲ ಅಂತ ಅವ್ಳಿಗೆ ಚೆನ್ನಾಗಿ ಗೊತ್ತಿರತ್ತೆ. ಯಾವತ್ತೂ ನಿಮಗೆ ಮೋಸ ಮಾಡಬೇಕು ಅನ್ನೋ ಯೋಚ್ನೆ ಇರಲ್ಲ.

18. ನಿಮಗೆ ಚೆನ್ನಾಗಿ ಗೊತ್ತಿರತ್ತೆ ಇವ್ಳು ಯಾವಾಗ್ಲೂ ಎಂತ ಸಮಯದಲ್ಲೂ ಜೊತೇಗೆ ಇರ್ತಾಳೆ ಅಂತ. ಕೆಲವೊಮ್ಮೆ ನಿಮಗೆ ಏನು ತೋಚದೇ, ಇನ್ನೇನು ದಾರಿ ಇಲ್ಲ ಅಂದಾಗ ಕೂಡ, ಇವಳು ನಿಮ್ಮನ್ನ ಬಿಡದೇ ಬೆನ್ನೆಲುಬಾಗಿ ನಿಲ್ತಾಳೆ ಅನ್ನಿಸತ್ತೆ.

19. ಯಾವುದೇ ಅನುಮಾನ ಇಲ್ಲದೆ ಕಣ್ಣು ಮುಚ್ಚಿಕೊಂಡು ಎಲ್ಲ ಸಮಯದಲ್ಲೂ ನಂಬಬಹುದು. ಅವಳು ಎಲ್ಲಿ, ಯಾರ್ ಜೊತೆ, ಯಾವ ಸಮಯದಲ್ಲಿ ಇದ್ದಳು, ಯಾಕೆ ಇದ್ದಳು ಅನ್ನೋದೆಲ್ಲ ನಿಮ್ಗೆ ದೊಡ್ಡ ವಿಷ್ಯ ಅನ್ಸದೇ ಇಲ್ಲ, ಅವ್ಳ ಬಗ್ಗೆ ಬಲವಾದ್ ನಂಬಿಕೆ ನಿಮ್ಗಿರತ್ತೆ. ನಿಮ್ಮ ಸಂಬಂದಾನೆ ಹಾಗೆ! ಇಬ್ಬರು ಒಬ್ಬರನ್ನ ಒಬ್ಬರು ಅಷ್ಟು ನಂಬ್ತೀರಿ, ಅಷ್ಟೇ ಗೌರವ ಕೊಡ್ತೀರಿ.

20. ಅವ್ಳು ಯಾವದಾದ್ರು ಕಾರಣಕ್ಕೆ ಬೇಜಾರಾಗಿದ್ರೆ ನಿಮಗೆ ತಡ್ಕೊಳಕ್ಕಾಗಲ್ಲ, ಯಾರಾದ್ರೂ ಬೇಜಾರ್ ಮಾಡಿದ್ರೆ ನೀವು ಅವ್ರನ್ನ ಸುಮ್ನೆ ಬಿಡಲ್ಲ. ಅವಳು ದುಃಖ ಪಡೋದನ್ನ ನಿಮಗೆ ಸಹಿಸಿಕೊಳಕ್ಕೆ ಆಗದೇ ಇಲ್ಲ.

ಮೂಲ

21. ನೀವು ನಿಮ್ಮ ಮುಂದಿನ ದಿನಗಳಿಗೆ ಅಂತ ಮಾಡಿದ ಎಲ್ಲ ಯೋಚನೆಲಿ ನಿಮಗೆ ಗೊತ್ತಿಲ್ಲದ ಹಾಗೆ ಅವಳನ್ನು ಸೇರಿಸಿಕೊಂಡಿರ್ತೀರ. ನೀವು ಸುತ್ತಾಡಬೇಕು ಅನ್ಕೊಂಡಿರೋ ಜಾಗ, ನೀವು ಮಾಡ್ಬೇಕು ಅನ್ಕೊಂಡಿರೋ ಸಾಹಸ, ಹೀಗೇ ಎಲ್ಲದ್ರಲ್ಲೂ ಅವ್ಳು ಇದ್ದೇ ಇರ್ತಾಳೆ...

22. ನಿಮಗೆ ಸರ್ವಸ್ವಾನು ಅವಳೇ ಆಗಿರ್ತಾಳೆ. ನೀವು ರಾತ್ರಿ ಮಲಗುವಾಗ ತೊಗೊಳೋ ಕೊನೆ ಹೆಸರು ಅವಳದ್ದೇ, ಬೆಳಗ್ಗೆ ಎದ್ದಾಗ ಹೇಳೋ ಮೊದಲನೇ ಹೆಸರು ಅವಳದ್ದೇ. ನಿಮ್ಮೆಲ್ಲ ತುಂಟಾಟದಲ್ಲಿ ಅವಳು ಇರ್ತಾಳೆ, ಅವಳ ಜೊತೆ ನಿಮ್ಮ ಜೀವನ ಪೂರ್ತಿ ಕಳೀಬೇಕು ಅಂತ ಅನ್ನಿಸತ್ತೆ. ಹೌದು ಅವಳೇ ನಿಮ್ಮ ಪ್ರೇಯಸಿ, ಅವಳೇ ನಿಮ್ಮ ನಿಜವಾದ ಸಂಗಾತಿ.

23. ನಿಮ್ಮ ಬದುಕು ಸಾರ್ಥಕ ಅಂತ ಅನ್ನಿಸೋದು, ಬದುಕಿಗೆ ಒಂದು ಅರ್ಥ ಅಂತ ಸಿಗೋದು, ಅವಳು ನಿಮ್ಮ ಜೊತೆ ಇದ್ದಾಗ ಮಾತ್ರ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: