ಬಯಲು ಸೀಮೆ ಜನರ ನೀರಿಗಾಗಿ ಕೂಗು

ಒಂದೊಮ್ಮೆ ಚಿನ್ನ, ಹಾಲು, ಮಾವು, ರೇಷ್ಮೆ , ಟೊಮೇಟೊ ವಿಶ್ವ ಖ್ಯಾತಿ ಪಡೆದಿದ್ದ ಕೋಲಾರ - ಚಿಕ್ಕಬಳ್ಳಾಪುರ ಇಂದು ಬರ ನಾಡಾಗಿ ಮರಳುಭೂಮಿ ಯಾಗುತ್ತಿದೆ. ಇಲ್ಲಿನ ಜನರಿಗೆ ಬೆಳೆ ಬೆಳೆಯಲು ಮಾತ್ರವೇ ಅಲ್ಲ ಕುಡಿಯಲು ಸಹ ನೀರಿಲ್ಲ. ಇಂತಿಪ್ಪ ಕೋಲಾರದ ಕಷ್ಟ ಕೇಳುವವರೇ ಇಲ್ಲ . ಜನ ನಾಯಕರು ಕಿವಿ, ಕಣ್ಣು, ಬಾಯಿ ಮುಚ್ಚಿ ಕುಳಿತ್ತಿದ್ದಾರೆ. ಈ ಸಮಸ್ಯೆ ಇಂದು ನೆನ್ನೆಯದಲ್ಲ . ಕೆರೆಗಳು ತುಂಬಿ ಸುಮಾರು 12 ವರ್ಷಗಳಾಗಿವೆ . ಇಲ್ಲಿನ ಮಕ್ಕಳು ಆಲಿಕಲ್ಲು ಏನೆಂದು ನೋಡೇ ಇಲ್ಲ . ನದಿ ನೀರು , ಮಳೆ ಇಲ್ಲದ ಕೋಲಾರಕ್ಕೆ ಪ್ರತಿನಿಧಿಗಳು ಹುಡುಕಿರುವ ಒಂದೇ ಪರಿಹಾರ ಬೋರ್ವೆಲ್ ಗಳು. ಇದರಿಂದ ಇಂದ 1800 ಅಡಿಯವರೆಗೂ ಭೂಮಿ ಕೊರೆದರು ನೀರಿಲ್ಲ . ಇಲ್ಲಿರುವ ನೀರು ಫ್ಲೋರೈಡ್ ನೀರು. ತಾಯಿಯ ಎದೆಯ ಹಾಲಿನಲ್ಲಿ ಫ್ಲೋರೈಡ್ ಎಂಬ ವಿಷವಿದೇ. ಹಸುವಿನ ಹಾಲಿನಲ್ಲೂ ಇದೆ .ಈ ನೀರಿನ ಸಮಸ್ಯೆ ನೀಗಿಸಲು ಕೋಲಾರದ ಜನ ಜೂಲೈ 13 2016 ರಂದು ಕನ್ನಡ ಚಿತ್ರ ರಂಗದ ಸಹಕಾರ ದೊಂದಿಗೆ ಶುರು ಮಡಿದ ಧರಣಿ 209 ದಿವಸ ವಾದರೂ ನಡೆಯುತ್ತಲೇ ಇದೆ. ಇದರ ಕೆಲವು ಮಾಹಿತಿ ಹೀಗಿದೆ .

ಬಯಲು ಸೀಮೆ ಕೋಲಾರದಲ್ಲಿ ಜನಿಸಿದ ವಿಶ್ವ ವಿಖ್ಯಾತರು(ಇಂಥವರು ಹುಟ್ಟಿದರು ನಮ್ಮನ್ನು ಮರೆತಿರುವ ಕರ್ನಾಟಕ ಸರ್ಕಾರ)

 

  • ಜನರ ಕೂಗು

  • ಫ್ಲೋ ರೈಡ್ ನೀರಿನಿಂದ ಕೋಲಾರದ ಹಾಲು ರಫ್ತ್ತು ಸ್ಥಗಿತ

  • ಹಲವು ರೈತ ಮಕ್ಕಳಿಂದ ಹೋರಾಟ

  • ಶಾಲಾ ಮಕ್ಕಳಿಂದ ಹೋರಾಟ

  •  
  • ಮಾದೇಗೌಡರು , ದೊರೆಸ್ವಾಮಿಯವರು , ಕನ್ನಡ ಕುಮಾರಣ್ಣನ ನವ ಸಾಥ್

  • ಅರೆಬೆತ್ತಲೆ ಧರಣಿ

೧೦೦ನೆ ದಿನದ ಧರಣಿ

ಮಂಗಳಮುಖಿಯರಿಂದ ಧರಣಿ

209 ದಿನದ ಧರಣಿ

 

ಶುರುವಾಗಲಿ 11 ವರ್ಷ ವಾದರೂ ಮುಗಿಯದ ಯರ್ರಗೊಳ್ ಯೋಜನೆ, ೧೨೦೦ ಕೋಟಿ ಬಜೆಟ್ಟಿನ MLA, MP ಗಳ ಜೇಬು ತುಂಬಿಸುತ್ತಿರುವ ಎತ್ತಿನ ಹೊಳೆ ಯೋಜನೆ. ಕೊಳಚೆ ನೀರಿನ - ಫ್ಯಾಕ್ಟರಿ ಗಳಿಗೆ  ಬಿಡುತ್ತಿರುವ KC ವ್ಯಾಲಿ ನೀರು ಜನರ ಕಣ್ಣೀರು ವರೆಸುವುದಿಲ್ಲ. ಈ ಪ್ರಶ್ನೆಗೆ ಉತ್ತರ ಎಂದು ಸಿಗುವುದೋ ಆ ದೇವರೇ ಬಲ್ಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: