ಹೆಂಡ್ತಿ ಹೆಂಗಿರಬೇಕು ಅಂದ್ರೆ ನಮ್ಮ ಹುಡುಗರು ಕೊಡೋ ಉತ್ತರ ಸ್ವಲ್ಪ ಕೇಳಿ

ಅತ್ತೆ-ಮಾವನ್ನ ಚೆನ್ನಾಗಿ ನೋಡ್ಕೋಬೇಕು

ನಮ್ ಹುಡುಗ್ರು ಮದುವೆ ವಿಶ್ಯ ಬಂದಾಗ ಯೋಚನೆ ಮಾಡೋ ರೀತಿನೇ ಬೇರೆ. ಅವ್ರಿಗೆ ಹುಡುಗಿ ಸ್ವಲ್ಪ ಮಾಡ್ರನ್ನಾಗೂ ಇರಬೇಕು, ಸ್ವಲ್ಪ ಗೌರಮ್ಮನ್ ಥರಾನೂ ಇರಬೇಕು. ಬಿಡಿಸಿ ಹೇಳ್ತೀನಿ ಕೇಳಿ:

1. ಮನೆ ಕೆಲ್ಸಾನೂ ಮಾಡ್ಬೇಕು, ಆಫೀಸ್ ಕೆಲ್ಸಾನೂ ಮಾಡ್ಬೇಕು

ಒಂದು ಸರ್ವೇ ಪ್ರಕಾರ 83.5% ಹುಡುಗರ ಅಭಿಪ್ರಾಯ ಏನಪ್ಪ ಅಂದ್ರೆ ತನ್ನ ಪ್ರೀತಿ ಹೆಂಡ್ತಿ ಆಫೀಸ್ ಕೆಲ್ಸಾನ ಎಷ್ಟು ಆಸಕ್ತಿಯಿಂದ ಮಾಡ್ತಾಳೋ ಅಷ್ಟೇ ಪ್ರೀತಿಯಿಂದ ಮನೆಯ ಕೆಲ್ಸಾನೂ ಮಾಡ್ಬೇಕು.

working_woman_india.jpg

2. ತೀರಾ ಸಣ್ಣಗಿರಬಾರದು; ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕೋ ಅಲ್ಲಲ್ಲಿ ಅಷ್ಟಷ್ಟು ಇರಬೇಕು

ಹುಡ್ಗೀರು ತಾವು ಯಾವಾಗ್ಲೂ ಸಣ್ಣಗೇ ಇರ್ಬೇಕು ಅಂತ ಸರ್ಕಸ್ ಮಾಡ್ತಿರ್ತಾರೆ, ಆದ್ರೆ ನಂ ಹುಡುಗ್ರಿಗೆ ಈ ತೆಳ್ಳಗಿರೋದು ಕಂಡ್ರೆ ಅಷ್ಟು ಇಷ್ಟ ಆಗಲ್ಲ. ತೆಳ್ಳಗೆ ಒಣಗೋಗಿದ್ರೆ ಅದನ್ನ ನಮ್ಮ ಕಡೆ ಮೈಮಾಟ ಅನ್ನಲ್ಲ.

788c82ce1862a749455f15e1e1453be1.jpg

3. ಮದುವೆ ಆದ್ಮೇಲೆ ಅತ್ತೆ-ಮಾವನ್ನ ಚೆನ್ನಾಗಿ ನೋಡ್ಕೋಬೇಕು

ಮದುವೆ ಆದಮೇಲೆ ಅತ್ತೆ-ಮಾವನ ಜೊತೆ ಒಟ್ಟಗೆ ಇರೋದು ಅಂದಮೇಲೆ ಅವರ ಜೊತೆ ಸಂಬಂಧ ಚೆನ್ನಾಗಿರಲೇಬೇಕು. ಸುಮ್ನೆ ಮಾತಿಗೆ ಮಾತು ಬೆಳಸಿಕೊಂಡು ಹೋಗೋದು, ಕೊಂಕು ಮಾತಾಡೋದು, ಜಗಳ ಮಾಡ್ಕೊಳೋದು... ಇವೆಲ್ಲ ನಮ್ಮ ಹುಡುಗರಿಗೆ ಇಷ್ಟ ಆಗಲ್ಲ. ಇದು ಪ್ರಪಂಚದಲ್ಲಿ ಎಲ್ಲೂ ಹುಡುಗರಿಗೆ ಇಷ್ಟ ಆಗಲ್ಲ, ಆದ್ರೆ ನಮ್ಮ ಕಡೆ ಸ್ವಲ್ಪ ಇದನ್ನ ಒತ್ತಿ ಹೇಳಬೇಕು.

sfe-090826-254.jpg

4. ಯವಾಗ್ಲೂ ನಗ್-ನಗ್ತಾ ಇರಬೇಕು

ಆಪೀಸಿಂದ ಸುಸ್ತಾಗಿ ಮನೆಗೆ ಬರೋನಿಗೆ ಮಾತ್ನಲ್ಲೇ ಕಚಗುಳಿ ಕೊಡೊ ಹೆಂಡ್ತಿ ಅಂದ್ರೆ ಪಂಚಪ್ರಾಣ. ಅದು ಬಿಟ್ಟು ಹೆಂಡ್ತೀನೂ ಗೋಳು ಹೇಳ್ಕೊಳಕ್ಕೆ ಶುರು ಮಾಡಿಬಿಟ್ಟರೆ ಅದೆಂಥ ಜೀವನ?

husband-cooking.jpg

5. ಜಾಸ್ತಿ ಟೀವಿ ನೋಡ್ಬಾರ್ದು

80% ಹುಡುಗ್ರಿಗೆ ಟಿ.ವಿ ನೋಡದೇ ಇರೋ ಹುಡ್ಗೀರು ಅಂದ್ರೆ ತುಂಬಾನೇ ಪ್ರೀತಿ. ಮದುವೆ ಆಗೋವರೆಗೂ ತನ್ನ ಅಮ್ಮನನ್ನ ಟಿ.ವಿ. ಮುಂದೆ ನೋಡಿರೋ ಹುಡುಗ ತನ್ನ ಮುದ್ದಿನ ಹೆಂಡ್ತಿ ಹಾಗೇ ಅಗೋದ್ ಬೇಡ ಅಂದ್ಕೋಳ್ತಾನೆ. ಅಷ್ಟೇ ಅಲ್ಲ, ಟೀವಿ ಹೆಂಗಸರ ತಲೇಲಿ ಅದ್ ತೊಗೋಬೇಕು ಇದ್ ತೊಗೋಬೇಕು ಅನ್ನೋ ಆಸೆ ಹುಟ್ಟಿಸುತ್ತಲ್ಲ, ಅದಕ್ಕೆಲ್ಲ ದುಡ್ಡು 'ವೇಸ್ಟ್' ಮಾಡ್ತಾರೆ ಅನ್ನೋ ಹೆದರಿಕೆ :-)

watching-tv.jpg

6. ಯಾವಾಗಲೂ ಗಂಡಂಗೆ ಅಂಟುಕೊಂಡಿರ್ತೀನಿ ಅನ್ನಬಾರದು; ಅವನಿಗೆ ಬೇಕಾದಾಗ ಔನ್ ಪಾಡಿಗೆ ಔನ್ನ ಬಿಟ್ಟುಬಿಡಬೇಕು

ಪ್ರತಿಯೊಬ್ಬರಿಗೂ ತಮಗೋಸ್ಕರ ಅಂತ ಸ್ವಲ್ಪ ಸಮಯ ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಹುಡುಗ್ರು ಮದುವೆಗೆ ಮೊದ್ಲು ಫ್ರೆಂಡ್ಸ್ ಜೊತೆ ಹೇಗೆಲ್ಲಾ ಮೋಜು ಮಸ್ತಿ ಮಾಡ್ತಾ ಇದ್ರೋ ಹಾಗೇ ಮದುವೆ ಆದ್ಮೇಲೂ ತಮ್ಮಿಷ್ಟ ಬಂದಂಗೆ ತಾವಿರೋಕೆ ಆಗಾಗ ಬಿಡ್ಬೇಕು. ಹೀಗೆ ಯಾವುದಕ್ಕೂ ಅಡ್ಡಿ ಮಾಡ್ದೆ ಇರೋ ಹುಡುಗಿ ಸಿಗಲಿ ಅನ್ನೋದು ಅವರ ಮತ್ತೊಂದು ದಿಮ್ಯಾಂಡ್.

2ddf043800000578-3293125-a_group_of_young_men_refugees_flash_victory_sign_as_they_pose_fo-m-26_1446034104076.jpg

7. ಚೆನ್ನಾಗ್ ಅಡುಗೆ ಮಾಡ್ಬೇಕು

ಹುಡುಗನ ಹೃದಯಕ್ಕೆ ಲಗ್ಗೆ ಹಾಕೋಕೆ ಹೊಟ್ಟೆಯ ಮೂಲಕ ಪ್ರವೇಶ ಸಾದ್ಯ ಅಂತಾರಲ್ಲ ಅದು ನಿಜಾನೆ. ಯಾಕಂದ್ರೆ ಒಳ್ಳೊಳ್ಳೇ ರುಚಿಯಾದ ಆಡುಗೆ ಮಾಡಿ ಬಡ್ಸೋ ಹುಡುಗಿನೇ ಹೆಂಡತಿಯಾದ್ರೆ ನಮ್ ಭಾರತೀಯ ಹುಡುಗ್ರು ಫ಼ುಲ್ ಖುಷ್ ಆಗೋಗ್ತಾರೆ.

cb_rio_rashmys_ns_final.jpg

8. ಗಂಡನ್ ಮನೆ ಸಂಪ್ರದಾಯ ಚೆನ್ನಾಗಿ ಪಾಲಿಸಬೇಕು

ತನ್ನ ಪತ್ನಿ ಎಷ್ಟೇ ಮಾಡ್ರನ್ ಆಗಿದ್ರೂ ಹಬ್ಬ ಅಪ್ಪಟ ಭಾರತೀಯಳ ಹಾಗೆ ಎಲ್ಲಾ ಸಂಪ್ರದಾಯವನ್ನ ಶ್ರದ್ದೆಯಿಂದ ಪಾಲಿಸೋ ಹುಡುಗೀನೇ ನಮ್ಮ ಹುಡುಗ್ರ ಫ಼ೇವರೇಟ್.

avani-continued.jpg

9. ಹತ್ತು ಕೈ ಇರಬೇಕು :-)

ಇದೇನಪ್ಪಾ ಅಂತೀರ!! ಎಂಥಾ ತಲೆ ಬಿಸಿ ಇದ್ರೂ ಎಲ್ಲಾ ಕೆಲಸವನ್ನ ಅಚ್ಚುಕಟ್ಟಾಗಿ ನಗ್ತಾ ನಗ್ತಾ ಆರಾಮಾಗಿ ಮಾಡಿ ಮುಗಿಸೋ ಹುಡ್ಗೀನೇ ನಂ ಹುಡುಗ್ರು ಹೆಂಡ್ತಿ ಆಗ್ಲಿ ಅಂದ್ಕೊಳ್ತಾರೆ.

women-multi-tasking.jpg

10. ಕನ್ನಡದಲ್ಲಿ ಮಾತಾಡ್ಬೇಕು, ಇಷ್ಟ ಪಟ್ಟು ಕನ್ನಡ ಫಿಲಂ ನೋಡಬೇಕು

ಅದ್ಯಾಕೋ ಏನೋ‌ ಹುಡುಗೀರ್ಗೆ ಇಂಗ್ಲಿಷ್ ಮತ್ತೆ ಹಿಂದಿ ಹುಚ್ಚು ಜಾಸ್ತಿ. ನಿಜಕ್ಕೂ ಇದು ಕನ್ನಡದ ಹುಡುಗರಿಗೆ ಇಷ್ಟ ಆಗಲ್ಲ. ಯಾಕೋ ಒಂಥರಾ ನಮ್ಮ ಸಂಸ್ಕೃತಿಯಿಂದ ದೂರ ಹೊರಟು ಹೋಗ್ತಿದಾಳೆ ನನ್ನ ಹೆಂಡತಿ ಅನ್ನಿಸುತ್ತೆ.

santhu-straight-forward-photos-images-51648.jpg

ಈಗ ಹೇಳಿ - ಸರಿ ನಾ? ಅಥವಾ ಮುಖ್ಯವಾದ್ದು ಏನಾದರೂ‌ ಬಿಟ್ಟಿದೀನಾ?

ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: