ಹೊಸ ಗೂಗಲ್ ಲೋಗೋ ನೋಡಿದ್ರಾ? ಇಡೀ ಕಂತೆ ಪುರಾಣ ಇಲ್ಲಿದೆ, ನೋಡಿ.

ಮೊದಲು ಗೂಗಲ್ ಲೋಗೋಗಳ್ನ ಚಿಕ್ಕಮಕ್ಕಳು ಮಾಡ್ತಿದ್ರಾ ಅನ್ನಿಸುತ್ತೆ!

ಗೂಗಲ್ ಹೊಸ ಲೋಗೋ

ಗೂಗಲ್ ತನ್ನ ಲೋಗೋ ಬದಲಾಯಿಸಿದೆ. ನೋಡಿದ್ರಾ?

ಇದರಲ್ಲಿ ಎದ್ದು ಕಾಣುವುದು ಸರಳತೆ. ಸ್ಯಾನ್ಸ್ ಸೆರಿಫ್ ಫಾಂಟ್ ಬಳಸಿರುವುದೂ ಆ ಸರಳತೆಯಲ್ಲಿ ಸೇರುತ್ತದೆ. ಅಲ್ಲದೆ, ನೀಲಿ, ಕೆಂಪು ಹಳದಿ ಮತ್ತು ಹಸಿರು ಬಣ್ಣಗಳು ಮೂಲಭೂತ ಬಣ್ಣಗಳು ಎನಿಸಿಕೊಳ್ಳುತ್ತವೆ.

ಹೊಸ ಲೋಗೋ ಪರಿಚಯಿಸಲು ಈ ಆನಿಮೇಶನ್ ಹೊರಬಿಟ್ಟಿದ್ದಾರೆ ಗೂಗಲ್ ನವರು:

ಮುಖ್ಯವಾದ ವಿಷಯ ಏನಂದರೆ Google ಅಂತ ಇಡೀ ಪದ ಬರೆಯೋದು ಈಗ ಮೊಬೈಲುಗಳಿಗೆ ಅಷ್ಟು ಸರಿಹೊಂದ್ತಾ ಇಲ್ಲ. ಆದ್ದರಿಂದ ಬರೀ ಒಂದು G ಒಳಗಡೆ ಎಲ್ಲಾ ಬಣ್ಣಗಳೂ ಬರುವಂತೆ ಮಾಡಿದಾರೆ.

ಅದನ್ನು ವಿವರಿಸುವ ಈ ಆನಿಮೇಶನ್ ನೋಡಿ:

ಈ ಹೊಸ ಲೋಗೋಗೆ ಹೋಲಿಸಿದರೆ ಹಿಂದಿನ ಲೋಗೋಗಳು ಒಂಥರ ಚಿಕ್ಕಮಕ್ಕಳು ಮಾಡಿದಹಾಗಿವೆ!

ಹೊಸದರಿಂದ ಹಳೆಯದರ ಕ್ರಮದಲ್ಲಿ ಇಲ್ಲಿ ಕೆಳಗಿವೆ, ನೋಡಿ:

ಮೊಟ್ಟಮೊದಲ ಬಾರಿಗೆ ಲೋಗೋ ಹಿಂದೆ ನೆರಳು ಬರುವ ಹಾಗೆ ಮಾಡಿದಾಗ:

ಅದಕ್ಕಿಂತ ಮುಂಚೆ - ಮೊಟ್ಟಮೊದಲಿಗೆ ನಾಲ್ಕು ಮೂಲಭೂತ ಬಣ್ಣಗಳನ್ನ ಬಳಸಿದ್ದು:

ಅದಕ್ಕಿಂತ ಮುಂಚೆ - ಒಂದೇ ಬಣ್ಣ, ಆದರೆ ಕಪ್ಪು ಬಲಕ್ಕೆ ಹೆಚ್ಚುತ್ತಾ ಇತ್ತು:

ಅದಕ್ಕಿಂತ ಮುಂಚೆ - ಇದಕ್ಕೆ ನೀವೇ ವಿವರ ಕೊಡೋದು ವಾಸಿ:

ಅದಕ್ಕಿಂತ ಮುಂಚೆ - ಹುಡುಕುವ ಕಣ್ಣುಗಳು:

ಅದಕ್ಕಿಂತ ಮುಂಚೆ - ವಿಚಿತ್ರ:

ಎಲ್ಲಕ್ಕಿಂತ ಮೊದಲು ಗೂಗಲ್ ಅನ್ನೋದನ್ನ ಬ್ಯಾಕ್-ರಬ್ ಅನ್ತಾ ಇದ್ದರಂತೆ. ಯಾಕೆ ಅಂದರೆ ಅವರ ಅಲ್ಗಾರಿದಂ ಬ್ಯಾಕ್-ಲಿಂಕ್ಸ್ (ಅಂದರೆ ಎಷ್ಟು ಪುಟಗಳು ಈ ಪುಟವನ್ನು ಕರೆದಿವೆ ಅನ್ನೋದನ್ನ) ಎಣಿಸುತ್ತಿತ್ತು!

ಕಂಪನಿ ಚೆನ್ನಾಗಿ ಕೆಲಸ ಮಾಡಿದರೆ ಲೋಗೋ ಗೀಗೋ ಎಲ್ಲ ಹೇಗಿದ್ದರೂ ನಡೆಯುತೆ ಅಂತ ಇದೇ ತೋರಿಸುತ್ತೆ.

ಈಗೀಗ ಲೋಗೋ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುತಿರುವುದು ನೋಡಿದರೆ ಯಾಕೋ ಗೂಗಲ್ ತೊಂದರೆಯಲ್ಲಿ ಸಿಕ್ಕಕೊಂಡಿದೆಯಾ ಅನ್ನಿಸುತ್ತೆ...

ಏನಂತೀರಿ?

ಮಾಹಿತಿ: ಗೂಗಲ್

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: