ಈ ಜಾಗದಲ್ಲಿ 30 ಸೆಕೆಂಡ್ ಒತ್ಕೊಳೋದ್ರಿಂದ ನಿಮಗೆ ಏನ್ ಲಾಭ ಇದೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಬಸುರೀರು ಮಾತ್ರ ಮಾಡಕ್ಕೆ ಹೋಗ್ಬೇಡಿ

ತಲೆನೋವಿನಷ್ಟು ಕಿರಿಕಿರಿ ಇನ್ಯಾವ ನೋವೂ ಇರಲ್ಲ ನೋಡಿ

ಮೂಗಿರೋ ತನಕ ನೆಗಡಿ ತಪ್ಪಾತ್ತಾ? ಹಂಗೆ ತಲೆ ಇರೋವರ್ಗೂ ತಲೆನೋವು ತಪ್ಪಿದ್ದಲ್ಲ. ತಲೆನೋವು ಬಂದಾಗ ನಾವ್ ಏನ್ ಮಾಡ್ತೀವಿ, ಪುಸಕ್ ಅಂತ ಒಂದು ಗುಳಿಗೆ ನುಂಗ್‌ ಬಿಡ್ತೀವಿ. ಇಲ್ಲಾ ಯಾವ್ದಾದ್ರೂ ಬಾಮನ್ನ ಹಣೆಗೆ ಚೆನ್ನಾಗಿ ತಿಕ್ಕೋತೀವಿ. ಆ ಕ್ಷಣಕ್ಕೆ ತಲೆನೋವು ಕಡಿಮೆ ಆಗತ್ತೆ ಅನ್ನಿ.

ಆದರೆ ಯಾವುದೇ ಔಷಧಿ ಇಲ್ದಂಗೆ, ಬಾಮು ಕ್ರೀಮು ಉಪಯೋಗಿಸ್ದೆ ತಲೆನೋವು ಕಡಿಮೆ ಮಾಡ್ಕೊಳ್ಳಕ್ಕೆ ಆಗಲ್ವಾ? ಅದಕ್ಕೂ ನಮ್ ಕೈಯಲ್ಲೇ ಇದೆ ಮದ್ದು...

ಬರೀ 30 ಸೆಕೆಂಡಲ್ಲಿ ತಲೆನೋವು ಕಡಿಮೆ ಮಾಡ್ಕೊಳ್ಳೋದು ಹೇಗೆ ಅಂತ ನಾವು ಹೇಳ್ಕೊಡ್ತೀವಿ ಬನ್ನಿ.

ನಮ್ ದೇಹದಲ್ಲಿ ಆಕ್ಟೀವ್ ಸ್ಪಾಟ್‌ಗಳು ಅಂತ ಇರ್ತಾವೆ. ಆ ಜಾಗದಲ್ಲಿ ಮಸಾಜ್ ಮಾಡ್ಕೊಂಡಾಗ ನೋವು ಕಡಿಮೆ ಆಗೋದ್ರ ಜೊತೆಗೆ ರಿಲ್ಯಾಕ್ಸ್ ಕೂಡ ಆಗ್ತೀವಿ. ಅದೇ ರೀತಿ ಆಕ್ಯುಫ್ರೆಶರ್ ತಂತ್ರ ಬಳಸಿ ತಲೆನೋವನ್ನೂ ಕಡಿಮೆ ಮಾಡ್ಕೋಬೋದು.

ತಲೆನೋವನ್ನು ಕಡಿಮೆ ಮಾಡೋ ಆಕ್ಟೀವ್ ಸ್ಪಾಟ್ ನಮ್ಮ ಅಂಗೈಯಲ್ಲೇ ಇರೋದು. ಎಡಗೈನ ಹೆಬ್ಬೆರಳು ಮತ್ತೆ ತೋರುಬೆರಳಿನ ನಡುವೆ ಒತ್ತಿಹಿಡಿದಾಗ ಅಲ್ಲೊಂದು ಮಾಂಸಖಂಡ ಸಿಗುತ್ತೆ. ಅದೇ ಆಕ್ಟೀವ್ ಸ್ಪಾಟ್.

ಈಗ ನೀವು ಮಾಡ್ಬೇಕಾಗಿದ್ದಿಷ್ಟೇ. ಈ ಆಕ್ಟೀವ್ ಸ್ಪಾಟಲ್ಲಿ ಬಲಗೈ ಹೆಬ್ಬೆರಳು ಮತ್ತೆ ತೋರುಬೆರಳಿಂದ ಒತ್ತಿ ಹಿಡ್ಕೊಳ್ಳಿ. ಹೆಬ್ಬೆರಳು ಮೇಲಿರ್ಬೇಕು. ಹಾಗೆ ತೋರ್ಬೆರಳು ಕೆಳಗಿರ್ಬೇಕು. 30 ಸೆಕೆಂಡ್ ಕಾಲ ಹಾಗೇ ಒತ್ತಿ ಹಿಡ್ಕೊಳ್ಳಿ. ಅದಾದ್ಮೇಲೆ ಬಲಗೈಗೂ ಹಂಗೆ ಮಾಡ್ಕೊಳ್ಳಿ. 30 ಸೆಕೆಂಡ್ ಒತ್ತಿ ಹಿಡ್ಕೊಳ್ಳಿ. ಇದನ್ನ ನೀವು ಕರೆಕ್ಟಾಗಿ ಮಾಡ್ಕೊಂದ್ರೆ 30 ಸೆಕೆಂಡಲ್ಲಿ ತಲೆನೋವು ಮಾಯ ಆಗುತ್ತೆ.

ಅಂದಹಾಗೆ ಹೇಳೋದು ಮರೆತೆ...ಬಸುರಾಗಿರೋ ಹೆಂಗಸ್ರು ಇದನ್ನ ಮಾಡೋ ಹಂಗಿಲ್ಲ, ಯಾಕಂದ್ರೆ ಗರ್ಭಪಾತ ಆಗೋ ಅಪಾಯ ಇದೆ. ಆದ್ದರಿಂದ ಬಸುರಿ ಹೆಂಗಸ್ರೆ ತಲೆನೋವಿಗೆ ನೀವು ಹೀಗ್ ಮಾಡೋಕೆ ಹೋಗ್ಬೇಡಿ. ನೀವು ಡಾಕ್ಟ್ರತ್ರ ತೋರಿಸ್ಕೊಳ್ಳೋದೆ ಒಳ್ಳೇದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: