ಪಾಕಿಸ್ತಾನ್ ಜೊತೆ ಆಗಿರೋ ನದಿನೀರು ಹಂಚಿಕೆ ಒಪ್ಪಂದದ ಬಗ್ಗೆ ನಿಮಗೆ ಗೊತ್ತಿರಬೇಕಾದ 11 ಮುಖ್ಯ ವಿಷಯಗಳು

ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಅಂತರಾಷ್ಟ್ರೀಯ ನದಿ ನೀರು ಹಂಚಿಕೆ ಒಪ್ಪಂದ ಇದು

ಭಾರತ ಮತ್ತೆ ಪಾಕಿಸ್ತಾನ ನಡುವೆ ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 1960ರಲ್ಲೇ ಒಪ್ಪಂದಗಳಾಗಿವೆ. ಅದಕ್ಕೆ ಸಂಬಂಧಿಸಿದಂತೆ 11 ಮುಖ್ಯವಾದ ಸಂಗತಿಗಳನ್ನ ನಾವಿಲ್ಲಿ ಪಟ್ಟಿ ಮಾಡಿ ಕೊಡ್ತಿದ್ದೀವಿ. 

1. ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಪಟ್ಟ ಒಪ್ಪಂದಕ್ಕೆ ಎರಡೂ ದೇಶಗಳು ಸಹಿಹಾಕಿದ್ದು ಸೆಪ್ಟೆಂಬರ್ 1960ರಲ್ಲಿ. ಕರಾಚಿಯಲ್ಲಿ ಭಾರತದ ಆಗಿನ ಪ್ರಧಾನಿ ಜವಹಾರ್ ಲಾಲ್ ನೆಹರು ಮತ್ತೆ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದಾರೆ.
2. ವಿಶ್ವಬ್ಯಾಂಕಿನ ಮಧ್ಯಸ್ಥಿಕೆಯಲ್ಲಿ ಉತ್ತರ ಭಾರತದ ಆರು ನದಿಗಳನ್ನು ಭಾರತ ಮತ್ತೆ ಪಾಕಿಸ್ತಾನದ ನಡುವೆ ನದಿ ನೀರನ್ನ ಹಂಚಿಕೆ ಮಾಡಲಾಯಿತು.
3. ಬಿಯಾಸ್, ರಾವಿ ಮತ್ತೆ ಸಟ್ಲೇಜ್ ನದಿಗಳ ಮೇಲೆ ಭಾರತ ನಿಯಂತ್ರಣ ಸಾಧಿಸಿದ್ರೆ , ಸಿಂಧು, ಚೀನಾಬ್ ಮತ್ತೆ ಜೀಲಂ ನದಿಗಳ ಮೇಲೆ ಪಾಕಿಸ್ತಾನಕ್ಕೆ ಹಿಡಿತ ಇದೆ.
4. ಇಡೀ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಅಂತರಾಷ್ಟ್ರೀಯ ನದಿ ನೀರು ಹಂಚಿಕೆ ಒಪ್ಪಂದ ಇದು ಅಂತ ಭಾವಿಸಲಾಗಿದೆ.
5. ಪಾಕಿಸ್ತಾನ ನಿಯಂತ್ರಿಸುತ್ತಿರುವ ನದಿಗಳ ಮೂಲ ಇರೋದು ಭಾರತದಲ್ಲಿ. ಭಾರತದ ಮೂಲಕ ಪಾಕಿಸ್ತಾನಕ್ಕೆ ಈ ನದಿಗಳು ಹರೀತಾವೆ.
6. ಸಿಂಧು ನದಿ ಮೂಲ ಚೀನಾದಲ್ಲಿದ್ದರೆ ಚೀನಾಬ್ ಮತ್ತೆ ಜೀಲಂ ನದಿಗಳು ಹುಟ್ಟೋದು ಭಾರತದಲ್ಲಿ. ಒಪ್ಪಂದದ ಪ್ರಕಾರ ಸಿಂಧು ನದಿಯ ಶೇ.20ರಷ್ಟು ನೀರನ್ನು ಮಾತ್ರ ಭಾರತ ಬಳಸಿಕೊಳ್ಳಬಹುದು.
7. ನೀರಿಗಾಗಿ ಪಾಕಿಸ್ತಾನ ಈ ಮೂರು ನದಿಗಳ ಮೇಲೆ ಹೆಚ್ಚಾಗಿ ಅವಲಂಬಿಸಿದೆ.
8. ಪಾಕಿಸ್ತಾನದ ನಿಯಂತ್ರಣದಲ್ಲಿರೋ ನದಿ ನೀರನ್ನು ಭಾರತ ಬಳಸ್ಕೊಳ್ಳಕ್ಕೆ ಕೆಲವೊಂದು ನಿರ್ಬಂಧಗಳಿವೆ.
9. ಭಾರತ ಮೂಲದ ಮೂರು ನದಿಗಳು ಬಂದ್ ಆದ್ರೆ ಪಾಕಿಸ್ತಾನಕ್ಕೆ ನೀರು ಹೋಗಲ್ಲ. ಅಲ್ಲಿ ಕ್ಷಾಮ, ಬರಗಾಲ ತಲೆದೋರುತ್ತೆ. ಪಾಕಿಸ್ತಾನದ ಆತಂಕಕ್ಕೆ ಕಾರಣ ಆಗಿರೋದು ಇದೇ ವಿಚಾರ. ಆದರೆ ಆ ರೀತಿ ಮಾಡೋ ಹಂಗಿಲ್ಲ ಅಂತ ಒಪ್ಪಂದ ಎರಡೂ ದೇಶಗಳಿಗೆ ಸ್ಪಷ್ಟವಾಗಿ ಹೇಳಿದೆ.
10. ಆದರೂ ಪಾಕಿಸ್ತಾನ ಆಗಾಗ ನಮಗೆ ಸಾಕಾಗೋ ಅಷ್ಟು ನೀರು ಬರ್ತಿಲ್ಲ ಅಂತ ಬೊಬ್ಬೆ ಹೊಡೀತಿರುತ್ತೆ.
11. ವಿಶ್ವಸಂಸ್ಥೆ ಪ್ರಕಾರ, ಇದುವರೆಗೂ ಮೂರು ಯುದ್ಧಗಳು ನಡೆದಿದ್ರೂ 1960ರ ಸಿಂಧು ನದಿ ನೀರು ಹಂಚಿಕೆ ಯಾವುದೇ ವಿವಾದಕ್ಕೆ ಗುರಿಯಾಗಿಲ್ಲ. ಇದೆಲ್ಲಸಾಧ್ಯ ಆಗಿರೋದು ಪರಸ್ಪರ ಸಹಕಾರ ಬುದ್ಧಿಯಿಂದ ಮಾತ್ರ ಅಂತ ಹೇಳಿದೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: