http://indgest.com/wp-content/uploads/2016/05/goddess-lakshmi.jpg

ಕನಕಧಾರಾ ಸ್ತೋತ್ರ ಅಂತ ಒಂದಿದೆ. ಅದನ್ನ ಶಂಕರಾಚಾರ್ಯರು ಬರೆದಿರೋದು. ಅದನ್ನ ಯಾರ್ಯಾರು ಓದ್ತಾರೋ ಅವರಿಗೆಲ್ಲ ಸಿಕ್ಕಾಪಟ್ಟೆ ದುಡ್ಡು ಸಿಗತ್ತೆ ಅನ್ನೋದ್ ಒಂದ್ ನಂಬಿಕೆ.

1. ಇದನ್ನ ಬರೆದವ್ರು ಆದಿ ಶಂಕರಾಚಾರ್ಯರು

ಆದಿ ಶಂಕರಾಚಾರ್ಯರು ನಮ್ ದೇಶದಲ್ಲೇ ದೊಡ್ಡ ಯತಿಗಳು ಅಂತ ಹೆಸರು ಮಾಡಿದವ್ರು. ಇವರು ಎಂಟು ವರ್ಷಕ್ಕೇ ಸನ್ಯಾಸಿ ಆಗಿ, ಅದ್ವೈತ ಧರ್ಮಾನ ಪ್ರತಿಪಾದಿಸಿದ್ರು.

2. ಭಿಕ್ಷೆ ಬೇಡ್ತಾ ಅವರು ಒಬ್ಬ ಬಡ ಹೆಂಗಸಿನ ಮನೆ ಹತ್ರ ಬಂದ್ರಂತೆ

ಒಂದು ದಿನ ಅವರು ಭಿಕ್ಷೆ ಬೇಡ್ತಾ ಒಬ್ಬ ಬಡವನ ಮನೆಗೆ ಬಂದ್ರಂತೆ. ಅವರ್ಮನೇಲಿ ಅವರಿಗೇ ತಿನ್ನಕ್ಕೆ ಇರ್ಲಿಲ್ಲ ಇನ್ನ ಈ ಸನ್ಯಾಸಿಗೆ ಏನು ಕೊಡಕ್ಕೆ ಸಾಧ್ಯ?

3. ಅವರ ಮನೇಲಿ ಒಂದ್ ನೆಲ್ಲೀಕಾಯಿ ಬಿಟ್ಟು ಇನ್ನೇನೂ ಇರ್ಲಿಲ್ವಂತೆ. ಅದನ್ನೇ ಶಂಕರಾಚಾರ್ಯರಿಗೆ ಕೊಟ್ಟುಬಿಟ್ರಂತೆ

ಅವತ್ತು ನೆಲ್ಲೀಕಾಯಿ ಪಾನಕ ಮಾಡಿ ಕುಡ್ಯಣ ಅಂತ ಒಂದೇ ಒಂದು ನೆಲ್ಲೀಕಾಯಿ ಇಟ್ಕೊಂಡಿದ್ರಂತೆ. ಅದನ್ನು ಸನ್ಯಾಸಿಗೆ ಕೊಟ್ಟು ತಾವು ಉಪವಾಸ ಇದ್ರಾಯ್ತು ಅಂತ ತೀರ್ಮಾನ ಮಾಡಿ ಅದನ್ನ ಶಂಕರಾಚಾರ್ಯರಿಗೆ ಕೊಟ್ರಂತೆ

4. ಆ ಮನೆಯವ್ರ ಬಡತನ ನೋಡಕ್ಕಾಗದೇ ಶಂಕರಾಚಾರ್ಯರು ಲಕ್ಷ್ಮೀ ಸ್ತೋತ್ರ ಹೇಳಿದ್ರಂತೆ

ಅಷ್ಟು ಬಡವರಾದ್ರೂ ನಂಗೆ ಇಷ್ಟು ಭಿಕ್ಷೆ ಕೊಡೋ ಮನಸಿದ್ಯಲ್ಲ ಇವರಿಗೆ ಅಂತ ಶಂಕರಾಚಾರ್ಯರಿಗೆ ಒಂತರಾ ಆಯ್ತಂತೆ. ಅದಕ್ಕೇ ಲಕ್ಷ್ಮೀ ಪ್ರಾರ್ಥನೆ ಮಾಡಿ ನಿಮ್ಮ ಬಡತನ ಹೋಗಿಸ್ತೀನಿ ಅಂತ ಲಕ್ಷ್ಮೀಸ್ತುತಿ ಮಾಡಿದ್ರಂತೆ.

5. ಅವರು 21 ಶ್ಲೋಕ ಮುಗ್ಸೋ ಹೊತ್ತಿಗೆ ಸಾಕ್ಷಾತ್ ಲಕ್ಷ್ಮೀದೇವಿ ಅವರ ಮುಂದೆ ಪ್ರತ್ಯಕ್ಷ ಆಗಿ ಏನ್ ಬೇಕಪ್ಪಾ ಅಂತ್ ಕೇಳಿದ್ಲಂತೆ

ಅವರು ಸ್ತೋತ್ರ ಮುಗಿಸ್ದಾಗ ಲಕ್ಷ್ಮೀದೇವಿ ಪ್ರತ್ಯಕ್ಷ ಆದ್ಲಂತೆ ಶಂಕರಾರ್ಯರ ಮುಂದೆ. ಆ ಮನೆಯವ್ರು ಬೆಚ್ಚಿಬಿದ್ರಂತೆ

6. ಆ ಮನೆಯವರ ಬಡತನ ಹೋಗಿಸಬೇಕು ಅಂತ ಶಂಕರಾಚಾರ್ಯರು ಪ್ರಾರ್ಥನೆ ಮಾಡಿದ್ರಂತೆ

ಈ ಬಡವರ ಮನೆ ಉದ್ಧಾರ ಮಾಡಮ್ಮ ಅಂತ ಶಂಕರರು ಲಕ್ಷ್ಮೀದೇವಿನ ಕೇಳಿದ್ರಂತೆ

7. ಲಕ್ಷ್ಮೀದೇವಿ ಮೊದಲು ಒಪ್ಪಲಿಲ್ವಂತೆ; ಆ ಹೆಂಗ್ಸು ಹೋದ್ ಜನ್ಮದಲ್ಲಿ ದಾನ ಮಾಡಿರ್ಲಿಲ್ಲ ಅದಿಕ್ಕೆ ಅವಳಿಗೆ ಲಕ್ಷ್ಮೀ ಕಟಾಕ್ಷ ಇಲ್ಲ ಅಂದ್ಲಂತೆ

ಹೋದ್ ಜನ್ಮದಲ್ಲಿ ಆ ಹೆಂಗ್ಸು ಏನೇನೂ ದಾನ ಮಾಡಿರ್ಲಿಲ್ಲ; ಅದಿಕ್ಕೆ ಅವಳಿಗೆ ಈ ಗತಿ ಬಂದಿದೆ. ನಾನೇನು ಮಾಡಕ್ಕಾಗಲ್ಲ ಅಂದ್ಬಿಟ್ಲಂತೆ ಲಕ್ಷ್ಮಿ

8. ಬ್ರಹ್ಮ ಬರ್ದಿರೋ ಹಣೆಬರಹಾ ಬದಲಾಯ್ಸಕ್ಕಾಗೋದ್ ನಿನ್ಕೈಲಿ ಮಾತ್ರ ಅಂತ ಶಂಕರಾಚಾರ್ಯರು ಹೇಳಿದ್ಮೇಲೆ ಲಕ್ಷ್ಮೀ ಒಪ್ಪಿ ಆ ಮನೆ ಮೇಲೆ ಚಿನ್ನದ ನೆಲ್ಲೀಕಾಯಿ ಮಳೆ ಸುರಿಸಿದ್ಲಂತೆ.

ಶಂಕರಾಚಾರ್ಯರು ಪಟ್ಟು ಬಿಡ್ಲಿಲ್ವಂತೆ. ಬ್ರಹ್ಮ ಬರೆದಿರೋ ಹಣೆ ಬರಹಾನೇ ಬದಲಾಯ್ಸೋ ಶಕ್ತಿ ಇದೆ ನಿಂಗೆ. ಇಷ್ಟ್ ಮಾತ್ರ ಮಾಡಕ್ಕಾಗಲ್ವ ಅಂತ ಬಿಡದೇ ಲಕ್ಷ್ಮೀನ ಒಪ್ಪಿಸಿದ್ರಂತೆ. ಆಗ ಅವಳು ಆ ಮನೆ ಮೇಲೆ ಚಿನ್ನದ ನೆಲ್ಲೀಕಾಯಿ ಮಳೆ ಸುರಿಸಿದ್ಲಂತೆ.

9. ಈ ಸ್ತೋತ್ರದಲ್ಲಿ ಅಷ್ಟಲಕ್ಷ್ಮೀರ್ನೂ ಶಂಕರಾಚಾರ್ಯರು ಸ್ತುತಿಸಿದಾರೆ. ಅವರ ಪಾಲಿಗೆ ಲಕ್ಷ್ಮಿ, ಸರಸ್ವತಿ, ಪಾರ್ವತಿ ಮೂರೂ ಜನಾನೂ ಒಂದೇ ದೇವರ ಅವತಾರಗಳು.

ಈ ಸ್ತೋತ್ರದಲ್ಲಿ ಅಷ್ಟಲಕ್ಷ್ಮಿ ಸಿದ್ಧಿ ಆಗಲಿ; ದರಿದ್ರ ದೂರ ಆಗ್ಲಿ ಅಂತ ಶಂಕರರು ಹೇಳ್ತಾರೆ. ಲಕ್ಷ್ಮಿ, ಸರಸ್ವತಿ, ಪಾರ್ವತಿ ಮೂರೂ ದೇವೀರೂ ಒಂದೇ ಅನ್ನೋ ಸ್ತೋತ್ರ ಬಹುಶಃ ಇದೊಂದೇ.

10. ಶಂಕರಾಚಾರ್ಯರ ಸ್ತುತಿಯಿಂದ ಲಕ್ಷ್ಮೀದೇವಿ ನೆಲ್ಲೀಕಾಯಿ ಸುರಿಸಿದ ಮನೆ ಈಗ್ಲೂ ಕಾಲಡಿಯಲ್ಲಿ ಇದೆ

ಸಾವಿರಾರು ವರ್ಷ ಆದ್ಮೇಲೂ, ಕೇರಳದಲ್ಲಿರೋ ಕಾಲಡಿಯಲ್ಲಿ ಆ ಮನೆ ಈಗ್ಲೂ ಇದೆ ಅಂತ ಜನ ನಂಬಿದಾರೆ.

ಈ ಸ್ತೋತ್ರನ ಯಾರ್ಯಾರು ಓದ್ತಾರೋ, ಅವರಿಗೆ ಲಕ್ಷ್ಮೀದೇವಿ ಒಳ್ಳೇದ್ ಮಾಡ್ತಾಳೆ ಅಂತಾರೆ. ಇಲ್ಲಿ ಕೇಳಿಬಿಡಿ: