ಲವ್ವು ಗಿವ್ವು ಅಂತ ತಲೆ ಕೆಡುಸ್ಕೊಳೋರ್ಗಿಂತ ಕೆಡುಸ್ಕೊಳ್ದೆ ಇರೋರ ಜೀವನ ಈ 12 ರೀತಿಯಲ್ಲಿ ವಾಸಿ

ನಿಜವಾದ ಹಿತೈಷಿಗಳ ಜೊತೆ ಟೈಮ್ ಕಳೀಬೋದು

ಲವ್ವಲ್ಲಿ ಬೀಳೋರ ಗತಿ ಏನಾಗುತ್ತೆ ಅಂತ ನೀವೇ ಬೇಕಾದಷ್ಟು ಸಿನ್ಮಾ ನೋಡಿ ತಿಳ್ಕೊಂಡಿರ್ತೀರಿ. ಅದ್ರ ಬಗ್ಗೆ ನಾನೇನು ಹೇಳ್ಬೇಕಾಗಿಲ್ಲ... ಆದ್ರೆ ಈ ಲವ್ವುಗಿವ್ವಲ್ಲಿ ಬೀಳ್ದೇ ಇರೋದ್ರಿಂದ ಒಂದಿಷ್ಟು ಲಾಭಗಳಿವೆ, ಅದ್ರ ಬಗ್ಗೆ ಹೇಳ್ತಿವಿ ಬನ್ನಿ:

1. ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಕೊಂಡು ವಾಟ್ಸಾಪ್ ಮೆಸೇಜಲ್ಲಿ ನೀಲಿ ಟಿಕ್ಕಿಗೆ ಕಾಯ್ಬೇಕಾಗಿಲ್ಲ
2. ಫೋನು, ಮೆಸೇಜು, ತಿರುಗಾಟ ಎಲ್ಲಾ ನಿಂತ್ರೆ ದುಡ್ ಉಳಿಯುತ್ತೆ, ಅದನ್ನೇ ನೀವು ಬೇರೆ ಏನಕ್ಕಾದ್ರೂ ಬಳಸ್ಬೋದು
3. ಲವರ್ ಸಿಟ್ಟು ಮಾಡ್ಕೊಂಡ್ರೆ ಮುದ್ದು, ಬಂಗಾರ ಅಂತೆಲ್ಲಾ ಪೂಚಣಿಸಿಕೊಂಡು ಸುಳ್‍ಸುಳ್ಳು ನಾಟಕ ಎಲ್ಲಾ ಮಾಡ್ಬೇಕಾಗಲ್ಲ
4. ನಿಮ್ಮ ನಿಜವಾದ ಸ್ನೇಹಿತರ ಜೊತೆ, ಹಿತೈಶಿಗಳ ಜೊತೆ ಟೈಮ್ ಕಳೀಬೋದು
5. ನಿಮಿಗ್ ಬೇಕಾದ ಸಿನ್ಮಾ ನೋಡ್ಬೋದು, ಬೇಕಾದ ಕಡೆ ಹೋಗ್ಬೋದು; ಯಾರ್ನೂ ಮೆಚ್ಚಿಸಬೇಕಾಗಿಲ್ಲ
6. ನೀವ್ ಮಾಡೋ ಯಾವ್ದೇ ಕೆಲ್ಸಕ್ಕೆ ಸಮಜಾಯಿಶಿ ಕೊಡಬೇಕಾಗಲ್ಲ, ರಾಜರ ಥರ ಬಾಳ್ಬೋದು
7. ಯಾರಿಗ್ ಬೇಕೋ ಗಾಳ ಹಾಕ್ಬೋದು... ಒಬ್ರಿಗೇ ಮೀಸಲಾಗಿರಲ್ವಲ್ಲ, ಹಂಗಾಗಿ ತೊಂದ್ರೆ ಇಲ್ಲ
8. ಒಬ್ಬೊಬ್ರೇ ಟ್ರಿಪ್ ಹೋಗ್ಬೋದು.. ಆ ಮಜಾನೇ ಬೇರೆ....
9. ಓದು ಬರಹದ ಬಗ್ಗೆ ಗಮನ ಕೊಡ್ಬೇಕು ಅನ್ನೋ ಬುದ್ಧಿ ಬೆಳೆಯೋಕ್ಕೆ ಅವಕಾಶ ಇರುತ್ತೆ
10. ಒಳ್ಳೊಳ್ಳೆ ಹೊಸ ಹವ್ಯಾಸಗಳನ್ನ ಬೆಳೆಸ್ಕೊಳಕ್ಕೆ ಟೈಮ್ ಸಿಗುತ್ತೆ
11. ಸಾಧನೆ ಬಗ್ಗೆ ಮೊದ್ಲು ಗಮನ ಕೊಟ್ಟು, ಮದುವೆ ಬಗ್ಗೆ ಆಮೇಲ್ ಯೋಚಿಸಬೋದು, ಬೇಗ ಮದ್ವೆ ಆಗ್ಬೇಕು ಅನ್ನೋ ಒತ್ತಡ ಇರೋದಿಲ್ಲ
12. ನೆಮ್ಮದಿಯಾಗಿ ನಿದ್ದೆ ಮಾಡ್ಬೋದು ಕಣ್ರೀ... ಅದಕ್ಕಿಂತಾ ಜೀವನದಲ್ಲಿ ಇನ್ನೇನ್ ಬೇಕು?

ಇಷ್ಟೆಲ್ಲಾ ಒಳ್ಳೇದಿರ್ಬೇಕಾದ್ರೆ ಈ ಲವ್ವು ಗಿವ್ವೆಲ್ಲಾ ಬೇಕಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: