ಹುಡುಗೀರ್ನ ಅರ್ಥ ಮಾಡ್ಕೋಬೇಕಾದ್ರೆ ಅವರು ಮಾತಿಲ್ಲದೆ ಮಾಡೋ ಈ 10 ಸನ್ನೆ ಅರ್ಥ ಮಾಡ್ಕೊಳಿ

ಯಾವ ನಗು ನಿಜವಾದ್ದು?

ಈ ಹುಡ್ಗೀರೇ ಹಿಂಗೆ... ಎಲ್ಲಾ ಬಾಯ್ ಬಿಟ್ಟು ಹೇಳಲ್ಲ. ನಾವಾಗೇ ಎಲ್ಲಾ ಅರ್ಥ ಮಾಡ್ಕೋಬೇಕು ಅಂತಾರೆ. ಅದ್‍ಹೆಂಗ್ ಆಗುತ್ತೆ ಅಂತೀರಾ? ಆಗುತ್ತೆ... ಸರಿಯಾಗಿ ಔರು ಮಾತಾಡದೇ ಆಡೋ ಮಾತನ್ನ ಗಮನಿಸಿದ್ರೆ ಆಗುತ್ತೆ.  ಹೆಂಗೆ ಅಂತ ಹೇಳ್ತೀವಿ ಬನ್ನಿ: 

1. ಔಳು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೆ ನಿಮ್ಮ ಮಾತಿನ ಬಗ್ಗೆ ತುಂಬಾ ಗಮನ ಕೊಡ್ತಿದಾಳೆ ಅಂತ ಅರ್ಥ

ಔಳಿಗೆ ನಿಮ್ಮ ಮಾತಿನ ಬಗ್ಗೆ ಗಮನ ಇರೋದರ ಜೊತೆಗೆ ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಅಂತಾನೂ ಅರ್ಥ. ಅಲ್ದೇ ನೀವು ಬೇರೆ ಎಲ್ಲೋ ನೋಡ್ತಿರುವಾಗ ಯಾವ್ದಾದ್ರೂ ಹುಡ್ಗಿ ನಿಮ್ ಕಡೆ ನೋಡ್ತಿದ್ದು, ನೀವು ಔಳ್ ಕಡೆ ನೋಡಿದ ತಕ್ಷಣ ಔಳು ಬೇರೆ ಕಡೆ ನೋಡಿದ್ರೆ, ಔಳು ನಿಮ್ಗೆ ಮನಸೋತಿದಾಳೆ ಅಂತ ಅರ್ಥ.

2. ನಿಮ್ಮ ಮುಂದೆ ಕೈಕಟ್ಕೊಂಡು ಮಾತಾಡ್ತಿದ್ರೆ, ಔಳಿಗೆ ನಿಮ್ಮ ಬಗ್ಗೆ ನಂಬಿಕೆ ಇಲ್ಲ ಅಂತ ಅರ್ಥ

ನಿಮ್ಮ ಜೊತೆ ಇರೋದು ಔಳಿಗೆ ಏನೋ ಅನಾನುಕೂಲ ಆಗ್ತಿದೆ ಆದ್ರೆ ಹೇಳ್ಕೊಳಕ್ಕಾಗ್ತಿಲ್ಲ ಅಂತ ತಿಳ್ಕೋಬೋದು. ನಿಮ್ಮಿಂದ ಔಳು ತನ್ನನ್ನ ತಾನು ರಕ್ಷಿಸ್ಕೋಬೇಕು ಅನ್ನೋ ಯೋಚನೆ ಔಳಿಗಿದೆ ಅಂತ ಅರ್ಥ.

3. ಹುಡ್ಗೀರು ಮುಂಗುರುಳು ಸರಿ ಮಾಡ್ಕೋತಾ ಮಾತಾಡೋದು ನೀವು ಔರ್ ಕಡೆ ನೋಡ್ಲಿ ಅಂತಾನೆ

ಇದು ಹೆಚ್ಚಾಗಿ ಫ್ಲರ್ಟ್ ಮಾಡೋ ಹುಡ್ಗೀರ ಲಕ್ಷಣ...

4. ಒಂದು ಹುಡ್ಗಿ ನಿಮ್ಮ ಹೆಗಲ ಮೇಲೆ ಕೈ ಹಾಕ್ಕೊಂಡ್ ಮಾತಾಡ್ತಾಳೆ ಅಂದ್ರೆ, ಔಳಿಗೆ ನೀವು ಇನ್ನಷ್ಟು ಹತ್ರ ಆಗ್ಲಿ ಅಂತ ಇಷ್ಟ

ಅಲ್ಲಿಗೆ ಔಳಿಗೆ ನಿಮ್ ಕಂಡ್ರೆ ತುಂಬಾ ಇಷ್ಟ ಅಂತ ಬಿಡಿಸಿ ಬೇರೆ ಹೇಳ್ಬೇಕಾಗಿಲ್ಲ. ನೀವಿಬ್ರೂ ದೂರ ಇರೋದು ಔಳಿಗೆ ಇಷ್ಟ ಆಗ್ದೇ ಹೋದ್ರೆ ಔಳೇ ಸಲಿಗೇಗೆ ನಿಮ್ಮ ಹೆಗಲ ಮೇಲೆ ಕೈ ಹಾಕ್ಬೋದು.

5. ಮೈಯ್ಯನ್ನ ನಿಮ್ಮ ಕಡೆ ತಿರಿಗಿಸ್ಕೊಂಡು ಮಾತಾಡ್ತಿದ್ರೆ, ನಿಮ್ಮ ಮಾತಿನ ಬಗ್ಗೆ ಆಸಕ್ತಿ ಇದೆ ಅಂತ ಅರ್ಥ

ನಿಮ್ಮ ಬಗ್ಗೆ ಆಸಕ್ತಿ ಇದ್ದು ನಿಮ್ಮ ಮಾತನ್ನ ಕೇಳಿಸ್ಕೋಬೇಕು, ನಿಮ್ಮ ಬಗ್ಗೆ ತುಂಬಾ ತಿಳ್ಕೋಬೇಕು ಅಂತಿರೋ ಹುಡ್ಗಿ ನಿಮ್ ಕಡೆಗೆ ತಿರುಗಿ ಮಾತಾಡ್ತಾಳೆ. ಅಲ್ಲೆಲ್ಲೋ ನೋಡ್ಕೊಂಡು, ಬೇರೆ ಕಡೆ ತಿರುಗ್ಕೊಂಡು ಮಾತಾಡಲ್ಲ. ಆದ್ರೆ, ನೀವು ಔಳ ಕಡೆಗೇನಾದ್ರು ವಾಲಿದಾಗ ಔಳು ದೂರ ಹೋದ್ರೆ,ಆಗ ಔಳಿಗೆ ನಿಮ್ಮ ಹತ್ರ ಬರೋಕ್ಕೆ ಹಿಂಜರಿಗೆ ಇದೆ ಅಂತ ಅರ್ಥ.

6. ಕೈಗೆ ಸಿಗೋ ಮೊಬೈಲು, ಉಂಗುರ, ಸರ ಹಿಡ್ಕೊಂಡು ಗಬರಾಡ್ತಿದ್ರೆ ಔಳು ಗಾಬರಿ ಆಗಿದಾಳೆ ಅಂತ ಅರ್ಥ

ಏನಾದ್ರೂ ಮಾತಾಡ್ಸಕ್ಕೆ ಮುಂಚೆ ಸ್ವಲ್ಪ ಆರಾಮಾಗಿರಕ್ ಬಿಡಿ. ಔರು ಸೆಟಲ್ ಆದ್ಮೇಲೆ ಮಾತಾಡಿ.

7. ಹುಡ್ಗಿ ನಾಚ್ಕೊಂಡ್ಳು ಅಂದ್ರೆ ನೀವು ಔಳ ಮನಸನ್ನ ಸೆಳೆದಿದ್ದೀರಿ ಅಂತಾನೇ ಅರ್ಥ

ಹುಡ್ಗೀರು ನಾಚ್ಕೋಬೇಕು ಅಂದ್ರೆ ಔರಿಗೆ ನಿಮ್ ಮೇಲೆ ಲವ್ ಆಗಿರ್ಬೇಕು, ಇಲ್ಲಾ ನೀವು ಏನಾದ್ರೂ ಔರನ್ನ ಹೊಗಳಿರಬೇಕು, ಇಲ್ಲಾ ಔಳಕಡೇನೇ ದಿಟ್ಟಿಸಿ ನೋಡಿರಬೇಕು.

8. ನಿಮ್ ಜೊತೆ ಮಾತಾಡ್ಬೇಕಾದ್ರೆ ಹಾದು ಹೋಗೋರಿಗೆ ಹೈ-ಬೈ ಹೇಳ್ತಿದ್ರೆ ಔಳಿಗೆ ನಿಮ್ಮ ಮಾತಲ್ಲಿ ಆಸಕ್ತಿ ಇಲ್ಲ ಅಂತ ಅರ್ಥ

ಕೆಲುವು ಹುಡ್ಗೀರು ಔರಿಗಿಷ್ಟ ಇಲ್ದೇ ಇರೋರು ಔರತ್ರ ಮಾತಾಡ್ತಿದ್ರೆ ತಮ್ಮ ಉಗುರು ನೋಡ್ಕೊಳೋದು, ಕಿಟಕಿ ಹೊರಗಡೆ ನೋಡೋದು, ಕೆಲ್ಸ ಮಾಡ್ತಾನೇ ಇರೋದು, ಬೇರೆ ಯಾರನ್ನಾದ್ರೂ ಮಾತಾಡ್ಸೋದು ಮಾಡ್ತಾರೆ. ನಿಮ್ ಜೊತೆ ಮಾತಾಡುವಾಗ ಯಾವ್ದಾದ್ರೂ ಹುಡ್ಗಿ ಹೀಗ್ ಮಾಡ್ತಿದ್ರೆ ಒಂದೋ ಔಳಿಗೆ ತುಂಬಾ ಸ್ಟ್ರೆಸ್ ಆಗಿದೆ, ಇಲ್ಲಾ ನಿಮ್ ಮಾತು ಬೋರಾಗ್ತಿದೆ.

9. ಔಳು ನಿಮ್ಮನ್ನ ನೋಡಿ ಸ್ಮೈಲ್ ಕೊಟ್ಟಾಗ ಔಳ ಕಣ್ಣುಗಳೂ ಅರಳಿದ್ರೆ ಅದು ನಿಜವಾದ ನಗು - ನೀವು ಮುಂದುವರೀಬೋದು, ಇಲ್ದೇ ಹೋದ್ರೆ ಹಾಗೆ ಸುಮ್ನೆ ಕೊಡೋ ಸ್ಮೈಲು ಅಷ್ಟೇ

ಇಲ್ಲೇ ನಮ್ ಹುಡುಗ್ರು ಯಾವಾಗ್ಲೂ ಯಾಮಾರದು...

10. ನೀವು ಸುಮಾರಾಗಿರೋ ಜೋಕು ಹೇಳಿದ್ರೂ ಔಳು ನಗ್ತಾಳೆ ಅಂದ್ರೆ, ಔಳಿಗೆ ನಿಮ್ ಕಂಡ್ರೆ ತುಂಬಾನೇ ಇಷ್ಟ

ನೀವು ಒಂದ್ಸಲ ಔಳಿಗೆ ಇಷ್ಟ ಆದ್ರಿ ಅಂದ್ರೆ ನೀವ್ ಏನಾಡಿದ್ರೂ ಚಂದ ನೋಡಿ... ಔಳಿಗೆ ಅಷ್ಟೊಂದು ಇಷ್ಟ ಆಗ್ದೇ ಹೋದ್ರೂ ನಿಮಿಗ್ ಖುಶಿ ಆಗ್ಲಿ ಅಂತಾನಾದ್ರೂ ನಗ್ತಾಳೆ. ಅಥವಾ ನಿಮ್ಮ ಜೊತೆ ಔಳಿಗೆ ತುಂಬಾ ಇಷ್ಟ ಆಗ್ತಿರ್ಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: