ಈ 10 ವಿಷಯ ಓದಿದ ಮೇಲೆ ನಿಮಗೆ ತುಪ್ಪದ ಬಗ್ಗೆ ಇರೋ ಡೌಟೆಲ್ಲ ಹೋಗುತ್ತೆ

ಒಬ್ಬೊಬ್ಬರು ಒಂದೊಂದ್ ಹೇಳುವಾಗ ಗೊಂದಲ ಹೋಗಿಸ್ತೀವಿ ಬನ್ನಿ

ತುಪ್ಪ ಅಂದ್ರೆ ಕೆಲವರಿಗೆ ಆಗಲ್ಲ. ಇನ್ ಕೆಲವರಿಗೆ ತುಪ್ಪ ಇಲ್ದೆ ಒಂದೇ ಒಂದ್ ತುತ್ತು ಅನ್ನ ಸೇರಲ್ಲ. ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ ಅನ್ನೋ ಮಾತಿದೆ. ಆ ಮಾತೇ ಸಾಕು ತುಪ್ಪಕ್ಕಿರೋ ಬೆಲೆ ಏನು ಅಂತ ಹೇಳಕ್ಕೆ. ತುಪ್ಪ ತಿಂದ್ರೆ ದಪ್ಪಗಾಗ್ತಾರೆ, ಆರೋಗ್ಯಕ್ಕೆ ಒಳ್ಳೇದಲ್ಲ, ತುಂಬಾ ಫ್ಯಾಟದು, ಹಾಗೆ ಹೀಗೆ ಅಂತ ಹೇಳೋರು ಜಾಸ್ತಿ ಜನ ಇದ್ದಾರೆ. ತುಪ್ಪ ತಿನ್ನೋದ್ರಿಂದ ನಮ್ ದೇಹಕ್ಕೆ ಸಾಕಷ್ಟು ಲಾಭ ಇದೆ.

1. ಮಿದುಳಿಗೆ, ನರನಾಡಿಗಳಿಗೆ ಒಳ್ಳೇದು ತುಪ್ಪ

ಇದರಲ್ಲಿ ಇರೋ ಒಮೆಗಾ-3 ಮತ್ತೆ ಒಮೆಗಾ-6 ಅನ್ನೋ ಕೊಬ್ಬಿನ ಆಸಿಡ್ಸ್ ದೇಹದ ಆರೋಗ್ಯವನ್ನ ಕಾಪಾಡುತ್ತವೆ. ಒಮೆಗಾ-3 ಒಳ್ಳೆ ಕೊಲೆಸ್ಟ್ರಾಲ್ ಆಗಿದ್ದು ನಮ್ ದೇಹದ ಅಂಗಾಂಗ ಸರಿಯಾದ ರೀತೀಲಿ ಕೆಲಸ ಮಾಡೋಹಂಗೆ ಮಾಡುತ್ವೆ.

2. ಇದನ್ನ ತಿನ್ನೋದ್ರಿಂದ ಬುದ್ಧಿಮಾಂದ್ಯ, ಆಲ್ಜಿಮರ್ಸ್ ತರದ ಕಾಯಿಲೆಗಳು ಬರಲ್ಲ

ಮೇಲೆ ಹೇಳಿದ ಎರಡು ಆಸಿಡ್ಗಳು ಬುದ್ಧಿಮಾಂದ್ಯ, ಆಲ್ಜಿಮರ್ಸ್ (ಮರೆವಿನ ಕಾಯಿಲೆ) ತರದ ಕಾಯಿಲೆಗಳು ಅಷ್ಟು ಬೇಗ ಬರೋದಕ್ಕೆ ಬಿಡಲ್ಲ. ಪ್ರತಿ ದಿನ ಒಂದು ಪ್ರಮಾಣದಲ್ಲಿ ತುಪ್ಪ ತಿನ್ನೋದ್ರಿಂದ ಮಿದುಳಿನಲ್ಲಿರೋ ನಾಡಿ ವ್ಯವಸ್ಥೆ ಇನ್ನಷ್ಟು ಚುರುಕಾಗಿ ಕೆಲಸ ಮಾಡತ್ತೆ ಅಂತ ಸಂಶೋಧಕರು ಹೇಳ್ತಿದ್ದಾರೆ.

3. ತುಪ್ಪದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಜಾಸ್ತಿ ಇದೆ

ಅಡುಗೆಯಲ್ಲಿ ತುಪ್ಪ ಬಳಸೋದ್ರಿಂದ ಬೇರೆ ಎಣ್ಣೆಗಳಂತೆ ಸೀದುಹೋಗೋ ಗುಣ ಇದಕ್ಕಿಲ್ಲ.

4. ತುಪ್ಪ ತಿನ್ನೋದ್ರಿಂದ ಕ್ಯಾನ್ಸರ್ ಬರಲ್ಲವಂತೆ

ತುಪ್ಪದಲ್ಲಿ ನಮ್ ದೇಹದ ಜೀವಕೋಶಗಳನ್ನ ರಕ್ಷಿಸೋ ಗುಣಾನೂ ಇದೆ.

5. ತುಪ್ಪದೊಂದಿಗೆ ತಿಂದ ಊಟ ಸುಲಭವಾಗಿ ಅರಗತ್ತೆ

ಬೇಗ ಜೀರ್ಣ ಆಗೋಕ್ಕೆ ಬೇಕಾಗಿರೋ ರಸಾಯನಿಕಗಳನ್ನ ನಮ್ ಹೊಟ್ಟೆಲಿ ಬಿಡುಗಡೆ ಮಾಡುತ್ತೆ ತುಪ್ಪ. ನಮ್ ಹೊಟ್ಟೇಲಿ ಜೀರ್ಣ ಆಗೋ ಕೆಲಸ ಸರಿಯಾಗಿ ನಡೆದ್ರೆ ಅರ್ಧ ಆರೋಗ್ಯ ಸಮಸ್ಯೆಗಳು ಕಡಿಮೆಯಾದಂಗೆ ಅಲ್ಲವೆ?

6. ತುಪ್ಪ ತಿನ್ನೋದ್ರಿಂದ ಕೀಲುನೋವು, ಮೈಕೈ ನೋವು ಕಡಿಮೆಯಾಗುತ್ತೆ

ವಯಸ್ಸಾದಂತೆ ಮೊಳಕಾಲಿನ ಕೀಲುಗಳು ಸವೀತಾವೆ. ಮೂಳೆಗಳ ಶಕ್ತಿ ಕಡಿಮೆಯಾಗುತ್ತೆ. ಈ ತರದ ಸಮಸ್ಯೆಗಳು ಬರದಂತೆ ಮಾಡುತ್ತೆ ತುಪ್ಪ.

7. ತುಪ್ಪ ಆರೋಗ್ಯಕ್ಕೆ ಒಳ್ಳೇದು ಅಂತ ಎಲ್ಲರೂ ತಿನ್ನೋಹಂಗಿಲ್ಲ

ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ತುಂಬಾ ದಪ್ಪಗಿರೋರು ತುಪ್ಪವನ್ನ ಬಳಸ್ದೇ ಇರೋದೆ ಒಳ್ಳೇದು.

8. ತುಪ್ಪ ಬಹಳ ಬೇಗ ಕೆಡೋದಿಲ್ಲ

ತುಪ್ಪಾನ ಫ್ರಿಡ್ಜಲ್ಲಿ ಇಡಬೇಕಾಗಿಲ್ಲ. ಅದು ಬೇಗ ಕೆಡೋದು ಇಲ್ಲ. 100 ವರ್ಷಗಳ ತನಕ ತುಪ್ಪ ಕೆಡದೆ ಇರೋ ಉದಾಹರಣೆಗಳು ಇವೆ ಅಂತಾರೆ.

9. ಕೊಬ್ಬರಿ ಎಣ್ಣೆ ತರಹ ತುಪ್ಪದಲ್ಲೂ ತುಂಬಾ ಪೋಷಕಗಳಿವೆ

ಇದ್ರಲ್ಲಿರೋ ಫ್ಯಾಟಿ ಆಸಿಡನ್ನ ಲಿವರ್ ನೇರವಾಗಿ ಹೀರಿಕೊಂಡು ಶಕ್ತಿ ಬರೋಹಂಗೆ ಮಾಡುತ್ತೆ. ಮೈಯಲ್ಲಿ ಒಂದೇ ತೆರನಾದ ಶಕ್ತಿ ಇರೋಹಂಗೆ ತುಪ್ಪ ಮಾಡೋದ್ರಿಂದ ಅಥ್ಲೀಟ್ಗಳು ಇದನ್ನ ಬಳಸ್ಬೋದು.

10. ಆಯುರ್ವೇದದಲ್ಲಿ ಇದನ್ನ ಸಾತ್ವಿಕ ಆಹಾರ ಅಂದಿದ್ದಾರೆ

ತುಂಬಾ ಸಾತ್ವಿಕ ಆಹಾರವಾದ ಕಾರಣ ಇದನ್ನ ತಿನ್ನೋದ್ರಿಂದ ನಮ್ಮಲ್ಲಿ ಪಾಸಿಟೀವ್ ಬೆಳವಣಿಗೆಗೆ ಕಾರಣವಾಗತ್ತೆ ಅನ್ನುತ್ತೆ ಆಯುರ್ವೇದ.

ತುಪ್ಪವನ್ನ ಡಬ್ಬದಲ್ಲಿ ಬಿಗಿಯಾಗಿ ಮುಚ್ಚಿಡೋದ್ರೀಂದ ಬೇಗ ಹಾಳಾಗಲ್ಲ. 2-3 ತಿಂಗಳವರೆಗೂ ಕೆಡದಂಗೆ ಇರುತ್ತೆ. ಡಬ್ಬದಲ್ಲಿ ಮುಚ್ಚಿಟ್ಟು ಫ್ರಿಡ್ಜಲ್ಲಿ ಇಟ್ರೆ ಒಂದು ವರ್ಷದ ತನಕ ಹಾಳಾಗಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: