http://i0.wp.com/insights.nationalseminarstraining.com/wp-content/uploads/2015/03/90272211.jpg

ಸಾಣದ-ದೊಡ್ಡದ, ಹೊಸಾದ-ಹಳೇದ, ಭಾರತದ ಮೂಲದ್ದ ಇಲ್ಲಾ ಫಾರೆನ್ನ ಮೂಲದ್ದ…. ಕೆಲಸದಾಗ ಛೊಲೋ ರಿಸಲ್ಟ್ ಬರಬೇಕ ಅಂದರ ಛೊಲೋ ಕೌಶಲ್ಯ ಮತ್ತ ಟ್ಯಾಲೆಂಟ್ ಬೇಕ ಬೇಕು. ಹೊಸದಾಗಿ ಕೆಲಸಕ್ಕ ಸೇರಿದೋರ ಯಾವದ ಸೂಪರ್ವೈಸರ್ ಇಲ್ಲದನೂ ಛೊಲೋ ಕೆಲಸಾ ಮಾಡೇ ಮಾಡತಾರ. ಅದರ ಜತೀಗೆ ಕೆಲಸದ ಈ 10 ರೂಲ್ಸನ ಸುರು ಮಾಡಿದಾಗಿಂದಾನ ಕರೆಕ್ಟಾಗಿ ಅರ್ಥಾ ಮಾಡಿಕೆಂಡ ಪಾಲಿಸಿದರ ಛೊಲೋ ರಿಸಲ್ಟ ಕೊಡದರಾಗ ಡೌಟ ಇಲ್ಲ. ಹಂಗ ಅವಕಾಶಗೂಳನೂ ಹೆಚಿಗಿ ಆಕ್ಕಾವು. ಸಕ್ಸೆಸ್ಸನೂ ಪಡಕಾಬೋದು

1. ನಂಬಿಕೀಗೆ ಅರ್ಹರಾಗಿ ಇರ್ರಿ

ಯಾದರ ಕಂಪನೀಯರ ಆಗಿರಲಿ ತಮ್ಮ ಕಂಪನ್ಯಾಗಿರ ಕೆಲಸಗಾರರು ನಂಬಿಕೀಗೆ ಅರ್ಹರಾಗಿ ಇರ್ಲಿ ಅಂತ ಎಕ್ಸಪೆಕ್ಟೇಶನ್ ಇಟಗಂಡಿರತಾರ. ನಂಬಿಕಿ ನಿಮ್ಮ ಧೃಡತೇನ ತೋರಿಸ್ತತಿ ಹಂಗ ಟಾಯಮ ಹೋಗತಿದ್ದಂಗ ನಿಮ್ಮ ಬೆಲೀ ತೋರಿಸ್ತತಿ. ನಿಮಗ ವಹಿಸಿಕೊಟ್ಟಿರ ಕೆಲಸಾನ ಕರೆಕ್ಟಾಗಿ ಮಾಡ್ರಿ, ಅದರ ಪೂರ್ತಿ ಜವಾಬ್ದಾರೀನ ತಗಳ್ಳದೂ ಸೈತ ಭಾಳ ಇಂಪಾರ್ಟೆಂಟ್.

2. ಕೆಲಸದಾಗ ಪಾರದರ್ಶಕತೆ ಮತ್ತ ಪ್ರಾಮಾಣಿಕತನಾನ ತೋರಿಸರಿ

ಪ್ರಾಮಾಣಿಕತೆ ಪಾಲಿಸದ ಭಾಳ ಛೊಲೋ. ಪ್ರಾಮಾಣಿಕತೆ, ನಿಷ್ಠೆ ಅನ್ನದ ಎಲ್ಲಾ ಕಾಲದಾಗನೂ ಹೊಗಳಕೀಗೆ ಒಳಗಾಗ ಗುಣಾ. ಯಾವದ ಸಂಸ್ಥೇ ಆಗಲಿ ನಿಮಗ ವಹಿಸಿರ ಕೆಲಸಾನ ಪಾರದರ್ಶಕತೆ, ಪ್ರಾಮಾಣಿಕತೆಯಿಂದಾ ಮಾಡದ ಕೆಲಸದ ನೀತಿ. ಈ ವಿಷಯದಾಗ ಯಾವದ ರೀತಿಯ ಎರಡ ಥರದ್ದ ನೀತಿ ಪಾಲಿಸೋದ ಛೊಲೋ ಅಲ್ಲ.

ಮೂಲ

3. ಮಾಡ ಕೆಲಸ ಮತ್ತ ವರ್ತನೆ ಒಳಗ ಪೊಸಿಟಿವ್ವಾಗಿರ್ರಿ

ಕೆಲಸಕ್ಕ ಲೇಟಾಗಿ ಬರದು, ಸರಿಯಂಗ ಅರಿಬಿ ಹಕ್ಕೆಳ್ಳದಂಗ ಇರದು, ಅವಾಗಾವಾಗ ಕೆಲಸಾ ಚೇಂಜ ಮಾಡದು ಛೊಲೋ ಲಕ್ಷಣಾ ಅಲ್ಲ. ನೀವ ಮಾಡ ಕೆಲಸಾನ ಶಿಸ್ತಿನಿಂದ ಮಾಡದು, ಕೆಲಸ, ಕಂಪನಿ ಬಗ್ಗೆ ಪೊಸಿಟಿವ್ವ ಮನೋಭಾವನೆ ಇದ್ದರ ನಿಮ್ಮ ಮೇಲಾಧಿಕಾರಿಗೂಳ ಅಸ್ಟ ಅಲ್ಲ ನಿಮ್ಮ ಜತೀಗೆ ಕೆಲಸಾ ಮಾಡೋರೂ ಸೈತ ನಿಮ್ಮ ಪೊಸಿಟಿವ್ ಮನೋಭಾವದಿಂದಾ ಪ್ರೇರಣಾ ತಗಂತಾರ.

4. ರಿಸ್ಪೆಕ್ಟ ತೋರಸದನ್ನ ಮರೀಬಾಡರಿ

ಯಾವದ ಟಾಯಮಿನ್ಯಾಗಾದ್ರೂ ನೀವ ಕೆಲಸಾ ಮಾಡ ರೀತಿ, ವಿನಯದಿಂದ ಇರದು, ನಿಮ್ಮ ಜತೀಗೆ ಕೆಲಸಾ ಮಾಡರಿಗೆ, ಮೇಲಾಧಿಕಾರಿಗುಳಿಗೆ ರಿಸ್ಪೆಕ್ಟ ತೋರಸೋದನ್ನ ಮರೀಬಾಡರಿ. ಹಿಂಗ ಮಾಡದರಿಂದ ಯಾದರ ವಾದ ನಡದಾಗ, ಅಹಿತಕರ ಘಟನೆ ನಡದಾಗ ನೀವ ಘಟನೆಕಿಂತಾ ಮನಿಶಾರಿಗೆ, ಅವರ ಭಾವನೆಗೂಳಿಗೆ ಬೆಲೀ ಕೊಡತೀರಿ ಅಂತ ತೋರಿಸ್ತತಿ. ಇದರಿಂದ ನೀವ ಕೆಲಸಾ ಮಾಡ ಜಗಾದೊಳಗ ಛೊಲೋ ವಾತಾವರಣ ಇರತತಿ. ಹಂಗ ನಿಮ್ಮ ಜತೀಗೆ ಕೆಲಸಾ ಮಾಡರ ಜತೀಗೆ ರಿಲೇಶನ್ನೂ ಛೊಲೋ ಇರತತಿ.

ಮೂಲ

5. ಆಫೀಸಿನ ರೊಕ್ಕಾ, ಮಶೀನ್ನಗುಳನ ಸ್ವಂತಕ್ಕ ಉಪೇಗಿಸಿಕ್ಯಾಬಾಡರಿ

ಎಲ್ಲಾಕಿಂತಾ ಇದ ಭಾಳ ಇಂಪಾರ್ಟೆಂಟಾಗಿರ ರೂಲ್ಸು. ಆಫೀಸಿನ ರೊಕ್ಕಾ, ಮಿಶನ್ನುಗುಳನ ಸ್ವಂತಕ್ಕ ಉಪೇಗಿಸಿಕೆಂಡರ, ದುರುಪಯೋಗ ಮಾಡಿಕೆಂಡರ ತೊಂದರಿ ತಪ್ಪಿದ್ದಲ್ಲ. ಟಾಯಮ ಕೆಟ್ಟ ಇದ್ದರ ಜೈಲು ವಾಸಾ ಸೈತ ಮಾಡಬೇಕಾಗಬೋದು. ಕಂಪನಿ ರೊಕ್ಕಾ, ಸಾಮಾನುಗುಳನ ಸ್ವಂತಕ್ಕ ಉಪೇಗ್ಸದರಿಂದ ಕಂಪನಿಗೆ ಲಾಸ್ ಆದರ ನಿಮ್ಮನ ಕೆಲಸದಿಂದ ತಗದ ಹಾಕಬೋದು, ಎಚ್ಚರದಾಗಿರ್ರಿ.

6. ನಿಮ್ಮ ಕೆಲಸಕ್ಕ ಮ್ಯಾಚ್ ಆಗಂತಾ ಅರಿಬಿ ಹಕ್ಕೆರ್ರಿ

ಎಲ್ಲಾ ಕಂಪನ್ಯಾಗನೂ ಯಾವ ಯಾವ ದಿನಾ ಯಾವ ಯಾವ ಥರದ್ದ ಅರಿಬಿ ಹಕ್ಯಾಬೇಕ ಅನ್ನ ರೂಲ್ಸ್ ಇರತತಿ, ಆ ರೂಲ್ಸ್ ಪಾಲಸದನ್ನ ಮರೀಬಾಡರಿ. ಅಕಸ್ಮಾತಾಗಿ ನಿಮ್ಮ ಕಂಪನ್ಯಾಗ ರೂಲ್ಸ್ ಏನೂ ಇಲ್ಲ ಅಂದರೂನೂ ನಿಮ್ಮ ಜಾಬಿಗೆ ಮ್ಯಾಚ್ ಆಗ ಅಂತಾ ಅರಿಬಿ ಹಕ್ಕೆರ್ರಿ. ನಿಮ್ಮ ಅಳತೀಗೆ ಕರೆಕ್ಟಾಗಿ ಅರಿಬಿ ಹಕ್ಕೆರ್ರಿ. ಭಾಳ ಬಿಗಿ ಇಲ್ಲಾ ಸಡ್ಲಾ ಆಗಿರ ಅರಿಬಿ ಹಕ್ಕೆಳ್ಳದ ಸರಿ ಅಲ್ಲ.

ಮೂಲ

7. ಕೆಲಸದ ಜವಾಬ್ದಾರಿ ತಗರ್ರಿ

ಕೆಲಸ ಮಾಡೋ ಪದ್ಧತಿ ಹಂಗ ಅದರಿಂದ ಆಗ ಎಫೆಕ್ಟ ಎರಡೂ ನಿಮ್ಮ ಜವಾಬ್ದಾರಿ. ಯಾದರ ತಪ್ಪಾದರೂ ಅದನ್ನ ಒಪಿಗೆರ್ರಿ. ತಪ್ಪ ಮತ್ತ ಸೋಲಿನಿಂದ ಪಾಠಾ ಕಲೀರಿ. ಯಾದರ ತಪ್ಪಾದಾಗ ಏನರ ನೆವಾ ಹೇಳದು, ನಾನ ಮಾಡಿಲ್ಲ ಅನ್ನದ ಸರಿ ಅಲ್ಲ. ಈ ಥರದ ಮಾತ, ಭಾವನೆನ ಆದಸ್ಟೂ ಬಿಡದ ಛೊಲೋ.

8. ಗುಂಪಿನ್ಯಾಗಿದ್ದ ಕೆಲಸಾ ಮಾಡರಿ

ಯಾದರ ಕಂಪನಿ ಅಥ್ವಾ ವ್ಯಾಪಾರನ ಆಗಲೀ ಒಬ್ಬರಿಂದ ಮುಂದವರೆಲ್ಲ. ಸಕ್ಸೆಸ್ಸ ಸಿಗಬೇಕ ಅಂದರ ಅಲ್ಲಿ ಕೆಲಸ ಮಾಡ ಎಲ್ಲಾರೂ ಕಸ್ಟಾಪಡಬೇಕ. ಗುಂಪಿನ್ಯಾಗ ಕೆಲಸ ಮಾಡ ಮುಂದ ನಿಮ್ಮ ಮಾತಕತಿ, ಕೆಲಸಕ್ಕ ಸಂಬಂಧಪಟ್ಟ ಡಾಕ್ಯುಮೆಂಟಗುಳು, ಕಾಗದ ಪತ್ರಗುಳು ಎಲ್ಲಾರಿಗೂ ಈಜಿಯಾಗಿ ಸಿಗ ಹಂಗಿರಲಿ. ಬರೇ ನಿಮ್ಮ ಹಂತೇಲೆ ಇಟಗಂಡ ಎಲ್ಲಾದಕೂ ನಿಮ್ಮ ಮ್ಯಾಲನ ಅವರ ಡಿಪೆಂಡ್ ಆಗ ಹಂಗ ಮಾಡಬಾಡರಿ. ಹಿಂಗಿದ್ದಾಗ ನಿಮಗೂ, ನಿಮ್ಮ ಟೀಮಿಗೂ ಮತ್ತ ಕಂಪನೀಗೂ ಛೊಲೋ ಆಕ್ಕತಿ.

ಮೂಲ

9. ಕಾಟಾಚಾರಕ್ಕ ಕೆಲಸ ಮಾಡಬಾಡರಿ

ಕೆಲಸ ಮುಗಸಬೇಕ ಅಂತ ಕಾಟಾಚಾರಕ್ಕ ಏನರ ಮಾಡಿ ಮುಗೀತ ಅಂತ ಈಜಿಯಾಗಿ ಹೇಳಬೋದು, ಆದರ ಅದ ಸರಿ ಅಲ್ಲ. ನೀವ ಮಾಡಾಕತ್ತಿರ ಕೆಲಸದ ಉದ್ದೇಶ ಏನು, ಯಾಕ ಮಾಡಾಕತ್ತೀರಿ ಅಂತ ತಿಳಕಂಡ, ಕೆಲಸದ ರೂಲ್ಸನ ಕರೆಕ್ಟಾಗಿ ಪಾಲಿಸಿ ಕೆಲಸ ಮಾಡಿ ಮುಗಸರಿ. ಕಾಟಾಚಾರಕ್ಕ ಯಾ ಕೆಲಸಾನೂ ಮಾಡಬಾಡರಿ. ಇದ ನಿಮ್ಮನ ಭಾಳ ದೂರ ಕರಕಂಡ ಹೋಗಲ್ಲ.

10. ಶ್ಯಾಣೇತನದಿಂದ, ಕಸ್ಟಾ ಪಟ್ಟ ಕೆಲಸ ಮಾಡರಿ

ಕೆಲಸದ ಮ್ಯಾಟರಿಗೆ ಬಂದಾಗ ನಿಮ್ಮ ಕೈಲೆ ಆದಸ್ಟೂ ಛೊಲೋ ರಿಸಲ್ಟ ಬರ ಹಂಗ ನೋಡಿಕೆರ್ರಿ. ನಿಮಗ ವಹಿಸಿರ ಕೆಲಸದ ಬಗ್ಗೆ ಯಾದರ ಕಾರಣಕ್ಕ ಕೆಟ್ಟ ಮಾತನ ಆಡಬಾಡರಿ. ನಿಮಗ ವಹಿಸಿಕೊಟ್ಟ ಕೆಲಸದ ಬಗ್ಗೆ ನೆಗೆಟಿವ್ ಭಾವನೆ ಬೆಳೆಸಿಗೆಳ್ಳದ ಛೊಲೋ ಅಲ್ಲ. ಯಾದರ ಕುಂಟ ನೆವಾ ಹೇಳಿ ಕೆಲಸ ಮಾಡದರಿಂದ ತಪ್ಪಿಸಿಗೆಳ್ಳಾಕ ನೋಡಬಾಡರಿ. ನೀವ ಛೊಲೋ ಕೆಲಸಗಾರ ಆಗಿದ್ದರೂ ಹಿಂಗ ಮಾಡದರಿಂದ ಅವರು ಕೈಲೇ ಆಗದೋರು, ಕುಂಟ ನೆವಾ ಹೇಳತಾರ ಅನ್ನ ಮಾತಿಗೆ ಗುರಿ ಆಗಬೇಕಾಕ್ಕತಿ!

ಮೂಲ

ವೃತ್ತಿ ಪರತೆ ಅಂದರ ಕೆಲಸ ಮಾಡ ಜಗದಾಗ ನಿಮ್ಮ ನಡವಳಿಕೆ, ಮೌಲ್ಯಗೂಳು ಹಂಗ ರೀತಿ ನೀತಿ ಬಗ್ಗೆ ಹೇಳತತಿ. ಮಾಡ ಕೆಲಸಾದಾಗ ಸಕ್ಸೆಸ್ಸ ಸಿಗಬೇಕ ಅಂದರ ಈ ರೀತಿ ನೀತಿಗೂಳನ ಚಂದಾಗಿ ತಿಳಕಂಡ ಪಾಲಸಬೇಕು. ಎಲ್ಲಾ ಕಡೇನೂ ಇದಕ್ಕ ಇಂಪಾರ್ಟೆನ್ಸ್ ಕೊಡತಾರ.

ಈ ಛೊಲೋ ಅಭ್ಯಾಸಗುಳನ ಇಟಗಂಡಿರ ಕೆಲಸಗಾರರನ ಎಲ್ಲಾ ಕಡೆ ರಿಸ್ಪೆಕ್ಟಿಂದಾ ಕಾಣತಾರ. ಅಸ್ಟ ಅಲ್ಲ, ಅಂಥಾರ ತಮ್ಮ ಕಂಪನಿ ಬಿಟ್ಟ ಹೋಗದಂಗ ನೋಡಿಕೆಳ್ಳ ಪ್ರಯತ್ನಾನೂ ಮಾಡತಾರ. ನೀವ ಏನಾಗಬೇಕ ಅಂದಕಂಡೀರಿ ಅಂತ ಲಕ್ಷ್ಯಾದಾಗ ಇಟಗಂಡ ಮುಂದಿನ ಹೆಜ್ಜಿ ಇಟ್ಟರ ಛೊಲೋ.