https://files.brightside.me/files/news/part_

ದೇಶ ಸುತ್ತು ಕೋಶ ಓದು ಅನ್ನೋ ಮಾತು ದೊಡ್ಡೋರು ಹೇಳಿದಾರೆ. ಆದರೆ, ದೇಶಗಳು ಸುತ್ತುವಾಗ, ಅದರಲ್ಲೂ ವಿದೇಶಕ್ಕೆ ಹೋಗೋ ಮುಂಚೆ ಒಂದಷ್ಟು ವಿಷಯಗಳು ತಿಳ್ಕೊಂಡಿರಬೇಕಾಗತ್ತೆ. ಇಲ್ಲಿ ಇದ್ದಂಗೆ ಅಲ್ಲೂ ಇರಬೋದು ಅನ್ಕೊಂಡ್ರೆ ಕಷ್ಟಕ್ಕೆ ಸಿಕ್ಕಿಹಾಕೊಂಡಂಗೆ. ನಿಮಗೆ ಹಾಗೆಲ್ಲಾ ತೊಂದರೆ ಆಗಬಾರದು ಅಂಥಾನೆ ಇಲ್ಲೊಂದಿಷ್ಟು ವಿಚಾರ ಹೇಳಿದೀವಿ. ಇದೇನಪ್ಪಾ ವಿಚಿತ್ರ ಅನ್ಸಿದ್ರೂ ಇವೆಲ್ಲಾ ಸತ್ಯ.

1. ಬರೊಂಡಿಯಲ್ಲಿ ಬೆಳಗಾಗೆದ್ದು ಜಾಗಿಂಗ್ ಹೋದ್ರೆ, ಪೋಲೀಸರು ಅರೆಸ್ಟ್ ಮಾಡ್ತಾರೆ.


ಆಫ್ರಿಕಾದ ಈ ಜಾಗದಲ್ಲಿ ಜಾಗಿಂಗ್ ಅನ್ನೋದು ಯುದ್ಧಕ್ಕೆ ಸಮ. ಅದಕ್ಕೇ ಅಲ್ಲಿನ ಪ್ರೆಸಿಡೆಂಟ್ ಜಾಗಿಂಗ್ ಮೇಲೆ ನಿಷೇಧ ಹೇರಿದಾರೆ. 

2. ಮಲೇಷಿಯಾಗೆ ಹೋದಾಗ ಹಳದಿ ಬಟ್ಟೆ ಹಾಕ್ಕೋಬೇಡಿ. ಅದು ಪ್ರತಿಭಟನೆಯ ಸಂಕೇತ.


ಮಲೇಷಿಯಾದಲ್ಲೇನಾದ್ರೂ ನೀವು ಹಳದಿ ಬಟ್ಟೇಲಿ ಹೂವಿನ ಹಾಗೆ ಕಾಣ್ತೀನಿ ಅಂತ ಹಾಕ್ಕೊಂಡ್ರೆ ಫಜೀತಿ ಖಂಡಿತ. ಪ್ರತಿಭಟನೆ ಮಾಡ್ತಿದೀರ ಅಂತ ಪೋಲೀಸ್ ಮಾಮ ಎತ್ತಾಕ್ಕೊಂಡು ಹೋಗ್ತಾರೆ ಹುಷಾರ್.

3. ಬಾರ್ಬಡಾಸ್ ಊರಲ್ಲಿ ಖಾಕಿ ಬಟ್ಟೆ, ಹಾಗೇ ಮಿಲಿಟರಿ ಪ್ರಿಂಟ್ ಇರೋ ಬಟ್ಟೆ ಹಾಕೋ ಹಾಗಿಲ್ಲ.


ಬರೀ ಬಟ್ಟೆ ಮಾತ್ರ ಅಲ್ಲ. ಮಿಲಿಟರಿ ಪ್ರಿಂಟ್ ಇರೋ ಬ್ಯಾಗು, ಪರ್ಸು ಕೂಡ ಇಟ್ಕೊಳ್ಳೋ ಹಾಗಿಲ್ಲ. ಇದಕ್ಕೂ ಮೀರಿ ಇಟ್ಕೊಂಟ್ರೆ ಕಾನೂನು ರೀತಿ ಕ್ರಮ ತೊಗೋತಾರಷ್ಟೇ. 

4. ಮೈ ಪೂರ್ತ ಬಟ್ಟೆ ಇಲ್ಲದೆ ಥೈಲ್ಯಾಂಡ್ ಅಲ್ಲಿ ಕಾರು ಓಡಿಸೋ ಹಾಗಿಲ್ಲ.


ಆಚೆ ಸಿಕ್ಕಾಪಟ್ಟೆ ಶಕೆ ಅಂತ ಸ್ವಿಮ್ ಸೂಟ್ ಅಲ್ಲಿ ಕೂತು ಕಾರಲ್ಲಿ ಓಡಾಡೋ ಹಾಗಿಲ್ಲ. ಕಡ್ಡಾಯವಾಗಿ ಟೀಶರ್ಟ ಹಾಕಿರಬೇಕು. ಇಲ್ಲ ಅಂದ್ರೆ ಟ್ರಾಫಿಕ್ ಪೋಲೀಸ್ ಹಿಡಿದುಹಾಕ್ತಾರೆ.

5. ಇಟಲಿಯ ದ್ವೀಪಗಳಲ್ಲಿ ಕೇಪ್ರಿ ಜೊತೆ ಚಪ್ಪಲಿ ಹಾಕೊಂಡು ಸಮುದ್ರದ ಹತ್ತಿರ ಓಡಾಡೋ ಹಾಗಿಲ್ಲ.


ಬರೀ ಕಾಲಲ್ಲಿ ನಡೀಬೇಕು. ಚಪ್ಪಲಿ, ಶೂಗಳು ಮರಳಿನ ಮೇಲೆ ನಡೆದಾಗ ಶಬ್ದ ಮಾಡಿ ಬೇರೆಯವರಿಗೆ ಕಿರಿಕಿರಿ ಮಾಡತ್ತೆ ಅಂತ ಈ ನಿಯಮ.

6. ಕೆನಡಾ ದೇಶದಲ್ಲಿ ಸಿಳ್ಳೇ ಹಾಕೋ ಹಾಗಿಲ್ಲ. ಹಾಕಿದ್ರೆ, ದಂಡ ತೆರಬೇಕು.


ಒಳ್ಳೇ ಮೂಡಲ್ಲಿದೀರಾ ಅಂತ ಸಿಳ್ಳೆ ಹೊಡ್ಕೊಂಡು ದಾರೀಲಿ ಹೋದ್ರೆ, 250 ಕೆನೆಡಿಯನ್ ಡಾಲರ್ ದಂಡ ತೆರಬೇಕು. ಏನೇ ಖುಷಿ ಇದ್ರೂ ತೆಪ್ಪಗೆ ಬರಬೇಕು. 

8. ಇಟಲಿಯ ವೆನಿಸ್ ಬೀಚ್ ಅಲ್ಲಿ ಚೆಂಡಾಟ ಆಡೋದು, ಮರಳಿನ ಕಲಾಕೃತಿ ಮಾಡೋ ಹಾಗಿಲ್ಲ.

ಮರಳು ಚೆನ್ನಾಗಿದೆ ಅಂತ ಆಟ ಆಡೋ ಹಾಗಿಲ್ಲ. ನಿಶ್ಯಬ್ದವಾಗಿ ಕೂತು ಸಾಗರದ ಅಲೆಗಳ ಸಂಗೀತ ಕೇಳಬೇಕು. ಮರಳಿನ ದಂಡೆ ಮೇಲೆ ವಿಶ್ರಾಂತಿ ಪಡೆಯೋರಿಗೆ ತೊಂದರೆ ಆಗಬಾರದು ಅಂತ ಈ ಕಾನೂನು.

9. ಸೌದಿ ಅರೇಬಿಯಾದಲ್ಲಿ 16ವರ್ಷ ದಾಟಿದ ಹುಡುಗರು ಸೂಪರ್ ಮಾರ್ಕೆಟ್ಟಿಗೆ ಒಬ್ಬರೇ ಹೋಗೋ ಹಾಗಿಲ್ಲ.


ಅಲ್ಲಿನ ಹೆಣ್ಣುಮಕ್ಕಳ ನೈತಿಕ ಮೌಲ್ಯ ಉಳಿಸೋಕೆ ಈ ನಿಯಮ ಮಾಡಿರೋದು. 

10. ಯು.ಎ.ಇ ಮತ್ತು ಕೆಲವು ದುಬೈ ಬೀಚ್ಗಳಲ್ಲಿ ನೀವು ಸೆಲ್ಫೀ ತೊಗೊಳ್ಳೋ ಹಾಗಿಲ್ಲ.


ನಿಮ್ಮ ಮನೆಯವರು, ಸ್ನೇಹಿತರ ಜೊತೆ ಹೋದಾಗ ಅದೂ ಬೇರೆ ದೇಶಕ್ಕೆ ಹೋದಾಗ ನೂರಾರು ಸೆಲ್ಫೀ ತೊಗೊಳ್ಳೋ ಆಸೆ ಇರತ್ತೆ. ಸರಿ. ಆದರೆ ಕೆಲವು ಅರಬ್ ದೇಶದ ಕಾನೂನು ಎಷ್ಟೇ ವಿಚಿತ್ರ ಅನ್ಸಿದ್ರೂ ನೀವು ಮೀರೋ ಹಾಗಿಲ್ಲ.

11. ಕೀನ್ಯಾದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸೋ ಹಾಗಿಲ್ಲ.


ಏನಾದರು ಪ್ಲಾಸ್ಟಿಕ್ ಬ್ಯಾಗ್ ಜೊತೆ ನೀವು ಸಿಕ್ಕಿ ಹಾಕೊಂಡ್ರೆ ದುಬಾರಿ ದಂಡ ತೆರಬೇಕಾಗುತ್ತೆ. ಅದರ ಬದಲು ನಾಲ್ಕಾರು ಬಟ್ಟೆ ಬ್ಯಾಗು ಜೊತೆಗೆ ತೊಗೊಂಡು ಹೋಗೋದು ಕ್ಷೇಮ.

ಒಂದೊಂದು ದೇಶದ ಸಂಸ್ಕೃತಿ, ಆಚಾರ-ವಿಚಾರ, ಆಹಾರ, ಕಾನೂನು ಒಂದೊಂದು ತರ. ಆದರೆ ಸರಿಯಾಗಿ ತಿಳಕೊಂಡು ಆ ದೇಶದ ಕಾನೂನಿಗೆ ಬದ್ಧವಾಗಿ ನಡೆಯೋದ್ರಿಂದ ನಿಮ್ಮ ಪ್ರವಾಸ ಚೆನ್ನಾಗಿ ಆಗತ್ತೆ.  ಒಳ್ಳೆ ನೆನಪುಗಳು ಭದ್ರ ಆಗತ್ತೆ.

 ಚಿತ್ರ: brightside