https://antekante.com/sites/default/files/images/gut-feelings1.jpg

ಪ್ರಭಾವಿ ಶರೀರಶಾಸ್ತ್ರಜ್ಞ ವಾಲ್ಟಾರ್ ಕ್ಯಾನನ್ ಅನ್ನುವವರು 1915 ರಲ್ಲಿ, ಪ್ರಾಣಿಗಳಿಗೆ ಹೆದರಿಕೆ ಆದಾಗ ಅವುಗಳ ಹೊಟ್ಟೆಯಲ್ಲಾಗುವ ಬದಲಾವಣೆಯನ್ನು ಗುರುತಿಸಿದ್ದರು. ಇದೇ ರೀತಿಯ ಬದಲಾವಣೆಗಳು ಮನುಷ್ಯನಲ್ಲೂ ಆಗುತ್ತೆ. ತುಂಬಾ ಭಯವಾದಾಗ ಹೊಟ್ಟೆ ನೋವು, ಅತಿಯಾದ ಭೇದಿ ಇಂದ ಬಳಲಿರೋ ವರದಿಗಳಿವೆ. ನಮ್ಮ ಮನಸ್ಥಿತಿಗೂ ಹೊಟ್ಟೆಗೂ ನೇರವಾದ ಸಂಬಂಧ ಇದೆ ಅನ್ನೋದು ಗೊತ್ತಾಗಿದೆ. ಇಲ್ಲಿವೆ ಪುರಾವೆಗಳು.

ನಮ್ಮ ಮೆದುಳು ಕರುಳಿನ ಜೊತೆ ಸಂಪರ್ಕ ಹೊಂದಿದೆ. ಇತ್ತೀಚಿನ ಸಂಶೋಧನೆಗಳಿಂದ ಏನ್ ಗೊತ್ತಾಗಿದೆ ಅಂದ್ರೆ, ಮಾತಿನ ಚಿಕಿತ್ಸೆಯಿಂದ (ಟಾಕ್ ಥೆರಪಿ) ಡಿಪ್ರೆಶನ್ ತರದ ಮಾನಸಿಕ ಹಾಗು ಕರುಳು ಕಾಯಿಲೆಗಳನ್ನ ಗುಣಪಡಿಸೋದಕ್ಕೆ ಆಗತ್ತೆ. ಮೆದುಳು ಹಾಗು ಕರುಳಿನ ನಡುವೆ ಇರೋ ಸಂಪರ್ಕದಿಂದ ಕರುಳಿನ ಯಾವ ಭಾಗದಲ್ಲೇ ಸಮಸ್ಯೆ ಇದ್ದರು ಅದನ್ನ ಸರಿಪಡಿಸುವಂತೆ ಮೆದುಳಿಗೆ ಹೇಳುತ್ತೆ. ಈ ಮಾತಿನ ಚಿಕಿತ್ಸೆಯಿಂದ ಆತಂಕ, ಖಿನ್ನತೆ ದೂರವಾಗೋದಲ್ದೆ ಇದ್ರಿಂದ ಆಗೋ ಹೊಟ್ಟೆ ನೋವು ಕೂಡ ಶಮನ ಆಗುತ್ತೆ.

ಅತೀ ಭಯ, ಉದ್ವೇಗ ಇರೋರಿಗೆ ಹೊಟ್ಟೆ ತೊಂದ್ರೆ ಜಾಸ್ತಿ

ಸಾಮಾನ್ಯವಾಗಿ ಶೇಖಡಾ 20 ರಷ್ಟು ವಯಸ್ಕರು ಮತ್ತು ಹದಿಹರೆಯದವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಿಕ್ಕ ಮಕ್ಕಳು ಪರೀಕ್ಷೆಗೆ ಹೋಗೋ ಸಮಯದಲ್ಲೂ ಇದು ಹೆಚ್ಚಾಗಿ ಕಾಣ್ಸತ್ತೆ. ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಭೇದಿ, ಮಲಬದ್ಧತೆ ಸಮಸ್ಯೆಗಳು ಬರಬಹುದು.

ಕರುಳಿನಲ್ಲಿ ಹಿಂಡಿದಂತ ಅನುಭವ ಆದರೆ ಸಾಮಾನ್ಯವಾಗಿ ಅದನ್ನು ಜಠರ / ಕರುಳಿನ ಕಾರ್ಯಕ್ಷಮತೆಯಲ್ಲಿನ ದೋಷ ಅಂತಾರೆ. ಈ ರೀತಿಯ ರೋಗಳನ್ನು ಯಾವುದೇ ರೀತಿಯ ಪರೀಕ್ಷೆ ಅಲ್ಲದೆ ಬರಿ ಲಕ್ಷಣಗಳನ್ನು ನೋಡಿ ಗುರ್ತಿಸ್ತಾರೆ.

ಮೂಲ

ಮೆದುಳಿಗೂ ಹೊಟ್ಟೆಗೂ ಸಂಪರ್ಕ ಇರೋದು ಹಾರ್ಮೋನ್ಗಳು, ನರಮಂಡಲ ಹಾಗು ರೋಗನಿರೋಧಕಗಳ ಮುಖಾಂತರ

ನಾವು ಯಾವುದೇ ರೀತಿಯ ಒತ್ತಡಕ್ಕೆ ಒಳಗಾದರೆ ಅದರಿಂದ ಮೆದುಳು ಹಾಗು ಕರುಳಿನ ಸಂಪರ್ಕಕ್ಕೆ ತೊಂದರೆಯಾಗುತ್ತೆ, ಉರಿಯೂತ ಹೊಟ್ಟೆ ನೋವೂ ಕಾಣಿಸ್ಕೊಬಹುದು. ಒತ್ತಡದಿಂದಾಗಿ ನಮ್ಮ ಕರುಳಿನಲ್ಲಿ ವಾಸಿಸುವ ಉಪಕಾರಿ ಬ್ಯಾಕ್ಟಿರಿಯಾಗಳ ಮೇಲೆ ಪರಿಣಾಮ ಬೀರತ್ತೆ. ಅವುಗಳ ರೋಗನಿರೋಧಕ ಶಕ್ತಿಯನ್ನ ಕುಗ್ಗಿಸಿ ರೋಗ ಹೆಚ್ಚಿಸುವ ಬ್ಯಾಕ್ಟಿರಿಯಾಗಳನ್ನು ಆಕರ್ಷಿಸತ್ತೆ. ಇದ್ರಿಂದ ಕರುಳಿನಲ್ಲಿ ಸೋಂಕು, ಊತ ಹೆಚ್ಚಾಗೋ ಸಾಧ್ಯತೆ ಇರತ್ತೆ.

ದೀರ್ಘಕಾಲದ ಕರುಳಿನ ಸಮಸ್ಯೆ ನರಗಳ / ನರ ಸಂದೇಶಗಳ  ಮೇಲೂ ಪ್ರಭಾವ ಬೀರುತ್ತೆ. ಇದ್ರಿಂದ ನಮ್ಮ ಮೆದುಳಿನ ಹಾಗು ಕರುಳಿನ ಸಂಪರ್ಕ ಕಮ್ಮಿ ಆಗುತ್ತೆ. ಅಷ್ಟೇ ಅಲ್ಲ ಇದ್ರಿಂದ ನಮ್ಮಲ್ಲಿ ಇರೋ ಸೂಕ್ಷ್ಮ ಮನೋಭಾವ, ಸಕಾರಾತ್ಮಕ ಭಾವನೆಗಳೂ ಕಮ್ಮಿ ಆಗುತ್ತೆ.

ಈ ಹೊಟ್ಟೆ / ಕರುಳಿಗೆ ಸಂಭಂದಿಸಿದ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ 20% ಜನರಿಗೆ ಖಿನ್ನತೆ ಉಂಟಾಗುತ್ತೆ. 60% ಜನರಿಗೆ ಈ ಕಾಯಿಲೆ ತುಂಬಾ ಹೆಚ್ಚಾದಾಗ ಆತಂಕ, ಖಿನ್ನತೆಗೆ ಬಲಿಯಾಗತ್ತಿದ್ದಾರಂತೆ.

ಸುಮಾರು 9 ವರ್ಷಗಳಿಂದ ಕರುಳು / ಹೊಟ್ಟೆ ಉರಿಯಂತಹ ಕಾಯಿಲೆಯಿಂದ ಬಳಲುತ್ತಿರುವ 2007 ಜನರನ್ನು ಗಮನಿಸಿ, ಅವರ ಬಗ್ಗೆ ತಿಳಿದುಕೊಂಡಾಗ ಈ ಕಾಯಿಲೆಗೂ ಅವರಲ್ಲಿರುವ ಆತಂಕ, ಖಿನ್ನತೆಗೂ ಸಂಭಂದ ಇದೆ ಅಂತ ತಿಳಿದು ಬಂದಿದೆ. ಅದೇ ರೀತಿ ಭಯ, ಆತಂಕ, ಖಿನ್ನತೆಗೆ ಒಳಗಾದ್ರೆ  ಹೊಟ್ಟೆಗೆ ಸಂಬಂದಿಸಿದ ಕಾಯಿಲೆ ಬರೋದು ಜಾಸ್ತಿ.

ಮೂಲ

ಅಧ್ಯಯನಗಳ ಪ್ರಕಾರ ಕರುಳಿಗೂ ಮೆದುಳಿಗೂ ಸಂಬಂಧವಿರೋದು ಸಾಬೀತಾಗಿದೆ

ಕರುಳನ್ನು / ಕರುಳಿನ ರೋಗವನ್ನು ಕೆರಳಿಸುವ ಲಕ್ಷಣಗಳ ವಿಷಯಕ್ಕೆ ಬಂದಾಗ ನಡೆಸಿದ ಅಧ್ಯಯನಗಳು ಹೆಚ್ಚು ನಿರ್ಣಾಯಕವಾಗಿವೆ. 32 ಪ್ರಯೋಗಗಳನ್ನು ಒಟ್ಟುಗೂಡಿಸುವ ಒಂದು ಮೆಟಾ ವಿಶ್ಲೇಷಣೆಯ ಪ್ರಕಾರ, ಟಾಕ್ ಥೆರಪಿ ಮತ್ತು ಖಿನ್ನತೆ-ಶಮನಕಾರಿಗಳು ಕಾಯಿಲೆಯ ರೋಗಲಕ್ಷಣಗಳನ್ನು ಹೆಚ್ಚಿಸುತ್ತವೆ. 48 ಪ್ರಯೋಗಗಳನ್ನು ಒಳಗೊಂಡಂತೆ ಈ ಮೆಟಾ ವಿಶ್ಲೇಷಣೆಗೆ ಇತ್ತೀಚಿನ ನವೀಕರಣವು ಮತ್ತಷ್ಟು ಈ ಫಲಿತಾಂಶವನ್ನು ದೃಢಪಡಿಸಿದೆ.

ಪ್ಲಸೀಬೊ ಪಡೆದ ಗುಂಪಿನಲ್ಲಿ 35% ರಷ್ಟು ಜನರಿಗೆ ಹೋಲಿಸಿದರೆ, ಆಂಟಿಡಿಪ್ರೆಸೆಂಟ್ಗಳನ್ನು ತೆಗೆದುಕೊಂಡವರ ಪೈಕಿ 56% ರಷ್ಟು ಜನರಿಗೆ ಅತಿಸಾರ ಮತ್ತು ಮಲಬದ್ಧತೆ ಮುಂತಾದ ಲಕ್ಷಣಗಳು ಸುಧಾರಿಸಿದೆ ಎಂದು ಅಧ್ಯಯನಗಳು ತೋರಿಸಿವೆ.

ಪ್ಲೇಸ್ಬೊ ಪಡೆದವರಲ್ಲಿ  27% ರಷ್ಟು  ಜನರಿಗೆ, ಕಿಬ್ಬೊಟ್ಟೆಯ ನೋವು ಖಿನ್ನತೆಗೆ  ಔಷದಿ ತೆಗೆದುಕೊಂಡವರಿಗಿಂತ ಸುಮಾರು 52% ನಷ್ಟು ಹೆಚ್ಚಾಗಿದೆ.

ನಿಯಂತ್ರಣ ಗುಂಪುಗಳ ಸುಮಾರು 24% ರಷ್ಟು ಜನರಿಗೆ ಹೋಲಿಸಿದರೆ, ಮಾನಸಿಕ ಚಿಕಿತ್ಸೆಯನ್ನು ಸ್ವೀಕರಿಸುವ ಸುಮಾರು 48% ರೋಗಿಗಳಲ್ಲಿ ರೋಗಲಕ್ಷಣಗಳು ಸುಧಾರಿಸಿದೆ,

ಅರಿವಿನ ನಡವಳಿಕೆಯ ಚಿಕಿತ್ಸೆಯನ್ನು ಹೊಂದಿದ 59% ರಷ್ಟು ಜನರಲ್ಲಿ  ಐಬಿಎಸ್ ಲಕ್ಷಣಗಳು ಸುಧಾರಿಸಿದೆ, ಆದರೆ ಇದು ನಿಯಂತ್ರಣ ಗುಂಪಿನಲ್ಲಿ 36% ರಷ್ಟು ಮಾತ್ರ ಸುಧಾರಿಸಿದ್ರೆ ಒತ್ತಡ ನಿರ್ವಹಣೆ ಮತ್ತು ವಿಶ್ರಾಂತಿ ಪರಿಣಾಮಕಾರಿಯಾಗಿ ಕಂಡುಬಂದಿಲ್ಲ.

ಕುತೂಹಲಕಾರಿಯಾಗಿ 23% ರಷ್ಟು ನಿಯಂತ್ರಣ ಚಿಕಿತ್ಸೆಗೆ ಒಳಗಾದವರಿಗೆ ಹೋಲಿಸಿದರೆ, ಕರುಳಿನ ರೋಗಲಕ್ಷಣಗಳಿಗೆ 45% ರಷ್ಟು ಜನರು ತೆಗದುಕೊಂಡ ಸಂಮೋಹನಾ (ಹಿಪನೊಟೈಸ್) ಚಿಕಿತ್ಸೆ ಪರಿಣಾಮಕಾರಿಯಾಗಿ ಕಂಡುಬಂದಿದೆ.

ಮೂಲ

ಮುಂದೇನು?

ಆದ್ರಿಂದ ಎಷ್ಟೇ ಮಾತ್ರೆ ಔಷಧ ತೊಗೊಂಡ್ರೂ ಕರುಳಿನ ಆರೋಗ್ಯ ಸುಧಾರಿಸಿಲ್ಲ ಅಂದ್ರೆ ಮನಸ್ಥಿತಿ ಸರಿ ಮಾಡ್ಕೊಬೇಕು… ಆಗ ಏನೇ ಹೊಟ್ಟೆ ಸಮಸ್ಯೆ ಇದ್ರೂ ತಾನಾಗೇ ಸರಿಹೋಗತ್ತೆ.