http://www.livemint.com/rf/Image-621x414/LiveMint/Period2/2016/12/13/Photos/Processed/petrol-kAHI--621x414@LiveMint.jpg

ಈಗೀಗ ಗಾಡಿಗಳು ಜಾಸ್ತಿ ಆಗಿ ಪೆಟ್ರೋಲ್, ಡೀಸಲ್ ರೇಟು ಗಗನಕ್ಕೇರಿದೆ. ಹಾಗೇ, ಈ ಪ್ಯಾಕಿಂಗು ಮಣ್ಣು, ಮಸಿ ಅಂತ ನಾವ್ಗಳು ಉಪ್ಯೋಗಿಸ್ತಿರೋ ಪ್ಲಾಸ್ಟಿಕ್ ಕೂಡ ಜಾಸ್ತಿಯಾಗ್ತಿದೆ. ಇವೆರಡೂ ಸಮಸ್ಯೆಗಳನ್ನ ಜೊತೆಗಿಟ್ಕೊಂಡು, ಹೈದ್ರಾಬಾದಲ್ಲಿರೋ ಒಬ್ಬ ಇಂಜಿನಿಯರ್ರು ಒಂದೊಳ್ಳೆ ಉಪಾಯ ಕಂಡು ಹಿಡಿದಿದ್ದಾರೆ. 

ಪ್ಲಾಸ್ಟಿಕ್ಕಿಂದ ಇಂಧನ ತಯಾರಿಸ್ತಾರೆ

ಸತೀಶ್ ಕುಮಾರ್ ಅನ್ನೋ ಹೈದ್ರಾಬಾದಿನ ಮೆಕ್ಯಾನಿಕಲ್ ಇಂಜಿನಿಯರ್ ಒಬ್ರು, ನಾವು ಬಿಸಾಕೋ ವೇಸ್ಟ್ ಪ್ಲಾಸ್ಟಿಕ್ ಉಪ್ಯೋಗ್ಸಿ ಇಂಧನ ತಯಾರಿಸ್ತಾ ಇದಾರೆ. ಇದ್ರಿಂದ ನಮ್ಮ ದಿನ ನಿತ್ಯದ ಜೀವನಕ್ಕೆ ಎಷ್ಟು ಉಪಯೋಗ ಆಗತ್ತೆ ಅಂತ ನೀವೇ ಒಂದು ಅಂದಾಜ್ ಹಾಕಿ. ಕುಮಾರ್ ವೇಸ್ಟ್ ಪ್ಲಾಸ್ಟಿಕ್ ಉಪ್ಯೋಗ್ಸಿ ಸಿಂಥೆಟಿಕ್ ಫ್ಯೂಯಲ್ ಮಾಡ್ತಾ ಇದಾರೆ. ಕುಮಾರ್ ಹೇಳೋ ಪ್ರಕಾರ, 500 ಕೆ ಜಿ ಪ್ಲಾಸ್ಟಿಕ್ಕಿಂದ ಹತ್ತತ್ರ 400 ಲೀಟರ್ ಅನಿಲ ಸಿಕ್ಕತ್ತಂತೆ. 

ಪ್ಲಾಸ್ಟಿಕ್ಕಿಂದ ಇಂಧನ ತಯಾರಿಸಕ್ಕೆ ಸುಲಭ ವಿಧಾನ

ಪರಿಸರ ಮಾಲಿನ್ಯದಿಂದ ಸಾಯೋ ಪಶುಗಳಿಗೆ ಇದ್ರಿಂದ ಒಳ್ಳೇದಾಗತ್ತೆ ಅಂತ ಹೇಳೋ ಕುಮಾರ್, ಪ್ಲಾಸ್ಟಿಕ್ಕನ್ನ ಇಂಧನವಾಗಿ ಮಾರ್ಪಡಿಸಕ್ಕೆ ಸುಲಭವಾದ ದಾರಿ ಕಂಡುಹಿಡಿದಿದ್ದಾರೆ. ರಿವರ್ಸ್ ಇಂಜಿನಿಯರಿಂಗ್ ಸಿಸ್ಟಮ್ ಮುಖಾಂತರ ಪ್ಲಾಸ್ಟಿಕ್ಕನ್ನ ಡೀ ಪಾಲಿಮರೈಜ್ ಮಾಡಿ, ಅದನ್ನ ಇಂಧನ ರೂಪಕ್ಕೆ ತಂದು, ಮಾಮುಲಿ ಸಿಲಿಂಡರ್ರಲ್ಲಿ ತುಂಬಿಡೋ ಹಾಗೆ ತುಂಬಿಡ್ತಾರಂತೆ. ಈ ಪ್ರಕ್ರಿಯೇನ ಇನ್ನೂ ಒಳ್ಳೆ ಮಟ್ಟದಲ್ಲಿ ಮಾಡೋ ಪ್ರಯತ್ನ ನಡೀತಿದ್ಯಂತೆ.

ಇದರ ಇನ್ನೊಂದು ವಿಶೇಷತೆ ಏನಪ್ಪಾ ಅಂದ್ರೆ, ಈ ಪ್ರಕ್ರಿಯೆಗೆ ನೀರೇ ಉಪ್ಯೋಗ್ಸಲ್ವಂತೆ. ಹಾಗೇ ಇದು ವ್ಯಾಕ್ಯೂಮಲ್ಲಿ ನಡಿಯೋ ಪ್ರಕ್ರಿಯೆ ಆದ್ದರಿಂದ ಪರಿಸರಕ್ಕೂ ಹಾನಿಯಾಗಲ್ಲ.

ಮೂಲ

ಈ ಇಂಧನ ಪೆಟ್ರೋಲ್ ಥರಾನೇ, ಆದ್ರೆ ಪೆಟ್ರೋಲಲ್ಲ

’ಪ್ಲಾಸ್ಟಿಕ್ ಪೈರೋಲಿಸಿಸ್’ ಅನ್ನೋ ಪ್ರಕ್ರಿಯೆ ಉಪ್ಯೋಗ್ಸಿ ಪ್ಲಾಸ್ಟಿಕ್ಕಿಂದ ಪೆಟ್ರೋಲ್, ಡೀಸಲ್ ಹಾಗು ಏವಿಯೇಷನ್ ಫ್ಯೂಯಲ್ ತಯಾರಿಸ್ತಿದ್ದಾರೆ. ಇದು ನೋಡಕ್ಕೆ ಪೆಟ್ರೋಲ್ ಹೋಲಿಕೆ ಇದ್ರೂ ಪೆಟ್ರೋಲ್ ಅಲ್ವಂತೆ.ಆದ್ರೆ ಇದು ಪೆಟ್ರೋಲ್ ಮಾಡೋ ಕೆಲ್ಸಾನ ಖಂಡಿತ ಮಾಡತ್ತೆ.

ಹತ್ರದ ಫ್ಯಾಕ್ಟರಿ ಮತ್ತು ಬೇಕರಿಗಳಿಗೆ ಇಂಧನ ಸರಬರಾಜು

ಕಳೆದ ಒಂದು ವರ್ಷದಿಂದ ಈ ಕೆಲ್ಸಾನ ಮಾಡ್ತಿರೋ ಸತೀಶ್ ಸುಮಾರು 50 ಟನ್ ಪ್ಲಾಸ್ಟಿಕ್ನ ಈ ಭೂಮಿಯಿಂದ ಖಾಲಿ ಮಾಡಿ, ಇಂಧನ ಮಾಡಿದ್ದಾರಂತೆ. ಈ ಪ್ಲಾಸ್ಟಿಕ್ ಬಾಟಲ್ಲು, ಕವರ್ರು ಅಂತ ಹೈದ್ರಾಬಾದಲ್ಲೇ ವರ್ಷಕ್ಕೆ 2500 ಟನ್ ಪ್ಲಾಸ್ಟಿಕ್ ವೇಸ್ಟ್ ಸಿಕ್ಕೋದ್ರಿಂದ, ಪ್ರಯೋಗ ಮಾಡಕ್ಕೆ ಹೈದ್ರಾಬಾದ್ ಒಳ್ಳೆ ಜಾಗ ಆಯ್ತು ಅಂತ ಸತೀಶ್ ಹೇಳ್ತಾರೆ. 

ಈ ಇಂಧನಾನ ಈಗ ಅಲ್ಲೇ ಹತ್ರದ ಬೇಕರಿ ಮತ್ತೆ ಇನ್ನಿತರ ಫ್ಯಾಕ್ಟರಿಗಳಿಗೆ ಲೀಟರ್ಗೆ 40 ರಿಂದ 50 ರುಪಾಯಿ ತರ ಕೊಡ್ತಿದ್ದಾರೆ.

ಮೂಲ

ಈ ಪ್ರಯೋಗ ಭಾರಿ ಮಟ್ಟದಲ್ಲಿ ಯಶಸ್ವಿಯಾಗಿ, ಭೂಮಿಮೇಲಿರೋ ಕಸ ಎಲ್ಲಾ ಕ್ಲೀನಾದ್ರೆ ಎಷ್ಟ್ ಚನ್ನಾಗಿರತ್ತಲ್ವಾ?