http://i.dailymail.co.uk/i/pix/2013/04/05/article-0-191E763A000005DC-518_634x598.jpg

ನಮ್ಮ ಹುಡುಗೂರು ಮ್ಯಾರೇಜಿನ ಮ್ಯಾಟರ್ ಬಂದಾಗ ವಿಚಾರಾ ಮಾಡ ರೀತೀನ ಬ್ಯಾರೇ. ಅವರಿಗೆ ಹುಡಗಿ ಒಂದೀಟ ಮಾಡರ್ನಾಗಿನೂ ಇರಬೇಕು, ಒಂದೀಟ ಗೌರಮ್ಮನ ಥರಾನೂ ಇರಬೇಕ. ಬಿಡಿಸಿ ಹೇಳತನಿ ಕೇಳ್ರಿ:

1. ಮನಿ ಕೆಲಸಾನೂ ಮಾಡಬೇಕು, ಆಫೀಸಿನ ಕೆಲಸಾನೂ ಮಾಡಬೇಕು

ಒಂದ ಸರ್ವೇ ಪ್ರಕಾರ 83.5% ಹುಡಗೂರ ಒಪೀನಿಯನ್ ಏನಪಾ ಅಂದರ ತನ್ನ ಪ್ರೀತಿ ಹೆಣ್ತಿ ಆಫೀಸ ಕೆಲಸಾನ ಎಸ್ಟ ಇಂಟರೆಸ್ಟ್ ಇಂದಾ ಮಾಡತಾಳ ಅಸ್ಟ ಪ್ರೀತಿಯಿಂದಾ ಮನೀದ ಕೆಲಸಾನೂ ಮಾಡಬೇಕ.

working_woman_india.jpg

2. ತೀರಾ ತೆಳ್ಳಗಿರಬಾರದು; ಎಲ್ಲೆಲ್ಲಿ ಎಸ್ಟೆಸ್ಟ ಇರಬೇಕೋ ಅಸ್ಟಸ್ಟು ಇರಬೇಕು

ಹುಡಗೇರು ತಾವು ಯಾವಾಗನೂ ತೆಳ್ಳಗನ ಇರಬೇಕು ಅಂತ ಸರ್ಕಸ್ ಮಾಡತಿರತಾರ, ಆದರ ನಮ್ಮ ಹುಡಗೂರಿಗೆ ಈ ತೆಳ್ಳಗಿರೋದ ಕಂಡರ ಲೈಕ್ ಆಗಲ್ಲ. ತೆಳ್ಳಗ ಒಣಗಿ ಹೋಗಿದ್ರ ಅದನ್ನ ನಮ್ಮ ಕಡೆ ಮೈಮಾಟ ಅನ್ನಂಗಿಲ್ಲ.

788c82ce1862a749455f15e1e1453be1.jpg

3. ಮ್ಯಾರೇಜ್ ಆದ ಮ್ಯಾಲ ಅತ್ತಿ-ಮಾವನ್ನ ಚಂದಾಗಿ ನೋಡಿಕ್ಯಾಬೇಕ.

ಮ್ಯಾರೇಜ ಆದ ಮ್ಯಾಲ ಅತ್ತಿ-ಮಾವನ ಜತೀಗೆ ಒಟ್ಟಿಗೆ ಇರದು ಅಂದ ಮ್ಯಾಲ ಅವರ ಜತಿ ರಿಲೇಶನ್ ಚಂದಾಗಿ ಇರಾಕಬೇಕು. ಖಾಲಿಪೀಲಿ ಮಾತಿಗೆ ಮಾತ ಬೆಳಿಸಿಗೆಂಡ ಹೋಗದು, ಕಿಂಡಲ್ ಮಾಡದು, ಜಗಳಾ ಮಾಡಿಕೆಳ್ಳದು… ಇವೆಲ್ಲಾ ನಮ್ಮ ಹುಡುಗೂರಿಗೆ ಲೈಕ್ ಆಗಂಗಿಲ್ಲ. ಇದ ಜಗತ್ತಿನ್ಯಾಗಿನ ಎಲ್ಲಾ ಹುಡುಗೂರಿಗೂ ಲೈಕ್ ಆಗಲ್ಲ. ಆದರ ನಮ್ಮ ಕಡೆ ಇದನ್ನ ಒಂದೀಟ ಒತ್ತಿ ಹೇಳಬೇಕು.

sfe-090826-254.jpg

4. ಯಾವಾಗನೂ ನಕ್ಕಂತ ಇರಬೇಕು

ಆಫೀಸಿಂದಾ ಟಾಯರ್ಡ್ ಆಗಿ ಮನೀಗೆ ಬರವಂಗ ಮಾತಿನ್ಯಾಗನ ಕಚಗೂಳಿ ಕೊಡ ಹೆಣ್ತಿ ಅಂದರ ಪಂಚಪ್ರಾಣ.ಅದ ಬಿಟ್ಟ ಹೇಣ್ತಿನೂ ಗೋಳ ಹೊಯ್ಕಳ್ಳಾಕ ಸ್ಟಾರ್ಟ್ ಮಾಡಿಬಿಟ್ಟರ ಅದೆಂಥಾ ಲೈಫು?

5. ಹೆಚಿಗಿ ಟಿ.ವಿ.ಮುಂದ ಕುಂದರಬಾರದು

80% ಹುಡುಗೂರಿಗೆ ಟಿ.ವಿ. ನೋಡದ ಇರ ಹುಡಗೇರು ಅಂದರ ಭಾಳ ಪ್ರೀತಿ. ಮ್ಯಾರೇಜ ಆಗತನಕಾನೂ ತನ್ನ ಅವ್ವನ್ನ ಟಿ.ವಿ ಮುಂದನ ನೋಡಿಕೆಂತ ಬಂದಿರ ಹುಡುಗಾ ತನ್ನ ಮುದ್ದಿನ ಹೇಣ್ತಿ ಹಂಗ ಆಗದು ಬ್ಯಾಡಾ ಅಂದಕಂತಾನ. ಅಸ್ಟ ಅಲ್ಲ, ಟಿ.ವಿ. ಹೆಂಗಸರ ತಲ್ಯಾಗ ಅದ ತಗಾಬೇಕು, ಇದ ತೊಗಾಬೇಕು ಅನ್ನ ಆಸೆ ಹುಟ್ಟಸತತೆಲ್ಲಾ, ಅದಕ್ಕೆಲ್ಲಾ ರೊಕ್ಕಾ ಹಾಳ ಮಾಡತಾರ ಅನ್ನ ಹೆದರಿಕಿ…

6. ಯಾವಾಗನೂ ಗಂಡಂಗ ಅಂಟಿಗೆಂಡಿರತನಿ ಅನಬಾರದು; ಅಂವಗ ಬೇಕಾದಾಗ ಅಂವನ ಪಾಡಿಗೆ ಅಂವನ್ನ ಬಿಟ್ಟ ಬಿಡಬೇಕು

ಪ್ರತಿಯೊಬ್ಬರಿಗೂ ತಮಗ ಅಂತನ ಒಂದೀಟ ಟಾಯಮ ಬೇಕು ಅನಿಸೋದ ಸಹಜ. ಅದರಾಗೂ ಹುಡುಗೂರ ಮ್ಯಾರೇಜಿಗಿಂತಾ ಮದಲ ಗೆಳೆಯಾರ ಜತೀಗೆ ಎಂಜಾಯ್ ಮಾಡಿಕೆಂತ ಇದ್ದರೋ ಹಂಗ ಮ್ಯಾರೇಜ್ ಆದ ಮ್ಯಾಲನೂ ತಮ್ಮ ಇಸ್ಟಾ ಬಂದಂಗ ಇರಾಕ ಅವಾಗಾವಾಗ ಬಿಡಬೇಕ. ಹಿಂಗ ಯಾವದಕನೂ ಅಡ್ಡಿ ಮಾಡದ ಇರ ಹುಡಗಿ ಸಿಗಲಿ ಅನ್ನದ ಅವರ ಮತ್ತೊಂದ ಬೇಡಿಕಿ.

7. ಛೊಲೋತ್ನ್ಯಾಗ  ಅಡಿಗಿ ಮಾಡಬೇಕ

ಹುಡುಗನ ಹಾರ್ಟಿಗೆ ಅಟ್ಯಾಕ್ ಮಾಡಾಕ ಹೊಟ್ಟಿ ಥ್ರೂ ಎಂಟ್ರಿ ಕೊಡಾಕ ಆಕ್ಕತಿ ಅಂತಾರಲ್ಲ ಅದು ಖರೇನ. ಯಾಕಂದ್ರ ಛೊಲೋ ಛೊಲೋ ಅಡಿಗಿ ಮಾಡಿ ನೀಡ ಹುಡಗೀನ ಹೇಣ್ತಿ ಆದರ ನಮ್ಮ ಇಂಡಿಯನ್ನ ಹುಡುಗೂರು ಫುಲ್ ಖುಷಿ ಆಗಿ ಹೊಕ್ಕಾರ.

cb_rio_rashmys_ns_final.jpg

8. ಗಂಡನ ಮನಿ ಸಂಪ್ರದಾಯಾನ ಚಂದಾಗಿ ಪಾಲಸಬೇಕು.

ತನ್ನ ಹೇಣ್ತಿ ಎಸ್ಟರ ಮಾಡರ್ನ್ ಆಗಿದ್ದರೂ ಹಬ್ಬ ಹರಿದಿನ ಬಂದಾಗ ಎಲ್ಲಾ ಇಂಡಿಯನ್ ಹೆಂಗಸೂರ ಥರಾ ಎಲ್ಲಾ ಸಂಪ್ರದಾಯಾನ ಶ್ರದ್ಧೆಯಿಂದ ಪಾಲಿಸ ಹುಡುಗೀನ ನಮ್ಮ ಹುಡಗೂರಿಗೆ ಫೇವರೇಟ.

avani-continued.jpg

9. ಹತ್ತು ಕೈ ಇರಬೇಕು 🙂

ಇದೇನೋ ಮಾರಾಯಾ ಅಂತೀರೇನ!! ಎಂಥಾ ತಲಿ ಬಿಸಿ ಟೆನ್ಶನ್ ಇದ್ರೂನೂ ಎಲ್ಲಾ ಕೆಲಸಾನೂ ನೀಟಾಗಿ ನಕ್ಕಂತ ನಕ್ಕಂತ ಮಾಡಿ ಮುಗಿಸ ಹುಡಗೀನ ನನ್ನ ಹೇಣ್ತಿ ಆಗಲಿ ಅಂತ ನಮ್ಮ ಹುಡುಗೂರು ಅಂದಕಂತಾರ.

women-multi-tasking.jpg

10. ಕನ್ನಡದಾಗ ಮಾತಾಡಬೇಕ, ಕನ್ನಡಾ ಪಿಚ್ಚರುಗೂಳ ಅಂದ್ರ ಇಸ್ಟಾ ಪಟ್ಟ ನೋಡಬೇಕ

ಅದ್ಯಾಕ ಏನ ಹುಡುಗೇರಿಗೆ ಇಂಗ್ಲೀಷ ಮತ್ತ ಹಿಂದಿ ಹುಚ್ಚ ಹೆಚಿಗಿ. ಖರೇ ಅಂದರೂ ಇದು ಕನ್ನಡದ ಹುಡುಗೂರಿಗೆ ಲೈಕ್ ಆಗಂಗಿಲ್ಲ. ಯಾಕ ಒಂಥರಾ ನಮ್ಮ ಕಲ್ಚರ್ನಿಂದಾ ದೂರ ಹೊಂಟಾಳ ನನ್ನ ಹೇಣ್ತಿ ಅಂತ ಅನಿಸತತಿ ಅವರಿಗೆ.

santhu-straight-forward-photos-images-51648.jpg

ಈಗ ಹೇಳ್ರಿ – ಸರಿ ನಾ? ಇಲ್ಲಾ ಏನರ ಇಂಪಾರ್ಟೆಂಟ್ ಆಗಿರದನ್ನ ಏನರಾ ಬಿಟ್ಟನ್ಯಾ?

ಹೊರಚಿತ್ರ: ಮೂಲ