http://www.rd.com/wp-content/uploads/sites/2/2016/10/02-bald-subtle-signs-disease-feet-reveal-14292820-ValuaVitaly.jpg

ದೇಹದ ಯಾವ್ದೇ ಭಾಗದಲ್ಲೂ ವಾಸ್ನೆ ಬಂದ್ರೆ ನಮ್ಮ ಪಕ್ಕದವ್ರಿಗಿರ್ಲಿ, ನಮ್ಗೇ  ಒಂಥರಾ ವಾಕರಿಕೆ ಬರುತ್ತೆ. ಅಂತದ್ರಲ್ಲಿ, ಕಾಲಿಗೆ ವಾಸ್ನೆ ಬಂದ್ರೆ ಹೇಗಿರುತ್ತೆ ಗೊತ್ತಲ್ವಾ?

ಮೈಗೆ ವಾಸ್ನೆ ಬಂದ್ರೆ ಪರ್ಫ್ಯೂಮ್ ಹಾಕೋಬೋದು. ಆದ್ರೆ ಕಾಲಿಗೆ? ಇದಕ್ಕಿರೋ ಉಪಾಯ ಕಾಲು ಕ್ಲೀನಾಗಿಟ್ಕೊಳ್ಳೊದು. ಇಲ್ಲಿ ಕಾಲು ಮೃದುವಾಗಿ, ಸ್ವಚ್ಛವಾಗಿ, ಆರೋಗ್ಯವಾಗಿ ಇರಕ್ಕೆ ಏನ್ ಮಾಡ್ಬೇಕು ಅಂತ ಹೇಳಿದ್ದೀವಿ. ನಿಮ್ಗೆ ಯಾವುದು ಅನ್ವಯ ಆಗತ್ತೋ ಅದನ್ನೇ ಆರಿಸಿಕೊಳ್ಳಿ.

1. ಉಗುರನ್ನ ಟೈಂ ಟೈಂಗೆ ಕತ್ತರಿಸಿ ಕ್ಲೀನ್ ಮಾಡ್ಕೊಳಿ

ಉಗುರು ಉದ್ದವಾಗಿದ್ರೆ ಅದ್ರಲ್ಲಿ ಕೊಳೆ ತುಂಬ್ಕೊಂಡು ಕಾಲು ವಾಸನೆ ಹೊಡೆಯುತ್ತೆ. ಹಾಗಾಗಿ ಉಗುರನ್ನ ಮೊದ್ಲು ನೀಟ್ ಆಗಿ ಕತ್ತರಿಸಿ. ಹಾಗೆ ಹಿಮ್ಮಡಿ ಒಡೆದಿದ್ರೆ, ಅದನ್ನ ಕೂಡ ಬೇದಿಂಗ್ ಸ್ಟೋನಿಂದ ಸ್ವಚ್ಛ ಮಾಡಿ, ಕೊಳೆ ತುಂಬಿಕೊಳ್ಳದ ಹಾಗೆ ನೋಡ್ಕೊಳಿ.

ಮೂಲ

2. ಸ್ನಾನ ಆದ್ಮೇಲೆ ಬೆರಳು ಸಂಧಿಗಳನ್ನ ಮರೀದೇ ಒರ್ಸಿ

ಸ್ನಾನ ಮಾಡಿ ಆದ್ಮೇಲೆ, ಬೆರಳುಗಳ ಮಧ್ಯದ ಜಾಗಾನ ಸ್ವಚ್ಛವಾಗಿ ಒರೆಸಿ, ಡ್ರೈ ಆಗಿ ಇಟ್ಕೋಬೇಕು. ಇದ್ರಿಂದ ಫಂಗಲ್ ಇನ್ಫೆಕ್ಷನ್ ಆಗಲ್ಲ.

ಮೂಲ

3. ಟೀ ಪೆಡೀಕ್ಯೂರ್ ಮಾಡ್ಕೊಳಿ

ಚಹಾದ ಎಲೆಗಳಿಂದ ಡಿಕಾಕ್ಷನ್ ಮಾಡ್ಕೊಂಡು, ಅದಕ್ಕೆ ಚನ್ನಾಗಿ ತಣ್ಣೀರು ಸೇರಿಸಿ. ಅದ್ರಲ್ಲಿ 15 – 20 ನಿಮಿಷ ಕಾಲನ್ನ ಮುಳುಗಿಸಿ ಇಟ್ಕೊಳಿ. ಟೀ ಎಲೇಲಿರೋ ಟ್ಯಾನಿನ್ ಅಂಶ ಕಾಲಲ್ಲಿ ಇರೋ ಕೊಳೆ ಕಮ್ಮಿ ಮಾಡಿ ಕಾಲನ್ನ ಆರೋಗ್ಯವಾಗಿ ಇಡತ್ತೆ.

ಮೂಲ

4. ಆಪಲ್ ಸಿಡಾರ್ ವಿನೆಗರ್ ಹಾಕಿ

ಕಾಲಲ್ಲಿ ವಾಸ್ನೆ ಇದ್ರೆ, ಆಪಲ್ ಸಿಡಾರ್ ವಿನಿಗರ್ ಜೊತೆ ಸ್ವಲ್ಪ ನೀರು ಸೇರ್ಸಿ, ಹತ್ತೀನ ಅದ್ರಲ್ಲಿ ಅದ್ದಿ, ಆದ್ರಿಂದ ಕಾಲು ಒರೆಸಿ. ಕಾಲನ್ನ ಆಮೇಲೆ ಚನ್ನಾಗಿ ಆರಕ್ಕೆ ಬಿಡಿ.

ಮೂಲ

5. ನೀಲಗಿರಿ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡ್ಕೊಳಿ

ಕಾಲಿಗೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡಿ. ಇದ್ರಿಂದ ಕಾಲಿನ ವಾಸ್ನೆ ಕಡಿಮೆ ಆಗಿ, ಕಾಲು ಘಮ ಘಮ ಅನ್ನುತ್ತೆ! ಇದ್ರಿಂದ ಕಾಲಿಗೆ ಇನ್ಫೆಕ್ಷನ್ ಕೂಡ ಆಗಲ್ಲ ಗೊತ್ತಾ?

ಮೂಲ

6. ಸಾಕ್ಸ್ ಉಲ್ಟಾ ಮಾಡಿ ತೊಳೀರಿ

ಸಾಕ್ಸ್ ಉಲ್ಟಾ ಮಾಡಿ ತೊಳೆಯೋದ್ರಿಂದ, ಸಾಕ್ಸಲ್ಲಿರೋ ಬಾಕ್ಟೇರಿಯಾಗಳು ನಾಶ ಆಗ್ತವೆ, ಇದ್ರಿಂದ ವಾಸ್ನೆ ಬರೋದು ಕಡಿಮೆ ಆಗುತ್ತೆ. ಸಿಂಥೆಟಿಕ್ ಸಾಕ್ಸ್ ಉಪಯೋಗಿಸ್ದೇ, ಕಾಟನ್ ಸಾಕ್ಸ್ ಉಪಯೋಗ್ಸಿ.

ಮೂಲ

7. ಮನೆಯಲ್ಲಿ ಆದಷ್ಟು ಬರೀ ಕಾಲಲ್ಲೇ ನಡೀರಿ

ಬರೀ ಕಾಲಲ್ಲಿ ನಡೆಯೋದ್ರಿಂದ ಕಾಲಿನ ಚರ್ಮ ಉಸಿರಾಡಕ್ಕೆ ಸಹಾಯ ಆಗುತ್ತೆ. ಇದ್ರಿಂದ ಕಾಲು ವಾಸ್ನೆ ಬರಲ್ಲ.

ಮೂಲ

8. ಬೆವರಿದ್ರೆ ಕಾಲಿಗೆ ಟಾಲ್ಕಂ ಪೌಡರ್ ಹಾಕೊಳಿ

ಟಾಲ್ಕಂ ಪೌಡರ್ನ್ನ ಕಾಲಿಗೆ ಹಚ್ಚೋದ್ರಿಂದ ಕಾಲು ಡ್ರೈ ಆಗಿರುತ್ತೆ. ಇದ್ರಿಂದ ಬೆವರೋದು ಕಡಿಮೆ ಆಗುತ್ತೆ. ಕಾಲನ್ನ ಚನ್ನಾಗಿ ತೊಳ್ಕೊಂಡು, ಆಮೇಲ್ ಪೌಡರ್ ಹಾಕೊಳಿ… ಇಲ್ಲಾ ಅಂದ್ರೆ, ನೆಲಕ್ಕೆಲ್ಲಾ ಪೌಡರ್ ಅಂಟತ್ತೆ ಅಷ್ಟೇ!

ಮೂಲ

9. ಫಂಗಲ್ ಇನ್ಫೆಕ್ಷನ್ ಆಗಿದ್ರೆ ಡಾಕ್ಟರ್ ಹತ್ರ ಹೋಗಿ

ಕಾಲಲ್ಲಿ ಗಾಯ ಏನಾದ್ರೂ ಆದ್ರೆ ಅಥವಾ ಕಾಲು ಅತೀ ವಾಸನೆ ಬಂದ್ರೆ, ಪಾದದ ಚರ್ಮ ಎಡೀತಿದ್ರೆ ಇದ್ರೆ ಬೇಗ ಡಾಕ್ಟರ್ನ್ನ ನೋಡಿ. ಇದು ರಿಂಗ್ ವರ್ಮ್, ಮೈಕಾಸಿಸ್ ತರ ಯಾವ್ದಾದ್ರೂ ಫಂಗಲ್ ಇನ್ಫೆಕ್ಷನ್ ಇರ್ಬೋದು. ಬೇಜವಾಬ್ದಾರಿ ತೋರಿಸ್ದೆ ಟ್ರೀಟ್ಮೆಂಟ್ ತಗೊಳೋದು ಒಳ್ಳೇದು.

ಮೂಲ

10. ಆಗಾಗ ಚಪ್ಪಲಿ, ಶೂಗಳ್ನ ತೊಳೀರಿ

ಶೂಸ್ ಮತ್ತೆ ಚಪ್ಪಲಿಗಳನ್ನ ಡೆಟಾಲ್ ನೀರಲ್ಲಿ ನೆನೆಸಿಟ್ಟು, ಸ್ವಲ್ಪ ಹೊತ್ತಾದ್ಮೇಲೆ ತೊಳೀರಿ. ಶೂ ಒಳಗಡೆ ಕಾಟನ್ ಬಡ್ಡಿಂದ ಕ್ಲೀನ್ ಮಾಡಿ.

ಮೂಲ

11. ಶೂಗಳನ್ನ ಪೂರ್ತಿ ಒಣಗಿದ ಮೇಲೆ ಬಳಸಿ

ಶೂಸ್ಗಳನ್ನ ಬಳಸದೆ ಇದ್ದಾಗ, ಅದನ್ನ ಸ್ವಲ್ಪ ಹೊತ್ತು ಬಿಸಿಲಲ್ಲಿ ಇಟ್ಟು, ಆಮೇಲೆ ಅದರೊಳಗೆ ನ್ಯೂಸ್ ಪೇಪರ್ ತುರ್ಕಿ. ಇದ್ರಿಂದ ಶೂನಲ್ಲಿರೋ ತೇವಾಂಶ ಹೋಗಿ ಶೂ ಫ್ರೆಶ್ಶಾಗಿರತ್ತೆ!

ಮೂಲ

ಈ ಎಲ್ಲ ಉಪಾಯಗಳನ್ನೂ ಬಳಸಿ. ಹೂವಂಥ ಕಾಲು ನಿಮ್ಮದಾಗದಿದ್ರೆ ಕೇಳಿ!