http://static.sify.com/cms/image/mltroEabjdjsi.jpg

ನಮ್ಮನ್ನ ಯಾರಾದ್ರೂ ಹೊಗಳಿದ್ರೆ, ನಮ್ಮ ಬಗ್ಗೆ ಒಂದ್ಸಲ್ಪ ಒಳ್ಳೆ ಮಾತಾಡಿದ್ರ… ಒಳಗೊಳಗೇ ಖುಷಿಯಾಗೋದು ಮನುಷ್ಯನ ಸಹಜ ಗುಣ. ಅದ್ರಲ್ಲೂ ತಮ್ ಹುಡ್ಗಿ ಹೊಗಳಿದ್ರಂತೂ ಹುಡುಗರಿಗೆ ಖುಷಿಯೋ ಖುಷಿ. ಹಾಗಾದ್ರೆ, ಯಾವ ತರದ ಮಾತುಗಳ್ನ ಹುಡುಗ್ರು ತಮ್ಮ ಸಂಗಾತಿಯಿಂದ ಕೇಳಕ್ಕ್ ಇಷ್ಟಪಡ್ತಾರೆ ನೋಡಿ.

1. "ನಾನು ನಿನ್ನ ತುಂಬಾ ನಂಬ್ತೀನಿ"

ಹುಡುಗರಿಗೆ ತಮ್ಮ ಹುಡುಗಿ ತಮ್ಮನ್ನ ನಂಬ್ತಾಳೆ ಅಂದ್ರೆ ಅದಕ್ಕಿಂತ ಖುಷಿ ವಿಷ್ಯ ಇನ್ನೊಂದಿಲ್ಲ. ನಂಬಿಕೆಗೆ ಅರ್ಹವಾಗಿರೋ ಹುಡುಗ ಸಿಕ್ಕಿದ್ರೆ ಅದ್ರಕ್ಕಿಂತ ಖುಷಿ ವಿಷ್ಯ ಹುಡ್ಗೀರ್ಗೂ ಏನಿದೆ ಹೇಳಿ? ಹಾಗಾಗಿ ನಿಮ್ಮ ಹುಡುಗಂಗೆ ಈ ಮಾತನ್ನ ಧೈರ್ಯವಾಗಿ ಹೇಳಿ. ಅವ್ನಿಗೆ ಖುಷಿಯಾಗದಿದ್ರೆ ಕೇಳಿ. ಹುಡುಗರ ಪ್ರಕಾರ, ತಮ್ಮ ಹುಡ್ಗಿ ಈ ಥರದ ಮಾತಾಡ್ದಾಗ ಅವರಿಗೆ ಧೈರ್ಯ, ಹುಮ್ಮಸ್ಸು ಜಾಸ್ತಿ ಆಗಿ ಒಳ್ಳೆ ಸೂಪರ್ ಹೀರೋ ತರ ಅನ್ಸತ್ತಂತೆ.

ಮೂಲ

2. "ಇವತ್ತು ತುಂಬಾ ಚನ್ನಾಗಿ ಕಾಣಿಸ್ತಿದ್ಯಾ"

ಪಾಪ… ನಿಮ್ಮ ಹುಡ್ಗ ನಿಮಗೋಸ್ಕರ  ಜಿಮ್ ಗೆ ಹೋಗಿ, ಕಷ್ಟ ಪಟ್ಟು ಬೆವರಿಳ್ಸಿ, ಬಾಡಿ ಬೆಳ್ಸಿದಾಗ ನೀವು ಆಗಾಗ ಅವನನ್ನ ಹೊಗಳೋದ್ರಿಂದ ಅವ್ನಿಗೆ ಎಷ್ಟು ಖುಷಿ ಆಗುತ್ತೆ ಗೊತ್ತಾ? ದೇಹದ ಸೌಂದರ್ಯಾನೇ ಎಲ್ಲಾ ಅಲ್ದೇ ಇದ್ರೂ, ಒಂದೊಂದ್ ಸಲ ಅವರಿಗೆ "ನೀನಿವತ್ತು ಚನ್ನಾಗಿ ಕಾಣಿಸ್ತಿದ್ಯ, ಈ ಶರ್ಟ್ ನಿನಗೆ ತುಂಬಾ ಒಪ್ಪತ್ತೆ " ಅಂತ ಹೇಳ್ದಾಗ, ಅವರ ಮುಖದಲ್ಲಿ ಬರೋ ನಗು ನಿಮಗೂ ಖುಷಿ ಕೊಡತ್ತೆ.

ಮೂಲ

3. "ಥ್ಯಾಂಕ್ಯೂ"

ಸಹಜವಾಗೇ, ಎಲ್ಲಾರ್ಗೂ ತಾವು ಮಾಡೋ ಪ್ರಯತ್ನಗಳನ್ನ ಜನರು ಗುರುತಿಸ್ಬೇಕು ಅನ್ನೋ ಆಸೆ ಇದ್ದೇ ಇರತ್ತೆ. ಸಂಗಾತಿ ವಿಷಯಕ್ಕೆ ಬಂದಾಗ ಇದು ಸ್ವಲ್ಪ ಜಾಸ್ತೀನೆ. ಆದ್ರಿಂದ, ನಿಮ್ಮೋರು ನಿಮ್ಗೊಂದು ಚಿಕ್ಕ ಸಹಾಯ ಮಾಡಿದ್ರೂ, ಅದನ್ನ ತಪ್ಪದೇ ಗುರುತಿಸಿ, ಹೊಗಳಿ… ಇಲ್ಲಾ ಒಂದು ಥ್ಯಾಂಕ್ಸ್ ಹೇಳಿ. 

ಮೂಲ

4 . "ನನಗೆ ನಿನ್ನ ಬಗ್ಗೆ ಹೆಮ್ಮೆಯಾಗುತ್ತೆ"

ಗಂಡಸರು ಈ ಲವ್ವು, ಮದುವೆ… ಈ ಥರದ ಸಂಬಂಧಗಳಲ್ಲಿ ಪ್ರೀತಿಗಿಂತ ಜಾಸ್ತಿ ತಮ್ಮ ಸಂಗಾತಿ ತಮ್ಮನ್ನ ಗೌರವಿಸ್ಬೇಕು ಅಂತ ಅಪೇಕ್ಷಿಸ್ತಾರೆ. ಆದ್ರಿಂದ, ಆದಷ್ಟೂ ನೀವು ಅವರನ್ನ ಮತ್ತು ಅವರು ತಗೊಳೊ ನಿರ್ಧಾರಗಳನ್ನ ಪೂರ್ತಿಯಾಗಿ ಗೌರವಿಸ್ತೀರ, ನಂಬ್ತೀರ ಅಂತ ಅವರಿಗೆ ಮನದಟ್ಟು ಮಾಡ್ಕೊಡಿ.

ಮೂಲ

5. "ನೀನು ಈ ಕೆಲಸಾನ ಖಂಡಿತ ಚನ್ನಾಗಿ ಮಾಡಿ ಮುಗಿಸ್ತೀಯಾ"

ಯಾವ್ದೋ ಕೆಲಸ ಮಾಡ್ತಾ ಅವನು ಸ್ವಲ್ಪ ಧೈರ್ಯ ಕಳ್ಕೊಂಡಿದ್ರೆ, ಅವನ ಹತ್ರ ಹೋಗಿ "ಈ ಕೆಲಸ ನೀನು ಮಾಡ್ತೀಯ ಅನ್ನೋ ನಂಬಿಕೆ ನಂಗಿದೆ, ನೀನು ಇದನ್ನ ಮಾಡೇ ಮಾಡ್ತೀಯ…ಟೈಮ್ ಸ್ವಲ್ಪ ಹೆಚ್ಚು ಕಡಿಮೆ ಆಗ್ಬಹುದು, ಆದ್ರೆ ನಿಂಗೆ ಮಾಡಿ ಮುಗಿಸೋ ಶಕ್ತಿ ಇದೆ" ಅನ್ನೋದನ್ನ ಒತ್ತಿ ಹೇಳಿ, ಅವನ ಧೈರ್ಯ ಎರಡು ಪಟ್ಟು ಹೆಚ್ಚಾಗದಿದ್ರೆ ನೋಡಿ. ಆಗ್ಲೇ ಹೇಳ್ದಾಗೆ, ನಿಮಗೆ ಅವನ ಮೇಲಿರೋ ನಂಬಿಕೇನೆ ಅವನ ಶಕ್ತಿಯಾಗ್ಬೋದು.

ಮೂಲ

6. "ನಿನ್ಜೊತೆ ನಾನು ತುಂಬಾ ಖುಷಿಯಾಗಿದ್ದೀನಿ"

ಗಂಡ – ಹೆಂಡ್ತಿ ಸಂಬಂಧ ಅಂದ್ರೆ, ಅದರಲ್ಲಿ ಒಂದು ರೀತಿ ಸೆಳೆತ, ಬಾಂಧವ್ಯ ಇರ್ಲೇಬೇಕು. " ನಿನ್ಜೊತೆ ಸಮಯ ಕಳೇತಿದ್ರೆ ಹೊತ್ತೋಗೋದೇ ಗೊತ್ತಾಗಲ್ಲ, ನೀನು ನಂಜೊತೆ ಇರೋದ್ರಿಂದ ನಾನು ನಿಶ್ಚಿಂತೆಯಾಗಿ, ಅಪ್ಪ ಅಮ್ಮನಿಂದ ದೂರ ಇದ್ರೂ ಖುಷಿಯಾಗಿದ್ದೀನಿ " ಅಂತೆಲ್ಲ ಹೇಳಿದ್ರೆ ಅವನಿಗೆ ನಿಜವಾಗ್ಲೂ ಖುಷಿ ಆಗತ್ತೆ ಕಣ್ರೀ. ನಿಮ್ಮ ಖುಷಿಗೋಸ್ಕರ ಅವನು ಅಷ್ಟೆಲ್ಲಾ ಮಾಡ್ದಾಗ, ನೀವು ಖುಷಿಯಾಗಿದ್ದೀರಿ ಅಂತ ಹೇಳ್ದಿದ್ರೆ ಹೆಂಗೆ ಅಲ್ವಾ?

ಮೂಲ

ಇದನ್ನೆಲ್ಲಾ ನಿಮ್ಮ ಹುಡುಗನಿಗೆ ಹೇಳಿ ನೋಡಿ, ಅವನು ಖುಷಿಯಿಂದ ಹಿಗ್ಗದಿದ್ರೆ ಕೇಳಿ!