ಹೆಂಡ್ತಿ ಜೊತೆ ಜಗಳ ಇಲ್ಲವೇ ಇಲ್ಲ

ಸೀನ ಕೆಂಚನ್ನ ಒಂದು ದಿನ ಕೇಳೇ ಬಿಟ್ಟ: ‘ನೀನು ನಿನ್ನ ಹೆಂಡ್ತಿ ಅಷ್ಟು ಚೆನ್ನಾಗಿ ಇರ್ತೀರಲ್ಲ, ಅದರ ಗುಟ್ಟೇನು?’

ಕೆಂಚ: ಕೆಲಸ ಹಂಚಿಕೊಳೋದು, ಒಬ್ಬರಿಗೊಬ್ಬರು ಗೌರವ ಕೊಡೋದು, ಪ್ರೀತಿ-ವಿಶ್ವಾಸದಿಂದ ನಡ್ಕೊಳೋದು. ಇಷ್ಟು ಮಾಡಿದರೆ ಎಲ್ಲಾ ಸರಿಯಾಗಿರುತ್ತೆ.

ಸೀನ: ‘ಅಂದ್ರೆ ಹೇಗೆ? ಸ್ವಲ್ಪ ವಿವರಿಸ್ತ್ಯಾ?’

ಕೆಂಚ: ‘ನಂ ಮನೇಲಿ ನಾನು ಎಲ್ಲಾ ದೊಡ್ಡ ಕೆಲಸಗಳ್ನ ನೋಡ್ಕೋತೀನಿ, ನನ್ನ ಹೆಂಡ್ತಿ ಚಿಕ್ಕ-ಪುಟ್ಟ ಕೆಲಸಗಳ್ನ ನೋಡ್ಕೋತಾಳೆ. ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ತಲೆ ಹಾಕಲ್ಲ.’

ಸೀನನಿಗೆ ಅರ್ಥ ಆಗಲಿಲ್ಲ: ‘ಏನಾದರೂ ಉದಾಹರಣೆ ಕೊಡು ಮಾರಾಯ.’

ಕೆಂಚ: ‘ಯಾವ ಕಾರ್ ಕೊಂಡ್ಕೋಬೇಕು, ಎಷ್ಟು ದುಡ್ದು ಉಳಿಸಬೇಕು, ಯಾವಾಗ ಊರಿಗೆ ಹೋಗಬೇಕು, ಯಾವ ಸೋಫಾ ತೊಗೋಬೇಕು, ಯಾವ ಫ್ರಿಜ್ ತೊಗೋಬೇಕು, ಮಕ್ಕಳು ಯಾವ ಸ್ಕೂಲಿಗೆ ಹೋಗಬೇಕು, ಕೆಲಸದವಳು ಬೇಕೋ ಬೇಡವೋ... ಇವೆಲ್ಲ ಚಿಕ್ಕ-ಪುಟ್ಟ ಕೆಲಸಗಳು. ಇದನ್ನೆಲ್ಲ ನನ್ನ ಹೆಂಡ್ತಿ ನೋಡ್ಕೋತಾಳೆ. ಅವಳು ಏನು ಹೇಳಿದರೂ ನಾನು ಸೈ.’

ಸೀನನಿಗೆ ಇನ್ನೂ ತಲೆ ಕೆಡ್ತು: ‘ಹಂಗಾದರೆ ಮನೇಲಿ ನಿನ್ನ ಪಾತ್ರ ಏನು?’

ಕೆಂಚ: ‘ದೊಡ್ಡ ದೊಡ್ಡ ತೀರ್ಮಾನಗಳ್ನೆಲ್ಲ ನಾನೇ ಮಾಡೋದು. ಪಾಕಿಸ್ತಾನದ ಮೇಲೆ ಇಂಡಿಯಾ ಬಾಂಬ್ ಹಾಕಬೇಕೋ ಬೇಡವೋ, ಅಮೇರಿಕ ಸಿರಿಯಾ ಮೇಲೆ ದಾಳಿ ಮಾಡಬೇಕೋ ಬೇಡವೋ, ಟೆಂಡುಲ್ಕರ್ ರಿಟೈರ್ ಆಗಬೇಕೋ ಬೇಡವೋ, ಸಲ್ಮಾನ್ ಖಾನ್ ಮದುವೆ ಆಗಬೇಕೋ ಬೇಡವೋ... ಇದೆಲ್ಲ ನನ್ನ ಡಿಪಾರ್ಟ್ಮೆಂಟು. ನನ್ನ ಹೆಂಡತಿ ಇದರಲ್ಲಿ ಎಂದಿಗೂ ತಲೆ ಹಾಕಲ್ಲ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: