https://www.lovevivah.com/matrimony/blog/wp-content/uploads/2014/11/Indian-Husband-Wife-1.jpg

ಕೆಲವೊಂದು ವಿಷಯಗಳ ಬಗ್ಗೆ ಗಂದ ಹೆಂಡತಿಯ ಕಲ್ಪನೆ ಬೇರೆ ಬೇರೆ ಅನ್ನೋದು ಎಲ್ಲರಿಗೂ ಗೊತ್ತಿರೋದೇನೇ. ಅದಕ್ಕೇ ಹೇಳೋದು ಒಬ್ಬರು ಇನ್ನೊಬ್ಬರನ್ನ ಪೂರ್ತಿಯಾಗಿ ಅರ್ಥಮಾಡಿಕೊಳ್ಳೋದು ಕಷ್ಟ. ಇವರಿಬ್ಬರ ಪ್ರೀತಿ ಜಂಜಾಟದ ಮಧ್ಯೆ ಕೆಲವೊಂದು ಮಾತು ಕತೆಗಳು ಕೇಳೋಕೆ ಎಷ್ಟು ಮಜವಾಗಿರುತ್ತೆ ನೋಡಿ!

1. ಹೆಂಡತಿ- ನಾನು ಚೆನ್ನಾಗೇ ಇದ್ದೀನಿ!

ಗಂಡ (ಅರ್ಥ ಮಾಡಿಕೊಳ್ಳೋದು)- ನನ್ನ ಮುಖ ಊದಿರೋದು ನೋಡಿದರೆ ಗೊತ್ತಾಗಲ್ವಾ? ನಂಗೆಷ್ಟು ಕೋಪ ಇದೆ ಅಂತ.

ಮೂಲ

2.  ಹೆಂಡತಿ – ಐ ಲವ್ ಯು!

ಗಂಡ (ಅರ್ಥ ಮಾಡಿಕೊಳ್ಳೋದು)- ಆಫೀಸ್ಸಿಂದ ಬೇಗ ಬನ್ನಿ. ಸರೀನಾ!

3. ಹೆಂಡತಿ – ಆಫೀಸ್ ಸೇರಿದ ಮೇಲೆ ಫೋನ್ ಮಾಡಿ

ಗಂಡ (ಅರ್ಥ ಮಾಡಿಕೊಳ್ಳೋದು) – ನಿಮ್ಗೆ ರಸ್ತೇಲಿ ಗಾಡಿ ನೆಟ್ಟಗೆ ಓಡಿಸೋಕೆ ಬರಲ್ಲ ಅಂತ ಗೊತ್ತು ನಂಗೆ!

ಮೂಲ

4. ಹೆಂಡತಿ – ಇವತ್ತು ಪಾರ್ಟೀಲಿ ಯಾವ ಬಟ್ಟೆ ಹಾಕ್ಕೊಳ್ಳಿ?

ಗಂಡ (ಅರ್ಥ ಮಾಡಿಕೊಳ್ಳೋದು) – ಪಾರ್ಟೀಲಿ ಎಲ್ಲರ ಕಣ್ಣು ನನ್ನ ಮೇಲೆ ಇರೋ ಹಾಗೆ ಕಾಣೊ ಬಟ್ಟೆ ಯಾವುದು ಹೇಳಿ?

5. ಹೆಂಡತಿ – ಶಾಪಿಂಗ್ ಹೋಗೋಣ್ವಾ?

ಗಂಡ (ಅರ್ಥ ಮಾಡಿಕೊಳ್ಳೋದು) – ನಾನು ಅಂಗಡಿಯಿಂದ ಅಂಗಡಿಗೆ ಓಡಾಡೋವಾಗ ನನ್ನ ಬ್ಯಾಗ್ ಹಿಡಿದುಕೊಳ್ಳೋದು ಯಾರು?

ಮೂಲ

6. ಹೆಂಡತಿ – ಈ ಸಲ ಕೂಡ ಒಂದು ಸೇಲ್ ಇದೆ

ಗಂಡ (ಅರ್ಥ ಮಾಡಿಕೊಳ್ಳೋದು) – ಈ ಸಾರೀನು ದುಡ್ಡು ಕೊಡಿ!

7. ಹೆಂಡತಿ – ಸಿನಿಮಾ ನೋಡೋಕೆ ಹೋಗೋಣ್ವಾ?

ಗಂಡ (ಅರ್ಥ ಮಾಡಿಕೊಳ್ಳೋದು) – ಯಾವುದೋ ತೋಪಾಗಿರೋ ಸಿನಿಮಾ ನೋಡುತ್ತಾ ಕಾಲ ಕಳೆಯೋಣಾ?

ಮೂಲ

8. ಹೆಂಡತಿ – ಇನ್ನು ಐದು ನಿಮಿಷದಲ್ಲಿ ರೆಡಿ ಆಗ್ತೀನಿ

ಗಂಡ ( ಅರ್ಥ ಮಾಡಿಕೊಳ್ಳೋದು) – ಜೀವನ ಇಡೀ ಕಾಯೋಕೆ ಸಿದ್ಧ ಆಗಿ!

9. ಹೆಂಡತಿ – ನಾನು ದಪ್ಪ ಆಗಿದೀನಾ?

ಗಂಡ (ಅರ್ಥ ಮಾಡಿಕೊಳ್ಳೋದು) – ಇಲ್ಲ ಅನ್ನಿ, ಸುಮ್ಮನೆ ಇಲ್ಲ ಅನ್ನಿ!

ಮೂಲ

10. ಹೆಂಡತಿ – ಸ್ವಲ್ಪ ಮಾತಾಡಬೇಕಿತ್ತು!

ಗಂಡ (ಅರ್ಥ ಮಾಡಿಕೊಳ್ಳೋದು) – ಇವತ್ತು ನಿಮ್ಮನ್ನ ಉಳಿಸೋಕೆ ಆ ದೇವರಿಗೂ ಸಾಧ್ಯ ಇಲ್ಲ!