https://ak5.picdn.net/shutterstock/videos/19483699/thumb/1.jpg

ಎಷ್ಟೋ ಬಾರಿ ಸಂಬಂಧಗಳಲ್ಲಿ, ಒಬ್ಬರನ್ನ ಇನ್ನೊಬ್ಬರು ತಮ್ಮನ್ನೇ ಮರೆಯೋವಷ್ಟು ಹಚ್ಚಿಕೊಂಡಿರ್ತಾರೆ. ಅವರ ಪ್ರೀತಿ ಎಷ್ಟಿರುತ್ತಂದ್ರೆ, ಯಾವುದೇ ಮುಖವಾಡ ಇಲ್ಲದೇ ಪೂರ್ಣವಾಗಿ ತಮ್ಮವರ ಮುಂದೆ ತಾವಾಗಿಯೇ ಇರುತ್ತಾರೆ. ಇನ್ನು ಇಷ್ಟು ಚೆನ್ನಗಿರೋ ಸಂಬಂಧದಲ್ಲಿ ತಾವು ಯಾವುದೇ ಯೋಚನೆ ಇಲ್ಲದೇ ಮುಂದುವರೀತಾರೆ. ಈ ಸಂಬಂಧದಲ್ಲಿ ಪ್ರೀತಿ, ನಂಬಿಕೆ ಎಲ್ಲವೂ ಜಾಸ್ತೀನೇ ಇರತ್ತೆ.

ನಿಮ್ಮ ಸಂಗಾತಿ ಜೊತೆ ನೀವು ಪೂರ್ತಿ ಅರಾಮಾಗಿ ಇರೋಕ್ಕಾದರೆ ಅದಕ್ಕಿಂತಾ ಖುಷಿ ಬೇರಿಲ್ಲ. ಆದರೆ ಇದು ನಿಮಗೆ ಮಾತ್ರ ಅಲ್ಲ. ನಿಮ್ಮ ಸಂಗಾತಿಗೂ ಹಾಗೇ ಅನ್ನಿಸ್ಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳಿ. ಅವರು ನಿಮ್ಮನ್ನ ಹುಚ್ಚರಂತೆ ಪ್ರೀತಿಸೋರಾದರೆ, ನಿಮ್ಮ ಪ್ರತಿಯೊಂದು ವಿಷಯಕ್ಕೂ ಗಮನ ಹರಿಸ್ತಾರೆ. ಅದ್ರಲ್ಲೊಂದಿಷ್ಟು ಇಲ್ಲಿವೆ ನೋಡಿ.

1. ನೀವು ತಿನ್ನೋ ಊಟದ ಪ್ರಮಾಣ 

ನೀವು ಸ್ಟಾರ್ ಹೋಟೆಲ್ಲು, ಬಂಡಿ ಗಾಡಿ ಅಂತೆಲ್ಲಾ ತಲೆಕೆಡಿಸ್ಕೊಳ್ದೆ ತಿನ್ನೋವ್ರು. ನಿಮಗೆ ಅಂತ ಒಂದ್ ರೀತಿ ಡಯೆಟ್ ಸೆಟ್ ಮಾಡ್ಕೊಂಡಿರ್ತೀರ ಸರಿ. ಆದ್ರೆ ಅದರ ಬಗ್ಗೆ ಬೇಡ್ದೇ ಇರೋ ಅಷ್ಟು ತಲೆ ಕೆಡಿಸ್ಕೊಳಲ್ಲ. ಎಷ್ಟು ಬೇಕೊ ಅಷ್ಟು ಆರಾಮಾಗಿ ತಿಂತೀರ, ಆಮೇಲೆ ವ್ಯಾಯಾಮಾ ಮಾಡ್ತೀರ. ನೀವಿದ್ರ ಬಗ್ಗೆ ಅಷ್ಟಾಗಿ ತಲೆ ಕೆಡಿಸ್ಕೊಳ್ದೇ ಇದ್ರೂ ನಿಮ್ ಗಂಡ ಇದ್ನೆಲ್ಲಾ ಅಬ್ಸರ್ವ್ ಮಾಡ್ತ ಇರ್ತಾರೆ. ನಿಜ ಹೇಳ್ಬೇಕಂದ್ರೆ, ನೀವು ಜಾಸ್ತಿ ತಲೆಕೆಡಿಸ್ಕೊಳ್ದೇ ತಿಂದ್ರೆ, ಅವ್ರಿಗೂ ಖುಷೀನೇ. ಆಗ ತಾನು ಜಾಸ್ತಿ ತಿಂದೆ ಅಂತ ಅವ್ರಿಗೆ ಮುಜುಗರ ಆಗಲ್ವಲ್ಲ ಅದಕ್ಕೇ!

 

2. ನೀವು ದಿನಾ ಮಾಡ್ಕೊಳೋ ಮೇಕಪ್

ನಿಮಗೆ ನೀವು ಪ್ರತಿದಿನದ ತರಾನೇ ರೆಡಿ ಆಗಿದ್ದೀನಿ ಅಂತ ಅನ್ನಿಸ್ಬೋದು. ಆದ್ರೆ ನಿಮ್ಮೋರು ನಿಮ್ಮ ಮೇಕಪ್ಪಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ ಕಂಡುಹಿಡಿದ್ ಬಿಡ್ತಾರೆ. ನೀವು ಹೇಗೆ ರೆಡಿ ಆಗ್ತಿದೀರ ಅನ್ನೋದ್ರ ಮೇಲೆ, ಇಡೀ ದಿನ ನಿಮ್ಮ ಮೂಡ್ ಹೇಗಿರತ್ತೆ ಅಂತ ಅವಿಗೆ ಗೊತ್ತಾಗ್ಬಿಡತ್ತೆ. ಅವ್ರ ಪ್ರಕಾರ, ನೀವು ಹಾಕೊಳೋ ಮೇಕಪ್ ನಿಮ್ಮ ಭಾವನೆಗಳಿಗೆ ಹಿಡ್ದಿರೋ ಕನ್ನಡಿ ತರ!

3. ನೀವೇನ್ ಕುಡೀತೀರ ಅನ್ನೋದ್ರ ಮೇಲೆ ನಿಮ್ಮ ಮೂಡ್ ಏನು ಅಂತ

ಒಂದು ಇಡೀ ದಿನದ ಪರಿಶ್ರಮದ ನಂತರ ನೀವು ತಲೆ ನೋವು ಅಂತ ಕಾಫೀ ಕುಡೀತೀರೋ ಅಥವಾ ಮತ್ತಷ್ಟು ಲವಲವಿಕೆ ಇರ್ಲಿ ಅಂತ ಟೀ ಕುಡೀತೀರೋ ಅನ್ನೋದನ್ನ ಅವರು ಚೆನ್ನಾಗಿ ಗಮನಿಸಿರುತ್ತಾರೆ. ಇದ್ರಿಂದ ನಿಮ್ಮ ದಿನ ಹೇಗಿತ್ತು, ಮುಂದಿನ ಅರ್ಧ ದಿನ ಹೇಗಿರತ್ತೆ ಅಂತ ಲೆಕ್ಕ ಹಾಕ್ಬಿಡ್ತಾರೆ.

 

4. ನೀವು ಹಾಕ್ಕೊಳೋ ಬಟ್ಟೆ ಬಣ್ಣ 

ಬೆಳಿಗ್ಗೆ ಆಫೀಸ್ಗೆ ಹೋಗೋ ಮುಂಚೆ ಯಾವ್ ಬಟ್ಟೆ ಹಾಕೋಬೇಕು ಅಂತ ಡಿಸೈಡ್ ಮಾಡೋದು ನಿಮ್ಗೆ ದೊಡ್ಡ್ ವಿಷ್ಯ ಏನಲ್ಲ… ಹೌದು. ಆದರೆ ನಿಮ್ಮ ಗಂಡ ಅದನ್ನ ಗಮನಿಸಿರ್ತಾರೆ. ನೀವು ಅವತ್ತು ಹಾಕ್ಕೊಳೋ ಬಟ್ಟೆ ಬಣ್ಣದ ಮೇಲೆ ನಿಮ್ಮ ಮೂಡ್ ಬಗ್ಗೆ ಅವರು ತಿಳ್ಕೋತಾರೆ ಗೊತ್ತಾ?

5. ನಿಮಗೆ ಖುಷಿ ಕೊಡೋ ಹವ್ಯಾಸ

ನಿಮಗಿಷ್ಟವಾಗೋ ಕೆಲಸ ಮಾಡುವಾಗ ನಿಮ್ಮ ಮುಖದಲ್ಲಿ ಒಂದು ರೀತಿ ಕಾಂತಿ, ನಿಮ್ಮ ಕಣ್ಣಲ್ಲಿ ಹೊಳಪು ಬರುತ್ತಲ್ಲಾ… ಅದನ್ನ ನೋಡಕ್ಕೆ ನಿಮ್ಮೋರಿಗೆ ಬಹಳ ಖುಷಿಯಾಗತ್ತೆ. ಅದ್ಕೇ ಅವ್ರು ನಿಮ್ಗಿಷ್ಟ ಆಗೋ ಹವ್ಯಾಸಗಳನ್ನ ಬೆಳಸ್ಕೊಳಕ್ಕೆ ನಿಮ್ಮನ್ನ ಪ್ರೋತ್ಸಾಹಿಸೋದು, ಮತ್ತೆ ತನಗದ್ರಲ್ಲಿ ಆಸಕ್ತಿ ಇಲ್ದಿದ್ರೂ ನಿಮ್ಜೊತೆ ಅದನ್ನ ಒಂದೊಂದ್ಸರ್ತಿ ಮಾಡೋದು. ಸಂಗೀತ, ಡಾನ್ಸು, ಚಿತ್ರಕಲೆ… ಏನೇ ಆಗಿರ್ಬೋದು, ನಿಮ್ಗದು ಇಷ್ಟ ಆದ್ರೆ ಖಂಡಿತ ಅವ್ರಿಂದ ಪ್ರೋತ್ಸಾಹ ಸಿಕ್ಕೇ ಸಿಗತ್ತೆ.

 

6. ನಿಮ್ಮ ನಗುವಿನ ಹಿಂದಿರೋ ಅರ್ಥ 

ಯಾವ್ ಗಂಡಸು ತಾನೆ ತಾನು ಇಷ್ಟ ಪಡೋ ಹುಡ್ಗಿ ನಗ್ನಗ್ತಾ ಇರ್ಬೇಕು ಅಂತ ಬಯ್ಸಲ್ಲಾ ಹೇಳಿ? ನಿಮ್ಮ ಮುದ್ದಾದ ನಗು ಅವ್ರಿಗ್ ಯಾವ ರೇಂಜಿಗೆ ಕಿಕ್ ಕೊಡತ್ತೆ ಅಂತ ನಿಮಗೆ ಯಾವತ್ತೂ ಅರ್ಥ ಆಗಲ್ಲ ಬಿಡಿ!

7. ನಿಮ್ಮ ಮುಖದ ಹಾವ ಭಾವದಲ್ಲಾಗೋ ಬದಲಾವಣೆ

ನೀವು ಕೆಲವೊಮ್ಮೆ ನಿಮ್ಮ ಮುಖದ ಭಾವಗಳನ್ನ ಗಮನಿಸದೇ ಹೋಗ್ಬಹುದು. ಆದ್ರೆ ನಿಮ್ಮೋರು ಅದನ್ನ ಖಂಡಿತಾ ಗಮನಿಸಿರ್ತಾರೆ. ನಿಮ್ಮ ಮುಖ ನೋಡಿದ್ ಮರು ಕ್ಷಣಾನೇ, ನಿಮ್ ಮೂಡ್ ಆಫ್ ಆಗಿದ್ಯಾ ಏನು ಅಂತ ಅವ್ರಿಗೆ ಗೊತ್ತಾಗ್ಬಿಡತ್ತೆ.  ನಿಮ್ಮ ಮುಖದಲ್ಲಾಗೋ ಒಂದೊಂದು ಸೂಕ್ಷ್ಮ ಬದಲಾವಣೇನೂ ಅವರಿಗೆ ಚೆನ್ನಾಗಿ ಅರ್ಥ ಆಗುತ್ತೆ.

 

8. ನಿಮ್ಮಲ್ಲಿರೋ ಅತೀ ವಿಚಿತ್ರವಾದ ಗುಣ

ಪ್ರತಿಯೊಬ್ಬರಿಗೂ ಒಂದೊಂದು ವಿಚಿತ್ರ ಗುಣ ಇದ್ದೇ ಇರುತ್ತೆ. ಇದನ್ನ ನಾವು ಗಮನಿಸಿರಲ್ಲ…ಯಾಕಂದ್ರೆ ಅವು ನಮ್ಗೇನೂ ಡಿಫರೆಂಟ್ ಅಂತ ಅನ್ಸಿರಲ್ಲ. ಆದ್ರೆ ನಿಮ್ಮ ಗಂಡ ನಿಮ್ಮಲ್ಲಿರೋ ಇಂಥಾ ಪ್ರತೀ ಚಿಕ್ಕ ಗುಣಾನೂ ಗಮನ್ಸಿರ್ತಾರೆ. ನಿಜ ಹೇಳ್ಬೇಕು ಅಂದ್ರೆ, ನಿಮ್ಮೀ ವಿಚಿತ್ರ ಗುಣಗಳೇ ಅವ್ರು ನಿಮ್ಮನ್ನ ಇನ್ನೂ ಜಾಸ್ತಿ ಪ್ರೀತ್ಸೋ ಹಾಗೆ ಮಾಡಿರತ್ವೆ!

9. ನಿಮಗಿಷ್ಟ ಆಗೋ ಸಂಗೀತ

ನಿಮ್ಮ ಜೀವನದ ಬಗ್ಗೆ ಅತೀ ಹೆಚ್ಚು ಕಾಳಜಿ ನಿಮ್ಮವರಿಗಿರುತ್ತೆ.ನಿಮ್ಮನ್ನ ತುಂಬಾ ಪ್ರೀತಿಸೋ ಅವರು, ನಿಮ್ಮ ಪ್ರಪಂಚದಲ್ಲಿ ಪೂರ್ತಿ ಮುಳುಗೋ ಪ್ರಯತ್ನ ಮಾಡ್ತಾರೆ. ಹಾಗಾಗಿ ತೀರಾ ಚಿಕ್ಕ ವಿಷಯ ಅಂತ ಅನ್ಸೋ, ನಿಮ್ಮಿಷ್ಟದ ಹಾಡಿನ ಬಗ್ಗೆ ಕೂಡ ಅವ್ರಿಗೆ ಗೊತ್ತಿರುತ್ತೆ. ನಿಮ್ಗೆ ಇದು ತೀರ ಸಾಮಾನ್ಯ ಅನ್ಸೋ ವಿಷಯ. ಆದ್ರೆ ನಿಮ್ಮನ್ನ ಮೆಚ್ಚಿಸೋಕೆ, ಇನ್ನಷ್ಟು ಅರ್ಥ ಮಾಡಿಕೊಳ್ಳೋಕೆ ಇದೊಂದೊಳ್ಳೆ ದಾರಿ ಅಂತ ಅವ್ರಿಗೆ ಅನ್ಸತ್ತೆ. 

 

10. ನಿಮಗೆ ನೋವುಂಟು ಮಾಡೋ ವಿಷಯಗಳು

ನೀವು ನೋವಲ್ಲಿರೋದನ್ನ ನೋಡಕ್ಕೆ ಅವರಿಗೆ ಸ್ವಲ್ಪಾನೂ ಇಷ್ಟ ಆಗಲ್ಲ. ನಿಮ್ಮನ್ನ ಯಾವಾಗ್ಲೂ ಖುಷಿಯಾಗಿಡಕ್ಕೇ ನೋಡ್ತಾರೆ. ನಿಮಗೆ ಗೊತ್ತಿದ್ಯೋ ಇಲ್ವೋ, ಆದ್ರೆ ನಿಮಗೆ ನೋವುಂಟು ಮಾಡೋ ಭಾವನೆಗಳಿಂದ್ಲೂ ನಿಮ್ಮನ್ನ ದೂರ ಇಡ್ಬೇಕು ಅಂತ ಪ್ರಯತ್ನ ಮಾಡ್ತಾರೆ. ಅದಕ್ಕೇ ಜೀವನ್ದಲ್ಲಿ ನಿಮಗೇನೇನು ಇಷ್ಟ ಆಗಲ್ಲ ಅನ್ನೋದನ್ನೆಲ್ಲಾ ಗಮನದಲ್ಲಿಟ್ಕೊಂಡಿರ್ತಾರೆ. ನೀವು ಯಾವಾಗ್ಲೂ ಆರಾಮಾಗಿ, ಖುಷಿಖುಷಿಯಾಗಿ ಇರ್ಬೇಕು ಅನ್ನೋದೊಂದೇ ಅವರ ಆಸೆ!

11. ನಿಮಗೆ ತುಂಬಾ ಇಷ್ಟವಾದ ವಿಷಯಗಳು

ನೀವು ಖುಷಿಯಾಗಿದ್ರೆ ಮಾತ್ರ ಅವರು ಖುಷಿಯಾಗಿರಕ್ಕೆ ಸಾಧ್ಯ ಅಂತ ನಿಮ್ಮೋರಿಗೆ ಚನ್ನಾಗ್ ಗೊತ್ತು. ಅದ್ಕೇ, ನಿಮಗೆ ಯಾವುದ್ರಿಂದ ಜಾಸ್ತಿ ಖುಷಿ ಸಿಗತ್ತೆ, ನಿಮ್ಗೇನಿಷ್ಟ ಅಂತ ತಿಳ್ಕೊಳೋ ಪ್ರಯತ್ನ ಮಾಡ್ತಾರೆ. ನೀವಿಬ್ರೂ ಒಟ್ಟಿಗೆ ಕಳಿಯೋ ಪ್ರತಿಯೊಂದು ದಿನಾನೂ ಸಂತೋಷದಿಂದ ತುಂಬಿರ್ಬೇಕು ಅನ್ನೋದೊಂದೇ ಅವರ ಜೀವನದ ಪರಮೋದ್ದೇಶ ಅಂತ ಹೇಳ್ಬೋದು. ಅದಕ್ಕೋಸ್ಕರ ಅವ್ರು ಯಾವ ಮಟ್ಟಕ್ಕಾದ್ರೂ ಹೋಗಕ್ಕೆ ರೆಡಿ ಇರ್ತಾರೆ!

ನಿಮ್ಮೋರು ಈ ತರ ಇದ್ರೆ,ಎಷ್ಟೇ ಕಷ್ಟ ಬಂದ್ರೂ ಅವ್ರನ್ನ ಕಾಪಾಡ್ಕೊಳಿ. ಆಯ್ತಾ?