ದೇಹ ರಚನೇಲಿ ಹೆಣ್ಣಿಗೂ ಗಂಡಿಗೂ ಸಾಕಷ್ಟು ವ್ಯತ್ಯಾಸ ಇದೆ ಅನ್ನೋದು ಅಂತೆಕಂತೆಯಲ್ಲ, ಆದರೂ ಹೆಣ್ಣಿನ ದೇಹದಲ್ಲಿ ಈ ರೀತಿ ವಿಶೇಷ ಇರಬಹುದು ಅಂತ ತಿಳ್ಕೊಂಡ್ರೆ ನಿಮಗೂ ಅಶ್ಚರ್ಯ ಆಗುತ್ತೆ.

  1. ತನ್ನ ಎಲ್ಲ ಕೆಲಸಗಳಿಗೆ ತನ್ನವನು ಕತ್ತಾಡಿಸಲಿ ಅಂದುಕೊಳ್ಳೋ ಹುಡುಗೀರ ಕತ್ತೇ ಜಾಸ್ತಿ ಆಡುತ್ತಂತೆ

ಕತ್ತಾಡಿಸೋವಾಗ ಹುಡುಗರು ಪಾಪ ಇಡೀ ದೇಹ ಆಡಿಸಬೇಕಂತೆ ಅದೇ ಹುಡುಗೀರು ನಿಂತಲ್ಲೇ ಕತ್ತಾಡಿಸುತ್ತಾ ತಲೆನ ಸುಲಭವಾಗಿ ಆಡಿಸುತ್ತಾರೆ ಇದಕ್ಕೆ ಅವರ ಮಾಂಸಖಂಡಗಳಲ್ಲಿರೋ ವಿಶೇಷ ರಚನೇನೇ ಕಾರಣ. ಆದರೆ ಇದರಿಂದ ಹುಡುಗೀರಿಗೆ ಕತ್ತು ನೋವು ಹೆಚ್ಚು ಕಾಡುತ್ತಂತೆ.

2. ನಿದ್ದೇಲೂ ಸುತ್ತ ನಡೆಯೋದೆಲ್ಲಾ ಕೇಳಿಸಿಕೊಳ್ಳೋಕೆ ಹೆಂಗಸರಿಗೆ ಸಾಧ್ಯ

ಇದೇ ಕಾರಣಕ್ಕೆ ಮಗು ಅತ್ತಾಗ ಆಕೆ ಮೊದಲು ಏಳ್ತಾಳೆ. ಹಾಗಂತ ಹೆದರದಿರಿ ಗಂಡಸರೆ, ಮೆಲು ಧ್ವನಿಯಲ್ಲಿ ಮಾತಾಡಿದರೆ ಅವರಿಗೆ ಎಚ್ಚರ ಆಗಲ್ಲ.

ಇದೇ ಕಾರಣಕ್ಕೆ ಹೆಂಗಸರಲ್ಲಿ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಡುತ್ತವೆ.

3. ಹೆಂಗಸರ ಒಂದು ಸ್ತನಕ್ಕಿಂತ ಮತ್ತೊಂದು ಸ್ತನ ಚಿಕ್ಕದಾಗಿರುತ್ತದೆ

ಕೆಲವೊಮ್ಮೆ ಇದು ತಿಳಿಯದೇ ಹೋಗುವಷ್ಟು ಕಡಿಮೆ ವ್ಯತ್ಯಾಸವಾದರೆ ಮತ್ತೂ ಕೆಲವೊಮ್ಮೆ ಇದು ಸ್ಪಷ್ಟವಾಗಿ ಕಾಣಬಹುದು. ಇದಕ್ಕೆ ಕಾರಣ ತಿಳಿದಿಲ್ಲ ಹಾಗೇ ಇದರಿಂದ ಯಾವುದೇ ಸಮಸ್ಯೆ ಇಲ್ಲ.

4. ಹೆಂಗಸರು ಗಂಡಸರಿಗಿಂತ ಹೆಚ್ಚು ತರ್ಕ ಬದ್ಧವಾಗಿ ಯೋಚಿಸಬಲ್ಲರು

ನಮ್ಮಲ್ಲಿರೋ ಸಾಮಾನ್ಯ ಅಂತೆಕಂತೆ ಅಂದರೆ ಹೆಂಗಸರು ಗಂಡಸರಿಗಿಂತ ಹೆಚ್ಚು ಭಾವಜೀವಿಗಳು ಅಂತ ಆದರೆ ನಿಜ ಏನೆಂದರೆ ಅವರ ಮೆದುಳಿನೆ ರಚನೆ ಪ್ರಕಾರ ಹೆಂಗಸರು ಹೆಚ್ಚು ತರ್ಕಬದ್ಧವಾಗಿ ಯೋಚಿಸಿದರೆ ಗಂಡಸರು ಭಾವನಾತ್ಮಕವಾಗಿ ಯೋಚಿಸುತ್ತಾರೆ.

5. ಹೆಂಗಸರ ಸೊಂಟದ ಭಾಗದಲ್ಲಿ ಶೇಖರಣೆಯಾಗೋ ಕೊಬ್ಬಿನಾಂಶ ಅವರಿಗೆ ಆರೋಗ್ಯಕರ

ಸಾಮಾನ್ಯವಾಗಿ ಕೊಬ್ಬಿನಾಂಶ ಶೇಖರಣೆಯಾದರೆ ನಾವು ಅದರಿಂದ ತೊಂದರೆ ಅಂದುಕೊಳ್ಳುತ್ತೀವಿ ಆದರೆ ನಿಜ ಏನೆಂದರೆ ಹೆಂಗಸರ ಸೊಂಟದಲ್ಲಿ ಶೇಖರಣೆಯಾದ ಕೊಬ್ಬಿನಿಂದ ಈಸ್ಟ್ರೋಜೆನ್ ನಂತಹ ಹಾರ್ಮೋನ್ ಉತ್ಪತ್ತಿ ಮಾಡಿ ಅವಳ ದೇಹದಲ್ಲಿ ಟಾಕ್ಸಿನ್ಸ್ ಸೇರದ ಹಾಗೆ ನೋಡಿಕೊಳ್ಳುತ್ತೆ.

6. ಎಣ್ಣೆ ಹೊಡೆದ ಹೆಂಗಸರಿಗೆ ಗಂಡಸರಿಗಿಂತ ಬೇಗ ನಶೆ ಏರುತ್ತಂತೆ

ಇದಕ್ಕೆ ಕಾರಣ ಹೆಂಗಸರಲ್ಲಿ ಎಣ್ಣೆ ಜೀರ್ಣ ಆಗೋಕೆ ಮುಂಚೆ ರಕ್ತದಲ್ಲಿ ಸೇರಿರುತ್ತಂತೆ. ಇನ್ನು ಅವರು ಕಡಿಮೆ ಬೆವರೋ ಕಾರಣ ಅವರಿಗೆ ಶಾಖವನ್ನ ತಡೇಯೋ ಶಕ್ತಿನೂ ಕಡಿಮೆ. ಹಾಗೆ ನಿಮಗೆ ತಿಳಿದಿರಲಿ ರಕ್ತ ಕೂಡ ಹೆಂಗಸರಲ್ಲಿ ಗಂಡಸರಿಗಿಂತ 12% ಕಡಿಮೆ ಇರುತ್ತಂತೆ.

7. ಹೆಂಗಸರು ಗಂಡಸರಿಗಿಂತ ಹೆಚ್ಚು ಯಾರಿಗಾದರೂ ಆತ್ಮೀಯರಾಗಬಹುದು

ಹೆಂಗಸರ ದೇಹದಲ್ಲಿರೋ ಹೆಚ್ಚಿನ ಆಕ್ಸಿಟೋಸಿನ್ ಹಾರ್ಮೋನ್ ಆಕೆಯಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯದಂತಹ ಭಾವಗಳು ಹೆಚ್ಚಾಗಿ ಇರುತ್ತವೆ. ಅದಕ್ಕೇ ಅವಳಿಗೆ ತಾಯ್ತನ ಹೆಚ್ಚು ಅನ್ನೋದು.

8. ತನ್ನ ಇಪ್ಪತ್ತರ ವಯಸ್ಸಿನ ವರೆಗೂ ಆಕೆ ದೈಹಿಕ ಹಾಗೇ ಮಾನಸಿಕವಾಗಿ ಬೆಳೀತಾಳೇ ಇರ್ತಾಳೆ

ಇದಕ್ಕೇ ಹೇಳೋದು ಪೌಷ್ಟಿಕ ಆಹಾರ ಸೇವಿಸಬೇಕು ಅಂತ. ನಿಮ್ಮ ಮೂಳೆಗಳು ದೃಢವಾಗೋದಲ್ಲದೇ ಮೆದುಳಿನ ಬೆಳವಣಿಗೆಯ ಕಾರಣ ಅವಳು ಮಾನಸಿಕವಾಗಿ ಕೂಡ ಸದೃಢವಾಗುತ್ತಾಳೆ.

9. ಕ್ರಿಯಾಶೀಲತೆ ಕೂಡ ಅವಳಲ್ಲೇ ಹೆಚ್ಚು

ಅವಳಾ ಮೆದುಳಿನ ವಿಶೇಷ ರಚನೆ ಕಾರಣ ಆಕೆಗೆ ಕ್ರಿಯಾಶೀಲತೆ ಹೆಚ್ಚು ಆದರೂ ದೈನಂದಿನ ಎಲ್ಲ ಚಟುವಟಿಕೆಗಳಿಗೆ ಆಕೆ ಸುಲಭವಾಗಿ ಒಗ್ಗುತ್ತಾಳೆ.

10. ಯೂರೋಪಿನ ಹೆಂಗಸರು ಗಂಡಸರಿಗಿಂತ ಹೆಚ್ಚು ಬಿಳುಪಾಗಿರ್ತಾರಂತೆ

ಇನ್ನು ಕೂದಲಿನ ಬಣ್ಣ ಕೂಡ ಹೆಚಂಗಸರಲ್ಲಿ ತಿಳಿ ಹೆಚ್ಚಂತ. ಹಾಗಂತ ಇತೀಚೆಗಿನ ಒಂದು ಸಂಶೋಧನೆ ಹೇಳುತ್ತೆ.

ಈ ಬಣ್ಣಗಳು ಅವರ ಸಂಬಂಧದ ಮೇಲೂ ಪ್ರಭಾವ ಬೀರುತ್ತೆ ಅಂತಿದ್ದಾವೆ ಸಂಶೋಧನೆಗಳು.