ನೀವು ಯಾರನ್ನಾದರೂ ಪ್ರೀತಿಸಿದ್ದರೆ, ಮುಸ್ಸಂಜೆ ಹೊತ್ತು ಅವರ ಕೈ ಹಿಡ್ಕೊಂಡು ವಾಕ್ ಮಾಡೋದರ ಖುಷೀನೇ ಬೇರೆ ಅಂತ ಖಂದಿತ ಒಪ್ತೀರ. ನಿಮಗೆ ಗೊತ್ತಿದ್ಯೋ ಇಲ್ವೋ… ಅದರೆ ಕೆಲವು ಸಣ್ಣ ಪುಟ್ಟ ವಿಚಾರಗಳಿಂದ ನಾವು ನಮ್ಮ ಸಂಬಂಧಗಳ ಬಗ್ಗೆ ತುಂಬ ಚನ್ನಾಗಿ ತಿಳ್ಕೋಬಹುದು.ಹೀಗೇ ನಮ್ಮೋರ ಕೈ ಹಿಡಿಯೋ ರೀತಿಲೂ ಕೆಲವೊಂದು ಸೂಕ್ಷ್ಮಗಳಿವೆ. ಅದೇನು ಅಂತ ನಾವು ಹೇಳ್ತೀವಿ ಕೇಳಿ.
1. ಕೈ ಕೆಳಮುಖವಾಗಿ ಹಿಡ್ಕೊಂಡರೆ ಪ್ರೀತಿ ಹೆಚ್ಚು ಅಂತ ಅರ್ಥ
ಹೀಗೆ ಕೈ ಹಿಡಿದರೆ ಅದು ಭಾವೋದ್ವೇಗಕ್ಕಿಂತ ನಿಮ್ಮಿಬ್ಬರಲ್ಲಿ ಪ್ರೀತಿ ಜಾಸ್ತಿ ಅಂತ ತೋರಿಸುತ್ತೆ . ಹೀಗೆ ಕೈ ಹಿಡಯೋವಾಗ ಯಾರ ಕೈ ಕೆಳಗಡೆ ಜಾಸ್ತಿ ಮುಖ ಮಾಡಿರತ್ತೋ, ಅವರದೇ ಈ ಸಂಬಂಧದಲ್ಲಿ ಮೇಲುಗೈ. ಅವರು ದೃಢ ಮನಸ್ಸಿನೋರು ಮತ್ತು ನಿರ್ಧಾರಗಳನ್ನೂ ತುಂಬಾ ಚೆನ್ನಾಗಿ ತಗೋತಾರೆ. ಇವರಿಗೆ ಎಲ್ಲಾ ವಿಷಯದಲ್ಲೂ ಆಸಕ್ತಿ ಜಾಸ್ತಿ.
2.ಒಬ್ಬರ ಬೆರಳು ಇನ್ನೊಬ್ರಲ್ಲಿ ಬೆಸೆದಿರೋ ಥರ ಹಿಡಿದಿದ್ದರೆ ಭವನಾತ್ಮಕತೆ ಹೆಚ್ಚು
ಭಾವನಾತ್ಮಕವಾಗಿ ಇಬ್ಬರೂ ತುಂಬ ದೃಢವಾಗಿದ್ದರೆ ಅಂತರ್ಥ ಹೀಗೆ ಕೈ ಹಿಡಿದರೆ. ಹೀಗೆ ಕೈ ಹಿಡಿದಾಗ ಇಬ್ಬರೂ ದೃಧವಾಗಿ ಹಿಡಿದರೆ ಸಂಬಂಧ ಚೆನ್ನಗಿರುತ್ತೆ ಆದರೆ ಒಬ್ಬರು ಸಡಿಲವಾಗಿಡಿದರೂ ಕಷ್ಟ.
3. ಒಂದು ಬೆರಳಲ್ಲಿ ಹಿಡಿದರೆ ನಿಮ್ಮ ಸ್ವತಂತ್ರಕ್ಕೆ ಬೆಲೆ ಕೊಡ್ತೀರಿ
ಇಂತಹ ದಂಪತಿಗಳಿಗೆ ಒಬ್ಬರಿಗೆ ಮತ್ತೊಬ್ಬರು ಗೌರವ ಕೊಡೋದೂ ಗೊತ್ತು, ಸ್ಪೇಸ್ ಕೊಡೋದೂ ಗೊತ್ತು. ಒಂದು ಎಚ್ಚರಿಕೆ ವಿಷಯ ಏನಂದರೆ, ಇಬ್ಬರಲ್ಲೊಬ್ಬರು ತಮ್ಮ ಸಂಬಂಧದಿಂದ ಹಿಂದೆ ಸರಿದು ಬರೀ ಸ್ನೇಹಿತರಾಗಿರೋಕೆ ಯೋಚನೆ ಮಾಡುತ್ತಲೂ ಇರ್ಬೋದು.
4. ಕೈ ಸುತ್ತಿ ಗಟ್ಟಿಯಾಗಿ ಹಿಡ್ಕೊಂಡ್ರೆ ನಿಮ್ಮ ಸಂಬಂಧ ಗಟ್ಟಿಯಾಗ್ತಿದೆ ಅಂತರ್ಥ
ಯಾವಾಗಲೂ ಇದು ಪಾಸಿಟಿವ್ವಾಗೇ ಇರ್ಬೇಕು ಅಂತೇನಿಲ್ಲ. ಕೆಲವೊಮ್ಮೆ ಬೇಡದ ಪೊಸೆಸ್ಸಿವೆನೆಸ್ ನಿಮ್ಮನ್ನ ಆವರಿಸುತ್ತಾ ಇದೆ ಅಂತಾನೂ ಇರ್ಬೋದು.
5. ಇಬ್ಬರೂ ತೋಳು ಬಳಸೋ ಹಾಗೆ ಹಿಡ್ಕೊಂಡ್ರೆ, ನಿಮ್ಮ ಸಂಬಂಧದ ಬಗ್ಗೆ ಸ್ವಲ್ಪ ಭಯ ಅಂತ
ಕೆಲವು ವಿಶೇಷ ಸಂದರ್ಭಗಳಲ್ಲಿ ಹೀಗೆ ಹಿಡ್ಕೊಂಡ್ರೆ ಪರ್ವಾಗಿಲ್ಲ. ದಿನಾ ಇದೇ ಕಥೆ ಆದರೆ, ಅವರಿಗೆ ಸಂಬಂಧದ ಬಗ್ಗೆ ಭಯ (ಇನ್ಸೆಕ್ಯೂರಿಟಿ) ಹೆಚ್ಚಿದೆ ಅಂತರ್ಥ.
6. ಬೆರಳು ಹಿಡಿದು ಎಳೆಯೋ ಹಾಗೆ ಮಾಡಿದರೆ ನಿಮ್ಜೊತೆ ಅವರಿಗೆ ಬೋರಾಗೋಗಿದೆ
ಯಾರು ನಿಮ್ಮ ಕೈ ಎಳೆಯುತ್ತಾರೋ ಅವರು ನಿಮ್ಮಿಂದ ಸಾಕಾಗಿದ್ದಾರೆ. ನಿಮ್ಮನ್ನ ತರಾತುರಿಯಲ್ಲಿ ನಿರ್ಧಾರ ತಗೊಳಕ್ಕೆ ಪ್ರೇರಿಪಿಸ್ತಾ ಇದ್ದಾರೆ ಅಂತರ್ಥ.
7. ಕೈ ಹಿಡೀದಿದ್ರೆ ಮುಜುಗರ ಇರ್ಬೋದು
ನಿಮ್ಮನ್ನ ಹೆಚ್ಚು ಹಚ್ಚಿಕೊಂಡಿಲ್ಲ ಅಂತಲೂ ಇರಬಹುದು. ಅವರ ಗೌಪ್ಯತೆ ಬಗ್ಗೆ ಕಾಳಜಿ ಇರ್ಬೋದು. ಈ ಸಂಬಂಧದಲ್ಲಿ ಮುಂದುವರೆಯೋ ಮುಂಚೆ ಯೋಚಿಸಿ.