ಹುಡುಗೀರು ತಾವಾಗೇ ಲವ್ವಾಗಿದೆ ಅಂತ ಹೇಳ್ಕೊಳಲ್ಲ. ಆದರೆ ತಮಗೇ ಗೊತ್ತಿಲ್ಲದೆ ಈ 8 ಲಕ್ಷಣಗಳಿಂದ ಗುಟ್ಟು ಬಿಟ್ಟುಕೊಡ್ತಾರೆ:

1. ಔನ್ನ ನೆನೆಸ್ಕೊಂಡ್ರೆ ಸಾಕು, ತಾನಾಗೇ ನಗು-ನಾಚಿಕೆ ಎಲ್ಲಾ ಒಟ್ಟಿಗೆ ಉಕ್ಕಿ ಬರೋದು

2. ಮೈಮೇಲೆ ನಿಗಾನೇ ಇಲ್ಲದೆ ದಿನವೆಲ್ಲಾ ಹಗಲುಗನಸು ಕಾಣೋದು

3. ಕನ್ನಡಿ ಮುಂದೆ ಜಾಸ್ತಿ ಅನ್ನುವಷ್ಟು ನಿಂತ್ಕೊಂಡು ನುಲಿಯೋದು

4. ಸುತ್ತಾ ಏನ್ ನಡೀತಿದೆ ಅನ್ನೋ ಬಗ್ಗೆ ಗಮನ ಇಲ್ದೇ ಅವನ ಹೆಸರನ್ನೇ ಗುನುಗ್ತಾ ಇರೋದು

5. ಯಾರ್ ಹತ್ರಾನೂ ಹೇಳ್ಕೊಳ್ದೆ ಪ್ರಣಯದ ಕನಸು ಕಾಣೋದು

6. ಸುಮ್ಸುಮ್ನೆ ಏನಾದ್ರೂ ನೆಪ ಮಾಡ್ಕೊಂಡು ಔನ್ಗೆ ಫೋನ್ ಮಾಡೋದು

7. ಜೀವನಾನೇ ಪ್ರೇಮ, ಪ್ರೇಮಾನೇ ಜೀವನ ಅಂತ ಸಿದ್ಧಾಂತ ಕುಯ್ಯೋದು

8. ಯಾವಾಗ್ಲೂ ಔನ್ ಜೊತೆಲೇ ಇರ್ಬೇಕು ಅಂತ ಆಸೆ ಪಡ್ತಾ ಇರೋದು

ಈ ಪಾಡೆಲ್ಲಾ ನೋಡೇ ನಮ್ ಗುರು ಹಾಡ್ ಬರ್ದಿರೋದು ಅನ್ಸುತ್ತೆ… ಏನುಡ್ಗೀರೋ ಅದ್ಯಾಕಿಂಗಾಡ್ತೀರೋ… ಅಂತ, ಅಲ್ವಾ? ಹಾಡ್ ನೋಡಿ…

ಹೊರಚಿತ್ರ: ಮೂಲ