https://jvkini.files.wordpress.com/2009/09/102_3436.jpg

"ಹಿತ್ತಲ ಗಿಡ ಮದ್ದಲ್ಲ" ಅಂತ ಗಾದೇನೇ ಇದೆ… ಅದರಿಂದಲೇ ಗೊತ್ತಾಗುತ್ತೆ ನಾವು ಅನಾದಿಕಾಲದಿಂದ ಹತ್ತಿರದ ಪರಿಹಾರಗಳ್ನ ಬಿಟುಬಿಡ್ತೀವಿ ಅಂತ… ಈ ದೊಡ್ಡಿಪತ್ರೆಯಿಂದ ಏನೇನ್ ಉಪಯೋಗ ಇದೆ ಅಂತ ತಿಳ್ಕೊಳ್ಳೋ ಕುತೂಹಲ ನಿಮಗಿದೆಯಲ್ಲ, ಅದು ತುಂಬ ಒಳ್ಳೇದು… ಯಾಕಂದ್ರೆ ಇಂಥ ಹಿತ್ತಲ ಗಿಡಗಳ್ನ ಈಗೀಗ ಜನ ಮರೆತು ಬಿಡ್ತಾ ಇದಾರೆ… ಸರಿ ಹಾಗಾದರೆ, ದೊಡ್ಡಿಪತ್ರೆಯಿಂದ ಎಂತೆಂಥ ಅದ್ಭುತವಾದ ಉಪಯೋಗ ಇದೆ ಅಂತ ಅರ್ಥ ಸ್ವಲ್ಪ ನೋಡಿ…

1. ಉಸಿರಾಟದ ತೊಂದ್ರೆಗೆ

ಶೀತ, ಸೋರೊ ಮೂಗು, ಕಫ, ತಲೆನೋವು, ಸೈನಸ್ ಪ್ರಾಬ್ಲಮ್ ಇಂಥಾವೇನಾದ್ರೂ ಇದ್ರೆ, ತಲೆ ಕೆಡ್‌ಸ್ಕೊಳ್ಳೋ ಅವಶ್ಯಕತೆ ಇಲ್ಲ. ದೊಡ್ಡಿಪತ್ರೆ ಎಲೆಗಳನ್ನ ಜಗೀತ ಇದ್ರೆ ಸಾಕು. ಇಲ್ಲಾಂದ್ರೆ ಇದ್ರ ಎಲೆಯಿಂದ ಟೀ ಮಾಡ್ಕೊಂಡು ಕುಡಿಬೋದು. ಇದ್ರಿಂದ ಎಲ್ಲ ತೊಂದ್ರೆಗಳೂ ಮಾಯ ಆಗುತ್ತೆ. ಆಗಾಗ ಇದ್ರ ಎಲೆಗಳನ್ನ ತಿನ್ನೋದ್ರಿಂದ ನಮ್ಮ ದೇಹದಲ್ಲಿ ಶೀತ ತರೋ ಬ್ಯಾಕ್ಟೀರಿಯ ಕೂಡ ಬೆಳೆಯಲ್ವಂತೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸಹ ಜಾಸ್ತಿ ಆಗುತ್ತೆ.

2. ಚರ್ಮದ ತೊಂದ್ರೆಗೆ

ಯಾವ್ಯಾವ್ದೋ ಹುಳ ಕಡೀಯೋದ್ರಿಂದ, ಚರ್ಮ ಕೆಂಪಗೆ ಆಗೋದು,ಊದೋದು ಎಲ್ಲ ಆದ್ರೆ, ಇದರ ರಸ ತಗೊಂಡು ಆ ಜಾಗಕ್ಕೆ ಸ್ವಲ್ಪ ಹಚ್ಚಿದ್ರೆ ಆಯ್ತು. ಉರಿ ಕೂಡ ಕಡಿಮೆ ಆಗಿ ತಂಪು ಅನ್ಸುತ್ತೆ.

ಮೂಲ

3. ಮೂಳೆ ನೋವಿಗೆ

ಇದ್ರಲ್ಲಿರೋ ಒಮೆಗಾ 6 ಅನ್ನೋ ಫ್ಯಾಟೀ ಆಸಿಡ್, ಮೂಳೆಗಳಿಗೆ ಬಹಳಾನೇ ಒಳ್ಳೇದು. ಅರ್ತರೈಟಿಸ್ ಇರೋವ್ರು, ಆಟಗಾರರು ಆಗಾಗ ಇದ್ರ ರಸ ಕುಡೀತ ಇದ್ರೆ, ಮೂಳೆಗಳ ಮೇಲೆ ಒತ್ತಡ ಕಡಿಮೆ ಆಗುತ್ತೆ.

4. ವಿಟಮಿನ್ A ಮತ್ತು C ಗೆ

ಇದ್ರಲ್ಲಿರೋ ವಿಟಮಿನ್ A ಮತ್ತು C, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುತ್ತೆ. ಕಣ್ಣಿನ ದೃಷ್ಟಿ ಇಂಪ್ರೂವ್ ಮಾಡಿ,ಕಣ್ಣಿಗೆ ಆಗಿರೋ ಒತ್ತಡ ಕಡಿಮೆ ಮಾಡುತ್ತೆ.

ಮೂಲ

5.  ಕ್ಯಾನ್ಸರ್ ಕಡಿಮೆ ಮಾಡೋಕ್ಕೆ

ಇದ್ರ ಬಗ್ಗೆ ಇನ್ನೂ ಸಂಶೋಧನೆಗಳು ನಡೀತಾ ಇದೆ . ಆದ್ರೂನೂ ವಿಜ್ಞಾನಿಗಳ ಪ್ರಕಾರ ಇದರ ಎಲೆಯಲ್ಲಿ ಸ್ತನ ಕ್ಯಾನ್ಸರ್ ನಿವಾರಣೆ ಮಾಡೋವಂತ ಶಕ್ತಿ ಇದ್ಯಂತೆ. ಇದ್ರಲ್ಲಿರೋ ರೋಗ ನಿರೋಧಕ ಶಕ್ತಿ, ಸ್ತನ ಕ್ಯಾನ್ಸರ್ ಮುಂದೆ ಹಬ್ಬದೆ ಇರೋಹಾಗೆ ತಡೆಯುತ್ತಂತೆ.

6. ಒತ್ತಡ ಕಡಿಮೆ ಮಾಡಕ್ಕೆ

ಇದ್ರ ಎಲೆಯಲ್ಲಿರೋ ಖನಿಜಗಳು ದೇಹದ ಮೇಲಿನ ಒತ್ತಡ ಕಡಿಮೆ ಮಾಡಿ, ಮನಸ್ಸಿಗೆ ಹೊಸ ಹುರುಪು ಕೊಡ್ತವಂತೆ. ಇದ್ರ ಎಲೆಯ ಚಹಾ ಮಾಡಿ ಕುಡಿದ್ರೆ, ಮನಸ್ಸಿನ ಮೇಲಿನ ಒತ್ತಡ ಕಡಿಮೆ ಆಗಿ ನೆಮ್ಮದಿ ಸಿಗುತ್ತೆ ಮತ್ತು ನಿದ್ದೇನೂ ಚನ್ನಾಗಿ ಬರುತ್ತಂತೆ.

ಮೂಲ

7.  ಕಿಡ್ನಿಯ ಆರೋಗ್ಯ ಕಾಪಾಡಕ್ಕೆ

ಮನುಷ್ಯನ ದೇಹದ ಒಳಗಿರೋ ಕೊಳೆ ಕ್ಲೀನ್ ಮಾಡೋ ಶಕ್ತಿ ಇದ್ರ ಎಲೆಗಳಿಗಿದೆ. ರಕ್ತದಲ್ಲಿ ಬೇಡದೆ ಇರೋ ಕೊಬ್ಬಿನ ಅಂಶ,ಕೊಲೆಸ್ಟ್ರಾಲ್, ಮೂತ್ರದಲ್ಲಿರೋ ಉಪ್ಪಿನ ಅಂಶವನ್ನ ಕಡಿಮೆ ಮಾಡಿ, ನಮ್ಮ ಕಿಡ್ನಿ ಆರೋಗ್ಯವಾಗಿರೋ ಹಾಗೆ ನೋಡ್ಕೊಳುತ್ತೆ ಇದು.

8. ಜ್ವರ ಕಡಿಮೆ ಮಾಡಕ್ಕೆ

ಜ್ವರ ಮತ್ತು ಶೀತದಿಂದ ನರಳ್ತಾ ಇರೋವ್ರು ಇದರ ಎಲೆಯಿಂದ ಕಷಾಯ ಮಾಡಿ ಕುಡಿದ್ರೆ, ಜ್ವರ ಬೇಗ ವಾಸಿ ಆಗುತ್ತೆ. ಇದ್ರ ಎಲೆಯಲ್ಲಿರೋ ರಾಸಾಯನಿಕಗಳು ದೇಹ ಬೇಗ ಬೆವರೋವಂತೆ ಮಾಡಿ, ಜ್ವರ ಕಡಿಮೆ ಆಗಕ್ಕೆ ಸಹಾಯ ಮಾಡುತ್ತೆ.

ಮೂಲ

9. ಜೀರ್ಣಕ್ರಿಯೆ ಸರಿಯಾಗಕ್ಕೆ

ನಮ್ಮ ದೇಹದ ಪಚನ ಕ್ರಿಯೆ ಸರಿಯಾಗಿ ಆಗೋಹಾಗೆ ಮಾಡಕ್ಕೆ ಇದ್ರ ಎಲೆಯ ಟೀ ಸಹಾಯ ಮಾಡುತ್ತೆ. ಇದ್ರಿಂದ ಹೊಟ್ಟೆ ಉಬ್ಬೋದು ಕೂಡ ನಿಲ್ಲತ್ತೆ.

ಇಷ್ಟೆಲ್ಲ ಉಪಯೋಗ ಇರೋ ದೊಡ್ದಿಪತ್ರೆ ಗಿಡಾನ ನೀವು ನಿಮ್ಮನೆ ತೋಟದಲ್ಲಿ ಬೆಳೆಸಿದ್ರೆ ಒಂದಲ್ಲ ಒಂದು ರೀತಿಲಿ ಪ್ರಯೋಜನಕ್ಕೆ ಬರುತ್ತೆ. ಮತ್ಯಾಕೆ ತಡ, ತಂದು ನೆಟ್ಟು ಬಿಡಿ ..ಏನಂತೀರಾ?