http://www.ikea.com/PIAimages/0416866_PE577783_S5.JPG

ನಿಂಬೆಹಣ್ಣಿನಿಂದ ತುಂಬಾ ಉಪಯೋಗ ಇದೆ ಅಂತ ನಮ್ಗೆಲ್ಲಾ ಗೊತ್ತೇ ಇದೆ. ನೆಗಡಿಯಿಂದ ಹಿಡಿದು ಕುಕ್ಕರ್ ಕಪ್ಪಾಗದಿರ್ಲಿ ಅಂತ ಹೀಗೆ ಎಷ್ಟೊಂದ್ ಕಡೆ ನಿಂಬೆಹಣ್ಣು ಬಳಸ್ತೀವಿ, ಆದ್ರೆ ನಿಂಬೆ ಹಣ್ಣನ್ನ ಸುಮ್ನೆ ಹಾಸಿಗೆ ಪಕ್ಕ ಇಟ್ಕೊಂಡು ಮಲಗಿದ್ರೆ ಎಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಾ?

1. ಟೆನ್ಶನ್ ಕಮ್ಮಿ ಮಾಡತ್ತೆ

ಇದ್ರಲ್ಲಿರೋ ಸಿಟ್ರಸ್ ಅಂಶದ ವಾಸನೆ ನಮ್ಮ ಮೇಲೆ ಪರಿಣಾಮ ಬೀರುತ್ತೆ. ಟೆನ್ಶನ್ ಕಮ್ಮಿ ಮಾಡತ್ತೆ. ನಿಂಬೆ ಹಣ್ಣನ್ನ ಹಾಸಿಗೆ ಪಕ್ಕ ಇಟ್ಕೊಂಡು ಮಲಗಿದ್ರೆ ಅದ್ರಿಂದ ಬರೋ ಸುವಾಸನೆ ರಿಲ್ಯಾಕ್ಸ್ ಮಾಡುತ್ತೆ.

ಮೂಲ

2. ಏಕಾಗ್ರತೆ ಜಾಸ್ತಿ ಆಗತ್ತೆ

ಪ್ರತಿದಿನ ನಿಂಬೆ ಹಣ್ಣಿನ ಸುವಾಸನೆ ತೊಗೊತಾ ಬಂದ್ರೆ ಮೆದುಳು ಚುರುಕಾಗತ್ತೆ, ನೆನಪಿನ ಶಕ್ತಿ ಜಾಸ್ತಿ ಆಗತ್ತೆ, ಏಕಾಗ್ರತೆ ಜಾಸ್ತಿ ಆಗತ್ತೆ. ಆಫೀಸ್ಗಳಲ್ಲಿ ನಿಂಬೆಹಣ್ಣನ್ನ ಇಟ್ಟಿದ್ರೆ ಕೆಲಸದಲ್ಲಿ ಕಮ್ಮಿ ತಪ್ಪುಗಳಾಗುತ್ತೆ ಅಂತ ಜಪಾನ್ ವಿಜ್ಞಾನಿಗಳು ಕಂಡ್ಕೊಂಡಿದ್ದಾರೆ.

ಮೂಲ

3. ಮೂಡ್ ಚೆನ್ನಾಗಿರುತ್ತೆ

ನಿಂಬೆಹಣ್ಣಿನ ಎಣ್ಣೆ ಡಿಪ್ರೆಶನ್ನಿಗೆ ಮದ್ದು ಅಂತ ಗೊತ್ತಾಗಿದೆ. ನಿಂಬೆ ಹಣ್ಣಿನ ವಾಸನೆ ಮೂಗಿಗೆ ಬರ್ತಿದ್ರೆ ಮೂಡ್ ಚೆನ್ನಾಗಿರುತ್ತೆ.

ಮೂಲ

4. ಗಾಳಿಲಿರೋ ರೋಗಾಣುಗಳನ್ನ ಸಾಯಿಸುತ್ತೆ

ನಿಂಬೆಗೆ ಬ್ಯಾಕ್ಟೀರಿಯಾನ ಕೊಲ್ಲೋ ಶಕ್ತಿ ಇದೆ. ರೂಮನ್ನ ಕ್ಲೀನಾಗಿಡತ್ತೆ, ಆರೋಗ್ಯವಾಗಿರ್ತೀವಿ.

ಮೂಲ

5. ಬಿ.ಪಿ ಕಡಿಮೆ ಆಗತ್ತೆ

ನಿಂಬೆಹಣ್ಣಿನ ವಾಸನೆ ರಿಲ್ಯಾಕ್ಸ್ ಮಾಡೋದ್ರಿಂದ ಬಿ.ಪಿ ಕಮ್ಮಿ ಆಗತ್ತೆ.

ಮೂಲ

6. ಹುಳ ಹುಪ್ಪಟೆ ಕಾಟ ತಪ್ಪತ್ತೆ

ನಿಂಬೆಹಣ್ಣಿನ್ ವಾಸನೆ ಇದ್ರೆ ಹುಳಗಳು ಬರಲ್ಲ. ಇರುವೆ, ನೊಣ ಮತ್ತೆ ಸೊಳ್ಳೆ ಬರಲ್ಲ. ಅದ್ರಲ್ಲೂ ನಿಂಬೆಹಣ್ಣಿಗೆ ಲವಂಗ ಚುಚ್ಚಿ ಇಟ್ರೆ ಇನ್ನೂ ಪರಿಣಾಮಕಾರಿಯಾಗಿ ಕೆಲ್ಸ ಮಾಡುತ್ತೆ.

ಮೂಲ