ಹಾಸಿಗೆ ಒದ್ದೆ

ಸೀನ ಒಂದ್ ದಿನ ಡಾಕ್ಟರ್ ಹತ್ರ ಹೋಗಿ ತನ್ನ ಪ್ರಾಬ್ಲಂ ಹೇಳ್ಕೊಂಡ.

‘ದಿನಾ ರಾತ್ರಿ ಹಾಸಿಗೆ ಒದ್ದೆ ಆಗ್ತಿದೆ ಡಾಕ್ಟ್ರೇ. ಬಚ್ಚಲುಮನೆಗೆ ಹೋಗೋ ಮುಂಚೇನೇ ಉಚ್ಚೆ ಬಂದುಬಿಡುತ್ತೆ.’

ಡಾಕ್ಟ್ರು ಬುದ್ಧಿವಂತರು. ಕೇಳಿದರು: ‘ಉಚ್ಚೆ ಬರಕ್ಕೆ ಮುಂಚೆ ಏನಾದರೂ ಕನಸು ಬರುತ್ತಾ?’

‘ಹೂಂ.’

‘ಏನು ಕನಸು?’

‘ದಿನಾ ಒಂದು ದೆವ್ವ ಬಂದು ಒಂದಕ್ಕೆ ಹೋಗಣ ಬಾ ಅನ್ನುತ್ತೆ ಡಾಕ್ಟ್ರೆ.’

‘ಹಾಗಾದ್ರೆ ಮುಂದಿನ ಸಲಿ ಆ ದೆವ್ವ ಬಂದ್ರೆ ಈಗಾಗಲೇ ಮಾಡಾಗಿದೆ ಅಂತ ಹೇಳು’ ಅಂದು ಕಳಿಸಿದ್ರು ಡಾಕ್ಟ್ರು.

ಮುಂದಿನ ದಿನಾನೇ ಸೀನ ಡಾಕ್ಟ್ರ ಹತ್ತಿರ ವಾಪಸ್.

‘ಏನು ಸೀನ? ನಾ ಹೇಳಿದಂಗೆ ಮಾಡಿದ್ಯಾ?’

‘ಮಾಡಿದೆ, ಆದ್ರೆ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಡಾಕ್ಟ್ರೇ!’

‘ಯಾಕೆ, ಏನಾಯ್ತು? ನಾನು ಒಂದಕ್ಕೆ ಹೋಗಿದ್ದು ಆಯ್ತು ಅಂತ ಹೇಳ್ತಿದ್ದಂಗೇ ಆ ದೆವ್ವ "ಹಾಗಾದ್ರೆ ಒಂಚೂರು ಎರಡಕ್ಕೆ ಹೋಗಿ ಬರೋಣ" ಅಂತು.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: