ಹಾವಿಗೆ ಎರ್ಡು ನಾಲ್ಗೆ ಯಾಕಿರುತ್ತೆ? ಅದು ನಿಜವಾಗ್ಲೂ ಎರ್ಡು ನಾಲ್ಗೆ ಇರೋದ ಅಥವಾ ಒಂದು ನಾಲ್ಗೆ ತುದೀಲಿ ಸೀಳು ಬಿಟ್ಟಿರೋದಾ ? ಅಂತೆಲ್ಲ ಪ್ರಶ್ನೆಗಳು ನಿಮ್ಮ ತಲೆಲಿ ಓಡ್ತಾ ಇದೆಯಾ? ಯಾವ್ದೇ ಒಂದು ವಿಷ್ಯನ್ನ ನೋಡಿದ್ರೂ ಪುರಾಣದಲ್ಲಿ ಅದಕ್ಕೊಂದು ಕಥೆ ಇದ್ದೇ ಇರುತ್ತೆ ಅಂತೆ. ಸಾಧಾರಣವಾಗಿ ಎಲ್ಲ ಜೀವಿಗಳಿಗೂ ಒಂದೇ ಒಂದು ನಾಲ್ಗೆ ಇರೋದು. ಆದ್ರೆ ವಿಚಿತ್ರ ಏನಂದ್ರೆ ಹಾವಿಗೆ ಮಾತ್ರ ಎರಡು ನಾಲ್ಗೆ ಇದೆ. ಅದು ಯಾಕೆ? ಆತರ ಇರಕ್ಕೆ ನಿಜವಾದ ಕಾರಣ ಏನು ಅನ್ನೋದನ್ನ ಪುರಾಣದ ಪ್ರಕಾರ ಹೇಳಿದ್ದಾರೆ.

ಕಶ್ಯಪ ಮುನಿಗೆ ಎರ್ಡು ಹೆಂಡ್ತೀರು – ಕದ್ರು ಮತ್ತೆ ವಿನುತ.

ನಾಗನ ತಾಯಿ ಕದ್ರು ಮತ್ತೆ ವಿನುತನ ಮಕ್ಕಳು ಅರುಣ ಮತ್ತೆ ಗರುಡ. ಈ ಅರುಣ ಅಂದ್ರೆ ಸೂರ್ಯನ ವಾಹನ ಆಗಿದ್ದವನು. ಈ ಗರುಡ ನೋಡಕ್ಕೆ ಹೇಗಿದ್ದ ಅಂದ್ರೆ ಮನುಷ್ಯನ ದೇಹ, ಹದ್ದಿನ ಮುಖ ಮತ್ತೆ ರೆಕ್ಕೆಗಳನ್ನ ಹೊಂದಿರ್ತಾನೆ.

ಒಂದಿನ ಏನಾಗುತ್ತೆ ಅಂದ್ರೆ, ವಿನುತ ಮತ್ತೆ ಕದ್ರು ಮಧ್ಯೆ ಜಗಳ ನಡೆಯುತ್ತೆ.

ವಿಷ್ಯ ಏನಪ್ಪಾ ಅಂದ್ರೆ ಇಂದ್ರನ ಕುದುರೆ ಪೂರ್ತಿ ಬೆಳ್ಳಗಿದೆಯಾ ಅಥ್ವಾ ಇಲ್ವಾ ಅನ್ನೋದು. ವಿನತ ಹೇಳೋದು ಅದು ಪೂರ್ತಿ ಬೆಳ್ಳಗಿದೆ ಅಂತ . ಆದ್ರೆ ಕದ್ರು ಆದ್ರ ಬಾಲ ಕಪ್ಪಗಿದೆ ಅಂತಾಳೆ. ವಾದ ವಿವಾದ ನಡೆದು ಕೊನೆಗೆ ಎನ್ ತೀರ್ಮಾನ ಆಗುತ್ತೆ ಅಂದ್ರೆ, ಬೆಳಗ್ಗೆ ಎದ್ದು ಆ ಕುದುರೆಯನ್ನ ನೋಡೋದು. ಹಾಗೆ ಯಾರು ಹೇಳಿದ್ದು ತಪ್ಪಾಗುತ್ತೋ ಅವರು ಇನ್ನೊಬ್ರ ಅಡಿಯಾಳಗಿರ್ಬೇಕು ಅಂತ.

ಇದ್ರ ಮಧ್ಯೆ ಕದ್ರು ಒಂದು ಮೋಸ ಮಾಡ್ತಾಳೆ.

ತನ್ನ ಮಕ್ಕಳಾದ ಹಾವುಗಳನ್ನ ಆ ಕುದುರೆಯ ಬಾಲಕ್ಕೆ ಸುತ್ತಕ್ಕೊಳ್ಳಕ್ಕೆ ಹೇಳ್ತಾಳೆ. ಬೆಳಿಗ್ಗೆ ಎದ್ದು ಇಬ್ಬರೂ ನೋಡ್ತಾರೆ, ಕುದುರೆಯ ಬಾಲ ಕಪ್ಪಗಿದೆ. ಹೀಗಾಗಿ ಮಾತಿನ ಪ್ರಕಾರ ವಿನುತ ಕದ್ರುವಿನ ಅಡಿಯಾಳಾಗ್ತಾಳೆ. ತುಂಬಾ ಕಷ್ಟಗಳನ್ನ ಅನುಭವಿಸ್ತಾಳೆ.

ವಿನತನ ಮಕ್ಕಳೆಲ್ಲ ಬೆಳೆದು ದೊಡ್ಡವರಾದಾಗ ವಿನತನ ಮಕ್ಕಳಿಗೆ ಅಮ್ಮನ ಕಷ್ಟ ಅರ್ಥ ಆಗಿ ಅವಳನ್ನ ಕದ್ರುವಿನ ಸೆರೆಯಿಂದ ಬಿಡಿಸ್ಬೇಕು ಅಂತ ನೋಡ್ತಾರೆ.

ಆದ್ರೆ ಹೇಗೆ ಬೀಡ್ಸೋದು. ಈ ನಾಗಗಗಳಿಗೆ ಅಮೃತದ ಆಸೆ ತೋರ್ಸಿ ಗರುಡ ತನ್ನ ತಾಯಿಯನ್ನ ಬಿಡ್ಸಕ್ಕೆ ಉಪಾಯ ಮಾಡ್ತಾನೆ. ಆದ್ರೆ ಅಮೃತ ತಿಂದ್ರೆ ಹಾವುಗಳಿಗೆ ಸಾವೆ ಬರಲ್ಲ. ಇದು ಪ್ರಕೃತಿ ನಿಯಮಕ್ಕೆ ವಿರುದ್ಧ ಆದ್ರಿಂದ ಇಂದ್ರ ಇದನ್ನ ಒಪ್ಪಲ್ಲ.  ಹಾಗಾಗಿ ಗರುಡ ಒಂದು ಉಪಾಯ ಮಾಡ್ತಾನೆ. ಈ ಅಮೃತದ ಗಡಿಗೆಯನ್ನ ತಂದು ನಾಗಗಳ ಮುಂದೆ ಇಡ್ತಾನೆ.ಗಡಿಗೆ ಸಿಕ್ಕಿದ ಖುಷಿಯಲ್ಲಿ ವಿನಾತನ ಬಿಡುಗಡೆ ಆಗುತ್ತೆ. ಇನ್ನೇನು ನಾಗಗಳು ಅಮೃತ ಸೇವಿಸ್ಬೇಕು ಆಗ ಗರುಡ ಅಮೃತ ತಿನ್ನೋ ಮುಂಚೆ ಒಂದ್ಸಲ ಸ್ನಾನ ಮಾಡ್ಬೇಕು ಅಂತ ಹೇಳ್ತಾನೆ .

ಗರುಡನ ಮಾತನ್ನು ನಂಬಿದ ನಾಗಗಳು ಸ್ನಾನಕ್ಕೆ ಹೋದಾಗ , ಗರುಡ ಅಮೃತದ ಗಡಿಗೆಯನ್ನ ಕದ್ಕೊನ್ದು ಹಾರಿ ಹೋಗ್ತಾನೆ.

ಹಾಗೆ ಎತ್ಕೊಂಡು ಒಡ್ಬೆಕಾದ್ರೆ ಸ್ವಲ್ಪ ಅಮೃತ ನೆಲದ್ಮೇಲೆ ಇರೋ ಕುಶ ಅನ್ನೋ ಹುಲ್ಲಿನ ಮೇಲೆ ಬೀಳುತ್ತೆ. ಈ ಹುಲ್ಲು ತುಂಬಾ ಹರಿತವಾಗಿರುತ್ತೆ. ಅಮೃತದ ಆಸೆಯಿಂದ ನಾಗಗಳು ಅದನ್ನೂ ಲೆಕ್ಕಿಸದೆ , ಅಮೃತ ನೆಕ್ಕೊಕೆ ಶುರು ಮಾಡಿದಾಗ ಅವುಗಳ ನಾಲಿಗೆ ಎರಡು ಸೀಳಾಗುತ್ತೆ.

ಆದ್ರ ಜೊತೆ ಹಾವು ಮತ್ತು ಗರುಡನ ಸಂಬಂಧ ಕೂಡ ಕೆಟ್ಟುಹೋಗಿ, ಅವ್ರು ಜೀವನ ಪೂರ್ತಿ ವೈರಿಗಳಾಗಿರ್ತಾರೆ.!!!!