https://brightside.me

ಜನ ತಮಗಿಂತ ಹೆಚ್ಚು ಬೇರೆಯವರ ಬಗ್ಗೆ ತಿಳ್ಕೊಳ್ಳೋದೇ ಹೆಚ್ಚು. ಈ ಮಾನಸಿಕ ಪರೀಕ್ಷೆಗಳು ನಾವು ನಮ್ಮ ಬಗ್ಗೆ ತಿಳ್ಕೊಳೋದಕ್ಕೆ ಸಹಾಯ ಮಾಡುತ್ತೆ. ನಮ್ಮ ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ತಿಳ್ಕೊಳ್ಳೋದು ಬರಿ ನಮ್ಮ ಆತ್ಮ ವಿಶ್ವಾಸ ಹೆಚ್ಚಿಸೋದಷ್ಟೇ ಅಲ್ಲ ದುರ್ಬಲ ಪರಿಸ್ಥಿತಿ ಬಗ್ಗೆ ಕೂಡ ಎಚ್ಚೆತ್ತುಕೊಳ್ಳೋದಕ್ಕೆ ಸಹಾಯ ಮಾಡುತ್ತೆ.

ಬಾಡಿ ಲ್ಯಾಂಗ್ವೇಜ್ / ನಮ್ಮ ಹಾವಭಾವಗಳ ಬಗ್ಗೆ ನಡೆಸಿರೋ ಒಂದು ಅಧ್ಯಯನದ ಆಧಾರದಮೇಲೆ ಈ ಕೆಳಗಿನ ತಯಾರು ಮಾಡಿದ್ದಾರೆ, ಇದು ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯವನ್ನ ಹೇಳುತ್ತೆ. ಹಾಗೆ ತಿಳ್ಕೊಳೋ ಕುತೂಹಲ ನಿಮ್ಮಲ್ಲಿದ್ರೆ ಈ ಮೇಲಿನ ಚಿತ್ರದಲ್ಲಿರೋ ನೆರಳುಗಳಲ್ಲಿ ನಿಮಗೆ ಯಾವುದು ತುಂಬಾನೇ ಯಶಸ್ವಿ ಮಹಿಳೆಯದ್ದು ಅನ್ಸುತ್ತೋ ಅದನ್ನ ಆಯ್ಕೆ ಮಾಡ್ಕೊಳಿ.

ಮೊದಲನೇ ನೆರಳು ಅತ್ಯಂತ ಯಶಸ್ವಿ ಅಂತ ನೀವು ಅನ್ಕೊಂಡಿದ್ರೆ…

ಮೊದಲ ಹೆಣ್ಣು ಅತ್ಯಂತ ಯಶಸ್ವಿ ಎಂದು ನೀವು ಭಾವಿಸಿದರೆ ನೀವು ಹೊಸ ಸವಾಲುಗಳನ್ನು ತೆಗೆದುಕೊಳ್ಳುವ ಬಗ್ಗೆ ಹಿಂಜರಿಯದಿರುವ ಒಬ್ಬ ಆತ್ಮವಿಶ್ವಾಸದ ವ್ಯಕ್ತಿ. ಪ್ರತಿ ಸವಾಲನ್ನು ನೀವು ಆಶಾವಾದ, ಉತ್ಸಾಹ ಹಾಗೂ ವಿಶ್ವಾಸದೊಂದಿಗೆ ಎದುರಿಸುತ್ತೀರಿ. ನೀವು ಗೌರವಾನ್ವಿತ ವ್ಯಕ್ತಿ ಅನ್ನಿಸಿಕೊಳ್ಳಲು ತುಂಬಾನೇ ಕಷ್ಟ ಪಟ್ಟಿದ್ದೀರಿ. ನಿಮಗಿಂತ ಬೇರೆ ಯಾರೂ ಉತ್ತಮರಾಗೋದಕ್ಕೆ ನೀವು ಅವಕಾಶ ಕೊಡೋದಿಲ್ಲ.

https://brightside.me
ಎರಡನೇ ನೆರಳು ಅತ್ಯಂತ ಯಶಸ್ವಿ ಅಂತ ನೀವು ಅನ್ಕೊಂಡಿದ್ರೆ…

ನಿಮ್ಮ ಬುದ್ಧಿಗಿಂತ ನಿಮ್ಮ ಮನಸ್ಸು ನಿಮ್ಮಮೇಲೆ ಹಿಡಿತ ಹೊಂದಿದೆ. ನೀವು ನಿಮ್ಮ ಬುದ್ದಿ ಹೇಳೋ ಮಾತಿಗಿಂತ ನಿಮ್ಮ ಮನಸ್ಸಿನ ಮಾತೇ ಕೇಳೋದು. ಬಹುತೇಕ ಸಮಯದಲ್ಲಿ ನೀವು ಸರಿಯಾಗಿರ್ತೀರಿ, ಯಾವುದೇ ತರ್ಕವನ್ನು ನೀವು ಒಪ್ಪಿಕೊಳ್ಳುವುದಿಲ್ಲ. ನೀವು ಎಲ್ಲ ವಿಷಯವನ್ನು ತುಂಬಾನೇ ಚೆನ್ನಾಗಿ ಗ್ರಹಿಸುತ್ತೀರಿ ಹಾಗೆ ಅನುಸರಿಸುತ್ತೀರಿ, ನಿಮ್ಮನ್ನು ಅಷ್ಟು ಸುಲಭವಾಗಿ ಮರುಳು ಮಾಡಕ್ಕಾಗಲ್ಲ. 

https://brightside.me
ಮೂರನೇ ನೆರಳು ಅತ್ಯಂತ ಯಶಸ್ವಿ ಅಂತ ನೀವು ಅನ್ಕೊಂಡಿದ್ರೆ…

ನೀವು ತುಂಬಾನೇ ತರ್ಕಬದ್ಧವಾಗಿ ಯೋಚನೆ ಮಾಡ್ತೀರಿ. ಯಾವುದೇ ಮಾರ್ಗ ಆರಿಸಿಕೊಳ್ಳೋಮೊದಲು ಅದರಬಗ್ಗೆ ವಿವರವಾಗಿ ವಿಶ್ಲೇಷಣೆ ಮಾಡ್ತೀರಿ. ಅದಕ್ಕೆ ನೀವು ಯಾವುದೇ ನಿರ್ಧಾರ ತೊಗೊಳೋದಕ್ಕೆ ಹೆಚ್ಚು ಸಮಯ ತೊಗೋತೀರಿ. ಆದರೆ ನೀವು ತೆಗದುಕೊಳ್ಳೋ ನಿರ್ಧಾರ ಯಾವಾಗ್ಲೂ ಸರಿಯಾಗೇ ಇರುತ್ತೆ.

https://brightside.me
ನಾಲ್ಕನೇ ನೆರಳು ಅತ್ಯಂತ ಯಶಸ್ವಿ ಅಂತ ನೀವು ಅನ್ಕೊಂಡಿದ್ರೆ…

ನಿಮಗೆ ಅತಿಯಾದ ಮಹತ್ವಾಕಾಂಕ್ಷೆ ಇಲ್ಲ ಆದರೆ ನಿಮಗೆ ನಿಮ್ಮ ಸಾಮರ್ಥ್ಯ ಏನು ಏನು ಸಾಧಿಸಬಹುದು ಅನ್ನೋದು ಚೆನ್ನಾಗಿ ಗೊತ್ತು. ನಿಮ್ಮ ಗುರಿ ಸಾಧಿಸಲು ತುಂಬಾನೇ ಕಷ್ಟ ಪಡ್ತೀರಿ. ನಿಮ್ಮ ವಿರುದ್ಧ ಸ್ಪರ್ಧಿಸಲು ಬೇರೆ ಯಾರೂ ಇಲ್ಲ ಅನ್ನೋದು ನಿಮಗೆ ಗೊತ್ತು, ಹಾಗಾಗೇ ನೀವು ಪ್ರತಿನಿತ್ಯ ಇನ್ನೂ ಉತ್ತಮರಗೋ ಪ್ರಯತ್ನ ಪಡ್ತೀರಿ. ಹೊಸ ಹೊಸ ಸವಾಲುಗಳನ್ನ ಸ್ವೀಕರಿಸೋದಕ್ಕೆ ನಿಮಗೆ ತೊಂದರೆ ಇಲ್ಲ ಆದ್ರೆ ಅದನ್ನ ಎದುರಿಸಲು ನಿಮ್ಮ ಕಂಫರ್ಟ್ ಜೋನ್ ಬಿಟ್ಟು ನೀವು ಹೊರಕ್ಕೆ ಬರೋವ್ರಲ್ಲ.

https://brightside.me
ನೀವು ಯಾವುದನ್ನ ಆರಿಸಿದ್ರಿ? ನಿಮ್ಮ ಬಗ್ಗೆ ನಿಮಗೆ ಆಶ್ಚರ್ಯ ಆಗೋ ನಿಮ್ಮ ವ್ಯಕ್ತಿತ್ವದ ಬಗ್ಗೆ ಇದು ಹೇಳ್ತಾ?