https://encrypted-tbn3.gstatic.com/images?q=tbn:ANd9GcQ6ilWIR4y3NoYyACGcyW68jIZ6vNimeMlRNufwzxvqt9Yq5suu

ಧೈರ್ಯ, ಶಕ್ತಿ, ಬಲ ಇವೆಲ್ಲ ಬೇಕು ಅಂತ ಅಂಜನೆಯನ್ನ ಪೂಜೆ ಮಾಡೋವ್ರು ಸಿಕ್ಕಾಪಟ್ಟೆ ಜನ ಇದಾರೆ. ಎಲ್ಲ ದೇವ್ರಿಗಿಂತ ಜಾಸ್ತಿ ಪೂಜೆ ಮಾಡೋದೂ ಜನ ಹನುಮಂತನ್ನೇ, ಆದರು ಈಗ ಭಜರಂಗಬಲಿ ಬಗ್ಗೆ ನಾವ್ ಹೇಳೋ ವಿಷಯಗಳು ನಿಮಗೆ ಗೊತ್ತಿರಲ್ಲ. ಓದಿ ತಿಳ್ಕೊಳ್ರಿ 

1. ಶಕ್ತಿ, ಭಕ್ತಿ, ಛಲಕ್ಕೆ ಹೆಸರುವಾಸಿಯಾದ ಹನುಮಂತ ಶಿವನ ಒಂದು ಅವತಾರ

ಬ್ರಹ್ಮನ ಆಸ್ಥಾನದಲ್ಲಿ ಒಬ್ಬಳು ಅಪ್ಸರೆ ಅಂಜನಾ. ಅವಳಿಗೆ ಒಬ್ಬ ರಿಷಿ ಏನೋ ಕಾರಣಕ್ಕೆ ಶಾಪ ಕೊಟ್ಟಿರ್ತಾನೆ…ನೀನು ನಿನ್ನ ಮುಖನೇ ಯಾವತ್ತು ಇಷ್ಟ ಪಡ್ತೀಯೋ ಅವತ್ತು ನಿನ್ನ ಮುಖ ಮಂಗನ ಥರ ಆಗತ್ತೆ ಅಂತ. ಸರಿ, ಒಂದು ದಿನ ಅವಳಿಗೆ ಈ ಶಾಪ ತಟ್ಟಿತು. 

ಬ್ರಹ್ಮನ ಸಹಾಯದಿಂದ ಅವಳು ಭೂಮಿ ಮೇಲೆ ಹುಟ್ಟಿ ಕೇಸರಿ ರಾಜನ ಜೊತೆ ಮದ್ವೆ ಆಗತ್ತೆ.

ಶಿವನ ಪರಮಭಕ್ತೆಯಾದ ಇವಳು ತಪಸ್ಸ್ ಮಾಡ್ತಾಳೆ. ಶಿವನ ಹತ್ರ ನೀನೆ ನನ್ನ ಮಗು ಆಗಿ ಹುಟ್ಟಿ ನನಗೆ ಮುಕ್ತಿ ಕೊಡಬೇಕು ಅಂತ ವರ ಕೇಳ್ತಾಳೆ.

ಅದೇ ಟೈಮಲ್ಲಿ ದಶರಥ ಮಹಾರಾಜ ಮಕ್ಕಳಿಗಾಗಿ ಯಜ್ಞ ಮಾಡಿ ಅದ್ರಲ್ಲಿ ಸಿಕ್ಕ ಪಾಯಸಾನ ತನ್ನೆಲ್ಲಾ ಹೆಂಡ್ತೀರಿಗೂ ಕೊಡ್ತಾನೆ. ಕೌಸಲ್ಯೆಗೆ ಸಿಕ್ಕ ಪಾಲಲ್ಲಿ ಸ್ವಲ್ಪ ಪಾಯಸಕ್ಕೆ ಒಂದು ಗಾಳಿಪಟ ಬಂದು ತಗುಲಿ ಅದ್ರಲ್ಲಿ ಸ್ವಲ್ಪ ಭಾಗವನ್ನ ಹಾರಿಸಿಕೊಂಡು ತಪಸ್ಸ್ ಮಾಡ್ತಿದ್ದ ಅಂಜನಾ ಕೈಯಲ್ಲಿ ಬಿಳ್ಸತ್ತೆ. (ವಾಯು ದೇವ್ರು ಶಿವನ ಆದೇಶದಂತೆ ಇದನ್ನ ಮಾಡೋದು). ಶಿವನ ಪ್ರಸಾದ ಅನ್ಕೊಂಡು ಅವ್ಳು ಪಾಯಸ ತಿಂದು ಪವನಪುತ್ರ ಹನುಮಂತ ಅನ್ನೋ ಅವತಾರಕ್ಕೆ ಜನ್ಮ ಕೊಡ್ತಾಳೆ.

ಮೂಲ

2. ಶ್ರೀ ರಾಮನ ಆಯುಷ್ಯ ಹೆಚ್ಚಾಗಲಿ ಅಂತ ಇಡೀ ಮಯ್ಯಿಗೆ ಕುಂಕುಮ ಹಚ್ಕೊಂಡ ಹನುಮಂತ

ಸೀತಾಮಾತೆ ತನ್ನ ಹಣೆಗೆ ಕುಂಕುಮ ಇಟ್ಕೊಂಡಾಗ ಯಾಕೆ ಅಂತ ಆಂಜನೇಯ ಕೇಳ್ತಾನ. ಅದಕ್ಕೆ ಸೀತಾಮಾತೆ ನಾನು ಶ್ರೀ ರಾಮನ್ನ ಮದುವೆಯಾದಾಗಿಂದ ನನಗೆ ಅವರ ಮೇಲಿರೋ ಭಕ್ತಿ ಮತ್ತೆ ಪ್ರೀತಿ ಸಂಕೇತ ಅದು ಅಂತ ಹೇಳ್ತಾಳೆ.

ಇದನ್ನ ಕೇಲಿದ ತಕ್ಷಣ ಹನುಮಂತ ತನ್ನ ಇಡೀ ಮಯ್ಯಿಗೆ ಕುಂಕುಮ ಹಚ್ಕೊಂಡು ಬರ್ತಾನೆ. ರಾಮನ ಮೇಲೆ ತನಗೆ ಎಷ್ಟು ಅಗಾಧವಾಗಿ ಪ್ರೀತಿ, ಭಕ್ತಿ ಇದೆ ಅಂತ ತೋರ್ಸಕ್ಕೆ ಹೀಗೆ ಮಾಡ್ತಾನೆ. 

ರಾಮಂಗಂತೂ ತುಂಬಾ ಖುಷಿಯಾಗಿ ಇನ್ಮುಂದೆ ನಿನ್ನ ಯಾರೇ ಕುಂಕುಮ ಹಾಕಿ ಪೂಜೆ ಮಾಡ್ತಾರೋ ಅವರ ಕಷ್ಟವೆಲ್ಲಾ ಬೇಗ ಕಳೆಯತ್ತೆ ಅಂತ ವರ ಕೊಡ್ತಾನೆ. 

ಮೂಲ

3. ಹನುಮಾನ್ ಅಂದ್ರೆ ಸಂಸ್ಕೃತದಲ್ಲಿ "ವಿಕಾರವಾದ ದವಡೆ"

ಸಂಸ್ಕೃತದಲ್ಲಿ "ಹನು" ಅಂದ್ರೆ ದವಡೆ, "ಮಾನ್" ಅಂದ್ರೆ ವಿಕಾರವಾಗಿರೋದು ಅಂತ ಅರ್ಥ.

ಚಿಕ್ಕವನಾದಾಗ ಆಂಜನೇಯ ಸೂರ್ಯನ್ನೇ ಮಾವಿನ ಹಣ್ಣು ಅಂತ ನುಂಗಕ್ಕೆ ಆಕಾಶಕ್ಕೆ ಹಾರಿದ್ದ.  ಅದಕ್ಕೆ ಇಂದ್ರ ವಜ್ರಾಯುಧ ತೊಗೊಂಡು ಹೊಡೆದಿದ್ದ. ಆಂಜನೇಯ ಆಕಾಶದಿಂದ ಭೂಮಿಗೆ ಬಿದದಾಗ ದವಡೆ ವಿಕಾರ ಆಯ್ತು ಅನ್ನೋದು ಭಾಳ ಫೇಮಸ್ ಕಥೆ.

ಮೂಲ

4. ಹನುಮಂತ ಬ್ರಹ್ಮಚಾರಿ ಆದ್ರೂ ಮಕರಧ್ವಜ ಅನ್ನೋ ಮಗ ಇದ್ದ

ಹನುಮಂತ ಲಂಕೆ ಸುಟ್ಟಾಕಿ ಬಾಲಕ್ಕೆ ಹತ್ಕೊಂಡಿರೋ ಬೆಂಕಿ ಆರುಸ್ಕೊಳಕ್ಕೆ ಸಮುದ್ರದಲ್ಲಿ ಮುಳುಗಿದ್ದ. ಆಗ ಹನುಮಂತನ ಬೆವರ ಹನಿಯನ್ನ ಒಂದು ಮೀನು ನುಂಗಿ ಮಕರಧ್ವಜ ಹುಟ್ಟಿದ್ದ.

ಮೂಲ

5. ಒಂದ್ಸತಿ ರಾಮಾನೇ ಹನುಮಂತಂಗೆ ಮರಣ ದಂಡನೆ ಕೊಡ್ತಾನೆ

ಶ್ರೀ ರಾಮ ರಾಜ ಆದ್ಮೇಲಿನ್ ಕಥೆ ಇದು.

ಒಂದ್ಸತಿ ನಾರದ ಹನುಮಂತಂಗೆ ಎಲ್ಲ ಋಷಿಗೂ ನಮಸ್ಕಾರ ಮಾಡು ಆದ್ರೆ ವಿಶ್ವಾಮಿತ್ರಂಗೆ ಮಾತ್ರ ಮಾಡ್ಬೇಡ. ಯಾಕಂದ್ರೆ ಅವ್ನು ಮುಂಚೆ ರಾಜ ಆಗಿದ್ದ ಅಂತ ಹೇಳ್ದ. ನಾರದ ಹೇಳಿದಂಗೆ ಹನುಮಂತ ಮಾಡಿದ. ವಿಶ್ವಾಮಿತ್ರ ಸುಮ್ಮನಿದ್ದ. ಅವನಿಗೇನೂ ಕೋಪ ಬರ್ಲಿಲ್ಲ.

ಆದ್ರೆ ಆಮೇಲೆ ನಾರದ ಸುಮ್ಮನಿರದೆ ವಿಶ್ವಾಮಿತ್ರನ ಹತ್ರ ಹೋಗಿ ಬತ್ತಿ ಇಟ್ಟ. ವಿಶ್ವಾಮಿತ್ರಂಗೆ ಸಿಕ್ಕಾಪಟ್ಟೆ ಸಿಟ್ಟು ಬರತ್ತೆ. ಹನುಮಂತಂಗೆ ಮರಣ ದಂಡನೆ ಕೊಡ್ಬೇಕು ಅಂತ ರಾಮಂಗೆ ಆದೇಶ ಕೊಡ್ತಾನೆ. ಗುರು ಮಾತು ಮೀರಕ್ಕಾಗತ್ತಾ? ಅದಕ್ಕೆ ರಾಮ ಹನುಮಂತಂಗೆ ಬಾಣ ಬಿಡ್ತಾನೆ.

ಹನುಮಂತ ಸುಮ್ನೆ ರಾಮನ ಜಪ ಮಾಡ್ಕೊಂಡು ಕೂತಿರ್ತಾನೆ. ಅದಕ್ಕೆ ಯಾವ ಬಾಣಾನೂ ಏನೂ ಮಾಡಕ್ಕಾಗಲ್ಲ. ವಿಧಿಯಿಲ್ಲದೆ ರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡ್ತಾನೆ. ಆದ್ರೆ ಆಗ್ಲೂ ಏನೂ ಆಗಲ್ಲ. ಹನುಮಂತನ ಭಕ್ತಿ ಮುಂದೆ ಬ್ರಹ್ಮಾಸ್ತ್ರ ಕೂಡ ನಿಲ್ಲಿಲ್ಲ. ಇದನ್ನ ನೋಡಿ ನಾರದ ವಿಶ್ವಾಮಿತ್ರನ ಹತ್ರ ಕ್ಷಮೆ ಕೇಳ್ತಾನೆ. ಆಮೇಲೆ ವಿಶ್ವಾಮಿತ್ರ ಸರಿ ಬಿಡು ಅಂತ ರಾಮಂಗೆ ಸುಮ್ನಾಗಕ್ಕೆ ಹೇಳ್ತಾನೆ.

ಮೂಲ

6. ವಾಲ್ಮೀಕಿಗೂ ಮುಂಚೆ ಹನುಮಂತ ತಾನು ಕಂಡಂತೆ ರಾಮಾಯಣ ಬರ್ದಿದ್ದ. 

ಲಂಕಾದಹನ ಆದ್ಮೇಲೆ ಹನುಮಂತ ಹಿಮಾಲಯಕ್ಕೆಹೋಗ್ತಾನೆ. ರಾಮನ ಮೇಲಿನ ಭಕ್ತಿಯಿಂದ ತಾನು ಕಂಡ ರಾಮಾಯಣನ ಬಂಡೆಗಳ ಮೇಲೆ ತನ್ನದೇ ಉಗುರಿಂದ ಸಂಪೂರ್ಣವಾಗಿ ಬರೀತಾನೆ.

ಹಾಗೆ ವಾಲ್ಮೀಕಿನೂ ರಾಮಾಯಣ ಬರೀತಾನೆ. ಹನುಮಂತಂಗೆ ತೋರ್ಸಣ ಅಂತ ಹಿಮಾಲಯಕ್ಕೆ ಹೋಗ್ತಾನೆ. ಆಗ ಅಲ್ಲಿನ ಬಡೆಗಳ ಮೇಲೆ ರಾಮಾಯಣ ಬರ್ದಿರೋದನ್ನ ನೋಡಿ ಆಶ್ಚರ್ಯ ಪಡ್ತಾನೆ. ಇದು ನಾ ಬರ್ದಿರೋ ರಾಮಾಯಣಕ್ಕಿಂತ ಚೆನ್ನಾಗಿದೆ…ಇದನ್ನ ನೋಡಿದ್ರೆ ನಾ ಬರ್ದಿರೋದು ಯಾರಿಗೂ ಇಷ್ಟ ಆಗಲ್ಲ ಅಂತ ಹೇಳ್ತಾನೆ. ಪಾಪ, ಹನುಮಂತ ತಾನು ಬರ್ದಿರೋ ರಾಮಾಯಣನ್ನೆಲ್ಲಾ ಅಳಿಸಿ ಹಾಕ್ತಾನೆ.

ವಾಲ್ಮೀಕಿಗೆ ಭಾಳ ದುಃಖ ಆಗತ್ತೆ. ಪಶ್ಚಾತಾಪಕ್ಕಾಗಿ ನಾನು ಮುಂದಿನ ಜನ್ಮದಲ್ಲಿ ನಿನ್ನ ಸಾಧನೇನ ಹೊಗಳಿ ಬರೀತೀನಿ ಅಂತ ಹೇಳ್ತಾನೆ.

ಮೂಲ

7. ಭೀಮ ಹನುಮಂತನ ತಮ್ಮ 

ಭೀಮ ಕೂಡ ವಾಯುದೇವನ ಮಗ. 

ಮಹಾಭಾರತದ ಕಾಲ. ಭೀಮ ಒಂದಿನ ದ್ರೌಪದಿಗೆ ಸೌಗಂಧಿಕಾ ಪುಷ್ಪ ತರಕ್ಕೆ ಹುಡುಕ್ಕೊಂಡು ಕಾಡಲ್ಲಿ ಬರ್ತಿರ್ತಾನೆ. ದಾರೀಲಿ ಒಂದು ಮಂಗ ಮಲಗಿರತ್ತೆ, ಬಾಲ ಅಡ್ಡವಾಗಿರತ್ತೆ.

ಮಂಗಕ್ಕೆ ನಿನ್ನ ಬಾಲಾನ ಆತ್ಲಾಗಿ ಎತ್ಕೊ ಅಂತ ಭೀಮ ಹೇಳ್ತಾನೆ, ಆಗ ಮಂಗಾ ತಾಕತ್ತಿದ್ರೆ ನೀನೆ ಎತ್ತಿಡು ಅನ್ನತ್ತೆ. ಭೀಮಂಗೆ ತನ್ನ ಬಲದ ಬಗ್ಗೆ ತುಂಬಾ ಜಂಭ ಇರತ್ತೆ. ಎತ್ತಕ್ಕೆ ಹಾಳ ಪ್ರಯತ್ನ ಮಾಡ್ತಾನೆ. ಬಾಲ ಒಂಚೂರು ಕದಲಿಸಕ್ಕೆ ಆಗಲ್ಲ.

ಹೀಗೆ ತುಂಬಾ ಹೊತ್ತು ಮಾಡಿದ ಮೇಲು ತನ್ನ ಕೈಲಿ ಎತ್ತಾಕ್ಕಾಗ್ಲಿಲ್ಲ ಅಂತ ಮನವರಿಕೆ ಆಗತ್ತೆ. ಆಗ ಭೀಮಂಗೆ ಗೊತ್ತಾಗತ್ತೆ ಇದು ಮಂಗಾ ಅಲ್ಲ ನಮ್ಮಣ್ಣ ಹನುಮಂತ, ನನ್ನ ಜಂಭ ಕಮ್ಮಿ ಮಾಡಕ್ಕೆ ಈ ಥರ ಮಲಗಿರೋದು ಅಂತ. 

ಮೂಲ

8. ರಾಮನ ಕೊನೆಗಾಲದಲ್ಲಿ ಯಮಂಗೆ ಅಡ್ಡ ಬಂದ ಹನುಮಂತ 

ರಾಮ ಅವತಾರ ಮುಗಿಯೋ ಕಾಲ. ಭೂಮಿ ಬಿಟ್ಟು ವೈಕುಂಠಕ್ಕೆ ಹೋಗಬೇಕಾದಾಗ ಆಂಜನೇಯ ಇದ್ರೆ ಆಗಲ್ಲ ಅಂತ ಗೊತ್ತಾಗತ್ತೆ. ಅದಕ್ಕೆ ಒಂದು ಉಪಾಯ ಮಾಡ್ತಾನೆ.

ರಾಮ ತನ್ನ ಉಂಗ್ರ ಕಳೆದುಹೋಗಿದೆ ಹುಡುಕ್ಕೋಂಡು ಬಾ ಅಂತ ಹನುಮಂತನ್ನ ಕಳ್ಸಿ ತಾನು ಪಾತಾಳಲೋಕಕ್ಕೆ ಹೊರಟೋಗ್ತಾನೆ. ಉಂಗ್ರ ಹುಡುಕ್ತಾ ಹುಡುಕ್ತಾ ಆಂಜನೇಯ ಯಮನ್ನ ಭೇಟಿ ಮಾಡ್ತಾನೆ. ಆಗ ಯಮ ಉಂಗ್ರ ಬಿದ್ದೋಗದು ಅಂದ್ರೆ ರಾಮನ ಈ ಅವತಾರ ಮುಗಿಯೋ ಸಮಯ ಬಂದಿದೆ ಅಂತ ಹೇಳ್ತಾನೆ. 

ಮೂಲ

9. ಸೀತಾಮಾತೆಯ ಉಡುಗೊರೆನೂ ಬೇಡ ಅಂದಿದ್ದ ಹನುಮಂತ

ಸೀತಾಮಾತೆ ಮುತ್ತಿನಹಾರಾನ ಹನುಮಂತಂಗೆ ಕೊಟ್ಟಾಗ ರಾಮ ಇಲ್ದೆ ಇರೋದು ನಂಗೆ ಬೇಡ ಅಂತ ಹೇಳಿ ತನ್ನ ಎದೆ ಬಗೆದು ರಾಮ ಸೀತೇನ ತೋರ್ಸಿ ತನ್ನ ಭಕ್ತಿ ಮತ್ತು ಪ್ರೀತಿ ಬಗ್ಗೆ ಹೇಳ್ತಾನೆ ಹನುಮ. 

ಮೂಲ

10. ಹನುಮಂತಂಗೆ 108 ಹೆಸರಿದೆ 

ಹನುಮಂತನ ಅಷ್ಟೋತ್ತರ ಶತನಾಮಾವಳಿಯಲ್ಲಿ 108 ಹೆಸ್ರು ತಿಳ್ಕೊಬೋದು.