http://counselinglongbeach.com/wp-content/uploads/2015/11/husband-angry-at-upset-wife.jpg

ಈ ಸಂಬಂಧಗಳು ಅನ್ನೋದೇ ಬಹಳ ಜಟಿಲವಾಗಿರುತ್ತೆ. ಅಂತಾದ್ರಲ್ಲೂ ಗಂಡ ಹೆಂಡತಿ, ಪ್ರೇಮಿಗಳು ಈ ಎಲ್ಲ ಸಂಬಂಧಗಳು ಅಂದ್ರೆ ಕೇಳೋದೇ ಬೇಡ. ಒಂದಲ್ಲ ಒಂದು ತಪ್ಪು ಸಿಗ್ತಾನೇ ಇರುತ್ತೆ, ಜಗಳಾ ಆಗ್ತಾನೆ ಇರುತ್ತೆ. ಈ ಎಲ್ಲ ಸಂಬಂಧಗಳು ಬಹಳಾನೇ ಸೂಕ್ಷ್ಮ. ಇದ್ರಲ್ಲೂ ಕೂಡ ಯಾರಾದ್ರೂ ಒಬ್ರು ಸ್ವಲ್ಪ ಸ್ವಾರ್ಥಿ ಆಗಿದ್ರಂತೂ ಮುಗಿತು. ಆ ಸಂಬಂಧ ಬಹಳಷ್ಟು ದಿನ ಉಳಿಯಲ್ಲ ಅಥವಾ, ಇಬ್ಬರೂ ಸುಖವಾಗಿರಲ್ಲ ಅಂತಾನೆ ಅಂದ್ಕೊಳ್ಳಬಹುದು.  ಹಾಗಾಗಿ ನಿಮ್ಮ ಸಂಗಾತಿಯಲ್ಲೂ ಆ ತರದ ಗುಣ ಇದೆಯಾ ಅನ್ನೋದನ್ನ ತಿಳ್ಕೊಳ್ಳ್ಬೇಕಾ? ಅವ್ರು ನಿಮ್ಮಹತ್ರ ಈ 5 ರೀತಿಯಲ್ಲಿ ವರ್ತಿಸ್ತಾರಾ? ಅಕಸ್ಮಾತ್ ನಿಮ್ಮ ಉತ್ತರ ಹೌದು ಅಂತ ಆದ್ರೆ ಎಚ್ಚರವಾಗಿರಿ.

1 ) ಎಲ್ಲಾನೂ ಅವರು ಹೇಳಿದ ಹಾಗೇ ನಡೀಬೇಕು ಅಂದಾಗ…

ನಿಮ್ಮ ಸಂಗಾತಿ ಎಷ್ಟು ಮೊಂಡು ವಾದ ಮಾಡತಾರೆ ಅಂದ್ರೆ, ಎಲ್ಲದೂ ಕೂಡ ಅವ್ರು ಹೇಳಿದ್ ರೀತಿಯಲ್ಲೇ ನಡೀಬೇಕು. ಅವ್ರು ಸ್ವಲ್ಪ ಫ್ರೀ ಇದ್ದಾರೆ ಅಂದ್ರೆ ಅಷ್ಟೇ ನಿಮ್ಮನ್ನ ಭೇಟಿ ಮಾಡೋದು. ಅವ್ರದ್ದೇನಾದ್ರೂ ಸ್ವಲ್ಪ ಮೂಡ್ ಆಫ್ ಆಗಿದ್ಯಾ? ಮುಗಿತು ಕಥೆ. ಅದೂ ಇದೋ ಅಂತ ಕುಂಟು ನೆಪ ಸ್ಟಾರ್ಟ್ ಆಗುತ್ತೆ. ಎಲ್ಲಾದ್ರೂ ಹೋಗ್ಬೇಕಾ? ಅವ್ರ ಪ್ಲಾನ್ ಪ್ರಕಾರ ನಡೀಬೇಕು. ಏನಾದ್ರೂ ತಿನ್ನಬೇಕಾ? ಅವ್ರು ಹೇಳಿದ್ದೆ ತಿನ್ಬೇಕು. ಒಟ್ಟ್ನಲ್ಲಿ ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇರಲ್ಲ.

lifestylescans.com

2) ಯಾವದೇ ವಿಷ್ಯ ಹೇಳಿದ್ರೂ ಅದ್ರಲ್ಲಿ ತಪ್ಪು ಹುಡುಕಿದಾಗ…

ನೀವು ಏನ್ ವಿಷ್ಯದ ಬಗ್ಗೆ ಆದ್ರೂ ಮಾತಾಡಿ, ಏನ್ ಹೇಳಿದ್ರೂ ಅವ್ರ ಪ್ರತಿಕ್ರಿಯೆ ಮಾತ್ರ ಯಾವಾಗ್ಲೂ ನೀರಸವಾಗೇ ಇರುತ್ತೆ.  ನೀವು ಎಷ್ಟು ಖುಷಿಯಾಗಿ ಏನ್ ಮಾಡಬೇಕು ಅಂತ ಆಲೋಚನೆ ಮಾಡಿದ್ರೂ, ಅವ್ರು ಮಾತ್ರ ಅವ್ರ ಗುಂಗಲ್ಲೇ ಇರ್ತಾರೆ. ಇದ್ರಿಂದ ಪ್ರತಿಸಲ ನಿಮ್ಮ ಮೂಡ್ ಆಫ್ ಆಗೋದಂತೂ ಗ್ಯಾರಂಟಿ.

img.jagoinvestor.com

3) ಸಂಬಂಧ ಉಳಿಸಿಕೊಳ್ಳೋದ್ರಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಹೆಚ್ಚೇ ಆದಾಗ…

ಒಂದು ಮಾತಿದೆ. ಸಂಬಂಧಗಳಲ್ಲಿ ಯಾರು ಕಡಿಮೆ ಪ್ರೀತಿ ಮಾಡತಾರೋ, ಅವ್ರೇ ಜಾಸ್ತಿ ಅಧಿಕಾರ ಮಾಡ್ತಾರೆ ಅಂತ.  ಏನೇ ಜಗಳ ಆದ್ರೂ ನೀವೇ ಮೊದ್ಲು ಹೋಗಿ, ಸಾರೀ ಕೇಳ್ಬೇಕು. ಅವ್ರನ್ನ ಜಾಸ್ತಿ ಓಲೈಸಬೇಕು. ಒಟ್ನಲ್ಲಿನಿಮಗೆ ಅವ್ರು ಎಷ್ಟು ಬೇಕು ಅನ್ಸುತ್ತೋ, ಅವ್ರಿಗೆ ನೀವು ಅಷ್ಟು ಬೇಕು ಅಂತ ಅನ್ಸಲ್ಲ . ನೀವು ಇದ್ರೂ ಸರಿ ಇಲ್ದೆ ಇದ್ರೂ ಸರಿ ಅನ್ನೋ ರೀತಿ ಅವ್ರ ಮನಸ್ಥಿತಿ ಇರುತ್ತೆ. ಹಾಗಾಗಿ ಈ ಸಂಬಂಧ ಉಳ್ಸ್ಕೊಳ್ಳುವಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಜಾಸ್ತಿ ಇದೆ ಅಂತ ಅನ್ನಿಸ್ತಿದ್ರೆ ನೀವು ಎಚ್ಚರವಾಗಿರೋದು ಒಳ್ಳೇದು.

secure.i.telegraph.co.uk

4) ನಿಮ್ಮಿಬ್ಬರ ಸಂಬಂಧಾನಾ ಎಲ್ಲರ ಮುಂದೆ ಒಪ್ಪಕೊಳ್ಳಕ್ಕೆ ಅವರೇ ತಯಾರಿಲ್ಲ ಅಂದಾಗ…

ನಿಮ್ಮ ಜೊತೆಗೆ ಹೇಗೆ ಇದ್ರೂ ಕೂಡ, ನಿಮ್ಮನ್ನ ಅವ್ರು ಬರೀ ಫ್ರೆಂಡ್ ಅಂತಾನೆ ಎಲ್ಲರ ಮುಂದೆ ಹೇಳ್ಕೊಳ್ತಾರೆ. ಜೊತೆಗೆ ನಿಮ್ಮ ಹತ್ರ ಮಾತಾಡ್ತಾ ಕೂಡ, ನಿಮ್ಮಿಬ್ಬರ ಸಂಬಂಧವನ್ನ ಹೇಗೆ ಮುಂದೆ ತಗೊಂಡು ಹೋಗೋದು, ಅವ್ರು ನಿಮ್ಮ ಬಗ್ಗೆ ನಿಜವಾಗ್ಲೂ ಸೀರಿಯಸ್ ಇದ್ದಾರಾ? ಅನ್ನೋದರ ಬಗ್ಗೆ ಮಾತಾಡಲ್ಲ. ಹಾಗೆ ನೀವೇನಾದ್ರೂ ಆ ಮಾತನ್ನ ಶುರು ಮಾಡಿದ್ರೂ ತಪ್ಪಿಸಿಕೊಳ್ಳಕ್ಕೆ ನೋಡ್ತಾ ಇರ್ತಾರೆ.

india.com

5) ನಿಮ್ಮನ್ನ ಬಿಟ್ಟು ಬೇರೆಯವ್ರ ಜೊತೆ ಅತೀ ಕ್ಲೋಸ್ ಅಂತ ತೋರಿಸಿಕೊಂಡಾಗ…

ನಿಮ್ಮ ಸಂಗಾತಿ ನಿಮ್ಮನ್ನ ಬಿಟ್ಟು ಬೇರೆಯವ್ರ ಜೊತೆ ಅತೀ ಕ್ಲೋಸ್ ಆಗಕ್ಕೆ ಪ್ರಯತ್ನ ಪಡ್ತಾ ಇದ್ರೆ, ನಿಮ್ಮ ಜೊತೆ ಜಾಸ್ತಿ ಮುಚ್ಚುಮರೆ ಮಾಡ್ತಾ ಇದ್ರೆ, ಅಥವಾ ಬೇರೆಯವ್ರ ಬಗ್ಗೆ ಜಾಸ್ತಿ ಆಸಕ್ತಿ ತೋರ್ಸ್ತಾ ಇದ್ದಾರೆ ಅಂದ್ರೆ ನಿಮ್ಮ ಸಂಬಂಧ ಮುರಿದು ಹೋಗೋ ಹಂತದಲ್ಲಿದೆ ಅನ್ನೋದನ್ನ ನೀವು ತಿಳ್ಕೊಳ್ಳಬಹುದು.

zdrave.to